Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ವಿಚ್ಛೇದನದಿಂದ ಮಹಿಳೆಯರಲ್ಲಿ ಕೂದಲುದುರುವ ಸಮಸ್ಯೆ!

ಮಹಿಳೆ ಮತ್ತು ಪುರುಷರಲ್ಲಿ ಕೂದಲುದುರುವಿಕೆಗೆ ವಯಸ್ಸು ಮತ್ತು ಅನುವಂಶಿಕ ಕಾರಣ. ಆದರೆ ಇದೀಗ ಕೇಸ್ ವೆಸ್ಟರ್ನ್ ಸ್ಕೂಲ್ ಆಫ್ ಮೆಡಿಸನ್ ನಡೆಸಿದ ಸಂಶೋಧನೆಯಿಂದ, ವೈವಾಹಿಕ ಜೀವನದಲ್ಲಿ ಸಂತೋಷದಿಂದಿರುವ ಮಹಿಳೆಯರಿಗಿಂತ, ವಿಚ್ಛೇದನ ಪಡೆದ ಮಹಿಳೆಯರು ಕೂದಲಿನ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ ಎಂದು ತಿಳಿಸಿದೆ.
ಇದಕ್ಕೆ ಅತಿಯಾದ ಒತ್ತಡವೇ ಕಾರಣ, ವಿಚ್ಛೇದನದ ನಂತರ ಒತ್ತಡ ಹೆಚ್ಚಾಗಿ ಕೂದಲುದುರುವಿಕೆಗೆ ಮುಖ್ಯ ಕಾರಣವಾಗುತ್ತದೆ, ಅದರಲ್ಲೂ ಮಹಿಳೆಯರಲ್ಲಿ ಈ ಸಮಸ್ಯೆ ಪರಿಣಾಮ ಹೆಚ್ಚಾಗಿರುತ್ತದೆ ಎಂದು ಸಂಶೋಧನೆ ವಕ್ತಾರ ಡಾ. ಬಹಮನ್ ಗಯುರಾನ್ ತಿಳಿಸಿದ್ದಾರೆ.
ವಿಚ್ಛೇದನದೊಂದಿಗೆ, ಮಕ್ಕಳ ಕುರಿತಾಗಿಯೂ ಮಹಿಳೆಯರಲ್ಲಿ ಹೆಚ್ಚುವ ಮಾನಸಿಕ ಒತ್ತಡ ಕೂದಲು ತೆಳ್ಳಗಾಗುವಂತೆ ಮಾಡುತ್ತದೆ. ವಿಚ್ಛೇದನದ ನಂತರ ಮಹಿಳೆಯರು ಮದ್ಯವ್ಯಸನಕ್ಕೆ ಇಳಿದರೆ ಕೂದಲಿನ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತದೆ ಎಂದೂ ತಿಳಿಸಿದೆ.
84 ಮಹಿಳೆಯರ ಮೇಲೆ ನಡೆಸಿದ ಸಂಶೋಧನೆಯಿಂದ ಈ ಫಲಿತಾಂಶ ದೊರೆತಿದ್ದು, ವಿಚ್ಛೇದನದಿಂದ ಪುರುಷರಿಗಿಂತ ಮಹಿಳೆಯರ ಕೂದಲಿನ ಮೇಲೆ ಹೆಚ್ಚು ಪರಿಣಾಮ ಉಂಟಾಗುತ್ತದೆ. ಆದರೆ ಮಹಿಳೆ ಅಥವಾ ಪುರುಷರಲ್ಲಿ ಕುಡಿತ ಮತ್ತು ಧೂಮಪಾನ ಹೆಚ್ಚಾದರೆ ಕೂದಲುದುರುವ ಸಮಸ್ಯೆ ಇಬ್ಬರಲ್ಲೂ ಅಧಿಕವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.



Click it and Unblock the Notifications