Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಕೂದಲು ತುಂಡಾಗುವುದನ್ನು ತಪ್ಪಿಸುವುದು ಹೇಗೆ?

ಕೂದಲು ಕವಲೊಡೆಯುವುದು (ತುಂಡಾಗುವ) ಕೂದಲಿನ ಮುಖ್ಯವಾದ ಸಮಸ್ಯೆಗಳಲ್ಲಿ ಒಂದು. ಪ್ರತಿದಿನ ಹೇರ್ ಡ್ರೈಯರ್ ಬಳಕೆ ಮಾಡುವುದು, ಒದ್ದೆ ಕೋದಲನ್ನು ಬಾಚುವುದು, ಆಹಾರಕ್ರಮದಲ್ಲಿ ವ್ಯತ್ಯಾಸ, ಕೂದಲನ್ನು ಇಸ್ತ್ರಿ ಮಾಡುವುದು ಇವೆಲ್ಲವು ಕೂದಲಿನ ಅಂದವನ್ನು ಹಾಳುಮಾಡುತ್ತದೆ.
ಈ ರೀತಿ ಕೂದಲು ಕವಲೊಡೆದಾಗ ಕೂದಲಿನ ತುದಿಯನ್ನು ಕತ್ತರಿಸುವುದು ಸಾಮಾನ್ಯ.
ಹೀಗೆ ಮಾಡಿದರೆ ಕೂದಲಿನ ಉದ್ದ ಕಡಿಮೆಯಾಗುತ್ತದೆ, ಆದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಕೂದಲನ್ನು ಟ್ರಿಮ್ ಮಾಡದೆಯೆ ಕೂದಲಿನ ತುದಿ ಒಡೆಯುವ ಸಮಸ್ಯೆಯನ್ನು ಹೋಗಲಾಡಿಸಬಹುದಾಗಿದೆ.
1.ಕೂದನ್ನು ಹೆಚ್ಚಾಗಿ ಬಾಚಬಾರದು:ತುಂಬಾ ಹೆಣ್ಣು ಮಕ್ಕಳು ಕೂದಲನ್ನು ಬಾಚುವುದರಲ್ಲಿಯೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಆದರೆ ಈ ರೀತಿ ತುಂಬಾ ಹೊತ್ತು ಕೂದಲನ್ನು ಬಾಚುವುದರಿಂದ ಕೂದಲಿನ ಮೇಲೆ ಅಧಿಕ ಒತ್ತಡ ಬಿದ್ದು ಕೂದಲು ಕವಲೊಡೆಯಲಾರಂಭಿಸುತ್ತವೆ. ಅಲ್ಲದೆ ಒದ್ದೆ ಕೋದಲನ್ನು ಬಾಚ ಬಾರದು, ಕೂದಲನ್ನು ಒಣಗಿದ ನಂತರ ಬುಡದಿಂದ ಕೆಳಕ್ಕೆ ಬಾಚಿ ಕೂದಲು ಉದುರುದನ್ನು ತಡೆಗಟ್ಟಿ.
2. ಮೊಟ್ಟೆಯನ್ನು ಕೂದಲಿಗೆ ನ್ಯಾಚುರಲ್ ಕಂಡೀಷನರ್ ಆಗಿ ಬಳಸಬಹುದಾಗಿದೆ. ಇದನ್ನು ಬಳಸುವುದರಿಂದ ಕೂದಲು ಮೈದು ಮತ್ತು ಹೊಳಪನ್ನು ಪಡೆಯುವುದು.
3. ಕೂದಲನ್ನು ಜಡೆ ಹಾಕಿ ಬಿಡುವುದು ಒಳ್ಳೆಯದು, ಕೂದಲಿಗೆ ರಬ್ಬರ್ ಬ್ಯಾಂಡ್ ಅಥವಾ ಕ್ಲಿಪ್ ಗಳನ್ನು ಬಳಸದೆ ಇರುವುದು ಒಳ್ಳೆಯದು.
4. ಹೇರ್ ಡ್ರೈಯರ್ ಕೂದಲಿಗೆ ನೇರವಾಗಿ ಬಳಸುವಾಗ ತುಂಬಾ ಎಚ್ಚರದಿಂದ ಇರಬೇಕು. ಕೂದಲನ್ನು ನೈಸರ್ಗಿಕವಾಗಿ ಒಣಗಿಸುವುದು ಒಳ್ಳೆಯದು, ಕೆಲವೊಮ್ಮೆ ಮಾತ್ರ ಹೇರ್ ಡ್ರೈಯರ್ ಬಳಸಿ.
5. ವಿಟಮಿನ್ ಬಿ ಆಹಾರವನ್ನು ಸೇವಿಸುವುದು, ಸೊಪ್ಪು , ತರಕಾರಿಗಳನ್ನು ಬಳಸುವುದರಿಂದ ಕೂದಲು ಕವೆಲೊಡೆಯುವುದನ್ನು ತಪ್ಪಿಸಬಹುದಾಗಿದೆ.



Click it and Unblock the Notifications