Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೂದಲನ್ನು ಕಲರ್ ಮಾಡುವುದು ಹೇಗೆ?

ಭಾರತೀಯರ ಮೈ ಬಣ್ಣಕ್ಕೆ ಒಗ್ಗಿ ಕೊಳ್ಳುವಂತೆ ಮೆಹಂದಿ ಬಳಸುವುದು ಹೇಗೆ? ಸಹಜ ಮತ್ತು ಸುಂದರ ಕೂದಲಿನ ಬಣ್ಣಕ್ಕಾಗಿ ಏನು ಮಾಡಬೇಕು? ಇಲ್ಲಿದೆ ನೋಡಿ ಸುಂದರವಾದ ಕಲರ್ ಕೂದಲಿಗಾಗಿ ವಿಧಾನ.
ಕಪ್ಪು ಬಣ್ಣದ ಕೂದಲಿಗಾಗಿ
1. ಮೆಹಂದಿ, ಕರಿ ಬೇವು, ಮತ್ತು ಒಳೆಣ್ಣೆ: ಒಳ್ಳೆಣ್ಣೆಗೆ ಕರಿಬೇವು ಹಾಕಿ ಎಣ್ಣೆಯನ್ನು ಕುದಿಸಿ ಅದನ್ನುಎರಡು ದಿನಗಳ ಕಾಲ ಹಾಗೆ ತೆಗೆದು ಇಡಿ. ನೀವು ಕೂದಲಿಗೆ ಕಲರ್ ಮಾಡುವ ದಿನ ಮೆಹಂದಿಯನ್ನು ಆ ಎಣ್ಣೆಗೆ ಹಾಕಿ ಮತ್ತೊಮ್ಮೆ ಕುದಿಸಿ. ಅದು ಆರಿದ ನಂತರ ತಲೆಗೆ ಹಚ್ಚಿ. ಕೂದಲಿಗೆ ಚೆನ್ನಾಗಿ ಬಣ್ಣ ಹಿಡಿದ ನಂತರ ಉಗುರೆ ಬೆಚ್ಚನೆಯ ನೀರಿನಿಂದ ಸೀಗೆ ಕಾಯಿ ಅಥವಾ ಸ್ಯಾಂಪೂ ಉಪಯೋಗಿಸಿ ತಲೆ ತೊಳೆಯಿರಿ.
2. ಮೆಹಂದಿ ಮತ್ತು ಹರಳೆಣ್ಣೆ: ಕಬ್ಬಿಣದಿದ ಮಾಡಿದ ಬಾಣಲೆಯಲ್ಲಿ ಮೆಹಂದಿ ಮತ್ತು ಹರಳೆಣ್ಣೆಯನ್ನು ಕುದಿಸಿ ಬಾಣಲೆಯಲ್ಲೆ ಕೆಲವು ದಿನಗಳ ಕಾಲ ಇಡಿ. ಎಣ್ಣೆಯು ಬಾಣಲೆಯಲ್ಲಿ ಕಪ್ಪು ಬಣ್ಣಕ್ಕೆ ತಿರುಗಿದ ಮೇಲೆ ಅದನ್ನು ತಲೆ ಕೂದಲಿಗೆ ಹಚ್ಚಿ. ಎಣ್ಣೆ ವೆನ್ನಾಗಿ ಕೂದಲಿಗೆ ಹಿಡಿಯುವರೆಗೂ ಇಟ್ಟು ಉಗುರು ಬೆಚ್ಚನೆಯ ನೀರಿನಿಂದ ತಲೆ ತೊಳೆಯಿರಿ.
ಕೆಂಚು ಬಣ್ಣದ ಕೂದಲಿಗಾಗಿ
1. ಮೆಹಂದಿ ಮತ್ತು ಕಾಫಿ ಮಿಶ್ರಣ: ಕಾಫಿಯೊಂದಿಗೆ ಮೆಹಂದಿಯನ್ನು ಬೆರೆಸಿ ಹಚ್ಚಿದರೆ ಕೆಂಚು ಬಣ್ಣದ ಕೂದಲು ನಿಮ್ಮದಾಗುವುದು.
2. ಮೆಹಂದಿ ಮತ್ತು ಬೇಟ್ ರೂಟ್ : ಬೀಟ್ ರೂಟ್ ಜ್ಯೂಸ್ ಗೆ ಮೆಹಂದಿ ಪುಡಿಯನ್ನು ಬೆರೆಸಿ ಹಚ್ಚುವುದರಿಂದ ಸುಂದರವಾದ ಕೆಂಚು ಕೂದಲು ನಿಮ್ಮದಾಗುವುದು.
3. ಮೆಹಂದಿ, ಮೊಸರು, ನಿಂಬೆ ಹಣ್ಣು, ಟೀ ಕುದಿಸಿದ ನೀರು: ಇವುಗಳ ಮಿಶ್ರಣವನ್ನು ತಲೆಗೆ ಹಚ್ಚಿದರೆ ಕೆಂಪು ಮಿಶ್ರಿತ ಕೆಂಚು ಬಣ್ಣದ ಕೂದಲು ನಿಮ್ಮದಾಗುವುದು. ಇಲ್ಲಿ ಮೊಸರು ಕಂಡೀಷನರ್ ರೀತಿ ವರ್ತಿಸುತ್ತದೆ.
ಈ ರಿತಿ ಕೂದಲನ್ನು ಕಲರ್ ಮಾಡಲು ಯಾವುದೇ ವಯಸ್ಸಿನ ಮಿತಿಯಿಲ್ಲ. ಈ ರೀತಿ ನೈಸರ್ಗಿಕ ವಸ್ಸತುಗಳನ್ನು ಬಳಸಿ ಕಲರ್ ಮಾಡುವುದರಿಂದ ಕೂದಲು ಆರೋಗ್ಯವಾಗಿ ಹಾಗೂ ಸುಂದರವಾಗಿ ಇರುವುದು.



Click it and Unblock the Notifications
