Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಿಲ್ಕ್ ಬೋರ್ಡ್‌ನಿಂದ ಸರ್ಜಾಪುರಕ್ಕೆ ಹೋಗುವ ಮಹಿಳಾ ದ್ವಿಚಕ್ರ ವಾಹನ ಸವಾರರು ಮಾತ್ರ ಈ ಸ್ಟೋರಿ ಓದಿ
ಪುರುಷರಿಗೆ ಸರಿಸಮಾನಾಗಿ ದುಡಿಯುತ್ತಿರುವ ಮಹಿಳೆಯರು ಬೆಳ್ಳ್ ಬೆಳ್ಳಗ್ಗೆ ಎದ್ದು ಬೆಂಗ್ಳೂರು ಟ್ರಾಫಿಕ್ ಮಧ್ಯೆ ಮನೆಯಿಂದ ಆಫೀಸ್‌ಗೆ ಹೋಗೋದು ಅಂದ್ರೆ ಹರಸಾಹಸವೇ ಸರಿ. ಅದ್ರಲ್ಲೂ ಬೆಂಗಳೂರಿನ ಕೆಲವೊಂದು ಸ್ಥಳಗಳಂತೂ ಮಹಿಳಾ ದ್ವಿಚಕ್ರ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಅದ್ರಲ್ಲೂ ನಾವು ಇವತ್ತು ಸಿಲ್ಕ್‌ಬೋರ್ಡ್‌ನಿಂದ ಸರ್ಜಾಪುರಕ್ಕೆ ಹೋಗೋ ಮಹಿಳಾ ಟೂ ವ್ಹೀಲರ್ ರೈಡರ್ಸ್ ಬಗ್ಗೆ ಮಾತನಾಡೋದಕ್ಕೆ ಹೊರಟ್ಟಿದ್ದೀವಿ.

ಸಿಲ್ಕ್‌ಬೋರ್ಡ್ ಮಾರ್ಗದಲ್ಲಿ ಪ್ರಯಾಣ ಮಾಡೋದಂದ್ರೆ ಜನ ಒಂದ್ಸಾರಿ ಬೆಚ್ಚಿ ಬೀಳ್ತಾರೆ. ಅದ್ರಲ್ಲೂ ಮಹಿಳಾ ರೈಡರ್ಸ್ ಪರಿಸ್ಥಿತಿಯಂತೂ ಹೇಳೋದೆ ಬೇಡ. ಇವತ್ತು ನಾವು ಸಿಲ್ಕ್‌ಬೋರ್ಡ್‌ನಿಂದ ಸರ್ಜಾಪುರಕ್ಕೆ ಟೂ ವ್ಹೀಲರ್ ಮೂಲಕ ತೆರಳೋ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದಕ್ಕೆ ಸೆಲ್ಯೂಷನ್ ಕೂಡ ಕೊಡ್ತೀವಿ. ಅದ್ರಲ್ಲೂ ಮುಖ್ಯವಾಗಿ ನಿಮ್ಮ ಸೌಂದರ್ಯ ಕಾಪಾಡಿಕೊಳ್ಳೋದಕ್ಕೆ ಕೆಲವೊಂದು ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ.
ಮುಹಿಳಾ ದ್ವಿಚಕ್ರ ವಾಹನ ಸವಾರರು ಎದುರಿಸುತ್ತಿರುವ ಸಮಸ್ಯೆಗಳೇನು?
ಮಹಿಳಾ ಸವಾರರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಒಂದೊಂದಾಗೇ ನೋಡೋಣ ಬನ್ನಿ

1. ಸೂರ್ಯನ ಕಿರಣ, ಅತಿಯಾದ ಧೂಳು..!
ಬೆಂಗಳೂರು ಮೆಟ್ರೋ ಸಿಟಿ ಆಗಿರೋದ್ರಿಂದ ಎಲ್ಲಾ ಕಡೆ ಟ್ರಾಫಿಕ್ ಸಮಸ್ಯೆ ಇದ್ದೇ ಇರುತ್ತದೆ. ಸಿಲ್ಕ್‌ಬೋರ್ಡ್‌ನಿಂದ ಸರ್ಜಾಪುರಕ್ಕೆ ಹೋಗುವ ರಸ್ತೆಗಳು ಇದಕ್ಕೆ ಹೊರತಾಗಿಲ್ಲ. ಟ್ರಾಫಿಕ್‌ನಲ್ಲಿ ವಾಹನಗಳು ಆಮೆ ವೇಗದಲ್ಲಿ ಚಲಿಸೋದ್ರಿಂದ ಮಹಿಳೆಯರು ಸಿಕ್ಕಾಪಟ್ಟೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವೊಂದು ಬಾರಿ ಸೂರ್ಯನ ಕಿರಣ ನೇರವಾಗಿ ಮುಖದ ಮೇಲೆ ಬೀಳುವುದರಿಂದ ಚರ್ಮ ಒಣಗುವುದಷ್ಟೇ ಅಲ್ಲದೇ, ಟ್ಯಾನ್ ಆಗುತ್ತದೆ. ಇದ್ರ ಜೊತೆಗೆ ಸಿಕ್ಕಾ ಪಟ್ಟೆ ಧೂಳು ಮೈ ಮೇಲೆ ಬೀಳುತ್ತದೆ. ಆಫೀಸ್‌ಗೆ ಅಂತ ಟಿಪ್‌ಟಾಪ್ ಆಗಿ ರೆಡಿಯಾಗಿ ಹೋದ್ರು ಪ್ರಯೋಜವಿಲ್ಲದಂತಾಗಿದೆ.

2. ಸಿಗ್ನಲ್ ಜಂಪ್ ಹಾವಳಿ
ಇನ್ನೂ ಸಿಗ್ನಲ್ ಇದ್ರೂ ಕೂಡ ಜನ ಕೇರ್ ಮಾಡೋಲ್ಲ. ಎಲ್ಲಂದರಲ್ಲಿ ಪುರುಷ ದ್ವಿ ಚಕ್ರ ವಾಹನ ಸವಾರರು ವಾಹನದೊಂದಿಗೆ ಮುನ್ನುಗ್ಗುತ್ತಾರೆ ಇದ್ರಿಂದಾನೂ ಮಹಿಳೆಯರಿಗೆ ಕಿರಿಕಿರಿ ಉಂಟಾಗುತ್ತದೆ.

3. ಮೆಟ್ರೋ ಕಾಮಗಾರಿ ಕಿರಿಕಿರಿ
ಸಿಲ್ಕ್‌ಬೋರ್ಡ್‌ನಿಂದ ಸರ್ಜಾಪುರಕ್ಕೆ ಹೋಗುವ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೀತಿರೋದ್ರಿಂದ ಮಹಿಳಾ ಸವಾರರು ಭಯದಲ್ಲೇ ಬೈಕ್ ಓಡಿಸ್ಬೇಕಿದೆ. ಬೆಂಗಳೂರಿನಲ್ಲಿ ಇತ್ತೀಚಿಗೆ ಮೆಟ್ರೋ ಕಾಮಗಾರಿಯಿಂದಾಗಿ ಅನೇಕ ಅವಾಂತರಗಳು ಸಂಭವಿಸಿದೆ. ಆದ್ದರಿಂದ ಯಾವ ಕ್ಷಣದಲ್ಲಿ ಏನು ಬೇಕಾದ್ರು ಆಗಬಹುದು ಎಂಬ ಭಯ ಶುರುವಾಗಿದೆ.

4. ರಸ್ತೆ ಮಧ್ಯ ಅಲ್ಲಲ್ಲಿ ಹೊಂಡ ನಿರ್ಮಾಣ
ಕೆಲವೊಂದು ಕಡೆ ರಸ್ತೆಗಳು ಧೂಳಿನಿಂದ ಮುಚ್ಚಿ ಹೋಗಿದ್ರೆ ಇನ್ನೂ ಕೆಲವುಕಡೆ ಬೈಕ್ ಓಡಿಸೋದೆ ಕಷ್ಟವಾಗಿದೆ. ಅಲ್ಲಲ್ಲಿ ಗುಂಡಿ ಇರೋದ್ರಿಂದ ಬೈಕ್ ಅಥವಾ ಸ್ಕೂಟಿ ಸ್ಕಿಡ್ ಆಗೋ ಸಾಧ್ಯತೆಗಳೇ ಹೆಚ್ಚಿದೆ. ಹೀಗಾಗಿ ಎಚ್ಚರಿಕೆಯಿಂದ ಚಲಿಸಬೇಕಾಗಿದೆ.

ಸೌಂದರ್ಯ ಕಾಪಾಡಲು ಇಲ್ಲಿದೆ ಸಿಂಪಲ್ ಟಿಪ್ಸ್
ಮಹಿಳೆಯರಾಗಿ ಪುರುಷರಾಗಲಿ ಸೌಂದರ್ಯದ ಕಡೆಗೆ ಹೆಚ್ಚಿನ ಗಮನ ಕೊಡ್ತೀವಿ. ಅದ್ರಲ್ಲೂ ಮಹಿಳೆಯರು ಒಂದು ಕೈ ಮೇಲೆ. ಇವತ್ತು ಮಹಿಳಾ ದ್ವಿ ಚಕ್ರ ವಾಹನ ಸವಾರರಿಗಾಗಿ ನಾವು ಕೆಲವೊಂದು ಬ್ಯೂಟಿ ಟಿಪ್ಸ್ ಕೊಡ್ತೀವಿ.
ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ
ಬೆಂಗಳೂರಿನಲ್ಲಿ ಬಸ್‌ಗೆ ಕಾಯೋದಕ್ಕಿಂತ ಟೂ ವ್ಹೀಲರ್ ಬೆಸ್ಟ್. ಆದ್ರೆ ಸೂರ್ಯನ ಕಿರಣ ನೇರವಾಗಿ ಬೀಳೋದ್ರಿಂದ ಚರ್ಮ ಹಾಗೂ ಕೂದಲಿಗೆ ಹಾಗಿಯಾಗುತ್ತದೆ. ಇದನ್ನು ತಡೆಗಟ್ಟಲು ಹೆಲ್ಮೆಟ್ ಧರಿಸಲೇಬೇಕು. 10 ನಿಮಿಷದ ಪ್ರಯಾಣವಾದ್ರು ಹೆಲ್ಮೆಟ್ ಕಡ್ಡಾಯವಾಗಿ ಬಳಸಿ. ಇಲ್ಲವಾದಲ್ಲಿ ನಿಮ್ಮ ಚರ್ಮ ಒಣಗಿ ಕಾಂತಿ ಕಳೆದುಕೊಳ್ಳುತ್ತದೆ. ಹೆಲ್ಮೆಟ್ ನಿಮ್ಮ ಪ್ರಾಣ ಕಾಪಾಡುವುದರ ಜೊತೆಗೆ ಚರ್ಮ ಹಾಗೂ ಕೂದಲಿನ ರಕ್ಷಣೆಯನ್ನೂ ಮಾಡುತ್ತದೆ.

ಸನ್‌ಸ್ಕ್ರೀನ್ ಹಚ್ಚಿ
ಮನೆಯಿಂದ ಹೊರಡುವ 30 ನಿಮಿಷ ಮೊದಲು ಸನ್‌ಸ್ಕ್ರೀನ್ ಹಚ್ಚಿ ನಿಮ್ಮ ಮುಖದ ರಕ್ಷಣೆ ಮಾಡಿ. ಹೆಲ್ಮೆಟ್, ಸ್ಕಾರ್ಫ್, ಸನ್‌ಗ್ಲಾಸ್ ಧರಿಸಿದ್ರೂ ಕೂಡ ಇಲ್ಲಿ ಸನ್‌ಸ್ಕ್ರೀನ್ ತುಂಬಾನೇ ಮುಖ್ಯ. ಹೆಲ್ಮೆಟ್ ಇಲ್ಲದಾಗ ನಿಮ್ಮ ತ್ವಚೆಯ ರಕ್ಷಣೆ ಮಾಡುತ್ತದೆ.

ಸ್ಕಾರ್ಫ್ ಬಳಸಲು ಮರೆಯದಿರಿ
ಟೂ ವ್ಹೀಲರ್ ಪ್ರಯಾಣ ಮಾಡುವಾಗ ಹೆಲ್ಮೆಟ್ ಎಷ್ಟು ಮುಖ್ಯವೋ ಸ್ಕಾರ್ಫ್ ಅಥವಾ ದುಪ್ಪಟ್ಟ ಅಷ್ಟೇ ಮುಖ್ಯವಾಗುತ್ತದೆ. ಇತ್ತೀಚಿಗೆ ಮಾರ್ಕೆಟ್‌ನಲ್ಲಿ ಟ್ರೈ ಆಂಗಲ್ ಶೇಪ್ ಸ್ಕಾರ್ಫ್ ಲಭ್ಯವಿದೆ. ಇದರಿಂದ ನಿಮ್ಮ ಕಣ್ಣನ್ನು ಬಿಟ್ಟು ಪೂರ್ತಿ ಮುಖವನ್ನು ಕವರ್ ಮಾಡಿ. ಇದು ಸೂರ್ಯನ ಕಿರಣದಿಂದ ನಿಮಗೆ 90 ರಷ್ಟು ರಕ್ಷಣೆ ನೀಡುತ್ತದೆ.

ಸನ್‌ಗ್ಲಾಸ್ ಧರಿಸಿ
ಕೆಲವೊಂದು ಬಾರಿ ಜನ ಹೆಲ್ಮೆಟ್, ಸ್ಕಾರ್ಫ್, ಸನ್‌ಸ್ಕ್ರೀನ್ ಧರಿಸಿದ್ದೀನಿ ಅಂತ ಸನ್‌ಗ್ಲಾಸ್ ಧರಿಸಲು ಉದಾಸೀನಾ ತೋರುತ್ತಾರೆ. ಆದ್ರೆ ನಿಮ್ಮ ಕಣ್ಣಿನ ಸೌಂದರ್ಯಕ್ಕೆ ಸನ್‌ಗ್ಲಾಸ್ ಧರಿಸೋದು ತುಂಬಾನೇ ಮುಖ್ಯ. ಇಲ್ಲವಾದರೆ ಕಣ್ಣಿನ ಸುತ್ತ ಕಪ್ಪು ಕಲೆಗಳು ಆವರಿಸುತ್ತದೆ. ಇದು ನಿಮ್ಮ ಇಡೀ ಮುಖವನ್ನೇ ಡಲ್ ಆಗುವಂತೆ ಮಾಡುತ್ತದೆ. ಹೀಗಾಗಿ ಯಾವುದಾದರೂ ಬ್ರಾಂಡೆಡ್ ಸನ್‌ಗ್ಲಾಸ್ ಧರಿಸಿ ಇದು ನಿಮ್ಮ ಕಣ್ಣನ್ನು ಸುರಕ್ಷಿತವಾಗಿರಿಸುತ್ತದೆ.

ಜಾಕೆಟ್ ಧರಿಸಲು ಮರೆಯದಿರಿ
ಆಫೀಸ್ ಹೋಗೋ ಮಹಿಳೆಯರು ಸ್ಲೀವ್‌ಲೆಸ್ ಹಾಗೂ ಸ್ಕರ್ಟ್ ಹೀಗೆ ವಿಧ ವಿಧವಾದ ಬಟ್ಟೆ ಹಾಕಲು ಇಷ್ಟಪಡುತ್ತಾರೆ. ಆದ್ರೆ ಸುಡೋ ಬಿಸಿಲು ನಿಮ್ಮ ದೇಹದ ಸೌಂದರ್ಯಕ್ಕೆ ಹಾನಿ ಉಂಟುಮಾಡಬಹುದು ಆದ್ದರಿಂದ ಜಾಕೆಟ್ ಧರಿಸಲು ಮರೆಯಬೇಡಿ. ಇದರ ಜೊತೆಗೆ ಟ್ಯಾನ್ ತೊಲಗಿಸಲು ಆಗಾಗ್ಗೆ ಬ್ಲೀಚಿಂಗ್ ಕೂಡ ಮಾಡಿಸಿಕೊಳ್ಳಿ.

ಗ್ಲೌಸ್, ಸಾಕ್ಸ್ ಧರಿಸಿ
ನಿಮ್ಮ ತ್ವಚೆಯನ್ನು ಸೂರ್ಯನಿಂದ ಹಾಗೂ ಧೂಳಿನಿಂದ ರಕ್ಷಿಸಲು ಇಷ್ಟು ಮಾತ್ರ ಸಾಕಾಗೋದಿಲ್ಲ. ಇದರೊಂದಿಗೆ ಗ್ಲೌಸ್ ಮತ್ತು ಸಾಕ್ಸ್ ಕೂಡ ಅಷ್ಟೇ ಮುಖ್ಯವಾಗುತ್ತದೆ. ಒಂದು ವೇಳೆ ನೀವು ಕೇವಲ ಒಂದು ವಾರಗಳ ಕಾಲ ನಿಮ್ಮ ಕಾಲು ಹಾಗೂ ಕೈಯನ್ನು ಸೂರ್ಯನ ಬಿಸಿಲಿಗೆ ಒಡ್ಡಿದರೆ ಸಾಕು ಚರ್ಮದ ಕಪ್ಪು ಬಣ್ಣಕ್ಕೆ ತಿರುಗಿ ಒಣಗಿದಂತಾಗುತ್ತದೆ. ಹೀಗಾಗಿ ಮೊದಲೇ ಆಲೋಚಿಸಿ ಎಲ್ಲದಕ್ಕೂ ಸಿದ್ಧರಾಗಿರಿ. ಮುಂಜಾಗೃತೆ ತಂಬಾನೇ ಮುಖ್ಯ.

ಎಣ್ಣೆ ಹಚ್ಚಿ ಕೂದಲಿನ ಪೋಷಣೆಗೆ ಒತ್ತು ನೀಡಿ
ಟೂ ವ್ಹೀಲರ್ ರೈಡರ್ಸ್‌ಗೆ ಕೂದಲ ಪೋಷಣೆ ಕೂಡ ತುಂಬಾನೇ ಮುಖ್ಯವಾಗುತ್ತದೆ. ಬಿಸಿಲು ಹಾಗೂ ಧೂಳು ನಿಮ್ಮ ಕೂದಲಿಗೆ ಅತೀವ ಹಾನಿ ಮಾಡಬಹುದು ಹೀಗಾಗಿ. ಮನೆಯಿಂದ ಹೊರಡುವಾಗ ಕೂದಲು ಬಾಚಿ ಜಡೆ ಹೆಣೆದುಕೊಳ್ಳಿ ನಂತರ ಆಫೀಸ್‌ಗೆ ಬಂದ ಮೇಲೆ ನಿಮಗೆ ಬೇಕಾದ ಹೇರ್ ಸ್ಟೈಲ್ ಮಾಡಿಕೊಳ್ಳಬಹುದು. ವಾರಕ್ಕೆ ಎರಡು ಬಾರಿಯಾದ್ರು ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದು ಕೂದಲ ಬೆಳವಣಿಗೆಗೆ ಉತ್ತೇಜಿಸುತ್ತದೆ.

ಸೀರಂ ಜೊತೆಗೆ ಹೇರ್‌ಸ್ಪಾ ಮಾಡಿಸಿಕೊಳ್ಳಿ
ಕೂದಲಿನ ಬುಡಕ್ಕೆ ಸೀರಂ ಹಚ್ಚಿ ಕೂಡ ಕೂದಲಿನ ಪೋಷಣೆ ಮಾಡಬಹುದು. ಇದರ ಜೊತೆಗೆ ಯಾವಾಗಲಾದರೂ ಒಮ್ಮೆ ಪಾರ್ಲರ್‌ಗೆ ತೆರಳಿ ಹೇರ್ ಸ್ಪಾ ಮಾಡಿಸಿದರೆ ಉತ್ತಮ. ಇಲ್ಲವಾದಲ್ಲಿ ಮನೆಯಲ್ಲೇ ಲಭ್ಯವಾಗೋ ವಸ್ತುಗಳಿಂದ ನ್ಯಾಚುರಲ್ ಆಗಿ ಹೇರ್ ಸ್ಪಾ ಮಾಡಿಸಿಕೊಳ್ಳಬಹುದು.
ಮಹಿಳಾ ದ್ವಿಚಕ್ರ ವಾಹನ ಸವಾರರಿಗಾಗಿ ನಮ್ಮದೊಂದು ಸಿಂಪಲ್ ಬ್ಯೂಟಿ ಟಿಪ್ಸ್. ಇನ್ಮುಂದೆ ಮನೆಯಿಂದ ಹೊರ ಹೋಗುವ ಮುನ್ನ ಖಂಡಿತ ನಮ್ಮ ಮಾತನ್ನ ಮಾರೀಬೇಡಿ. ನಿಮ್ಮ ಮಗಳು, ಸೊಸೆ, ಮೊಮ್ಮಕ್ಕಳಿಗಾದ್ರರು ಪರವಾಗಿಲ್ಲ ಆದಷ್ಟು ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಿ.



Click it and Unblock the Notifications


