Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮನೆಯಲ್ಲೇ ಐಬ್ರೋ ಮಾಡಲು ಸಿಂಪಲ್ ಟಿಪ್ಸ್
ಹುಬ್ಬುಗಳ ಶೇಪ್ ಮಾಡಿಕೊಳ್ಳುವುದನ್ನು ಉದಾಸೀನತೆಯಿಂದಾಗಿ ಮುಂದೂಡುತ್ತಲೇ ಬಂದಿದ್ದೀರಾ? ವಾರಗಳಿಂದ ಪಾರ್ಲರ್ ಅಪಾಯ್ಟ್ ಮೆಂಟ್ ಮುಂದೂಡಿ ಐಬ್ರೋ ಶೇಪ್ ಇದೀಗ ಹಾಳಾಗುತ್ತಾ ಬಂದಿದ್ಯಾ?
ಆಗಾಗ ಐಬ್ರೋಗೆ ಶೇಪ್ ನೀಡುತ್ತಿದ್ದರೆ ಮಾತ್ರವೇ ನಿಮ್ಮ ಲುಕ್ ಚೆನ್ನಾಗಿರುತ್ತದೆ. ಹುಬ್ಬುಗಳ ಸೌಂದರ್ಯ ಚೆನ್ನಾಗಿದ್ದಾಗ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಿರುತ್ತದೆ. ಯಾವಾಗಲೂ ಕೂಡ ನಿಮ್ಮ ನೋಟವು ನಿಮ್ಮ ಆತ್ಮವಿಶ್ವಾಸದ ಕೇಂದ್ರಬಿಂದುವಾಗಿರುತ್ತದೆ.

ಆದರೆ ಸದ್ಯ ಭಾರತದ ಪರಿಸ್ಥಿತಿಯಲ್ಲಿ ಪಾರ್ಲರ್ ಗೆ ಭೇಟಿ ನೀಡುವುದಾದರೂ ಹೇಗೆ ಅಲ್ಲವೇ? ಸ್ವಯಂ-ಕ್ವಾರಂಟೈನ್ ಆಗಿರಬೇಕಾಗಿರುವ ಪರಿಸ್ಥಿತಿ ಇದೆ. ಪಾರ್ಲರ್ ಗೆ ಹೋಗಿ ಅಭ್ಯಾಸವಾಗಿರುವವರಿಗೆ ಮನೆಯಲ್ಲೇ ಕುಳಿತಿರುವಾಗ ಕೂದಲಿನ ಆರೈಕೆ, ಸೌಂದರ್ಯದ ಆರೈಕೆ ಸವಾಲೇ ಸರಿ. ತೋಳುಗಳ ವ್ಯಾಕ್ಸಿಂಗ್, ಕಾಲು ಮತ್ತು ಬಿಕಿನಿ ಪ್ರದೇಶದ ವ್ಯಾಕ್ಸಿಂಗ್ ಗೆ ಬಹುಶ್ಯಃ ಕ್ವಾರಂಟೈನ್ ಮುಗಿಯುವವರೆಗೂ ಕೂಡ ಕಾಯಲೇಬೇಕು. ಆದರೆ ನಿಮ್ಮ ಹುಬ್ಬುಗಳನ್ನು ನೀವೇ ಸ್ವತಃ ಮನೆಯಲ್ಲೇ ಕಾಳಜಿ ತೆಗೆದುಕೊಂಡು ಉತ್ತಮ ಆಕಾರದಲ್ಲಿರುವಂತೆ ನೋಡಿಕೊಳ್ಳಬಹುದು.
ಐಬ್ರೋ ಮಾಡಿಸಿಕೊಳ್ಳುವಾಗ ಆಗುವ ಪ್ರಮುಖ ಸಮಸ್ಯೆಯೆಂದರೆ ನೋವು. ಹಾಗಾದ್ರೆ ನಾವಿಲ್ಲಿ ನಿಮಗೆ ಸಹಾಯ ಮಾಡುತ್ತಿದ್ದೇವೆ. ಕೆಲವು ಸಲಹೆ ಮತ್ತು ಟ್ರಿಕ್ಸ್ ಗಳನ್ನು ತಿಳಿಸಿಕೊಡುತ್ತಿದ್ದೇವೆ. ಇವುಗಳು ನಿಮಗೆ ಮನೆಯಲ್ಲೇ ನೋವಿಲ್ಲದಂತೆ ನಿಮ್ಮ ಐಬ್ರೋವನ್ನು ಕಾಳಜಿ ಮಾಡುವುದು ಹೇಗೆ ಮತ್ತು ಉತ್ತಮ ಶೇಪ್ ನಲ್ಲಿರುವಂತೆ ಮಾಡುವುದು ಹೇಗೆ ಎಂಬುದನ್ನು ತಿಳಿಸುತ್ತದೆ. ಮುಂದೆ ಓದಿ.

ಮೊದಲಿಗೆ ಸ್ವಚ್ಛಗೊಳಿಸಿ
ನೀವು ನಿಮ್ಮ ಮುಖಕ್ಕೆ ಹಚ್ಚಿಕೊಂಡ ಯಾವುದೇ ವಸ್ತು ಐಬ್ರೋಗಳಲ್ಲಿದ್ದಲ್ಲಿ ಹುಬ್ಬಗಳನ್ನು ಆಕಾರಗೊಳಿಸುವುದು ಅಥವಾ ಪ್ಲಕ್ಕಿಂಗ್ ಕೆಲಸವು ಕ್ಲಿಷ್ಟವಾಗುತ್ತದೆ. ಇನ್ನು ನೀವೇನಾದರೂ ಮಾಯ್ಚರೈಸರ್ ಅಥವಾ ಫೇಸ್ ಕ್ರೀಮ್ ಹಚ್ಚಿಕೊಂಡಲ್ಲಿ ಚರ್ಮವು ಜಾರುವಂತಾಗುತ್ತದೆ ಮತ್ತು ಪ್ಲಕ್ ಮಾಡುವುದು ಅಥವಾ ಕೂದಲನ್ನು ಎಳೆಯುವುದು ಕಷ್ಟವಾಗುತ್ತದೆ. ಹಾಗಾಗಿ ಮೊದಲು ಚರ್ಮವನ್ನು ಸ್ವಚ್ಛಗೊಳಿಸಿ ಮತ್ತು ಆ ಮೂಲಕ ನಿಮ್ಮ ಹುಬ್ಬುಗಳ ಆಕಾರ ಮಾಡಿಕೊಳ್ಳುವಾಗ ಕಡಿಮೆ ನೋವಾಗುವಂತೆ ನೋಡಿಕೊಳ್ಳಿ.
ಒಂದು ವೇಳೆ ನಿಮ್ಮ ಹುಬ್ಬುಗಳಲ್ಲಿ ಹೆಚ್ಚು ಕೂದಲಿದ್ದರೆ ನಾವು ಮೊದಲು ಅದನ್ನು ಎಕ್ಸ್ಫೋಲೈಟ್ ಮಾಡಿಕೊಳ್ಳುವುದಕ್ಕೆ ಸಲಹೆ ನೀಡುತ್ತೇವೆ.ಹೀಗೆ ಮಾಡುವುದರಿಂದಾಗಿ ಹುಬ್ಬುಗಳಿಗೆ ಆಕಾರ ನೀಡುವಾಗ ಕೂದಲನ್ನು ಹೆಚ್ಚು ಅಗೆದಂತೆ ಎಳೆಯುವ ಅಗತ್ಯ ಬೀಳುವುದಿಲ್ಲ. ಹಾಗಾಗಿ ನಿಮಗೆ ಕಡಿಮೆ ನೋವಾಗುತ್ತದೆ.

ಚೂಪಾಗಿರುವ ಪ್ಲಕ್ಕರ್ ಅಥವಾ ಟ್ರಿಮ್ಮರ್ ಬಳಸಿ
ನೀವು ಪ್ಲಕ್ಕಿಂಗ್ ಮಾಡುವಾಗ ಆ ಸಾಧನವು ಚೂಪಾಗಿರುವಂತೆ ನೋಡಿಕೊಳ್ಳಿ. ಚೂಪಾಗಿರುವ ಪ್ಲಕ್ಕರ್ ಬಳಸಿದರೆ ನಿಮ್ಮ ಕೆಲಸವು ಸುಲಭವಾಗುತ್ತದೆ. ತುದಿಯು ದಪ್ಪವಾಗಿರುವ ಅಥವಾ ಹದವಿಲ್ಲದೆ ಇರುವ ಸಾಧನವು ನಿಮಗೆ ಹೆಚ್ಚು ಗ್ರಿಪ್ ನೀಡುವುದಿಲ್ಲ ಮತ್ತು ನಿಮ್ಮ ಕೆಲಸವು ಕಷ್ಟವಾಗುವಂತೆ ಮಾಡುತ್ತದೆ.ಹಾಗಾಗಿ ಐಬ್ರೋ ಕೂದಲನ್ನು ಎಳೆಯುವಾಗ ನಿಮಗೆ ನೋವಾಗುತ್ತದೆ.

ಪೂರ್ಣ ಬೆಳವಣಿಗೆಯಾಗುವವರೆಗೆ ಕಾಯಬೇಡಿ
ನಿಮ್ಮ ಐಬ್ರೋ ಕೂದಲು ಹೆಚ್ಚು ಬೆಳೆಯುವಂತೆ ಮಾಡಿದರೆ ಅದನ್ನು ಶೇಪ್ ಮಾಡುವಾಗ ಹೆಚ್ಚು ನೋವು ತಿನ್ನಬೇಕಾಗುತ್ತದೆ.ಇದರ ಅನುಭವ ನಿಮಗೆ ಈ ಹಿಂದೆ ಆಗಿದ್ದರೆ ಖಂಡಿತ ನೀವು ಸರಿಯಾದ ಸಮಯಕ್ಕೆ ಪಾರ್ಲರ್ ಗೆ ಭೇಟಿ ನೀಡುತ್ತೀರಿ. ನಿಮ್ಮ ಹುಬ್ಬುಗಳ ಕೂದಲು ಸುಲಭವಾಗಿ ಪ್ಲಕ್ ಮಾಡಲು ಆಗುವಂತ ಉದ್ದ ತಲುಪಿದಾಗ ಐಬ್ರೋ ಮಾಡಿಸಿಕೊಂಡು ಬಿಡಿ ಅಥವಾ ಮಾಡಿಕೊಂಡು ಬಿಡಿ. ಹಾಗಂತ ಅತ್ಯಂತ ಸಣ್ಣಸಣ್ಣ ಕೂದಲಿರುವಾಗ ಮಾಡಿಕೊಳ್ಳುವುದೂ ಕೂಡ ಸರಿಯಲ್ಲ. ಹೆಚ್ಚು ದಪ್ಪವಾಗಿ ಉದ್ದವಾಗಲು ಬಿಡುವುದು ಕೂಡ ಸರಿಯಲ್ಲ. ಪ್ಲಕ್ಕರ್ ನಲ್ಲಿ ಎಳೆಯುವುದಕ್ಕೆ ಸಾಧ್ಯ ಎಂಬಂತ ಉದ್ದ ತಲುಪಿದಾಗ ಕೂಡಲೇ ಐಬ್ರೋ ಶೇಪ್ ಮಾಡಿಬಿಡಬೇಕು.
ಇನ್ನು ನಿಮ್ಮ ಐಬ್ರೋ ಒಂದೊಂದು ಜಾಗದಲ್ಲಿ ಒಂದೊಂದು ರೀತಿಯಾಗಿ ಉದ್ದವಾಗುತ್ತದೆ. ಉದಾಹರಣೆಗೆ ಹುಬ್ಬುಗಳ ಕೊನೆಯಲ್ಲಿ ಬೆಳೆಯುವ ಕೂದಲು ಹುಬ್ಬುಗಳ ಆರಂಭದಲ್ಲಿ ಬೆಳೆಯುವ ಕೂದಲಿಗಿಂತ ವೇಗವಾಗಿರುತ್ತದೆ. ಹಾಗಾಗಿ ಒಂದು ವೇಳೆ ನೀವು ಎಲ್ಲಾ ಕಡೆ ಕೂದಲು ಬೆಳೆಯಲಿ ಎಂದು ಕಾಯುತ್ತಿದ್ದರೆ ಹುಬ್ಬುಗಳಲ್ಲಿ ಅತ್ಯಧಿಕ ಕೂದಲಿನ ಬೆಳವಣಿಗೆಯಾಗಿ ನಿಮಗೆ ಹೆಚ್ಚು ನೋವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಗಾಗ ಅಂದರೆ ಕೆಲವೇ ದಿನಗಳ ಅಂತರದಲ್ಲಿ ಹುಬ್ಬುಗಳಿಗೆ ಆಕಾರ ನೀಡುತ್ತಿದ್ದರೆ ಹೆಚ್ಚು ನೋವಾಗುವುದನ್ನು ತಡೆಯುವುದಕ್ಕೆ ಸಾಧ್ಯವಿದೆ.

ಮೇಲಿನ ಹುಬ್ಬುಗಳನ್ನು ಕ್ಲಿಪ್ ಮಾಡಿ
ನಿಮ್ಮ ಹುಬ್ಬುಗಳ ಕೆಳಭಾಗದ ಕೂದಲನ್ನು ಪ್ಲಕ್ ಮಾಡಿ ತೆಗೆಯುವುದು ಸುಲಭದ ಕೆಲಸವಾಗಿರುತ್ತದೆ. ಆದರೆ ಅತ್ಯುತ್ತಮ ಲುಕ್ ಗಾಗಿ ನೀವು ನಿಮ್ಮ ಹುಬ್ಬುಗಳ ಮೇಲ್ಬಾಗದ ಕೂದಲನ್ನು ಸುಂದರವಾಗಿ ಶೇಪ್ ಮಾಡಬೇಕಾಗುತ್ತದೆ. ಇದನ್ನು ವೇಗವಾಗಿ ಮತ್ತು ನೋವಿಲ್ಲದೆ ಮಾಡಲು ನಿಮ್ಮ ಐಬ್ರೋ ಕೂದಲನ್ನು ಮೇಲ್ಬಾಗಕ್ಕೆ ಬ್ರಷ್ ಮಾಡಿ ಮತ್ತು ಹೆಚ್ಚುವರಿ ಕೂದಲನ್ನು ಕ್ಲಿಪ್ ಮಾಡಿ. ತುಂಬಾ ಜಾಗರೂಕತೆಯಿಂದ ಮಾಡಿ ಯಾಕೆಂದರೆ ಅಗತ್ಯಕ್ಕಿಂತ ಹೆಚ್ಚುವರಿ ಕೂದಲನ್ನು ಕ್ಲಿಪ್ ಮಾಡಬೇಡಿ. ಸಲೂನ್ ನಲ್ಲಿ ಹೀಗೆ ಮಾಡುವುದನ್ನು ನೀವು ಹಲವು ಬಾರಿ ನೋಡಿರಬಹುದು. ಹೀಗೆ ಮಾಡಿಕೊಂಡರೆ ಹುಬ್ಬುಗಳಿಗೆ ಆಕಾರ ನೀಡುವುದು ಸುಲಭವಾಗುತ್ತದೆ.

ನಿಮ್ಮ ಹುಬ್ಬುಗಳ ಕೆಳಗೆ ಮಂಜುಗಡ್ಡೆಯಿಂದ ಉಜ್ಜಿ
ಇದು ಪರೀಕ್ಷೆ ಮಾಡಲಾಗಿರುವ ಟ್ರಿಕ್ ಗಳಲ್ಲಿ ಒಂದಾಗಿದ್ದು ನಿಮ್ಮ ಐಬ್ರೋ ಮಾಡುವ ಟಾಸ್ಕ್ ನೋವಿಲ್ಲದಂತೆ ಅಥವಾ ಕಡಿಮೆ ನೋವಾಗುವಂತೆ ಮಾಡಲು ಖಂಡಿತ ಪ್ರಯೋಜನಕಾರಿಯಾಗಿರುತ್ತದೆ. ಒಂದು ಮಂಜುಗಡ್ಡೆಯ ತುಂಡನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಐಬ್ರೋ ಕೆಳಭಾಗದಲ್ಲಿ ಅದರಿಂದ ಉಜ್ಜಿಕೊಳ್ಳಿ. ನಿಮ್ಮ ಚರ್ಮವು ಒಣಗುವವರೆಗೆ ಕಾಯಿರಿ ಮತ್ತು ನಂತರ ಕೂದಲನ್ನು ಪ್ಲಕ್ ಮಾಡಿ ಅಥವಾ ಎಳೆಯಿರಿ. ಇದು ಹುಬ್ಬುಗಳ ಜಾಗವನ್ನು ಸ್ವಲ್ಪ ಸಮಯಕ್ಕೆ ಮರಗಟ್ಟಿರುವಂತೆ ಮಾಡುತ್ತದೆ ಮತ್ತು ಅದೇ ಕಾರಣಕ್ಕೆ ನೋವು ಕಡಿಮೆಯಾಗಿರುತ್ತದೆ.

ಪೌಡರ್ ಹಾಕಿ
ನಿಮ್ಮ ಅಪ್ಪರ್ ಲಿಪ್ ಮತ್ತು ಐಬ್ರೋ ಮಾಡುವ ಮೊದಲು ಪಾರ್ಲರ್ ನಲ್ಲಿ ಪೌಡರ್ ಹಾಕಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಇದು ಚರ್ಮದಲ್ಲಿರುವ ಯಾವುದೇ ರೀತಿಯ ತೇವಾಂಶದ ನಿವಾರಣೆಗೆ ಸಹಕಾರಿಯಾಗಿರುತ್ತದೆ. ಇದು ನಮ್ಮ ಚರ್ಮದ ಸೀಕ್ರೆಟ್ .ಹೌದು ನೈಸರ್ಗಿಕ ಎಣ್ಣೆಯು ನಮ್ಮ ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಚರ್ಮವನ್ನು ಕಾಪಾಡುತ್ತದೆ. ಇದು ಚರ್ಮವನ್ನು ಗ್ರೀಸ್ ನಂತೆ ಮಾಡುತ್ತದೆ ಮತ್ತು ಐಬ್ರೋ ಮಾಡುವುದಕ್ಕೆ ಕಷ್ಟವಾಗುತ್ತದೆ.
ಪೌಡರ್ ನ್ನು ಚರ್ಮಕ್ಕೆ ಸೋಕಿಕೊಳ್ಳುವುದರಿಂದಾಗಿ ಎಣ್ಣೆ, ತೇವಾಂಶ ಮತ್ತು ಬೆವರನ್ನು ನಿವಾರಣೆ ಮಾಡಿದಂತಾಗುತ್ತದೆ ಮತ್ತು ನಿಮ್ಮ ಚರ್ಮವನ್ನು ತಯಾರುಗೊಳಿಸಲಾಗುತ್ತದೆ. ಹಾಗಾಗಿ ಕೆಲಸವನ್ನು ಸುಲಭಗೊಳಿಸಿ ಐಬ್ರೋ ಮಾಡುವಾಗ ನೋವಾಗದಂತೆ ತಡೆಯಲು ಇದು ನೆರವಾಗುತ್ತದೆ.

ಟೀ ಮತ್ತು ಕಾಫೀ ಸೇವನೆ ತಪ್ಪಿಸಿ
ನಿಮ್ಮ ದೇಹದಲ್ಲಿರುವ ಕೆಫೇನ್ ಅಂಶವು ನೋವು ಸಹಿಸಿಕೊಳ್ಳುವ ಶಕ್ತಿಯನ್ನು ಕುಂದಿಸುತ್ತದೆ. ಹಾಗಾಗಿ ಹುಬ್ಬುಗಳ ಶೇಪ್ ಮಾಡುವ ಮೊದಲು ಕಾಫಿ ಅಥವಾ ಟೀ ಸೇವಿಸುವುದನ್ನು ತಪ್ಪಿಸಿಕೊಳ್ಳಿ.

ನಿಮ್ಮ ಚರ್ಮವನ್ನು ಹಿಗ್ಗಿಸಿ
ಹುಬ್ಬುಗಳಿಗೆ ಆಕಾರ ನೀಡುವಾಗ ಹೆಚ್ಚಿನವರು ಒಂದು ಸಾಮಾನ್ಯ ತಪ್ಪನ್ನು ಮಾಡಿಯೇ ಮಾಡುತ್ತಾರೆ. ಅದುವೇ ಚರ್ಮವನ್ನು ಹಿಗ್ಗಿಸದೇ ಇರುವುದು. ನಿಮ್ಮ ಕಣ್ಣುಗಳ ಬಳಿ ಇರುವ ಚರ್ಮವು ತೆಳುವಾಗಿರುತ್ತದೆ ಮತ್ತು ಸೂಕ್ಷ್ಮವಾಗಿರುತ್ತದೆ ಮತ್ತು ಚರ್ಮವನ್ನು ಹಿಗ್ಗಿಸಿಕೊಳ್ಳದೇ ಪ್ಲಕ್ ಮಾಡುವುದರಿಂದ ಅಥವಾ ಎಳೆಯುವುದರಿಂದಾಗಿ ಕೂದಲಿನ ಜೊತೆಗೆ ಚರ್ಮವನ್ನೂ ಕೂಡ ಎಳೆದು ಬಿಡುವ ಸಾಧ್ಯತೆ ಹೆಚ್ಚಿರುತ್ತದೆ. ಖಂಡಿತ ಇದು ಬಹಳ ನೋವನ್ನುಂಟು ಮಾಡುತ್ತದೆ. ಇನ್ನೂ ಕೆಲವು ಸಂದರ್ಬದಲ್ಲಿ ಇದು ರಕ್ತ ಸೋರುವಂತೆಯೂ ಮಾಡಬಹುದು. ಹಾಗಾಗಿ ಇದನ್ನು ತಪ್ಪಿಸಿ. ಹಾಗಾಗಿ ನೀವು ಕೂದಲನ್ನು ಎಳೆಯುವ ಮೊದಲು ನಿಮ್ಮ ಬೆರಳುಗಳಿಂದ ಚರ್ಮವನ್ನು ಹಿಗ್ಗಿಸಿ.
ನಿಮ್ಮ ಚರ್ಮವನ್ನು ಹಿಗ್ಗಿಸಿದ ನಂತರ ಚಿಮುಟದ ಮಧ್ಯದಲ್ಲಿ ಕೂದಲನ್ನು ನಿಲ್ಲಿಸಿ , ತ್ವರಿತವಾಗಿ ಅದನ್ನು ಎಳೆಯಿರಿ. ಉತ್ತಮ ಫಿನಿಶಿಂಗ್ ಪಡೆಯುವುದಕ್ಕಾಗಿ ಕೂದಲು ಯಾವ ದಿಕ್ಕಿಗೆ ಬೆಳೆದಿರುತ್ತದೆಯೂ ಅದೇ ದಿಕ್ಕಿಗೆ ಎಳೆಯಿರಿ.

ಎರಡು ಕೂದಲನ್ನು ಒಂದೇ ಬಾರಿ ಎಳೆಯಿರಿ
ಒಂದು ವೇಳೆ ನೀವು ಹುಬ್ಬುಗಳ ಆಕಾರವನ್ನು ಮನೆಯಲ್ಲೇ ನೀಡುತ್ತೀರಾದರೆ ಹೆಚ್ಚುವರಿ ಕೂದಲನ್ನು ಎಳೆದು ಬಿಡುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಇದು ಐಬ್ರೋಗೆ ಉತ್ತಮ ಆಕಾರವನ್ನು ನೀಡುವುದಿಲ್ಲ. ಹುಬ್ಬುಗಳಲ್ಲಿರುವ ಹೆಚ್ಚುವರಿ ಕೂದಲನ್ನು ತೆಗೆಯುವ ಅತ್ಯುತ್ತಮ ವಿಧಾನವೆಂದರೆ ಎರಡು ಕೂದಲನ್ನು ಒಂದೇ ಬಾರಿ ಎಳೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಕನ್ನಡಿಯ ಮುಂದೆ ನಿಂತುಕೊಂಡು ಸ್ವಲ್ಪ ವಿರಾಮ ತೆಗೆದುಕೊಳ್ಳಿ ಮತ್ತು ಸರಿಯಾಗಿ ಗಮನಿಸಿ. ನೀವು ಎರಡು ಕೂದಲನ್ನು ಒಟ್ಟಿಗೆ ಹಿಡಿದುಕೊಂಡಿದ್ದೀರಾ ಎಂದು ನೋಡಿಕೊಳ್ಳಿ. ನಿಮಗೆ ತೃಪ್ತಿ ನೀಡುವವರೆಗೆ ಈ ವಿಧಾನವನ್ನು ಮುಂದುವರಿಸಿ ಹುಬ್ಬುಗಳಿಗೆ ಅತ್ಯುತ್ತಮ ಆಕಾರ ನೀಡಿ.

ಅಲೊವೆರಾ ಜೆಲ್ ಬಳಸಿ
ನಿಮ್ಮ ಹುಬ್ಬುಗಳ ಕೂದಲನ್ನು ಎಳೆಯುವ ಹಂತಗಳು ಮುಗಿದ ನಂತರ ನಿಮ್ಮ ಚರ್ಮವು ಸೂಕ್ಷ್ಮವಾಗಿರುತ್ತದೆ. ಹೆಚ್ಚಿನ ಸಂದರ್ಬದಲ್ಲಿ ಚರ್ಮವು ಕಂಪಾಗುತ್ತದೆ. ಹಾಗಾಗಿ ಐಬ್ರೋ ಮಾಡಿಯಾದ ನಂತರ ಆ ಜಾಗಕ್ಕೆ ಜೆಲ್ ಅಥ್ವಾ ಕ್ರೀಮ್ ನ್ನು ಹಚ್ಚಿ ನಿಧಾನವಾಗಿ ಮಸಾಜ್ ಮಾಡಲಾಗುತ್ತದೆ.
ಐಬ್ರೋ ಕೂದಲನ್ನು ಎಳೆದಾದ ನಂತರ ಚರ್ಮದ ಉರಿಯನ್ನು ತಗ್ಗಿಸಲು ಅಲವೀರಾ ಜೆಲ್ ಅತ್ತುತ್ತಮವಾಗಿರುತ್ತದೆ. ಹುಬ್ಬುಗಳ ಜಾಗವನ್ನು ಅಲವೀರಾ ಜೆಲ್ ನಿಂದ ತೇವಾಂಶಗೊಳಿಸುವುದರಿಂದಾಗಿ ಅದರಲ್ಲಿರುವ ಉರಿ ತಗ್ಗಿಸುವ ಗುಣ ಮತ್ತು ನೋವು ಹೊಡೆಯುವ ಗುಣವು ನಿಮಗೆ ರಿಲೀಫ್ ನೀಡುತ್ತದೆ.
ಐಬ್ರೋ ಮಾಡಿಯಾದ ನಂತರ ಸ್ವಲ್ಪ ಪ್ರಮಾಣದ ಅಲವೀರಾ ಜೆಲ್ ತೆಗೆದುಕೊಳ್ಳಿ ಮತ್ತು ಚರ್ಮಕ್ಕೆ ಮಸಾಜ್ ಮಾಡಿ. ಅಲವೀರಾ ಜೆಲ್ ನಿಮ್ಮ ಚರ್ಮದಲ್ಲಿ ಹೀರಿ ಹೋಗುವವರೆಗೆ ಮಸಾಜ್ ಮಾಡುವುದು ಒಳ್ಳೆಯದು. ಅದನ್ನು ಹಾಗೆಯೇ ಬಿಡುವುದರಿಂದಾಗಿ ನೀವು ಉರಿಯ ಬಗ್ಗೆ ಅಥವಾ ಚರ್ಮ ಕೆಂಪಗಾಗಿರುವ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ.
ಹೀಗೆ ಸುಲಭವಾಗಿ ಮನೆಯಲ್ಲಿಯೇ ನಿಮ್ಮ ಹುಬ್ಬುಗಳ ಆರೈಕೆ ಮಾಡಿಕೊಂಡು ಉತ್ತಮ ಆಕಾರ ನೀಡಲು ಸಾಧ್ಯವಾಗುತ್ತದೆ.



Click it and Unblock the Notifications











