Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸೊಂಪಾದ ಕೂದಲಿನ ರಹಸ್ಯದ ಕೀಲಿಕೈ ಇಲ್ಲಿದೆ

1. ಮೆಹಂದಿ ಎಣ್ಣೆ: ಮೆಹಂದಿ ಕೂದಲಿಗೆ ಬಣ್ಣ ನೀಡುವುದಷ್ಟೆ ಅಲ್ಲ, ಕೂದಲು ಆರೋಗ್ಯವಾಗಿ ಇರುವಂತೆ ಮಾಡುತ್ತದೆ. ಮೆಹಂದಿ ಕೂದಲಿಗೆ ಬಣ್ಣ ನೀಡುವುದರಿಂದ ಅನೇಕರು ಇದನ್ನು ಹಾಕಲು ಇಷ್ಟ ಪಡುವುದಿಲ್ಲ. ಕೆಂಚು ಕೂದಲು ಕೆಲವರ ಮುಖ ಬಣ್ಣಕ್ಕೆ ಅಷ್ಟಾಗಿ ಒಗ್ಗುವುದಿಲ್ಲ ಕೂಡ. ಅಂತಹವರು ಒಣಗಿದ ಮೆಹಂದಿ ಎಲೆಯನ್ನು ಎಣ್ಣೆಯಲ್ಲಿ ಕುದಿಸಿ ತಲೆಗೆ ಹಚ್ಚಿದರೆ ಕೂದಲಿನಲ್ಲಿ ಕೆಂಪು ಬಣ್ಣ ಕಾಣುವುದಿಲ್ಲ, ಕೂದಲು ಕೂಡ ಆರೋಗ್ಯವಾಗಿರುತ್ತದೆ.
2. ರೋಸ್ ಮರಿ ಎಣ್ಣೆ: ರೋಸ್ ಮರಿ ಗಿಡಮೂಲಿಕೆಯನ್ನುಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿದರೆ ಒರಟು ಕೂದಲು ಕೂಡ ಮೃದುವಾಗುತ್ತದೆ. ಈ ರೋಸ್ ಮರಿ ಎಣ್ಣೆ ಬೇಕೆಂದರೆ ಬಾದಾಮಿ ಎಣ್ಣೆಗೆ ರೋಸ್ ಮರಿ ಎಲೆಯನ್ನು ಹಾಕಿ ಕುದುಸಿದರೆ ರೋಸ್ ಮರಿ ಎಣ್ಣೆಯಾಗುತ್ತದೆ, ಇಲ್ಲದಿದ್ದರೆ ಕೆಲವು ಆಯುರ್ವೇದ ಅಂಗಡಿಗಳಲ್ಲಿ ಕೂಡ ದೊರೆಯುತ್ತದೆ.
3. ದಾಸವಾಳದ ಎಣ್ಣೆ : ಕೊಬ್ಬರಿ ಎಣ್ಣೆಗೆ ದಾಸವಾಳವನ್ನು ಹಾಕಿ ಕುದುಸಿ ಆ ಎಣ್ಣೆಯನ್ನು ಡಬ್ಬದಲ್ಲಿ ಸಂಗ್ರಹಿಸಿ, ಆ ಎಣ್ಣೆಯನ್ನು ತಲೆಗೆ ಹಚ್ಚುತ್ತಾ ಬಂದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
4. ಟೀ ಎಣ್ಣೆ: ಟೀ ಎಲೆ ಕೂದಲಿನ ಪೋಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬಿಸಿ ಆಲೀವ್ ಎಣ್ಣೆಗೆ 3 ಗ್ರೀನ್ ಟೀ ಬ್ಯಾಗ್ ಮುಳುಗಿಸಿಟ್ಟು 20 ನಿಮಿಷ ಕಾಲ ಬಿಡಬಕು. ನಂತರ ಆ ಎಣ್ಣೆಯನ್ನು ತಲೆಗೆ ಬಳಸಬಹುದು.
5. ನೆಲ್ಲಿಕಾಯಿ ಎಣ್ಣೆ: ದಪ್ಪ ಕೂದಲನ್ನು ಪಡೆಯಲು ನೆಲ್ಲಕಾಯಿ ಎಣ್ಣೆಯನ್ನು ಬಳಸಲಾಗುತ್ತದೆ.ಕತ್ತರಿಸಿದ ನೆಲ್ಲಿಕಾಯಿ, ಮೆಂತೆ ಸೊಪ್ಪು ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರ ಮಾಡಿ ಕುದಿಸಬೇಕು. ಎಣ್ಣೆ ಕಂದು ಬಣ್ಣಕ್ಕೆ ಬರುವಾಗ ಅದನ್ನು ತೆಗೆದು ಆರಲು ಬಿಡಬೇಕು. ಈ ಎಣ್ಣೆಯನ್ನು ಬಳಸಿದರೆ ದಪ್ಪವಾದ ಮತ್ತು ಉದ್ದದ ಕೂದಲನ್ನು ಪಡೆಯಬಹುದು.



Click it and Unblock the Notifications
