Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ಗಲ್ಲ ಹಾಗೂ ಸ್ತನಗಳಲ್ಲಿರುವ ಕೂದಲನ್ನು ಶಾಶ್ವತವಾಗಿ ತೆಗೆಯುವುದು ಹೇಗೆ?
ದೇಹದಲ್ಲಿ ಕೂದಲು ಬೆಳೆಯುವುದು ಸ್ವಾಭಾವಿಕ. ಪ್ರಾಯಕ್ಕೆ ಬರುತ್ತಿದ್ದಂತೆ ದೇಹದಲ್ಲಿ ಕೂದಲು ಬೆಳೆಯುವುದು. ನಮ್ಮ ಫ್ಯಾಷ್ಟನ್, ಟ್ರೆಂಡ್, ಸ್ಟೈಲ್ ಸೆನ್ಸ್‌ಗೆ ಅನುಸಾರ ಬೇಡದ ಕೂದಲನ್ನು ತೆಗೆಯುತ್ತೇವೆ. ಆದರೆ ಕೆಲ ಮಹಿಳೆಯರಿಗೆ ಸ್ತನದಲ್ಲಿ ಹಾಗೂ ಗಲ್ಲದಲ್ಲಿ ಕೂದಲು ಬೆಳೆಯುವುದು. ಈ ರೀತಿ ಕೂದಲು ಬೆಳೆಯುವುದರಿಂದ ತೊಂದರೆಯೇನಿಲ್ಲ, ಆದರೆ ಅದರಿಂದ ಅವರಿಗೆ ಮುಜುಗರ ಉಂಟಾಗುತ್ತದೆ.

ಸ್ತನಗಳ ಭಾಗದಲ್ಲಿ ಕೂದಲು ಬರಲು ಪ್ರಮುಖ ಕಾರಣ ಹಾರ್ಮೋನ್‌ಗಳ ವ್ಯತ್ಯಾಸವಾಗಿದೆ. ಪುರುಷ ಹಾರ್ಮೋನ್ ಅಧಿಕವಾದರೆ ಈ ರೀತಿ ಕೂದಲು ಬೆಳೆಯುವುದು. ಎಣ್ಣೆ ತ್ವಚೆ, ಅನಿನಿಯಮಿತ ಮುಟ್ಟು, ಕೂದಲು ಉದುರುವುದು ಇವೆಲ್ಲಾ ದೇಹದಲ್ಲಿ ಟೆಸ್ಟೋಸ್ಟಿರೋನ್ ಹೆಚ್ಚಾಗಿದೆ ಎಂಬುವುದರ ಲಕ್ಷಣವಾಗಿದೆ.
ಗಲ್ಲ ಹಾಗೂ ಸ್ತನಗಳಲ್ಲಿ ಕೂದಲು ತುಂಬಾ ಬೆಳೆಯುತ್ತಿದ್ದರೆ ವೈದ್ಯರನ್ನು ಭೇಟಿ ಮಾಡಿ, ಒಂದೆರಡು ಕೂದಲು ಬೆಳೆಯುತ್ತಿದ್ದರೆ ಅದನ್ನು ಕತ್ತರಿಸಿ ತೆಗೆಯುವುದು ಅಥವಾ ಕೀಳುವುದು ಮಾಡಿದರೆ ಮತ್ತೆ ಕೂದಲು ಬೆಳೆಯುವುದು, ಈ ಸಮಸ್ಯೆ ಶಾಶ್ವತವಾಗಿ ಇಲ್ಲವಾಗಿಸುವ ಕೆಲ ಮನೆಮದ್ದುಗಳಿವೆ, ಅವುಗಳ ಬಗ್ಗೆ ಇಲ್ಲಿ ಹೇಳಿದ್ದೇವೆ ನೋಡಿ:
ಮನೆಮದ್ದುಗಳು:

1 . ನಿಂಬೆ, ಸಕ್ಕರೆ, ಕೇನು ವ್ಯಾಕ್ಸ್
ಚಮಚ ನಿಂಬೆರಸ, 1 ಚಮಚ ಸಕ್ಕರೆ, 1 ಚಮಚ ಜೇನು ಇವುಗಳನ್ನು ಬಿಸಿ ಮಾಡಿ ಕೋಣೆಯ ಉಷ್ಣತೆಗೆ ತಣ್ಣಗಾಗಲು ಬಿಡಿ. ನಂತರ ವ್ಯಾಕ್ಸಿಂಗ್ ಸ್ಟ್ರಿಪ್ಸ್‌ನಿಂದ ತೆಗೆಯಿರಿ.

2. ಪಪ್ಪಾಯಿ ಮತ್ತು ಅರಿಶಿಣ ಪುಡಿ
ಬೇಡದ ಕೂದಲನ್ನು ತೆಗೆಯಲು ಅರಿಶಿಣವನ್ನು ಮನೆಮದ್ದಾಗಿ ಬಳಸಲಾಗುವುದು, ಇದರ ಜೊತೆಗೆ ಪಪ್ಪಾಯಿ ಸೇರಿಸಿ ಗಲ್ಲ ಹಾಗೂ ಸ್ತನಗಳಲ್ಲಿ ಬೆಳೆದಿರುವ ಕೂದಲನ್ನು ತೆಗೆಯಬಹುದು.
ಬಳಕೆಯ ವಿಧಾನ:
- ಒಂದು ಬೌಲ್‌ಗೆ ಮ್ಯಾಶ್ ಮಾಡಿದ ಪಪ್ಪಾಯಿ ಹಾಕಿ, ಅದಕ್ಕೆ ಅರಿಶಿಣ ಪುಡಿ ಹಾಕಿ ಮಿಶ್ರ ಮಾಡಿ.
- ಈ ಮಿಶ್ರಣವನ್ನು ಗಲ್ಲ ಹಾಗೂ ಸ್ತನದ ಭಾಗದಲ್ಲಿ ಹಚ್ಚಿ ಮಸಾಜ್ ಮಾಡಿ.
- ಈ ರೀತಿ ವಾರದಲ್ಲಿ 3-4 ಬಾರಿ ಮಾಡಿ
- ಹೀಗೆ ಕೆಲ ವಾರಗಳ ಕಾಲ ಮಾಡಿದರೆ ಕೂದಲು ಕಡಿಮೆಯಾಗುವುದು, ಕ್ರಮೇಣ ಬೇಡದ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
- ಮೊಟ್ಟೆಯ ಬಿಳಿಯನ್ನು ಬೌಲ್‌ಗೆ ಹಾಕಿ, ಅದಕ್ಕೆ ಸಕ್ಕರೆ ಹಾಗೂ ಜೋಳದ ಹಿಟ್ಟು ಹಾಕಿ ಪೇಸ್ಟ್ ಮಾಡಿ.
- ಈಗ ಕೂದಲಿರುವ ಜಾಗಕ್ಕೆ ಹಚ್ಚಿ
- ಪೇಸ್ಟ್ ಗಟ್ಟಿಯಾದ ಬಳಿಕ ಕೂದಲು ಬೆಳೆದ ವಿರುದ್ಧ ದಿಕ್ಕಿಗೆ ಎಳೆಯಿರಿ, ಸ್ವಲ್ಪ ನೋವಾದರೂ ಬೇಡದ ಕೂದಲಿನಿಂದ ಮುಕ್ತಿ ಪಡೆಯಬಹುದು.

3. ಮೊಟ್ಟೆಯ ಬಿಳಿ, ಕಡಲೆ ಹಿಟ್ಟು ಮತ್ತು ಸಕ್ಕರೆ
ಈ ಅಂಟಿನ ಮಿಶ್ರಣ ಕೂಡ ಬೇಡದ ಕೂದಲನ್ನು ತೆಗೆಯುವಲ್ಲಿ ತುಂಬಾ ಸಹಕಾರಿ.
ಬಳಸುವುದು ಹೇಗೆ?
ಒಂದು ಮೊಟ್ಟೆಯ ಬಿಳಿ
1 ಚಮಚ ಸಕ್ಕರೆ
ಅರ್ಧ ಚಮಚ ಜೋಳದ ಹಿಟ್ಟು

4. ಅರಿಶಿಣ ಮತ್ತು ಕಡಲೆಹಿಟ್ಟು
ಅರಿಶಿಣ ಹಾಗೂ ಕಡಲೆ ಹಿಟ್ಟು ಕೂಡ ಬೇಡದ ಕೂದಲನ್ನು ತೆಗೆದು ಹಾಕುವಲ್ಲಿ ಸಹಕಾರಿ.
ಬಳಸುವುದು ಹೇಗೆ?
ಒಂದು ಬೌಲ್‌ಗೆ ಅರಿಶಿಣ, ಕಡಲೆ ಹಿಟ್ಟು ಹಾಕಿ ಅದು ಕಲೆಸಲು ಸಾಸಿವೆ ಎಣ್ಣೆ ಹಾಕಿ ಮಿಶ್ರ ಮಾಡಿ ಅದನ್ನು ಸ್ತನದ ಕೂದಲಿರುವ ಭಾಗಕ್ಕೆ ಹಾಗೂ ಗಲ್ಲಕ್ಕೆ ಹಚ್ಚಿ ಮಸಾಜ್ ಮಾಡಿ. ಪ್ರತಿದಿನ ಈ ರೀತಿ ಮಾಡಿದರೆ ವಾರದೊಳಗೆ ಉತ್ತಮ ಫಲಿತಾಂಶ ನಿಮಗೆ ಗೋಚರವಾಗುತ್ತದೆ.

5. ಜೇನು ಮತ್ತು ನಿಂಬೆರಸ
ಬೇಡದ ಕೂದಲನ್ನು ತೆಗೆಯುವಲ್ಲಿ ಜೇನು ಹಾಗೂ ನಿಂಬೆರಸ ಕೂಡ ಪರಿಣಾಮಕಾರಿಯಾದ ಮನೆಮದ್ದಾಗಿದೆ. ಈ ವಿಧಾನದಲ್ಲಿ ನೀವು ಮಾಡಬೇಕಾಗಿರುವುದು
1 ಚಮಚ ಜೇನು ಹಾಗೂ ಅರ್ಧ ಚಮಚ ನಿಂಬೆರಸವನ್ನು ಒಂದು ಬೌಲ್‌ಗೆ ಹಾಕಿ ಮಿಶ್ರ ಮಾಡಿ. ಈಗ ಈ ಮಿಶ್ರಣವನ್ನು ಬೇಡದ ಕೂದಲಿರುವ ಭಾಗಕ್ಕೆ ಹಚ್ಚಿ 20 ನಿಮಿಷ ಬಿಡಿ, ನಂತರ ಒಂದು ಕಾಟನ್ ಬಟ್ಟೆಯನ್ನು ಬಿಸಿ ನೀರಿನಲ್ಲಿ ಅದ್ದಿ, ಹಿಂಡಿ ಒರೆಸಿ, ನಂತರ ತಣ್ಣೀರಿನಿಂದ ತೊಳೆಯಿರಿ. ಈ ರೀತಿ ಮಾಡುವುದರಿಂದಲೂ ಬೇಡದ ಕೂದಲು ಇಲ್ಲವಾಗುವುದು.

6. ಅರಿಶಿಣ ಮತ್ತು ಹಾಲು
ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ತ್ವಚೆಯನ್ನು ಎಕ್ಸ್‌ಫೋಲೆಟ್ ಮಾಡುವಲ್ಲಿ ತುಂಬಾ ಸಹಕಾರಿ.
ಅರಿಶಿಣವನ್ನು ಹಾಲಿನ ಜೊತೆ ಮಿಶ್ರ ಮಾಡಿ ಬೇಡದ ಕೂದಲಿರುವ ಜಾಗಕ್ಕೆ ಹಚ್ಚಿ, ಒಣಗಿದ ಮೇಲೆ ತೊಳೆಯಿರಿ. ಈ ರೀತಿ ಪ್ರತಿದಿನ ಮಾಡುತ್ತಿದ್ದರೆ 2-3 ವಾರಗಳಲ್ಲಿ ಆ ಕೂಲುಗಳು ಉದುರಿ ಹೋಗುತ್ತವೆ.



Click it and Unblock the Notifications