Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುರುಷರಲ್ಲಿ ಡ್ಯಾಂಡ್ರಫ್ ನಿವಾರಣೆ ಹೇಗೆ?

ಆದರೆ ಉದ್ಯೋಗದಲ್ಲಿರುವ ಪುರುಷರಿಗೆ ತಮ್ಮ ಕೂದಲಿನತ್ತ ಗಮನ ನೀಡಲು ಸಮಯವಿಲ್ಲದಿರಬಹುದು. ಆದ್ದರಿಂದ ಲಭ್ಯವಿರುವ ಅಲ್ಪಾವಧಿಯಲ್ಲೇ ಕೂದಲಿಗೆ ಹೇಗೆ ನೈಸರ್ಗಿಕ ಪೋಷಣೆ ನೀಡಬಹುದು ಎಂದು ಇಲ್ಲಿ ತಿಳಿದುಕೊಳ್ಳಿ.
ಪುರುಷರಲ್ಲಿ ತಲೆಹೊಟ್ಟು ನಿವಾರಣೆಗೆ ನೈಸರ್ಗಿಕ ಮದ್ದು:
1. ನಿಂಬೆ ಮತ್ತು ಮೊಸರು: ಉದ್ಯೋಗಕ್ಕೆ ಹೋಗುವ ಪುರುಷರು ತಮ್ಮ ಕೂದಲಿನ ಬಗ್ಗೆ ಸಾಕಷ್ಟು ನಿಗಾ ವಹಿಸಲು ಸಾಧ್ಯವಿಲ್ಲ. ಆದ್ದರಿಂದ ಮುಕ್ಕಾಲು ಕಪ್ ಮೊಸರಿಗೆ ನಿಂಬೆರಸ ಹಿಂಡಿ ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಶಾಂಪುವಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಇದು ಅತಿ ಸುಲಭವಾದ ನೈಸರ್ಗಿಕ ವಿಧಾನ.
2. ಎಣ್ಣೆ ಮತ್ತು ಬೆಳ್ಳುಳ್ಳಿ: ನಿಮಗೆ ಎಣ್ಣೆ ಹಚ್ಚಲು ಸಮಯವಿಲ್ಲವೆಂದು ಎಣ್ಣೆ ಹಚ್ಚುವುದನ್ನು ನಿಲ್ಲಿಸಬೇಡಿ. ಇದು ಮುಂದೆ ಕೆಟ್ಟ ಪರಿಣಾಮ ಬೀರಬಹುದು. ಕೊಬ್ಬರಿ ಎಣ್ಣೆಯೊಂದುಗೆ 3-4 ಬೆಳ್ಳುಳ್ಳಿ ಎಸಳನ್ನು ಸೇರಿಸಿ ಬಿಸಿ ಮಾಡಿ ಹಚ್ಚಿಕೊಳ್ಳಬೇಕು. ತಲೆಯ ಬುಡಕ್ಕೆ ಚೆನ್ನಾಗಿ ಮಸಾಜ್ ಮಾಡಿ ಮೂರು ಗಂಟೆ ನಂತರ ಸ್ನಾನ ಮಾಡಿದರೆ ತಲೆಯ ಚರ್ಮ ಒಣಗಿ ತಲೆಹೊಟ್ಟು ಉಂಟಾಗುವುದನ್ನು ನಿಲ್ಲಿಸುತ್ತದೆ.
3. ಶುಂಠಿ ಮತ್ತು ಆಲಿವ್ ಎಣ್ಣೆ: ಈ ಮೇಲಿನ ಸಲಹೆಗಳನ್ನು ಪಾಲಿಸಲು ಸಮಯವಿಲ್ಲ ಎಂದಾದರೆ ತಲೆಹೊಟ್ಟು ನಿವಾರಿಸಲು ಸುಲಭ ವಿಧಾನವೊಂದು ಇಲ್ಲಿದೆ. ಶುಂಠಿಯನ್ನು ಆಲಿವ್ ಎಣ್ಣೆಗೆ ಸೇರಿಸಿ ಬಿಸಿ ಮಾಡಿ ಸ್ನಾನಕ್ಕೆ ಹೋಗುವ ಕೆಲವು ನಿಮಿಷಗಳ ಮುನ್ನ ತಲೆಗೆ ಹಚ್ಚಿ ಮಸಾಜ್ ಮಾಡಿಕೊಂಡು 5 ನಿಮಿಷದ ನಂತರ ಸ್ನಾನ ಮಾಡಿದರೆ ಬೇಗನೆ ಡ್ಯಾಂಡ್ರಫ್ ತೊಲಗುತ್ತದೆ.
ಕೂದಲೆಡೆಗಿನ ಅಲ್ಪ ನಿರ್ಲಕ್ಷ್ಯವೂ ಸಹ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು. ಆದ್ದರಿಂದ ಅಲ್ಪಾವಧಿಯಲ್ಲೇ ಪೋಷಣೆ ಮಾಡಿಕೊಳ್ಳಬಹುದಾದ ಈ ವಿಧಾನವನ್ನು ಪಾಲಿಸಿ ನಿಮ್ಮ ಕೂದಲನ್ನು ತಲೆಹೊಟ್ಟಿನಿಂದ ಮುಕ್ತಗೊಳಿಸಿ.



Click it and Unblock the Notifications
