Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ತಲೆ ತುರಿಸುತ್ತಿದ್ದರೆ ಇಲ್ಲಿದೆ ಪರಿಹಾರ

ಆದ್ದರಿಂದ ಪ್ರಾರಂಭಿಕ ಹಂತದಲ್ಲೇ ಅದನ್ನು ನಿವಾರಿಸಿದರೆ ಮುಂದಿನ ಕೆಟ್ಟ ಪರಿಣಾಮವನ್ನು ತಡೆಯಬಹುದು.
ಕೂದಲು ಒಣಗುವಿಕೆ ಮತ್ತು ತುರಿಕೆಯನ್ನು ತಡೆಯುವ ಕೆಲವು ಸಲಹೆ ಇಲ್ಲಿವೆ.
1. ph 4.5-5.5: ದಲ ತುರಿಕೆಯನ್ನು ತಡೆಯಬೇಕೆಂದರೆ ಕೂದಲಿನ ಬುಡವನ್ನು ಶುದ್ದವಾಗಿಟ್ಟುಕೊಳ್ಳಬೇಕು. ಕೂದಲ ಬುಡದಲ್ಲಿ ಎಣ್ಣೆ ಮತ್ತು ಧೂಳು ಸೇರಿಕೊಂಡು ತುರಿಕೆ ಆರಂಭವಾಗುತ್ತದೆ. ಆದ್ದರಿಂದ ಶಾಂಪೂಗಳನ್ನು ಕೊಂಡುಕೊಳ್ಳುವಾಗ ph 4.5-5.5 ಇರುವುದನ್ನು ನೋಡಿ ಕೊಂಡುಕೊಳ್ಳಬೇಕು.
2. ಹೇರ್ ಡೈ: ಹೇರ್ ಡೈ ಉಪಯೋಗಿಸುವುದರಿಂದ ಅದರಲ್ಲಿನ ಕೆಮಿಕಲ್ ಕೂದಲಿನ ಬುಡವನ್ನು ಹಾನಿಗೊಳಿಸಬಹುದು. ಆದ್ದರಿಂದ ಹೇರ್ ಡೈ ಉಪಯೋಗದ ಬಗ್ಗೆ ಜಾಗ್ರತೆಯಿಂದಿರಿ. ಉತ್ತಮ ಗುಣಮಟ್ಟದ್ದೆ ಉಪಯೋಗಿಸಿ.
3. ಬಿಸಿ ನೀರು: ತಲೆಯಲ್ಲಿ ಕಡಿತ ಇದ್ದವರು ಅಥವಾ ಒಣಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದವರು ಬಿಸಿ ನೀರಿನಲ್ಲಿ ತಲೆಗೆ ಸ್ನಾನ ಮಾಡಬಾರದು. ಬೆಚ್ಚಗಿನ ನೀರಿನಲ್ಲಿ ಮಾಡಬಹುದು. ಅತಿಯಾದ ಬಿಸಿ ನೀರು ಚರ್ಮವನ್ನು ಇನ್ನಷ್ಟು ಒಣಗಿಸಬಹುದು.
4. ಡ್ರೈಯರ್: ಕೂದಲು ಒಣಗಿಸಲು ಡ್ರೈಯರ್ ಉಪಯೋಗಿಸುವುದರಿಂದಲೂ ಕೂದಲಿ ತೊಂದರೆಗೆ ಒಳಗಾಗುತ್ತದೆ. ಇದರಿಂ ಕೂದಲಿನ ನೈಸರ್ಗಿಕ ಎಣ್ಣೆ ಅಂಶ ಕಳೆದುಹೋಗಿ ಕೂದಲು ಒಣಗಿ ತುರಿಕೆ ಉಂಟಾಗುತ್ತದೆ. ಅಷ್ಟೇ ಅಲ್ಲ, ಕೂದಲು ತುಂಡಾಗುವ ಸಮಸ್ಯೆಯೂ ಎದುರಾಗುತ್ತದೆ.
5. ಸೂರ್ಯನ ಕಿರಣ: ಹೊರಗೆ ಹೋಗುವಾಗ ಬಿಸಿಲಿದ್ದರೆ ತಲೆಯ ಮೇಲೆ ಬಟ್ಟೆಹಾಕಿಕೊಳ್ಳಿ ಅಥವಾ ಕೊಡೆಯನ್ನು ಉಪಯೋಗಿಸಿ. ಸೂರ್ಯನ ಕಿರಣಗಳು ಚರ್ಮ ಒಣಗುವಂತೆ ಮಾಡುತ್ತದೆ. ಬಟ್ಟೆ ಹಾಕಿಕೊಂಡರೆ ತಲೆಗೆ ರಕ್ಷಣೆ ಕೊಟ್ಟರೆ ಧೂಳು ಮತ್ತು ಪ್ರದೂಷಣೆಯಿಂದಲೂ ಕಾಪಾಡುತ್ತದೆ.
6. ಹೇನು: ಹೇನುಗಳಿದ್ದರೂ ತಲೆ ತುಂಬಾ ಕಡಿಯುತ್ತದೆ. ತುರಿಕೆ ಆರಂಭವಾಗಿ ಕೆಲವು ದಿನಗಳವರೆಗೂ ಅದು ನಿಲ್ಲದಿದ್ದರೆ ಹೇನನ್ನು ಸಂಪೂರ್ಣ ತೊಲಗಿಸಿಕೊಳ್ಳಬೇಕು.
7. ತಲೆಹೊಟ್ಟು: ತಲೆಯಲ್ಲಿ ಹೆಚ್ಚು ಹೊಟ್ಟು ತುಂಬಿಕೊಂಡಿದ್ದರೆ ತುರಿಕೆ ಉಂಟಾಗುತ್ತದೆ. ಇದಕ್ಕೆ ನಿಂಬೆರಸವನ್ನು ಲೇಪಿಸಿಕೊಂಡರೆ ಉತ್ತಮ ಪರಿಹಾರ.
8. ಆಲಿವ್ ಎಣ್ಣೆ: ಬೇವಿನ ಎಣ್ಣೆ ಜೊತೆ ಆಲಿವ್ ಎಣ್ಣೆಯನ್ನೋ ಅಥವಾ ಲ್ಯಾವೆಂಡರ್ ಎಣ್ಣೆಯನ್ನೋ ಬಳಸಿ ಮಸಾಜ್ ಮಾಡಿಕೊಂಡರೆ ಕೂದಲು ಮತ್ತು ತಲೆಯ ಚರ್ಮವನ್ನು ಪೋಷಿಸಿ ತುರಿಕೆ ಕಡಿಮೆ ಮಾಡುತ್ತದೆ.



Click it and Unblock the Notifications
