Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ಮಕ್ಕಳಿಗೂ ಫೇಶಿಯಲ್ ಮಾಡಿಸಬಹುದಾ? ಬ್ಯೂಟಿಷಿಯನ್ ಹೇಳೋದೇನು?
ಸುಂದರವಾಗಿ ಕಾಣಿಸಿಕೊಳ್ಳಬೇಕು ಅನ್ನೋದು ಎಲ್ಲರ ಬಯಕೆ ಆಗಿರುತ್ತೆ. ಅದರಲ್ಲೂ ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ತುಸು ಹೆಚ್ಚಾಗಿಯೇ ಕಾಳಜಿ ವಹಿಸುತ್ತಾರೆ. ಹಾಗೆ ಮಕ್ಕಳು ಕೂಡ ಈಗ ಸೌಂದರ್ಯಕ್ಕೆ ಹೆಚ್ಚು ಮಾರುಹೋಗುತ್ತಾರೆ. ಈಗ ರೀಲ್ಸ್, ವಿಡಿಯೋದಲ್ಲಿ ಹೇಳುವ ಸೌಂದರ್ಯದ ಟಿಪ್ಸ್‌ಗಳನ್ನು ಮಕ್ಕಳು ಸಹ ಫಾಲೋ ಮಾಡುವುದನ್ನ ನಾವು ನೋಡಿದ್ದೇವೆ.
ಮಹಿಳೆಯರು ಹೆಚ್ಚಾಗಿ ಬ್ಯೂಟಿ ಪಾರ್ಲರ್‌ಗಳಿಗೆ ತೆರಳುತ್ತಾರೆ. ಇಲ್ಲವೆ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಸೌಂದರ್ಯ ವರ್ಧಕಗಳನ್ನು ಸಹ ಅವರು ಬಳಸುತ್ತಾರೆ. ಆದ್ರೆ ಮಕ್ಕಳಿಗೂ ಈಗ ಸೌಂದರ್ಯ ವರ್ಧಕ ಕ್ರೀಮ್‌ಗಳು, ಪಾರ್ಲರ್‌ಗೆ ತೆರಳುವುದನ್ನು ನಾವು ನೋಡಿದ್ದೇವೆ. ಪೋಷಕರೇ ಮಕ್ಕಳನ್ನು ಪಾರ್ಲರ್‌ಗೆ ಕರೆದುಕೊಂಡು ಹೋಗುವುದನ್ನು ನೋಡಿದ್ದೇವೆ.

ಆದ್ರೆ ನಿಮಗೂ ತಿಳಿದಿರಬಹುದು ಪಾರ್ಲರ್‌ಗೆ ಹೋಗುವುದು ಸೌಂದರ್ಯದ ಜೊತೆಗೆ ಒಂದಿಷ್ಟು ಸಮಸ್ಯೆಯನ್ನು ಉಂಟು ಮಾಡುವುದು ನಾವು ಗಮನಿಸಿದ್ದೇವೆ. ಆದ್ರೆ ಮಕ್ಕಳನ್ನೂ ಕೂಡ ಪಾರ್ಲರ್‌ಗೆ ಕರೆದುಕೊಂಡು ಹೋಗುವುದರಿಂದ ಆಗುವ ಸಮಸ್ಯೆ ಇನ್ನು ಹೆಚ್ಚು. ಹಾಗಾದ್ರೆ ಎಷ್ಟು ವರ್ಷದ ಮಕ್ಕಳನ್ನು ಪಾರ್ಲರ್‌ಗೆ ಕರೆದುಕೊಂಡು ಹೋಗಬಹುದು.
ಇದು ಸಾಮಾನ್ಯವಾಗಿ ಎಲ್ಲ ಪೋಷಕರ ದೊಡ್ಡ ಪ್ರಶ್ನೆ ಮಕ್ಕಳನ್ನು ಪಾರ್ಲರ್‌ಗೆ ಕರೆದುಕೊಂಡು ಹೋಗಬೇಕಾ ಬೇಡಾ? ಅವರಿಗೆ ಯಾವ ರೀತಿಯ ಫೇಶಿಯಲ್ ಮಾಡಿಸಬಹುದು ಎಂಬೆಲ್ಲಾ ಪ್ರಶ್ನೆಗಳಿಗೆ ನಾವಿಂದು ಬ್ಯೂಟಿಷಿಯನ್ ಶೋಭಾ ಅವರಿಂದ ಮಾಹಿತಿ ಪಡೆದುಕೊಳ್ಳೋಣ.
ಎಷ್ಟು ವರ್ಷದ ಮಕ್ಕಳಿಗೆ ಫೇಶಿಯಲ್ ಮಾಡಿಸಬಹುದು?
ಸಾಮಾನ್ಯವಾಗಿ ಪೋಷಕರು ಮಕ್ಕಳನ್ನು ಪಾರ್ಲರ್‌ಗೆ ಕರೆದುಕೊಂಡು ಬಂದಾಗಲೆ ಚಿಕ್ಕ ಪುಟ್ಟ ಸೌಂದರ್ಯ ವಿನ್ಯಾಸ ಮಾಡಿಸುತ್ತಾರೆ. ಅಂದ್ರೆ ಐ ಬ್ರೋ, ನೈಲ್ ಪಾಲಿಶಿಂಗ್, ನೈಲ್ ಪೈಂಟ್ ಹಾಕಿಸುವುದು ಮಾಡಿಸುತ್ತಾರೆ. ಹೀಗಾಗಿ ಮಕ್ಕಳ ಮನಸ್ಸಿನಲ್ಲೂ ಪಾರ್ಲರ್‌ಗೆ ತೆರಳುವ ಆಸೆ ಚಿಗುರೊರೆಯುತ್ತದೆ. ನನ್ನ ಪ್ರಕಾರ 15 ವರ್ಷಕ್ಕಿಂತ ಕೆಳಗಿನ ಮಕ್ಕಳು ಪಾರ್ಲರ್‌ಗೆ ಕರೆದು ತಂದರೆ ಅವರಿಗೆ ಯಾವುದೇ ಪಾರ್ಲರಿಂಗ್ ಮಾಡಿಸಬಾರದು. ಅವರಿಗೆ ಅದರ ಅಗತ್ಯವೂ ಇರುವುದಿಲ್ಲ.
ಮಕ್ಕಳಿಗೆ ಫೇಶಿಯಲ್ ಮಾಡಿಸುವುದು ಸುರಕ್ಷಿತವೇ?
ಕೆಲವರು ಮಕ್ಕಳ ಶಾಲೆಯಲ್ಲಿ ಕಾರ್ಯಕ್ರಮವಿದೆ, ಮನೆಯಲ್ಲಿ ಸಂಬಂಧಿಕರ ಮದುವೆ ಇದೆ ಎಂದೆಲ್ಲಾ ಮಕ್ಕಳಿಗೂ ಫೇಶಿಯಲ್ ಮಾಡಿಸುತ್ತಾರೆ. ಅದ್ರೆ ಮಕ್ಕಳ ತ್ವಚೆ ಬಹಳ ಸೂಕ್ಷ್ಮವಾಗಿರುತ್ತೆ. ಹೀಗಾಗಿ ಮಕ್ಕಳಿಗೆ ರಾಸಾಯನಿಕಯುಕ್ತ ಫೇಶಿಯಲ್ ಮಾಡಿಸುವುದು ಉತ್ತಮವಲ್ಲ. ಅವರ ತ್ವಚೆಗೆ ಕೇವಲ ಪೌಡರ್ ಹಾಕಿದರೆ ಸಾಕಾಗುತ್ತದೆ.
ಮಕ್ಕಳಲ್ಲಿ ಮೇಕ್ ಅಪ್‌ನಿಂದ ಯಾವ ಸಮಸ್ಯೆ ಬರಬಹುದು?
ಮಕ್ಕಳು ಹೆಚ್ಚಿನ ರಾಸಾಯನಿಕಯುಕ್ತ ಮೇಕ್ ಅಪ್ ಕಿಟ್ ಬಳಸುತ್ತಿದ್ದರೆ, ಕ್ರೀಮ್‌ಗಳನ್ನು ಬಳಸುತ್ತಿದ್ದರೆ ಅದನ್ನು ತಪ್ಪಿಸುವುದು ಉತ್ತಮ. ಇದರಿಂದ ಅವರ ತ್ವಚೆಯ ಲೇಯರ್ ಸವಿಯುತ್ತದೆ. ಇದರಿಂದ ಅವರು ಬಿಸಿಲಿಗೆ ಒಗ್ಗಿಕೊಳ್ಳುವುದು ಕಷ್ಟವಾಗುತ್ತೆ. ಹಾಗೆ ಅಲರ್ಜಿಯಾಗುವುದು, ಬಿಸಿಲಿಗೆ ಹೋದಾಗ ಬೆವರುವುದು, ಕೆಂಪಾಗುವುದು, ಕಪ್ಪಾಗುವುದು ಉಂಟಾಗುತ್ತದೆ.
ಮಕ್ಕಳಿಗೆ ಫೇಶಿಯಲ್ ಮಾಡಿಸುವುದು ತಪ್ಪು, ಅವರ ತ್ವಚೆ ಅತ್ಯಂತ ಸೂಕ್ಷ್ಮವಾಗಿರುತ್ತೆ. ಅವರ ಐಬ್ರೋ ಮಾಡಿಸಬಹುದಷ್ಟೇ ಅದಕ್ಕಿಂತ ಹೆಚ್ಚಾಗಿ ಮುಖಕ್ಕೆ ಏನನ್ನು ಮಾಡಬಾರದು. ಪೌಡರ್, ಸನ್‌ಕ್ರೀನ್ ಹಚ್ಚಬಹುದು ಇದರಿಂದ ಹಾನಿಯಿಲ್ಲ. ಆದ್ರೆ ಕೆಲವರು ಮಕ್ಕಳಿಗೂ ಮೇಕ್ ಅಪ್ ಕಿಟ್ ಕೊಡಿಸಿರುತ್ತಾರೆ. ಹಾಗೆ ತಾಯಿ ಮೇಕ್ ಅಪ್ ಮಾಡಿಕೊಳ್ಳುವಾಗ ಮಕ್ಕಳಿಗೂ ಮಾಡುತ್ತಾರೆ. ಆದ್ರೆ ಈ ರೀತಿ ಮಾಡುವುದು ತಪ್ಪು ಎಂದು ಬ್ಯೂಟಿಷಿಯನ್ ಶೋಭಾ ಹೇಳುತ್ತಾರೆ.



Click it and Unblock the Notifications
