Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಚಳಿಗಾಲದಲ್ಲಿ ಒಣಗಿದ ತ್ವಚೆ..ಮುಖಕ್ಕೆ ಮನೆಯಲ್ಲೇ ಮಾಡಿ ಈ 7 ಫೇಸ್‌ಪ್ಯಾಕ್..!
ಚಳಿಗಾಲದಲ್ಲಿ ಒಣ ಚರ್ಮವು ಹೆಚ್ಚಿನವರು ಎದುರಿಸುವ ಸಾಮಾನ್ಯ ಚರ್ಮದ ಸಮಸ್ಯೆಯಾಗಿದೆ. ಅನೇಕ ಜನರು ಈ ಚರ್ಮದ ಶುಷ್ಕತೆಯನ್ನು ತಮ್ಮ ಕೈ ಮತ್ತು ಕಾಲುಗಳ ಮೇಲೆ ಮಾತ್ರವಲ್ಲದೆ ತಮ್ಮ ಮುಖದ ಮೇಲೂ ಅನುಭವಿಸುತ್ತಾರೆ. ಕೈ ಕಾಲುಗಳ ಒಣ ತ್ವಚೆಯನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ಹಲವು ರೀತಿಯ ಕ್ರೀಮ್‌ಗಳ ಬಳಸುತ್ತಾರೆ.
ಈ ರೀತಿ ಕ್ರೀಮ್‌ಗಳ ಬಳಸುವುದರಿಂದ ಕೆಲ ಹೊತ್ತು ಮಾತ್ರ ಒಣಗಿದ ತ್ವಚೆಯಿಂದ ಮುಕ್ತಿ ಪಡೆಯಬಹುದು. ಕೆಲ ಸಮಯದ ಬಳಿಕ ಮತ್ತದೆ ಒಣಗಿದ ತ್ವಚೆ ನಮ್ಮದಾಗಲಿದೆ. ಹಾಗಾದರೆ ಈ ರೀತಿ ಚಳಿಗಾಳದಲ್ಲಿ ಒಣಗಿದ ತ್ವಚೆಯಿಂದ ಮನೆಯಲ್ಲೇ ಮಾಡಿದ ಸ್ಕ್ರಬ್‌ನಿಂದ ಮುಕ್ತಿ ಪಡೆಯಬಹುದು.

ಹಾಗಾದರೆ ಮನೆಯಲ್ಲಿ ಯಾವ ರೀತಿಯ ಫೇಸ್‌ಪ್ಯಾಕ್ ಮಾಡುಬಹುದು. ಅದರ ವಿಧಾನವೇನು?, ಹೇಗೆ ಬಳಸಬೇಕು?, ರಾಸಾಯನಿಕ ಉತ್ಪನ್ನಗಳ ಬದಲು ಮನೆಯಲ್ಲೇ ಯಾವ ರೀತಿಯ ಫೇಸ್‌ಪ್ಯಾಕ್ ಮಾಡಿ ಹಚ್ಚಬೇಕು?, ಈ ಕುರಿತ ಎಲ್ಲಾ ಮಾಹಿತಿ ಇಲ್ಲಿದೆ ನೋಡಿ.
ಒಣ ಚರ್ಮವನ್ನು ಗುಣಪಡಿಸಲು ಮತ್ತು ಚರ್ಮದ ಸೌಂದರ್ಯವನ್ನು ಸುಧಾರಿಸಲು ಸಹಾಯ ಮಾಡುವ ಕೆಲವು ನೈಸರ್ಗಿಕ ಫೇಸ್ ಪ್ಯಾಕ್‌ಗಳನ್ನು ಕೆಳಗೆ ನೀಡಲಾಗಿದೆ. ಒಣ ತ್ವಚೆಯಿಂದ ಬಳಲುತ್ತಿರುವವರು ಈ ಫೇಸ್ ಪ್ಯಾಕ್ ಗಳನ್ನು ಬಳಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.
1. ತೆಂಗಿನ ಹಾಲಿನ ಫೇಸ್ ಪ್ಯಾಕ್
- ಮೊದಲು ಮಿಕ್ಸರ್ ಜಾರ್ ನಲ್ಲಿ ತುರಿದ ತೆಂಗಿನಕಾಯಿಯನ್ನು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿ, ಅದನ್ನು ಸೋಸಿಕೊಂಡು ದಪ್ಪ ತೆಂಗಿನ ಹಾಲನ್ನು ತೆಗೆದುಕೊಳ್ಳಿ.
- ನಂತರ ತೆಂಗಿನ ಹಾಲನ್ನು ಮುಖಕ್ಕೆ ಮಾತ್ರವಲ್ಲ, ಕೈ ಕಾಲುಗಳಿಗೂ ಹಚ್ಚಿ 20 ನಿಮಿಷ ನೆನೆಯಲು ಬಿಡಿ.
- ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ಪ್ರತಿನಿತ್ಯ ಬಳಸಿದರೆ ನಿಮ್ಮ ತ್ವಚೆಯು ಶುಷ್ಕತೆ ಇಲ್ಲದೆ ರೇಷ್ಮೆಯಂತೆ ನಯವಾಗಿರುತ್ತದೆ.
2. ಜೇನು ಹನಿ ಫೇಸ್ ಪ್ಯಾಕ್
- ಒಂದು ಬಟ್ಟಲಿನಲ್ಲಿ 2 ಟೇಬಲ್ ಸ್ಪೂನ್ ಜೇನುತುಪ್ಪವನ್ನು ತೆಗೆದುಕೊಳ್ಳಿ.
- ನಂತರ 2 ಟೇಬಲ್ ಸ್ಪೂನ್ ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ.
- ನಂತರ ಇದನ್ನು ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿ 10 ನಿಮಿಷ ನೆನೆಸಿ ತಣ್ಣೀರಿನಿಂದ ತೊಳೆಯಿರಿ.
- ದಿನಕ್ಕೊಮ್ಮೆ ಇದನ್ನು ಬಳಸಿದರೆ ತ್ವಚೆಯ ಶುಷ್ಕತೆ ದೂರವಾಗುತ್ತದೆ.
3. ಅಲೋವೆರಾ ಫೇಸ್ ಪ್ಯಾಕ್
- ಒಂದು ಬೌಲ್‌ನಲ್ಲಿ 1 ಚಮಚ ಶ್ರೀಗಂಧದ ಪುಡಿ ಮತ್ತು 2 ಚಮಚ ಅಲೋವೆರಾ ಜೆಲ್ ಮಿಶ್ರಣ ಮಾಡಿ ಪೇಸ್ಟ್ ಮಾಡಿ.
- ನಂತರ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ 15 ನಿಮಿಷ ನೆನೆಯಲು ಬಿಡಿ.
- ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
- ಇದನ್ನು ವಾರಕ್ಕೆ ಎರಡು ಬಾರಿ ಬಳಸಿದರೆ ಉತ್ತಮ ಬದಲಾವಣೆಯನ್ನು ಕಾಣಬಹುದು.
4. ಮೊಸರು ಫೇಸ್ ಪ್ಯಾಕ್
- ಒಂದು ಬಟ್ಟಲಿನಲ್ಲಿ 2 ಟೇಬಲ್ ಸ್ಪೂನ್ ಮೊಸರನ್ನು ತೆಗೆದುಕೊಂಡು 1 ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ 20 ನಿಮಿಷ ನೆನೆಯಲು ಬಿಡಿ.
- 20 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
- ವಾರದಲ್ಲಿ ಎರಡು ಬಾರಿ ಈ ಫೇಸ್ ಪ್ಯಾಕ್ ಬಳಸಿ.
5. ಕಾಫಿ ಫೇಸ್ ಪ್ಯಾಕ್
- ಒಂದು ಬೌಲ್ ನಲ್ಲಿ 1 ಚಮಚ ಕಾಫಿ ಪುಡಿಯನ್ನು ತೆಗೆದುಕೊಳ್ಳಿ.
- ನಂತರ ಅದಕ್ಕೆ ಹಾಲು ಸೇರಿಸಿ ದಪ್ಪ ಪೇಸ್ಟ್ ಮಾಡಿಕೊಳ್ಳಿ.
- ನಂತರ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಸ್ವಲ್ಪ ಹೊತ್ತು ನಿಧಾನವಾಗಿ ಮಸಾಜ್ ಮಾಡಿ 20 ನಿಮಿಷ ನೆನೆಯಲು ಬಿಡಿ.
- ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
- ವಾರಕ್ಕೊಮ್ಮೆ ಹೀಗೆ ಬಳಸಿದರೆ ತ್ವಚೆಯ ಶುಷ್ಕತೆ ದೂರವಾಗಿ ಚರ್ಮ ಕಾಂತಿಯುತವಾಗಿ ಕಾಂತಿಯುತವಾಗಿರುತ್ತದೆ.
6. ಮೊಟ್ಟೆಯ ಹಳದಿ ಲೋಳೆ ಫೇಸ್ ಪ್ಯಾಕ್
- ಒಂದು ಬಟ್ಟಲಿನಲ್ಲಿ ಒಂದು ಮೊಟ್ಟೆಯ ಹಳದಿ ಲೋಳೆಯನ್ನು ತೆಗೆದುಕೊಂಡು 1 ಚಮಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ನೆನೆಯಲು ಬಿಡಿ.
- ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ.
- ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ 2 ಬಾರಿ ಬಳಸಲು ಶಿಫಾರಸು ಮಾಡಲಾಗಿದೆ.
7. ಪಪ್ಪಾಯಿ ಫೇಸ್ ಪ್ಯಾಕ್
- ಪಪ್ಪಾಯಿ ಹಣ್ಣನ್ನು ತೆಗೆದುಕೊಂಡು ಅದನ್ನು ಹಾಲಿನೊಂದಿಗೆ ಪುಡಿಮಾಡಿ ಪೇಸ್ಟ್ ಮಾಡಿ.
- ನಂತರ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಒಣಗಲು ಬಿಡಿ.
- ನಂತರ ತಣ್ಣೀರಿನಿಂದ ತೊಳೆಯಿರಿ.
- ಇದನ್ನು ವಾರಕ್ಕೆ 2-3 ಬಾರಿ ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.



Click it and Unblock the Notifications

