Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಕೂದಲಿನ ಚಿಂತೆ ಕಾಡದಿರಲಿ ಮತ್ತೆ ಮತ್ತೆ

ಯಾವುದನ್ನು ಸೇವಿಸಿದರೆ ನಮ್ಮ ಕೂದಲ ಬೆಳವಣಿಗೆಗೆ ಅವಶ್ಯಕ ವಿಟಮಿನ್ ಮತ್ತು ಮಿನರಲ್ ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ.
* ಹೂಕೋಸು ಮತ್ತು ಪಾಲಾಕ್ : ಇವುಗಳಲ್ಲಿ ವಿಟಮಿನ್ ಎ ಮತ್ತು ಸಿ ಹೇರಳವಾಗಿರುವುದರಿಂದ, ಇವುಗಳ ಸೇವನೆ ನೈಸರ್ಗಿಕ ಕಂಡೀಶನರ್ ಮತ್ತು ಕೂದಲಿಗೆ ಬೇಕಾಗುವ ಎಣ್ಣೆ ಅಂಶ ಕೊಡುವ ಸೆಬಂ ಉತ್ಪಾದನೆಗೆ ಸಹಕಾರಿಯಾಗುತ್ತದೆ. ಎಲ್ಲ ರೀತಿಯ ಹಸಿರು ತರಕಾರಿಗಳ ಸೇವನೆ ಕೂದಲು ಮತ್ತು ದೇಹ ಎರಡಕ್ಕೂ ಪ್ರಯೋಜನ.
* ಕಾಳುಗಳು: ಅವರೆಕಾಳು ಮತ್ತು ಸೋಯಾ ಬೀನ್ ನಲ್ಲಿ ಝಿಂಕ್ ಮತ್ತು ಪ್ರೊಟೀನ್ ಮಾತ್ರವಲ್ಲದೆ ಹೊಸ ಕೂದಲ ಬೆಳವಣಿಗೆಗೆ ಸಹಾಯ ಮಾಡುವ ಬೈಯೋಟಿನ್ ಅಂಶ ಹೆಚ್ಚಿರುವುದರಿಂದ ಇದರ ಸೇವನೆ ಕೂದಲನ್ನು ಸೂಕ್ಷ್ಮತೆಯಿಂದ ಮತ್ತು ತೆಳುಗೊಳ್ಳುವುದರಿಂದ ಕಾಪಾಡುತ್ತದೆ. ಇನ್ನಿತರ ಕಾಳುಗಳ ಸೇವನೆಯೂ ನಿಮ್ಮ ಆಹಾರದಲ್ಲಿ ಇರಲಿ.
* ಧಾನ್ಯಗಳು: ಎಲ್ಲ ರೀತಿಯ ಧಾನ್ಯಗಳೂ ದೇಹ ಮತ್ತು ಕೂದಲಿನ ಆರೋಗ್ಯಕ್ಕೆ ಪ್ರಮುಖವಾದದ್ದು. ಗೋಧಿ, ರಾಗಿ ಮುಂತಾದ ಧಾನ್ಯಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸುವುದರಿಂದ ಹೆಚ್ಚು ಕಬ್ಬಿಣಾಂಶ, ವಿಟಮಿನ್ ಬಿ-12 ದೊರೆತು ಕೂದಲು ಗಟ್ಟಿ ಮುಟ್ಟಾಗುತ್ತದೆ.
*ಮೊಟ್ಟೆ ಮತ್ತು ಮಾಂಸ: ಮೊಟ್ಟೆ ಮತ್ತು ಕೋಳಿ ಮಾಂಸ ಕೂದಲ ಬೆಳವಣಿಗೆಗೆ ಅವಶ್ಯಕವಿರುವ ಪ್ರೊಟೀನ್ ಒದಗಿಸಿ, ಕೂದಲು ಕವಲೊಡೆಯುವುದು ಮತ್ತು ಉದುರಿಹೋಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
* ಮೀನು: ಮೀನಿನಲ್ಲಿನ ಒಮೆಗಾ 3- ಫ್ಯಾಟಿ ಆಸಿಡ್ಸ್ ಕೂದಲು ಹೊಳೆಯುವಂತೆ ಮತ್ತು ಸೊಂಪಾಗಿ ಸುಂದರಗೊಳ್ಳುವಂತೆ ಮಾಡುತ್ತದೆ. ಮೀನನ್ನು ವಾರಕ್ಕೊಮ್ಮೆಯಾದರೂ ಸೇವಿಸಿದರೆ ತುಂಬಾ ಗಟ್ಟಿಮುಟ್ಟಾದ ಕೂದಲಲ್ಲದೆ ಮೆದುಳೂ ಚುರುಕುಗೊಳ್ಳುತ್ತದೆ.
* ಹುಳಿ ಹಣ್ಣುಗಳು: ಬೆಟ್ಟದ ನಲ್ಲಿಕಾಯಿ, ನೇರಳೆ, ಕಿತ್ತಳೆ, ನಿಂಬೆ ಮುಂತಾದ ಕೈಗೆಟುಕುವ ದರದಲ್ಲಿ ಸಿಗುವ ಹಣ್ಣುಗಳನ್ನು ತಿಂದರೆ ಕೂದಲು ಬೇರಿನಿಂದ ಗಟ್ಟಿಗೊಂಡು ಉದುರುವಿಕೆ ಕಡಿಮೆಯಾಗುತ್ತದೆ.
ಬೇರೆಲ್ಲಾ ಮಾರ್ಗ ಹಿಡಿದು ಕೂದಲು ಉದುರುವಿಕೆಯನ್ನು ತಡೆಯಲು ಪ್ರಯತ್ನಿಸುವುದರ ಬದಲು ಈ ನೈಸರ್ಗಿಕ ಮತ್ತು ಆರಾಮದಾಯಕ ಆಹಾರ ಕ್ರಮವನ್ನು ಅನುಸರಿಸುವುದು ತುಂಬಾ ಸುಲಭೋಪಾಯವಲ್ಲವೇ?



Click it and Unblock the Notifications
