Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಲಗಿದ 1 ನಿಮಿಷದಲ್ಲೇ ನಿದ್ರೆ ಬರಬೇಕು ಅಂದ್ರೆ ಹೀಗೆ ಮಾಡಿ..! ಇದು ನಿಮ್ಮ ಸೌಂದರ್ಯಕ್ಕೂ ಉತ್ತಮ..!
ಮುಖ ಕಲೆ ಮುಕ್ತವಾಗಿ ಸುಂದರವಾಗಿ ಕಾಣಿಸಬೇಕು ಎಂಬುದು ಎಲ್ಲರ ಬಯಕೆ ಆಗಿರುತ್ತೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಹಲವು ರೀತಿಯ ವಸ್ತುಗಳ ತಂದು ಬಳಸುತ್ತಾರೆ. ದುಬಾರಿ ಕ್ರೀಮ್‌ಗಳು, ದುಬಾರಿ ಫೇಶಿಯಲ್, ಮನೆಮದ್ದು ಹೀಗೆ ಹತ್ತಾರು ರೀತಿಯ ಸಾಹಸ ಮಾಡುತ್ತಾರೆ. ಇದೆಲ್ಲ ವಿಧಾನ ನಿಮಗೆ ಸುಂದರ ತ್ವಚೆ ನೀಡುತ್ತಿರಬಹುದು.
ಹಾಗೆ ನಮಗೆ ನಿದ್ರೆ ಕೂಡ ನಮ್ಮ ಸುಂದರ ಮುಖಕ್ಕೆ ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತಾ? ಹೌದು ನಮ್ಮ ನಿದ್ರೆಗೂ ನಮ್ಮ ಮುಖದ ಸೌಂದರ್ಯಕ್ಕೂ ಸಂಬಂಧವಿದೆ. ನಾವು ನಿರಂತರವಾಗಿ ಕೇವಲ 2 ದಿನ ಸರಿಯಾಗಿ ನಿದ್ರೆ ಮಾಡದಿದ್ದರೆ ಮುಖ ಹಾಳಾಗುವುದು ನೀಡಬಹುದು. ಕೆಲವರ ಮುಖ ನೋಡಿದ ತಕ್ಷಣವೇ ನಾವು ನಿದ್ರೆ ಸರಿಯಾಗಿ ಆಗಿಲ್ಲ ಅನ್ನೋದನ್ನು ಗುರುತಿಸಬಹುದು.

ಇನ್ನು ವಾರದ ಬಹುತೇಕ ದಿನ ಸರಿಯಾಗಿ ನಿದ್ರೆ ಮಾಡಿಲ್ಲ ಅಂದ್ರೆ ಅವರ ಮುಖ ಲಕ್ಷಣ ಎಷ್ಟು ಪ್ರಮಾಣದಲ್ಲಿ ಹಾಳಾಗಬಹುದು ಎಂಬುದನ್ನು ಒಮ್ಮೆ ಊಹಿಸಿ. ನಿದ್ರೆ ಬಾರದೇ ಇದ್ದಾಗ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ನಾವಿಂದು ಮಲಗಿದ ತಕ್ಷಣ ನಿದ್ರೆ ಬರುವಂತೆ ಮಾಡಲು ಏನು ಮಾಡಬೇಕು. ಕೇವಲ 1 ನಿಮಿಷದಲ್ಲಿ ನಿದ್ರೆ ಬರಬೇಕಾದರೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಮೊದಲು ನಮಗೆ ಮಲಗಿದ ತಕ್ಷಣ ಏಕೆ ನಿದ್ರೆ ಬರುತ್ತಿಲ್ಲ ಎಂಬುದನ್ನು ಗುರುತಿಸಬೇಕು. ಸಾಮಾನ್ಯವಾಗಿ ನಮ್ಮ ಇಂದಿನ ಜೀವನ ಶೈಲಿ ಇದಕ್ಕೆ ಕಾರಣವಾಗಿರಬಹುದು. ಅದರಲ್ಲೂ ಯುವ ಸಮುದಾಯ ಇಂತಹ ಸಮಸ್ಯೆಗೆ ಒಳಗಾಗಿರುವುದನ್ನು ನಾವು ನೋಡಿರಬಹುದು. ಒತ್ತಡ, ಆಹಾರ ಕ್ರಮ ಕಾರಣವಾಗಿರುತ್ತದೆ. ಹಾಗಾದ್ರೆ ಇದೆಲ್ಲದರ ನಡುವೆ ನಾವು ಮಲಗಿದ ತಕ್ಷಣವೇ ನಿದ್ರೆ ಬರಬೇಕು ಅಂದ್ರೆ ಏನು ಮಾಡಬೇಕು.
7 ಗಂಟೆ ಬಳಿಕ ಟೀ-ಕಾಫಿ ಕುಡಿಯಬೇಡಿ
ನೀವಂದುಕೊಳ್ಳಬಹುದು ಟೀ-ಕಾಫಿ ಕುಡಿಯುವುದರಿಂದ ನಿದ್ರೆ ಬರುವುದಿಲ್ಲವೇ ಎಂಬ ಪ್ರಶ್ನೆ ಇರಬಹುದು. ಆದ್ರೆ ಕಾಫಿ ಮತ್ತು ಟೀಯಲ್ಲಿ ಕೆಫಿನ್ ಅಂಶವಿರುತ್ತದೆ. ಆದರೆ ಟೀ ಕಾಫಿ ಕುಡಿದರೆ ಬಹಳ ಸಮಯ ಅದು ದೇಹದಲ್ಲಿ ಉಳಿಯುತ್ತದೆ. ಹೀಗಾಗಿ ಸಂಜೆ 7 ಗಂಟೆಯ ನಂತರ ಟೀ ಕಾಫಿ ಕುಡಿಯುವುದನ್ನು ನಿಲ್ಲಿಸಿಬಿಡಿ. ಇದರಿಂದ ರಾತ್ರಿ ನಿದ್ರೆಗೂ ಹಾನಿಯಾಗುತ್ತಿರುತ್ತದೆ. ಟೀ ಕುಡಿಯುವುದು ಇಡೀ ದಿನ ನೀವು ಚಟುವಟಿಕೆಯಿಂದ ಉಳಿಯುವಂತೆ ಮಾಡಬಹುದು.
ಬಿಸಿ ನೀರು ಅಥವಾ ಹಾಲು
ದೇಹ ಬೆಜ್ಜಗಿನ ಅನುಭವದಲ್ಲಿ ಚೆನ್ನಾಗಿ ನಿದ್ರೆಗೆ ಜಾರುವ ಸಂಭವವಿರುತ್ತದೆ, ಹೀಗಾಗಿ ನೀವು ಮಲಗುವ ಅರ್ಧ ಗಂಟೆ ಅಥವಾ ಒಂದು ಗಂಟೆ ಮೊದಲು ಉಗುರು ಬೆಚ್ಚಗಿನ ನೀರು ಅಥವಾ ಹಾಲನ್ನು ಕುಡಿಬೇಕು. ಇದರಿಂದ ಬಹುಬೇಗ ನಿದ್ರೆ ಬರುವಂತೆ ಮಾಡಬಹುದು.
ವ್ಯಾಯಾಮ
ನೀವು ಸಂಜೆ ಸಮಯದಲ್ಲಿ ನಿತ್ಯ ವ್ಯಾಯಾಮ ಮಾಡುವುದು ಉತ್ತಮ ನಿದ್ರೆಗೆ ಸಹಕಾರಿಯಾಗಲಿದೆ. ಅದರಲ್ಲೂ ದೇಹಕ್ಕೆ ಹಾಗೂ ನರಮಂಡಲವನ್ನು ಉತ್ತೇಜಿಸುವ ವ್ಯಾಮಾಯಮಗಳ ಮಾಡಬೇಕು. ಇದು ನಿಮ್ಮ ದೇಹ ಸರಿಯಾದ ಸಮಯಕ್ಕೆ ವಿಶ್ರಾಂತಿ ಪಡೆಯಲು ಉತ್ತೇಜಿಸಲಿದೆ. ಹೀಗಾಗಿ ಮಲಗಿದ ತಕ್ಷಣ ನಿಮಗೆ ನಿದ್ರೆಗೆ ಜಾರಲು ಸಹಕಾರಿಯಾಗಲಿದೆ.
ತಲೆಸ್ನಾನ
ನಿದ್ರೆ ಸಮಸ್ಯೆ ಹೊಂದಿರುವವರು ರಾತ್ರಿ ಮಲಗುವ ಒಂದು ಗಂಟೆ ಅಥವಾ 2 ಗಂಟೆಗೂ ಮುನ್ನ ತಲೆ ಸ್ನಾನ ಮಾಡುವುದರಿಂದಲೂ ಕೂಡ ಅವರ ನಿದ್ರೆಯ ಮಟ್ಟ ಸುಧಾರಿಸಲಿದೆ. ಕೆಲವರಿಗೆ ತಲೆ ಸ್ನಾನ ಮಾಡಿ ಕೊಬ್ಬರಿ ಎಣ್ಣೆ ಹಾಕಿದರೆ ಅತ್ಯುತ್ತಮ ನಿದ್ರೆಗೆ ಜಾರುತ್ತಾರೆ. ಈ ವಿಧಾನವನ್ನೂ ಕೂಡ ನೀವು ಟ್ರೈ ಮಾಡಬಹುದು.



Click it and Unblock the Notifications