Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೆಲ್ಮೆಟ್ ಕೂದಲುದುರುವಿಕೆಗೆ ಕಾರಣ ಆಗುತ್ತಾ?

ಹಾಗೆಂದು ಕೂದಲುದುರುವಿಕೆಗೆ ಹೆಲ್ಮೆಟ್ ಮಾತ್ರ ಕಾರಣ ಎನ್ನಲಾಗುವುದಿಲ್ಲ. ಅದಕ್ಕೆ ಹಲವು ಅಂಶಗಳೂ ಗಣನೆಗೆ ಬರಬಹುದು.
ಕೂದಲುದುರುವಿಕೆಗೆ ಕಾರಣ: * ಅತಿಯಾದ ಒತ್ತಡ * ಕೂದಲನ್ನು ಪೋಷಿಸಲು ಸಮಯದ ಅಭಾವ * ತಲೆಹೊಟ್ಟು
ಹೆಲ್ಮೆಟ್ ಮತ್ತು ಕೂದಲುದುರುವಿಕೆ: ಹೆಲ್ಮೆಟ್ ಗೂ ಕೂದಲುದುರುವಿಕೆಗೂ ಸಂಬಂಧವಿಲ್ಲ. ಆದರೆ ಅದನ್ನು ಧರಿಸುವ ಕೆಲವು ಲಕ್ಷಣಗಳಿಂದ ಕೂದಲು ಉದುರುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಕೂದಲು ನಿಶ್ಯಕ್ತಗೊಳ್ಳಲು ಹೆಲ್ಮೆಟ್ ಹೇಗೆ ಕಾರಣವಾಗುತ್ತದೆ ಎಂದು ತಿಳಿದುಕೊಳ್ಳಿ.
* ಗಾಳಿಯನ್ನು ತಡೆಯುತ್ತದೆ: ನಿಮ್ಮ ತ್ವಚೆಯಂತೆ ಕೂದಲಿಗೂ ಸಹ ಗಾಳಿ ಅವಶ್ಯಕತೆಯಿದೆ. ಆದರೆ ಹೆಲ್ಮೆಟ್ ಧರಿಸುವುದರಿಂದ ಕೂದಲಿಗೆ ಗಾಳಿ ಹೋಗುವುದನ್ನು ತಡೆಯುತ್ತದೆ.
* ಬೆವರುವಿಕೆ: ಹೆಲ್ಮೆಟ್ ಒಳಗೆ ಗಾಳಿ ಪ್ರವೇಶಿಸಲು ಸಾಧ್ಯವಾಗದೆ ತಲೆಯಲ್ಲಿ ಬೆವರು ತುಂಬಿಕೊಂಡು ಕೂದಲ ಬುಡವನ್ನು ನಿಶ್ಯಕ್ತಿಗೊಳಿಸಿ ಉದುರುವಂತೆ ಮಾಡುತ್ತದೆ.
* ತಲೆಹೊಟ್ಟು: ಪುರುಷರಲ್ಲಿ ತಲೆಹೊಟ್ಟು ಸಾಮಾನ್ಯ ಸಮಸ್ಯೆ. ಅದರಲ್ಲೂ ಹೆಲ್ಮೆಟ್ ಧರಿಸುವುದರಿಂದ ತಲೆಹೊಟ್ಟು ಹೆಚ್ಚಾಗಬಹುದು.
ಇದಕ್ಕೆ ಪರಿಹಾರ:
* ಕೂದಲುದುರುವಿಕೆಗೆ ಹೆಲ್ಮೆಟ್ ಪರೋಕ್ಷ ಕಾರಣಗಳಲ್ಲೊಂದಾದರೂ ಹೆಲ್ಮೆಟ್ ಜೀವರಕ್ಷಣೆಗೆ ಅತ್ಯವಶ್ಯಕ. ಹೆಲ್ಮೆಟ್ ಇಲ್ಲದಿದ್ದರೆ ಪ್ರಾಣಕ್ಕೇ ಎರವಾಗಬಹುದು. ಆದ್ದರಿಂದ ಹೆಲ್ಮೆಟ್ ಹೊರತಾಗಿ ವಾಹನ ಚಾಲನೆ ಮಾಡುವುದನ್ನು ನಿಲ್ಲಿಸಿಬಿಡಿ.
* ಕೂದಲನ್ನು ಶುದ್ಧವಾಗಿ ಇಟ್ಟುಕೊಳ್ಳಿ. ಇದರಿಂದ ತಲೆಹೊಟ್ಟು ಬರುವುದನ್ನು ತಡೆಯಬಹುದು.
* ಒಳ್ಳೆಯ ಶಾಂಪೂ ಆಯ್ಕೆ ನಿಮ್ಮದಾಗಲಿ. ತಲೆಯನ್ನು ಮೃದು ಬಟ್ಟೆಯಲ್ಲಿ ಒಣಗಿಸಿ ನಂತರ ಬಾಚಿಕೊಳ್ಳಿ.
* ಹೆಲ್ಮೆಟ್ ಧರಿಸುವ ಮುನ್ನ ತಲೆಗೆ ಬಟ್ಟೆ ಸುತ್ತಿಕೊಂಡು ನಂತರ ಹೆಲ್ಮೆಟ್ ಧರಿಸಿರಿ.
* ತುಂಬಾ ದೂರ ಪ್ರಯಾಣ ಮಾಡಬೇಕೆಂದಿದ್ದರೆ ಅಲ್ಲಲ್ಲಿ ವಾಹನವನ್ನು ನಿಲ್ಲಿಸಿ ಹೆಲ್ಮೆಟ್ ಬಿಚ್ಚಿ ಗಾಳಿಗೆ ತಲೆಯೊಡ್ಡಿ ನಂತರ ಧರಿಸಿಕೊಂಡು ಮುಂದುವರೆಯಿರಿ.
ಈ ಸಲಹೆಗಳನ್ನು ಪಾಲಿಸಿದರೆ ಹೆಲ್ಮೆಟ್ ಧರಿಸಿಯೂ ನಿಮ್ಮ ಕೂದಲನ್ನು ಕಾಪಾಡಿಕೊಳ್ಳುವುದು ಸಾಧ್ಯ. ಪ್ರಾಣ ಉಳಿಸುವ ಹೆಲ್ಮೆಟ್ ಮೇಲೆ ದೋಷಾರೋಪ ಮಾಡದೆ ನಿಮ್ಮ ಕೂದಲನ್ನು ಸಂರಕ್ಷಿಸಿಕೊಳ್ಳುವುದು ನಿಮ್ಮ ಕೈಯ್ಯಲ್ಲೇ ಇದೆ.



Click it and Unblock the Notifications
