Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ?
ಮನೆಯ ಹಿತ್ತಲಿನಲ್ಲಿದೆ ಸೊಂಪಾದ ಕೂದಲಿಗೆ ಮದ್ದು

1. ತುಳಸಿ: ಒಂದು ಬಟ್ಟಲು ಬಿಸಿ ನೀರಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಯನ್ನು ಮತ್ತು 2 ಚಮಚ ಟೀ ಸೊಪ್ಪನ್ನು ಹಾಕಿ ಕುದಿಸಬೇಕು. ಈ ಮಿಶ್ರಣವನ್ನು ಸೋಸಿ ರಸವನ್ನು ತಲೆಗೆ ಹಚ್ಚಿ ಅರ್ಧ ತಾಸು ಬಿಟ್ಟು ಸ್ನಾನ ಮಾಡಿದರೆ ಕೂದಲು ಕಾಂತಿಯುತವಾಗಿ ನುಣುಪಾಗುವುದಲ್ಲದೆ ಬೇಗನೆ ಕೂದಲು ಬೆಳ್ಳಗಾಗುವುದಿಲ್ಲ.
2. ಮೊಟ್ಟೆ ಮತ್ತು ಗ್ಲಿಸರಿನ್: ಮೊಟ್ಟೆ ಬಳಸಿದರೆ ಕೂದಲು ಹೊಳಪನ್ನು ಹೊಂದುತ್ತದೆ. ಕೂದಲು ಮತ್ತಷ್ಟು ಕಾಂತಿಯುತವಾಗಲು ಎರಡು ಮೊಟ್ಟೆಯ ಬಿಳಿ, ಕೊಬ್ಬರಿ ಎಣ್ಣೆ ಮತ್ತು 1 ಚಮಚ ಗ್ಲಿಸರಿನ್ ಹಾಕಿ ಮಿಶ್ರಣವನ್ನು ಚೆನ್ನಾಗಿ ಕಲೆಸಿ ತಲೆಗೆ ಹಚ್ಚಬೇಕು. ನಂತರ ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ಹಿಂಡಿ ತಲೆಗೆ ಸುತ್ತಿ ಒಂದು ಗಂಟೆಯ ಬಳಿಕ ತಲೆ ತೊಳೆಯಬೇಕು. ಈ ರೀತಿ ವಾರಕ್ಕೊಮ್ಮೆಯಾದರೂ ಮಾಡಿದರೆ ಕೂದಲು ಆಕರ್ಷಕವಾಗುತ್ತದೆ.
2. ನಿಂಬೆ ಹಣ್ಣು: ತಲೆಹೊಟ್ಟಿದ್ದರೆ ಎಣ್ಣೆ ಹಾಕಿ ನಿಂಬೆರಸವನ್ನು ತಲೆ ಬುಡಕ್ಕೆ ಉಜ್ಜಿ ಅರ್ಧ ಗಂಟೆ ಬಳಿಕ ತಲೆ ತೊಳೆಯಬೇಕು. ಈ ರೀತಿ ಮಾಡಿದರೆ ಹೊಟ್ಟು ಕಮ್ಮಿಯಾಗುತ್ತದೆ. ನಂತರ ತಲೆಯನ್ನು ಚೆನ್ನಾಗಿ ಒಣಗಿಸಿ ನಂತರ ಕೂದಲನ್ನು ಕಟ್ಟಬೇಕು.
4. ಟೀ ಎಲೆ: ಟೀ ಮಾಡಿದ ನಂತರ ಅದರ ಬೆಂದ ಸೊಪ್ಪನ್ನು ಹಾಗೇ ಬಿಸಾಡದೆ ತಣ್ಣೀರಿನಲ್ಲಿ ನೆನೆಸಿ ಬೆಳಗ್ಗೆ ಆ ನೀರಿನಲ್ಲಿ ಕೂದಲು ತೊಳೆದೆರ ಹೊಳೆಯುವ ಕಪ್ಪುಕೂದಲನ್ನು ಪಡೆಯಬಹುದು.
5. ತಾವರೆ: ತಾವರೆಯ ದಂಟನ್ನು ಜಜ್ಜಿ ಬೆಚ್ಚಗಿನ ನೀರಿನಲ್ಲಿ 1 ತಾಸಿನ ಕಾಲ ನೆನೆಸಿ, ಆನಂತರ ಶೋಧಿಸಿ ತಲೆ ನೆತ್ತಿಗೆ, ಕೂದಲಿನ ಬುಡಕ್ಕೆ ತಿಕ್ಕಿ ಸ್ನಾನ ಮಾಡುವುದರಿಂದ ಸೊಂಪಾಗಿ ಮತ್ತು ಕಾಂತಿಯುತವಾಗಿ ಬೆಳೆಯುತ್ತದೆ.
6. ದಾಸವಾಳದ ಸೊಪ್ಪು: ದಾಸವಾಳದ ಎಲೆಯನ್ನು ಅರೆದು ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕೂದಲು ದಪ್ಪ ಮತ್ತು ಉದ್ದವಾಗುವುದು.



Click it and Unblock the Notifications
