Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮುಖದ ಕಾಂತಿಗಾಗಿ ಈ 6 ಸೂಪರ್ ಫುಡ್ ಸೇವಿಸಿ..! ಯಾವುದು ಗೊತ್ತಾ?
ಎಲ್ಲರಿಗೂ ಅವರ ಮುಖ ಹೊಳೆಯುವಂತೆ ಕಾಂತಿಯುತವಾಗಿರಬೇಕು ಆಸೆ ಇರುತ್ತದೆ. ಹೀಗಾಗಿ ಎಲ್ಲರು ಒಂದಲ್ಲಾ ಒಂದು ರೀತಿಯ ಉಪಾಯ ಮಾಡುತ್ತಾರೆ. ಕೆಲವರು ದುಬಾರಿ ಕ್ರೀಮ್‌ಗಳ ಮೊರೆ ಹೋದರೆ ಮತ್ತೆ ಕೆಲವರು ಚಿಕಿತ್ಸೆ ಆರ್ಯುವೇದ, ಮನೆಮದ್ದು ಹೀಗೆ ಹತ್ತಾರು ಮಾರ್ಗ ಕಂಡುಕೊಳ್ಳುತ್ತಾರೆ. ಅವರೆಲ್ಲರ ಗುರಿ ಮುಖ ಕಾಂತಿಯುತವಾಗಿ ಹೊಳೆಯುವಂತೆ ಕಾಣಬೇಕು ಅನ್ನೋದೆ ಆಗಿರುತ್ತದೆ.
ಆದರೆ ನಾವು ಸೇವಿಸುವ ಫುಡ್ ಸಹ ನಮ್ಮ ಮುಖದ ಕಾಂತಿಗೆ ಕಾರಣವಾಗಿರುತ್ತದೆ. ನಾವು ಸೇವಿಸುವ ಫುಡ್ ನಮ್ಮ ಮುಖದ ಕಾಂತಿ ಹೆಚ್ಚಿಸಲಿದೆ, ಹಾಗಾದ್ರೆ ಯಾವುದು ಈ 5 ಸೂಪರ್ ಫುಡ್‌ಗಳು ನಮ್ಮ ಮುಖದ ಕಾಂತಿ ಹೆಚ್ಚಿಸುತ್ತೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ಸಿಹಿ ಗೆಣಸು: ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಸಿಹಿ ಗೆಣಸು ಬಹಳ ಉಪಕಾರಿಯಂತೆ. ವಿಟಮಿನ್ ಎ ತುಂಬಿರುವ ಈ ಸಿಹಿ ಗೆಣಸು ಚರ್ಮದ ಕಾಂತಿ ಹೆಚ್ಚಿಸಲಿದೆ, ಜೊತೆಗೆ ಎಣ್ಣೆ ತ್ವಚೆ ನಿವಾರಣೆ ಮಾಡಲಿದ್ದು, ಮೊಡವೆ, ಕಲೆಗಳಿಂದ ಮುಕ್ತಿ ನೀಡಲಿದೆ. ಇದರ ಹೆಚ್ಚಿನ ಮಟ್ಟದ ಬೀಟಾ-ಕ್ಯಾರೋಟಿನ್ ಎಂದರೆ ಸಿಹಿ ಗೆಣಸು ಚರ್ಮದ ವಯಸ್ಸಾಗುವಿಕೆಗೆ ಕಾರಣವಾಗುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುವ ಮೂಲಕ ಚರ್ಮಕ್ಕೆ ಪ್ರಯೋಜನವನ್ನು ನೀಡುತ್ತದೆ.
ಯೋಗರ್ಟ್: ಹಾಲಿನ ಉತ್ಪನ್ನದಲ್ಲಿ ಒಂದಾಗಿರುವ ಯೋಗರ್ಟ್ ಚರ್ಮದ ಆರೋಗ್ಯ ಕಾಪಾಡಲು ಒಳ್ಳೆಯ ಉತ್ಪನ್ನವಾಗಿದೆ. ಅದರಲ್ಲೂ ಮುಖದ ಕಾಂತಿಗೆ ಇದು ಬಹಳ ಉಪಕಾರಿ. ಲ್ಯಾಕ್ಟೋಬಾಸಿಲಸ್ ಆಸಿಡೋಫಿಲಸ್ ಒಂದು ಬ್ಯಾಕ್ಟೀರಿಯಂ ಆಗಿದ್ದು ಅದು ಸಣ್ಣ ಕರುಳಿನಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮೊಸರಿನಲ್ಲಿರುವ ಪ್ರಮುಖ ಪೋಷಕಾಂಶಗಳಲ್ಲಿ ಒಂದಾದ ಲ್ಯಾಕ್ಟಿಕ್ ಆಮ್ಲವು ಹಲವಾರು ತ್ವಚೆಯ ಉತ್ಪನ್ನಗಳಲ್ಲಿ ಪ್ರಮುಖ ಅಂಶವಾಗಿದೆ.
ಮೊಸರು ಸತು, ವಿಟಮಿನ್ B2, B5 ಮತ್ತು B12 ಗಳಿಂದ ಕೂಡಿದೆ. ವಿಟಮಿನ್ B2, ಅಥವಾ ರಿಬೋಫ್ಲಾವಿನ್, ಚರ್ಮವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ, ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ಚರ್ಮದ ಕೋಶಗಳನ್ನು ರಕ್ಷಿಸುತ್ತದೆ.
ಕ್ವಿನೋವಾ: ಇದೊಂದು ಹೂಬಿಡುವ ಸಸ್ಯವಾಗಿದ್ದು ಅದು "ಅಮರಂತ್" ಕುಟುಂಬಕ್ಕೆ ಸೇರಿದೆ. ಅದರ ಹೆಚ್ಚಿನ ಮಟ್ಟದ ರೈಬೋಫ್ಲಾವಿನ್ ನಿಮ್ಮ ಚರ್ಮಕ್ಕೆ ಅತ್ಯುತ್ತಮ ಆರೋಗ್ಯ ನೀಡಲಿದೆ. ರಿಬೋಫ್ಲಾವಿನ್ ನಿಮ್ಮ ಚರ್ಮದ ಸ್ಥಿತಿಸ್ಥಾಪಕತ್ವ ಮತ್ತು ಸಂಯೋಜಕ ಅಂಗಾಂಶದ ಉತ್ಪಾದನೆಗೆ ಸಹಾಯಕವಾಗಿದೆ.
ಸೌತೆಕಾಯಿ: ಸೌತೆಕಾಯಿಯು ಹೊಳೆಯುವ ಚರ್ಮಕ್ಕೆ ಪ್ರಮುಖ ಜಲಸಂಚಯನವಾಗಿ ಕೆಲಸ ಮಾಡುತ್ತದೆ. ಚರ್ಮವು ದೇಹದ ತೇವಾಂಶದ ಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿರುತ್ತದೆ. ಹೀಗಾಗಿ ಅತೀ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಸೌತೆಕಾಯಿಯು ಚರ್ಮದ ಆರೋಗ್ಯಕ್ಕೆ ಮೊದಲ ಆಧ್ಯತೆಯಾಗಿರಬೇಕಾಗುತ್ತದೆ.
ಸಿಂಪಿ (Oyster): ಇದೊಂದು ಸಮುದ್ರ ಆಹಾರವಾಗಿದ್ದು, ಯುರೋಪಿಯನ್ ದೇಶಗಳಲ್ಲಿ ಅತ್ಯಂತ ಪ್ರಿಯವಾದ ಸೀ ಫುಡ್ ಆಗಿದೆ. ಇದು ತಮ್ಮ ಕಾಮೋತ್ತೇಜಕ ಗುಣಗಳಿಗೆ ಹೆಸರುವಾಸಿಯಾಗಿದೆ, ಉಪ್ಪುನೀರಿನ ಮೃದ್ವಂಗಿಗಳು - ಕೊಲ್ಲಿಗಳು ಮತ್ತು ಸಾಗರಗಳಂತಹ ಸಮುದ್ರದ ಆವಾಸಸ್ಥಾನಗಳಲ್ಲಿ ಸಿಗುತ್ತವೆ. ಈ ಸಿಂಪಿಗಳು ತಾಮ್ರ, ಕಬ್ಬಿಣ ಮತ್ತು ಸೆಲೆನಿಯಮ್‌ನಂತಹ ಇತರ ಖನಿಜಗಳ ಅತ್ಯುತ್ತಮ ಮೂಲಗಳಾಗಿವೆ. ಇವು ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ ಆಹಾರವಾಗಿದೆ.
ಡ್ರೈ ಫ್ರೂಟ್ಸ್ ಹಾಗೂ ಹಣ್ಣುಗಳು: ತ್ವಚೆ ಹೆಚ್ಚಾಗಿ ಹಾಳಾಗುವುದು ಬೇಸಿಗೆಯಲ್ಲಿ ಏಕೆಂದರೆ ನೇರಳಾತೀತ ಕಿರಣಗಳು ಮೈಮೇಲೆ ಬಿದ್ದಾಗ ತ್ವಚೆ ಹಾನಿಗೊಳಗಾಗುತ್ತದೆ. ಇದನ್ನು ತಡೆಯಬೇಕಾದರೆ ಫೈಬರ್ ಅಂಶ ಅಧಿಕವಿರುವ ಡ್ರೈ ಫ್ರೂಟ್ಸ್‌ಗಳು ಹಾಗೂ ಹಣ್ಣುಗಳ ಸೇವನೆ ಹೆಚ್ಚಿಸಿ. ಜೊತೆಗೆ ಚರ್ಮದ ಆರೋಗ್ಯಕ್ಕೆ ಪೂರಕವಾಗಿರುವ ವಿಟಮಿನ್ ಹೊಂದಿರುವ ಹಣ್ಣುಗಳ ಸೇವನೆ ಮಾಡುವುದು ಉತ್ತಮ.



Click it and Unblock the Notifications
