Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
Coconut Oil: ಸಿಸ್ಟರ್.. ಎಣ್ಣೆ ಜೊತೆ ಇದು ಮಿಕ್ಸ್ ಮಾಡಿ.. ಮುಖ ಫಳಫಳ ಹೊಳೆಯುತ್ತೆ!
ಮುಖ ಸುಂದರವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಅದಕ್ಕಾಗಿ ಬಹುತೇಕರು ಸಾಕಷ್ಟು ಸರ್ಕಸ್ ಮಾಡ್ತಾರೆ. ಅಂತಹವರು, ಒಮ್ಮೆ ಈ ಮನೆಮದ್ದು ಟ್ರೈ ಮಾಡಿದ್ರೆ, ಕೆಲವೇ ದಿನಗಳಲ್ಲಿ ನಿಮ್ಮ ಮುಖವು (face) ಸಂಪೂರ್ಣವಾಗಿ ಸ್ವಚ್ಛ ಮತ್ತು ಹೊಳೆಯುತ್ತದೆ. ಹೌದು, ನೀವು ದುಬಾರಿ ಉತ್ಪನ್ನಗಳಿಗೆ ಬಾಯ್ ಹೇಳಿ, ಈ ಸರಳ ತಂತ್ರ ಬಳಸಿ. ತೆಂಗಿನ ಎಣ್ಣೆಯ (coconut oil) ಜೊತೆ ಈ ವಸ್ತುಗಳನ್ನು ಮಿಕ್ಸ್ ಮಾಡಿ ಹಚ್ಚಿದರೆ, ಚರ್ಮದ (Skin) ಕಲೆ ಹೋಗಿ ಮುಖ ಫಳಫಳ ಅಂತ ಹೊಳೆಯುತ್ತದೆ. ಹಾಗಿದ್ರೆ, ನಿಮ್ಮ ಮುಖವು ಸಂಪೂರ್ಣವಾಗಿ ಸ್ವಚ್ಛ, ಕಾಂತಿಯುತ ಮತ್ತು ಆರೋಗ್ಯಕರವಾಗಿರಲು ಏನು ಮಾಡಬೇಕು (Skin Care Tips) ಅನ್ನೋದನ್ನು ತಿಳಿಯೋಣ ಬನ್ನಿ.
ಪ್ರತಿಯೊಬ್ಬರೂ ತಮ್ಮ ಚರ್ಮವು ಹೊಳೆಯಬೇಕು ಅಂತ ಬಯಸೋದು ಸಾಮಾನ್ಯ. ಆದರೆ, ಈ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಸುಂದರವಾದ ಮುಖ ಹೊಂದಬಹುದು. ತೆಂಗಿನ ಎಣ್ಣೆ ಕೂದಲಿಗೆ ಮಾತ್ರವಲ್ಲದೆ, ಚರ್ಮಕ್ಕೂ ಉತ್ತಮ. ಇದು ನೈಸರ್ಗಿಕ ಚಿಕಿತ್ಸೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಮಾಯಿಶ್ಚರೈಸಿಂಗ್ ಗುಣಗಳು ಕಂಡುಬರುತ್ತವೆ. ಇದು ನಿಮ್ಮ ಚರ್ಮವನ್ನು ಪೋಷಿಸುವುದರ ಜೊತೆಗೆ ಕಲೆಯನ್ನು ಸ್ವಚ್ಛಗೊಳಿಸುತ್ತದೆ. ತೆಂಗಿನ ಎಣ್ಣೆಯನ್ನು ಕೆಲವು ವಿಶೇಷ ಮನೆಮದ್ದುಗಳೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿದರೆ, ಅದು ಚರ್ಮದ ಕೊಳೆ ತೆಗೆದುಹಾಕುತ್ತದೆ. ಜೊತೆಗೆ, ಮುಖವನ್ನು ಹೊಳೆಯುವಂತೆ ಮಾಡುತ್ತದೆ. ನೀವು, ಎಣ್ಣೆ ಜೊತೆ ಈ ವಸ್ತು ಬಳಸಬಹುದು.

ತೆಂಗಿ ಎಣ್ಣೆ ಜೊತೆ ಜೇನುತುಪ್ಪ ಬೆರೆಸಿ
ಜೇನುತುಪ್ಪ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ! ಜೇನುತುಪ್ಪವು ಉತ್ಕರ್ಷಣ ನಿರೋಧಕ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಇದು ಮುಖದ ಚರ್ಮವನ್ನು ಪೋಷಿಸುತ್ತದೆ ಮತ್ತು ತೇವಗೊಳಿಸುತ್ತದೆ. ತೆಂಗಿನ ಎಣ್ಣೆ ಮತ್ತು ಜೇನುತುಪ್ಪವನ್ನು ಬೆರೆಸಿ ನಿಮ್ಮ ಮುಖಕ್ಕೆ ಹಚ್ಚುವುದರಿಂದ ಸತ್ತ (ಕಲೆ) ಚರ್ಮವು ನಿವಾರಣೆಯಾಗಿ ಚರ್ಮವು ಮೃದುವಾಗುತ್ತದೆ.
ತೆಂಗಿ ಎಣ್ಣೆ ಮತ್ತು ಕಡಲೆ ಹಿಟ್ಟು
ಕಡಲೆ ಹಿಟ್ಟು ಸ್ಕ್ರಬ್ ಆಗಿ ಕೆಲಸ ಮಾಡುತ್ತದೆ. ಕಡಲೆ ಹಿಟ್ಟನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ 15 ನಿಮಿಷಗಳ ನಂತರ ತೊಳೆಯಿರಿ. ಇದು ಕಲೆ (ಕೊಳಕು) ಚರ್ಮವನ್ನು ತೆಗೆದುಹಾಕುತ್ತದೆ. ಹಾಗೆಯೇ ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ.
ತೆಂಗಿ ಎಣ್ಣೆ ಜೊತೆ ನಿಂಬೆ ರಸ ಮಿಕ್ಸ್ ಮಾಡಿ
ನಿಂಬೆ ಹಣ್ಣಿನಲ್ಲಿ (ನಿಂಬೆ ರಸ) ವಿಟಮಿನ್ ಸಿ ಅಂಶ ಇದೆ. ಇದು ಚರ್ಮದ ಬಣ್ಣವನ್ನು ಹೊಳೆಯುವಂತೆ ಮಾಡುತ್ತದೆ. ಮತ್ತು ಚರ್ಮದ ಕಲೆಗಳನ್ನು ಕಡಿಮೆ ಮಾಡುತ್ತದೆ. ತೆಂಗಿನ ಎಣ್ಣೆಯೊಂದಿಗೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಹಚ್ಚುವುದರಿಂದ ಚರ್ಮವು ಸ್ವಚ್ಛವಾಗಿ ಕಾಣುತ್ತದೆ. ಮುಖವು ಫಳಫಳ ಹೊಳೆಯುತ್ತದೆ. ನೆನಪಿರಲಿ, ಹಗಲಿನಲ್ಲಿ ಇದನ್ನು ಕಡಿಮೆ ಬಳಸುವುದು ಉತ್ತಮ. ಇದನ್ನು ಹಚ್ಚಿಕೊಂಡು ಸೂರ್ಯನ ಬೆಳಕಿನಲ್ಲಿ ಹೊರಗೆ ಹೋಗಬೇಡಿ.
ತೆಂಗಿ ಎಣ್ಣೆ ಮತ್ತು ಸಕ್ಕರೆ
ತೆಂಗಿನ ಎಣ್ಣೆಯಲ್ಲಿ ಸಕ್ಕರೆ ಬೆರೆಸಿ ಕೈಗಳಿಂದ ನಿಧಾನವಾಗಿ ಮಸಾಜ್ ಮಾಡಿ. ಇದು ಚರ್ಮದಿಂದ ಕೊಳೆಯನ್ನು ತೆಗೆದುಹಾಕಿ ಚರ್ಮವನ್ನು ಮೃದುಗೊಳಿಸುತ್ತದೆ. ಸಕ್ಕರೆಯನ್ನು ಸ್ಕ್ರಬ್ ಆಗಿ ಬಳಸಲಾಗುತ್ತದೆ. ಇದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚುವುದರಿಂದ ಚರ್ಮವು ಸ್ವಚ್ಛವಾಗಿ ಕಾಣುತ್ತದೆ.
ತೆಂಗಿ ಎಣ್ಣೆ ಜೊತೆ ಅರಿಶಿನ ಬೆರಸಿ ನೋಡಿ
ಅರಿಶಿನದಲ್ಲಿ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳು ಕಂಡುಬರುತ್ತದೆ. ತೆಂಗಿನ ಎಣ್ಣೆ ಮತ್ತು ಅರಿಶಿನ ಮಿಕ್ಸ್ ಮಾಡಿ ಹಚ್ಚುವುದರಿಂದ ಚರ್ಮವು ಕಾಂತಿಯುತವಾಗುತ್ತದೆ. ಜೊತೆಗೆ ಮುಖದ ಕಲೆಗಳು ಕಡಿಮೆಯಾಗುತ್ತವೆ.
ಹೊಳೆಯುವ ಚರ್ಮಕ್ಕೆ ರೋಸ್ ವಾಟರ್ ಸೂಕ್ತ
ಇದರ ಹೊರತಾಗಿ, ಚರ್ಮಕ್ಕೆ ರೋಸ್ ವಾಟರ್ ಪ್ರಯೋಜನಕಾರಿ. ಇದು ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ನೀವು ನಿಯಮಿತವಾಗಿ ಬಳಕೆ ಮಾಡುವುದರಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ. ಮೊಡವೆ, ಕೆಂಪು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಚರ್ಮವನ್ನು ತಂಪಾಗಿಸುತ್ತದೆ. ರೋಸ್ ವಾಟರ್ ಅನ್ನು ನೈಸರ್ಗಿಕ ಟೋನರ್ ಆಗಿ ಬಳಸಬಹುದು. ಇದು ಚರ್ಮವನ್ನು ಬಿಗಿಗೊಳಿಸುತ್ತದೆ ಮತ್ತು ಹೊಳಪು ನೀಡುತ್ತದೆ.



Click it and Unblock the Notifications
