Latest Updates
-
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ!
Beauty tips: ನಿಮ್ಮ ಕೈಗಳ ಅಂದ ಹೆಚ್ಚಿಸುವ ಮೆನಿಕ್ಯೂರ್ ಮಾಡಲು ಈ ಮನೆಮದ್ದುಗಳೇ ಬೆಸ್ಟ್ ನೋಡಿ!
ಸೌಂದರ್ಯ ಪ್ರಿಯರು ಯಾವಾಗಲು ತಮ್ಮ ಮುಖದ ಅಂದಕ್ಕೆ ಮಾತ್ರ ಪ್ರಾಶಸ್ತ್ಯ ನೀಡುವುದಿಲ್ಲ, ಅವರು ತಮ್ಮ ಇಡೀ ದೇಹಕ್ಕೆ ಕಾಳಜಿ ವಹಿಸುತ್ತಾರೆ. ಅಂಥಾ ಸೌಂದರ್ಯ ಪ್ರಿಯರು ಅದರಲ್ಲೂ ಮನೆಮದ್ದಿನಿಂದ ಸೌಂದರ್ಯ ಇಮ್ಮಡಿಗೊಳಿಸಿಕೊಳ್ಳಬೇಕು ಎಂದು ಬಯಸುವವರು ಸದಾ ಮನೆಯಲ್ಲಿರುವ ಆಯುರ್ವೇದ ಪದ್ಧತಿಯನ್ನು ಬಳಸಲು ಆದ್ಯತೆ ನೀಡುತ್ತಾರೆ.

ಇಂಥವರಿಗಾಗಿಯೇ ಇಂದಿನ ನಮ್ಮ ಈ ಲೇಖನ ಕೆಲವು ಪ್ರಮುಖ ಮನೆಮದ್ದುಗಳನ್ನು ನೀಡಲಿದೆ. ಅದರಲ್ಲೂ ಹೆಚ್ಚು ಬಳಸುವ ಕೈಗಳು ಬೇಗ ಮಸುಕಾಗುತ್ತದೆ, ಅದನ್ನು ಹೊಳೆಯುವಂತೆ ಮಾಡುವುದು ಹೇಗೆ, ಯಾವುದೇ ಪಾರ್ಲರ್‌ಗಳಿಗೆ ಹೋಗದೆ, ರಾಸಾಯನಿಕಗಳನ್ನು ಬಳಸದೇ ಈ ರೀತಿ ನೀವು ಮನೆಯಲ್ಲೇ ನಿಮ್ಮ ಕೈಗಳ ಅಂದ ಹೆಚ್ಚಿಸುವ ಮೆನಿಕ್ಯೂರ್ ಮಾಡಬಹುದು ನೋಡಿ:

1. ನಿಂಬೆಹಣ್ಣು
ಎಲ್ಲರ ಅಡುಗೆ ಮನೆಗಳಲ್ಲೂ ನಿಂಬೆಹಣ್ಣು ಇದ್ದೇ ಇರುತ್ತದೆ, ಈ ನಿಂಬೆಹಣ್ಣಯನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿ ಮತ್ತು ನಿಮ್ಮ ಕೈಗಳ ಮೇಲೆ ಮತ್ತು ನಿಮ್ಮ ಉಗುರುಗಳಿಗೆ ಹೋಳುಗಳನ್ನು ಚೆನ್ನಾಗಿ ಉಜ್ಜಿರಿ, 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಈ ಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ಚರ್ಮವನ್ನು ಸುಲಭವಾಗಿ ಸ್ವಚ್ಛಗೊಳಿಸಲು ಮತ್ತು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ.
ನೈಸರ್ಗಿಕವಾಗಿ ನೇಲ್ ಪಾಲಿಷ್ ಹೋಗಲಾಡಿಸಲು ವಿನೆಗರ್ ಜೊತೆಗೆ ನಿಂಬೆ ಹನಿಗಳನ್ನು ಮಿಶ್ರಣ ಮಾಡಿಹತ್ತಯಿಂದ ಉಜ್ಜಿರಿ. ಸಾಧ್ಯವಾದಷ್ಟು ಉತ್ತಮ ಫಲಿತಾಂಶ ಪಡೆಯಬಹುದು.

2. ಅಡುಗೆ ಸೋಡಾ
ಅಡುಗೆ ಸೋಡಾದಲ್ಲಿರುವ ಘಟಕಾಂಶವು ನಿಮ್ಮ ಕೈಗಳನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಅಡುಗೆ ಸೋಡಾ ನಿಮ್ಮ ಕೈಗಳಿಂದ ಸತ್ತ ಚರ್ಮವನ್ನು ಹೊರಹಾಕಲು ಉತ್ತಮವಾಗಿದೆ. ಅದಕ್ಕಾಗಿ 2 ಚಮಚ ಅಡುಗೆ ಸೋಡಾವನ್ನು ಒಂದು ಚಮಚ ನೀರಿನೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿ ಮತ್ತು ಅದರಿಂದ ನಿಮ್ಮ ಕೈಗಳನ್ನು ಮೃದುವಾಗಿ ಮಸಾಜ್ ಮಾಡಿ. 10 ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ಕೈಗಳನ್ನು ತೊಳೆಯಿರಿ.

3. ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯನ್ನು ಅನ್ವಯಿಸುವುದು ಕೈಗಳ ಹೊಳಪು ಹೆಚ್ಚುತ್ತದೆ, ಆರೋಗ್ಯಕರ ಬಾದಾಮಿ ಎಣ್ಣೆ ಮಸಾಜ್ ಇದರ ಪರಿಣಾಮವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. 2 ಚಮಚ ಬಾದಾಮಿ ಎಣ್ಣೆಯನ್ನುನಿಮ್ಮ ಅಂಗೈ ಮತ್ತು ಬೆರಳುಗಳ ಮೇಲೆ ಅನ್ವಯಿಸಿ. ಕೀಲು ಮತ್ತು ಮಾಂಸದ ಮೇಲೆ ಮೃದುವಾಗಿ ಮಸಾಜ್ ಮಾಡಿ. ಬಾದಾಮಿ ಎಣ್ಣೆಯಲ್ಲಿರುವ ವಿಟಮಿನ್ ಇ ಮತ್ತು ಇತರ ಪೋಷಕಾಂಶಗಳು ನಿಮ್ಮ ಕೈಗಳಿಗೆ ತೂರಿಕೊಳ್ಳುತ್ತವೆ ಮತ್ತು ಕೈಗಳನ್ನು ಮೃದುವಾಗಿ, ಪ್ರಕಾಶಮಾನವಾಗಿ ಮತ್ತು ಸುಂದರವಾಗಿಸುತ್ತದೆ.

4. ಹಸಿರು ಚಹಾ
ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶವನ್ನು ಹೊಂದಿರುವ ಹಸಿರು ಚಹಾ ಸುಲಭವಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಹಸಿರು ಚಹಾದಲ್ಲಿರುವ ಆಂಟಿಆಕ್ಸಿಡೆಂಟ್‌ಗಳ ಹೆಚ್ಚಿನ ಅಂಶವು ಚರ್ಮದ ಬಣ್ಣವನ್ನು ನಿವಾರಿಸುತ್ತದೆ ಮತ್ತು ಯಾವುದೇ ರೀತಿಯ ಕಿರಿಕಿರಿಯನ್ನು ಸಹ ಶಮನಗೊಳಿಸುತ್ತದೆ. ಅಗಲವಾದ ಪಾತ್ರೆಗೆ ಬೆಚ್ಚಗಿನ ನೀರು ಹಾಗೂ 2 ಚಮಚ ಹಸಿರು ಚಹಾ ಎಲೆಗಳನ್ನು ಹಾಕಿ. ಈ ಬೆಚ್ಚಗಿನ ಹಸಿರು ಚಹಾದಲ್ಲಿ 20 ನಿಮಿಷಗಳ ಕಾಲ ಅಥವಾ ನೀರು ತಣ್ಣಗಾಗುವವರೆಗೆ ನಿಮ್ಮ ಕೈಗಳನ್ನು ನೆನೆಸಿ.

5. ಜೇನುತುಪ್ಪ
ಜೇನುತುಪ್ಪವು ಅದ್ಭುತ, ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು ಅದು ಪರಿಸರದಿಂದ ತೇವಾಂಶವನ್ನು ಸೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಕೇವಲ 2 ಚಮಚ ಜೇನುತುಪ್ಪವನ್ನು ತೆಗೆದುಕೊಳ್ಳಿ, ಅದಕ್ಕೆ ಒಂದು ಚಿಟಿಕೆ ಅರಿಶಿನ ಸೇರಿಸಿ ಇದನ್ನು ನಿಮ್ಮ ಕೈಗಳಿಗೆ ಅನ್ವಯಿಸಿ. 20 ನಿಮಿಷಗಳ ಕಾಲ ಅದನ್ನು ಬಿಡಿ ಇದರಿಂದ ಎಲ್ಲಾ ತೇವಾಂಶವು ಚರ್ಮಕ್ಕೆ ತೂರಿಕೊಳ್ಳುತ್ತದೆ. ನಿಮ್ಮ ಕೈಗಳನ್ನು ಹಿಂದೆಂದಿಗಿಂತಲೂ ಮೃದುವಾಗಿಸುತ್ತದೆ, ಅಂತಿಮವಾಗಿ ಬೆಚ್ಚಗಿನ ನೀರಿನಿಂದ ತೊಳೆಯಿರಿ.



Click it and Unblock the Notifications
