Latest Updates
-
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ
ನಿಮ್ಮ ಮುಖ ಮತ್ತು ಕೂದಲಿನ ಆರೈಕೆಗೆ ಈ ಒಂದು ವಸ್ತು ಸೇರಿಸಿ, ಮ್ಯಾಜಿಕ್ ನೋಡಿ
ಮುಖವಿರಲಿ ಅಥವಾ ಕೂದಲಿರಲಿ, ಅವುಗಳ ಆರೈಕೆಗೆ ನೈಸರ್ಗಿಕ ವಸ್ತುಗಳನ್ನು ಬಳಸುವುದರಿಂದ ಅವುಗಳ ಆರೋಗ್ಯ ಚೆನ್ನಾಗಿರುತ್ತದೆ. ನೈಸರ್ಗಿಕ ಚಿಕಿತ್ಸೆಯ ಉತ್ತಮ ವಿಷಯವೆಂದರೆ ಈ ಪರಿಣಾಮವು ದೀರ್ಘಕಾಲದವರೆಗೆ ಇರಲಿದ್ದು, ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ. ಅದೇ ರೀತಿ ಸದ್ಯ ಇರುವ ಚಳಿಗಾಲದಲ್ಲಿ ಸಿಗುವ ಬಹಳಷ್ಟು ಹಸಿರು ಸೊಪ್ಪುಗಳನ್ನು ಬಳಸಿಕೊಂಡು ಸೌಂದರ್ಯ ಕಾಪಾಡಿಕೊಳ್ಳಬಹುದು. ಅವುಗಳಲ್ಲಿ ಒಂದು ಪಾಲಕ್. ಹಾಗಾದರೆ ಈ ಸೊಪ್ಪನ್ನು ಬಳಸುವುದರಿಂದ ನಿಮ್ಮ ಮುಖ ಮತ್ತು ಕೂದಲನ್ನು ಹೇಗೆ ಆರೋಗ್ಯವಾಗಿರಿಸಿಕೊಳ್ಳಬಹುದು ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ.
ತ್ವಚೆ ಹಾಗೂ ಕೂದಲಿಗೆ ಪಾಲಕ್‌ನ್ನು ಹೇಗೆ ಬಳಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಪಾಲಕ್- ಜೇನುತುಪ್ಪ ಫೇಸ್ ಮಾಸ್ಕ್:
ಬೇಕಾಗುವ ಪದಾರ್ಥ:
ಒಂದು ಕಪ್ ಸಣ್ಣದಾಗಿ ಕೊಚ್ಚಿದ ಪಾಲಕ್, ಒಂದು ಚಮಚ ಜೇನುತುಪ್ಪ, ಒಂದು ಚಮಚ ಆಲಿವ್ ಎಣ್ಣೆ, ಒಂದು ಚಮಚ ನಿಂಬೆ ರಸ
ಬಳಸುವ ವಿಧಾನ:
ಪಾಲಕ್ ಸೊಪ್ಪನ್ನು ತೊಳೆದು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಉಳಿದ ಪದಾರ್ಥಗಳನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 15-20 ನಿಮಿಷಗಳ ನಂತರ ತೊಳೆಯಿರಿ. ಹತ್ತಿ ಬಟ್ಟೆಯಿಂದ ಮುಖ ಒರೆಸಿದ ನಂತರ ಮಾಯಿಶ್ಚರೈಸರ್ ಹಚ್ಚಿ. ಇದರಿಂದ ಚರ್ಮವು ಹೊಳೆಯುತ್ತದೆ.

2. ಮೊಸರು- ಪಾಲಕ್ ಫೇಸ್ ಮಾಸ್ಕ್:
ಬೇಕಾಗುವ ಪದಾರ್ಥ:
4-5 ಪಾಲಕ್ ಎಲೆಗಳು, 2-3 ಟೇಬಲ್ಸ್ಪೂನ್ ಮೊಸರು
ಬಳಸುವ ವಿಧಾನ:
ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ಮೊಸರಿನೊಂದಿಗೆ ರುಬ್ಬಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಅನ್ವಯಿಸಿ ಮತ್ತು 10-15 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ಫೇಸ್ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿದರೆ ಕೆಲವೇ ದಿನಗಳಲ್ಲಿ ತ್ವಚೆಯ ಮೇಲೆ ಹೊಳಪು ಕಾಣಿಸಿಕೊಳ್ಳುತ್ತದೆ.

3. ಪಾಲಕ್- ಕಡಲೆ ಹಿಟ್ಟಿನ ಫೇಸ್ ಮಾಸ್ಕ್:
ಬೇಕಾಗುವ ಪದಾರ್ಥ:
10-15 ಪಾಲಕ್ ಎಲೆಗಳು, 1-2 ಚಮಚ ಕಡಲೆ ಹಿಟ್ಟು, 2-3 ಚಮಚ ಹಾಲು, 1 ಚಮಚ ಜೇನುತುಪ್ಪ
ಬಳಸುವ ವಿಧಾನ:
ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದ ನಂತರ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ತಯಾರಿಸಿದ ಈ ಪೇಸ್ಟ್‌ಗೆ ಹಾಲು, ಜೇನುತುಪ್ಪ, ಕಡಲೆ ಹಿಟ್ಟನ್ನು ಬೆರೆಸಿ ಮುಖಕ್ಕೆ ಹಚ್ಚಿ 15-20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೊಳೆಯುವ ತ್ವಚೆಗಾಗಿ ವಾರದಲ್ಲಿ ಎರಡು ಬಾರಿ ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ.

4. ಪಾಲಕ್ ತೆಂಗಿನ ಎಣ್ಣೆ ಹೇರ್ ಮಾಸ್ಕ್;
ಬೇಕಾಗುವ ಪದಾರ್ಥ:
ಒಂದು ಕಪ್ ಪಾಲಕ್, 2 ಚಮಚ ತೆಂಗಿನ ಎಣ್ಣೆ, ಒಂದು ಚಮಚ ಜೇನುತುಪ್ಪ
ಬಳಸುವ ವಿಧಾನ:
ಪಾಲಕ್ ಸೊಪ್ಪನ್ನು ತೊಳೆದ ನಂತರ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ಜೇನುತುಪ್ಪ ಮತ್ತು ತೆಂಗಿನೆಣ್ಣೆ ಬೆರೆಸಿ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಅರ್ಧ ಗಂಟೆಯ ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೊಮ್ಮೆ ಈ ಮಾಸ್ಕ್ ಬಳಸಿ.



Click it and Unblock the Notifications
