Latest Updates
-
ತೀವ್ರ ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಆರೋಗ್ಯವಾಗಿರಲು ಈ ಸುರಕ್ಷತಾ ಕ್ರಮಗಳನ್ನು ಮಿಸ್ ಮಾಡ್ಬೇಡಿ! -
ಲಿವ್-ಇನ್ ಸಂಬಂಧದಲ್ಲಿರುವ ಯುವ ಜೋಡಿಗಳಿಗೆ ಶಾಕ್: ಹೈಕೋರ್ಟ್ನಿಂದ ಹೊಸ ಆದೇಶ, ಇನ್ನು ರಕ್ಷಣೆ ಸಿಗಲ್ಲ! -
ಬಿಸಿಲಿಗೆ ಬಾಲ್ಕನಿ ಗಿಡಗಳು ಬಾಡುತ್ತಿವೆಯೇ? ಈ 5 ಸರಳ ಟ್ರಿಕ್ಸ್ ಬಳಸಿ ಗಿಡಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಿ! -
ಹಾಲಿನ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಹಾಳಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಈ ಪರ್ಯಾಯ ಆಹಾರಗಳೇ ದಾರಿ! -
ರೆಡ್ ಕಾರ್ಪೆಟ್ ಮೇಲೆ ಸದ್ದು ಮಾಡುತ್ತಿರುವ 'ಸೀರೆ-ಗೌನ್' ಮ್ಯಾಜಿಕ್: 2026ರ ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ಆರೋಗ್ಯ ಹಾಳಾಗದಂತೆ ವರ್ಕೌಟ್ ಮಾಡಲು ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದರೆ ಅಪಾಯ! -
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ಹೋಳಿ 2022: ಮುಖ ಹಾಗೂ ಉಗುರಿಗೆ ಇವುಗಳನ್ನು ಹಚ್ಚಿಕೊಂಡರೆ, ಹೋಳಿ ಬಣ್ಣಗಳನ್ನು ಸುಲಭವಾಗಿ ತೆಗೆಯಬಹುದು
ಬಣ್ಣಗಳ ಹಬ್ಬ ಹೋಳಿಗೆ ಕ್ಷಣಗಣನೆ ಆರಂಭವಾಗಿದೆ. ಈ ಹಬ್ಬವನ್ನು ಕೆಲವರು ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ವಿಜೃಂಭಣೆಯಿಂದ ಆಚರಿಸಿದರೆ, ಇನ್ನೂ ಕೆಲವರು ಬಣ್ಣಗಳಿಂದ ಚರ್ಮಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಹೋಳಿ ಆಡಲು ಹೋಗುವುದೇ ಇಲ್ಲ. ಇದು ಕೂಡ ಒಪ್ಪಿಕೊಳ್ಳುವಂತದ್ದೇ, ಏಕೆಂದರೆ ಹೋಳಿಯಾಟಕ್ಕೆ ಬಳಸುವ ಬಣ್ಣಗಳಲ್ಲಿ ಹೆಚ್ಚಿನವು ರಾಸಾಯನಿಕಗಳಿಂದ ತುಂಬಿಕೊಂಡಿರುತ್ತವೆ. ಇದರಿಂದ ಕೂದಲು ಹಾಗೂ ಚರ್ಮದ ಅಲರ್ಜಿಯಂತಹ ನಾನಾ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ ಹೋಳಿ ಹಬ್ಬದ ಸಂದರ್ಭದಲ್ಲಿ ಎಚ್ಚರಿಕೆ ವಹಿಸಲೇಬೇಕು.
ಆದರೆ, ಈ ಬಣ್ಣಗಳಿಂದಾಗಿ ನಿಮ್ಮ ಚರ್ಮ ಮತ್ತು ಕೂದಲಿಗೆ ಹಾನಿಯಾಗದಂತೆ, ಹೋಳಿಯಾಡುವ ಮುನ್ನ ಕೆಲವು ವಸ್ತುಗಳನ್ನು ನಿಮ್ಮ ತ್ವಚೆಗೆ ಬಳಸಬಹುದು. ಇದರಿಂದ ಬಣ್ಣಗಳಿಂದ ಆಗುವ ಸಮಸ್ಯೆಯನ್ನು ತಡೆಯಬಹುದು. ಅವುಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಸನ್‌ಸ್ಕ್ರೀನ್ ಮತ್ತು ಮಾಯಿಶ್ಚರೈಸರ್ ಬಳಸಿ:
ಇತರ ದಿನಗಳಂತೆ, ಹೋಳಿ ಆಡುವ ಮೊದಲು ಸಹ ಸನ್‌ಸ್ಕ್ರೀನ್ ಬಳಸಿ. ಹೊರಹೋಗುವ ಮೊದಲು ಮತ್ತು ಬಿಸಿಲಿನಲ್ಲಿ ಹೋಳಿ ಆಡುವ ಮೊದಲು, ನಿಮ್ಮ ಚರ್ಮಕ್ಕೆ ಸನ್‌ಸ್ಕ್ರೀನ್ ಕ್ರೀಮ್ ಹಚ್ಚಿಕೊಳ್ಳುವುದು ತುಂಬಾ ಮುಖ್ಯ. ಇದು ನಿಮ್ಮ ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ. ನಿಮ್ಮ ತ್ವಚೆಯನ್ನು ಹೈಡ್ರೀಕರಿಸಿ ಮತ್ತು ಆರ್ಧ್ರಕವಾಗಿರಿಸುತ್ತದೆ.

ಐಸ್ ಬಳಸಿ:
ಹೋಳಿ ಆಡುವ ಮೊದಲು ನಿಮ್ಮ ಚರ್ಮದ ಮೇಲೆ ಐಸ್ ಅನ್ನು ಅನ್ವಯಿಸಬಹುದು. ಇದು ನಿಮ್ಮ ಚರ್ಮದ ರಂಧ್ರಗಳನ್ನು ಮುಚ್ಚುವ ಕೆಲಸ ಮಾಡುತ್ತದೆ. ಸುಮಾರು 10 ನಿಮಿಷಗಳ ಕಾಲ ನಿಮ್ಮ ಕ್ಲೀನ್ ಮುಖದ ಮೇಲೆ ಐಸ್ ಕ್ಯೂಬ್‌ಗಳನ್ನು ನಿಧಾನವಾಗಿ ಮಸಾಜ್ ಮಾಡಿ. ಈ ಟ್ರಿಕ್ ನಿಮ್ಮ ತ್ವಚೆಯೊಳಗೆ ಬಣ್ಣಗಳನ್ನು ಸೇರಿಕೊಳ್ಳದಂತೆ ತಡೆಯುವುದು ಜೊತೆಗೆ ಯಾವುದೇ ಹಾನಿ ಆಗುವುದಿಲ್ಲ.

ಚರ್ಮಕ್ಕೆ ಎಣ್ಣೆ ಹಚ್ಚಿ:
ಹೊರಗೆ ಹೋಗಿ ಹೋಳಿ ಆಡುವ ಮೊದಲು ನಿಮ್ಮ ಚರ್ಮಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಿ. ತೈಲವು ಬಣ್ಣಗಳನ್ನು ನಿಮ್ಮ ಚರ್ಮದೊಳಗೆ ಬರಲು ಬಿಡುವುದಿಲ್ಲ. ಜೊತೆಗೆ ಹೀಗೆ ಮಾಡುವುದರಿಂದ ಸುಲಭವಾಗಿ ಬಣ್ಣವನ್ನು ತೆಗೆದುಹಾಕಲು ಸಾಧ್ಯವಾಗುತ್ತದೆ. ನೀವು ಚರ್ಮಕ್ಕಾಗಿ ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಕ್ಯಾಸ್ಟರ್ ಎಣ್ಣೆಯನ್ನು ಬಳಸಬಹುದು.

ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಿ:
ಉಗುರುಗಳಿಗೆ ಆದ ಹೋಳಿ ಬಣ್ಣಗಳನ್ನು ತೆಗೆದುಹಾಕುವುದು ತುಂಬಾ ಕಷ್ಟ. ಈ ಬಣ್ಣಗಳು ವಾರಗಳವರೆಗೆ ಉಗುರುಗಳ ಮೇಲೆ ಇರುತ್ತವೆ. ಇದಕ್ಕೆ ಸುಲಭ ಪರಿಹಾರವೆಂದರೆ ನೇಲ್ ಪೇಂಟ್ ಹಚ್ಚುವುದು. ಇವು ನಿಮ್ಮ ಉಗುರುಗಳನ್ನು ರಕ್ಷಿಸುತ್ತವೆ. ಇದರ ಮೇಲೆ ಅಂಟಿರುವ ಬಣ್ಣಗಳನ್ನು ತೊಳೆಯುವುದು ಸುಲಭ. ಈ ಮೂಲಕ ನಿಮ್ಮ ಉಗುರುಗಳನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿರಿಸುತ್ತದೆ.

ದೇಹ ಸಂಪೂರ್ಣ ಆವರಿಸುವ ಬಟ್ಟೆಗಳನ್ನು ಧರಿಸಿ:
ಹೌದು, ಹೋಳಿ ಆಡಲು ಹೋಗುವಾಗ, ನಿಮ್ಮ ಚರ್ಮವನ್ನು ಸಂಪೂರ್ಣವಾಗಿ ಆವರಿಸುವ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ. ಬಣ್ಣಗಳು ಕಡಿಮೆ ತಾಗಲು ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸಿ. ಇದರಿಂದ ಹೆಚ್ಚಿನ ಬಣ್ಣಗಳು ನಿಮ್ಮ ಚರ್ಮಕ್ಕೆ ಆಗುವುದಿಲ್ಲ, ಜೊತೆಗೆ ಯಾವುದೇ ಅಲರ್ಜಿಯ ಸಮಸ್ಯೆಯೂ ಉಂಟಾಗುವುದಿಲ್ಲ. ಆದ್ದರಿಂದ ಈ ಬಾರಿ ಹೋಳಿ ಬಣ್ಣ ಆಡುವಾಗ ಈ ಸಲಹೆಗಳನ್ನು ಪಾಲಿಸಿ, ನಿಮ್ಮ ತ್ವಚೆಯನ್ನು ರಾಸಾಯನಿಕಯುಕ್ತ ಬಣ್ಣಗಳಿಂದ ಕಾಪಾಡಿಕೊಳ್ಳಿ.



Click it and Unblock the Notifications