Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಳೆಗಾಲದಲ್ಲಿ ಮರುಗದಿರಲಿ ಮೃದು ಕೂದಲು

ಮಳೆಗಾಲದಲ್ಲಿ ಕೂದಲು ಆರೈಕೆ ಹೇಗಿರಬೇಕು?
* ವಾರಕ್ಕೊಮ್ಮೆ ಎಣ್ಣೆ ಮಸಾಜ್: ಯಾವುದೇ ಕಾಲಕ್ಕೂ ಕೂದಲಿಗೆ ಎಣ್ಣೆ ಹಚ್ಚುವುದನ್ನು ಬಿಡಬಾರದು. ವಾರಕ್ಕೊಮ್ಮೆ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಹಚ್ಚಿಕೊಳ್ಳಬೇಕು. ಚಳಿ ಮಳೆಯಿಂದ ನಿಮ್ಮ ಕೂದಲು ನಿರ್ಜೀವಗೊಳ್ಳದಿರಲು ಎಣ್ಣೆ ಮಸಾಜ್ ತುಂಬಾ ಸಹಕಾರಿ.
* ಮೆಹಂದಿ ಪ್ಯಾಕ್: ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಮೆಹಂದಿಯಿಂದ ಕೂದಲಿಗೆ ಪ್ಯಾಕ್ ಹಾಕಿಕೊಳ್ಳಿ. ಇದು ನಿಮ್ಮ ಕೂದಲಿಗೆ ಜೀವ ತುಂಬಿ ಗಟ್ಟಿಗೊಳಿಸುತ್ತದೆ. ಕೂದಲು ಗಟ್ಟಿಯಿರದಿದ್ದರೆ ಎಂತಹ ಕಾಲದಲ್ಲೂ ಬೇಗ ಉದುರುತ್ತದೆ. ಆದ್ದರಿಂದ ಮೆಹಂದಿ ಎಲ್ಲಾ ಕಾಲಕ್ಕೂ ಒಳ್ಳೆಯದು.
* ಕೂದಲು ಕಟ್ಟಿಕೊಳ್ಳಿ: ಮಳೆಗಾಲದಲ್ಲಿ ಹೊರಗೆ ಹೋಗುವಾಗ ಅಥವಾ ಮಲಗುವಾಗ ಕೂದಲನ್ನು ಹಾಗೆಯೇ ಬಿಡುವುದು ಸೂಕ್ತವಲ್ಲ. ಕೂದಲನ್ನು ಸಡಿಲವಾಗಿ ಬಿಡದೆ ಪೂರ್ತಿ ತಲೆ ಬಾಚಿಕೊಂಡು ಕಟ್ಟಿಕೊಳ್ಳುವುದು ಸರಿ. ಇದರಿಂದ ಕೂದಲು ತುಂಡಾಗಿ ಉದುರುವುದು ತಪ್ಪುತ್ತದೆ ಮತ್ತು ಧೂಳು, ಕೊಳೆ ತಲೆಯಲ್ಲಿ ಸೇರಿಕೊಳ್ಳುವುದನ್ನೂ ತಡೆಯುತ್ತದೆ.
* ಸ್ಕಾರ್ಫ್, ಟೋಪಿ: ಹೊರಗೆ ಹೋಗುವಾಗ ಸ್ಕಾರ್ಫ್ ಅಥವಾ ಟೋಪಿ ಧರಿಸಬಹುದು. ಟೋಪಿಯನ್ನು ಧರಿಸಲು ಹಿಂಜರಿಯುವವರಿಗೆಂದೇ ಸ್ಟೈಲಿಶ್ ಟೋಪಿಗಳೂ ಇವೆ. ಗಾಳಿ, ಮಳೆಯಿಂದ ಕೂದಲು ಸಿಕ್ಕಾಗಿ ಉದುರುವುದನ್ನು ತಡೆಯುತ್ತದೆ.
* ಛತ್ರಿ: ಮಳೆ, ಬಿಸಿಲು ಎಲ್ಲಾ ಕಾಲದಲ್ಲೂ ಛತ್ರಿ ಸದಾ ನಿಮ್ಮೊಂದಿಗಿರಲಿ. ಇದು ನಿಮ್ಮ ಕೂದಲನ್ನು ಅನವಶ್ಯಕ ಸಮಸ್ಯೆಗಳಿಂದ ದೂರವಿರಿಸುತ್ತೆ.



Click it and Unblock the Notifications
