Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಕಳೆಗುಂದಿರುವ ಕಣ್ಣುಗಳ ಕಾಂತಿಯನ್ನು ಮರಳಿ ಪಡೆಯಲು ಇಲ್ಲಿವೆ ನೈಸರ್ಗಿಕ ಪರಿಹಾರಗಳು
ಕಣ್ಣು ಮನಸ್ಸಿನ ಕಿಟಕಿ ಎಂಬ ಮಾತಿದೆ. ಇದು ಅಕ್ಷರಶಃ ನಿಜ ಕೂಡ, ಏಕೆಂದರೆ, ಹೆಚ್ಚಿನ ಜನರು ಮೊದಲಿಗೆ ಗಮನಿಸುವ ಮತ್ತು ನಮ್ಮ ನಿಜವಾದ ಭಾವನೆಗಳನ್ನು ನಾವು ಹೇಳದೆಯೇ ವ್ಯಕ್ತಪಡಿಸುವ ಒಂದು ಮಾಧ್ಯಮ ಅಂದ್ರೆ ಅದು ಕಣ್ಣು. ಆದರೆ, ಇಷ್ಟು ಮಹತ್ವ ಪಡೆದಿರುವ ನಮ್ಮ ಈ ಇಂದ್ರೀಯ, ಅತಿಯಾದ ಒತ್ತಡ ಹಾಗೂ ತಂತ್ರಜ್ಞಾನಗಳ ಅತಿ ಬಳಕೆಯಿಂದ ದಣಿದು, ಕಳಾಹೀನವಾಗುತ್ತವೆ. ಈ ಸಮಸ್ಯೆಯನ್ನು ಹೋಗಲಾಡಿಸಲು, ಕಣ್ಣುಗಳಿಗೆ ಕಾಂತಿ ಚಿಮ್ಮಲು ನಾವಿಂದು ಕೆಲವು ಮನೆಮದ್ದುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕಣ್ಣಿನ ಡಾರ್ಕ್ ಸರ್ಕಲ್ ಸಮಸ್ಯೆಯನ್ನು ಎದುರಿಸಲು ಸಹಾಯ ಮಾಡುವ ನೈಸರ್ಗಿಕ ಪರಿಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

1. ರೋಸ್ ವಾಟರ್ ಮತ್ತು ಸೌತೆಕಾಯಿ :
ಇದಕ್ಕಾಗಿ ಸೌತೆಕಾಯಿಯನ್ನು ನುಣ್ಣಗೆ ಕತ್ತರಿಸಿ, ಅದಕ್ಕೆ ಒಂದು ಚಮಚ ರೋಸ್ ವಾಟರ್ ಸೇರಿಸಿ, ಮಿಶ್ರಣ ಮಾಡಿ. ನಂತರ ಹತ್ತಿ ಪ್ಯಾಡ್ ತೆಗದುಕೊಂಡು, ಅದರಲ್ಲಿ ಅದ್ದಿ, 10 ನಿಮಿಷಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಇಟ್ಟು, ನಂತರ ತೊಳೆಯಿರಿ.
ಹೇಗೆ ಸಹಕಾರಿ?:
ಸೌತೆಕಾಯಿಯು ಚರ್ಮವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡಿದರೆ, ರೋಸ್ ವಾಟರ್ ಚರ್ಮವನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಕಣ್ಣುಗಳಿಗೆ ನವಚೈತನ್ಯ ಮತ್ತು ಉಲ್ಲಾಸವನ್ನು ನೀಡುತ್ತದೆ.

2. ಕಾಫಿ ಮತ್ತು ಜೇನುತುಪ್ಪ:
ಒಂದು ಚಮಚ ಗ್ರೌಂಡ್ ಕಾಫಿಗೆ ಒಂದು ಚಮಚ ಜೇನುತುಪ್ಪ ಮತ್ತು ಕೆಲವು ಹನಿ ವಿಟಮಿನ್ ಇ ಎಣ್ಣೆಯನ್ನು ಸೇರಿಸಿ, ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿ, 15 ನಿಮಿಷಗಳ ನಂತರ ತೊಳೆಯಿರಿ.
ಹೇಗೆ ಸಹಕಾರಿ?:
ಕಾಫಿಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್‌ಗಳಿವೆ, ಇದು ನಿಮ್ಮ ಕಣ್ಣುಗಳ ಕೆಳಗಿನ ಕಪ್ಪು ಬಣ್ಣವನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಜೇನುತುಪ್ಪವು ಕಣ್ಣಿನ ಪ್ರದೇಶವನ್ನು ತೇವಾಂಶಭರಿತವಾಗಿಸಿ, ಕಾಂತಿ ನೀಡುತ್ತದೆ.

3. ಟೀ ಬ್ಯಾಗ್‌ಗಳು:
ಇದು ಬಹಳ ಸುಲಭ ಹಾಗೂ ಪರಿಸರ ಸ್ನೇಹಿ ಕೂಡ. ಎರಡು ಬಳಸಿದ ಟೀ ಬ್ಯಾಗ್‌ಗಳನ್ನು 10 ನಿಮಿಷಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇಡಿ. ನಂತರ ಇದನ್ನು ನಿಮ್ಮ ಕಣ್ಣುಗಳ ಮೇಲೆ 15-20 ನಿಮಿಷಗಳ ಕಾಲ ಇಟ್ಟು, ತದನಂತರ ಕಣ್ಣುಗಳನ್ನು ತೊಳೆಯಿರಿ.
ಹೇಗೆ ಸಹಕಾರಿ?:
ಚಹಾದಲ್ಲಿರುವ ಕೆಫೀನ್ ಮತ್ತು ಉತ್ಕರ್ಷಣ ನಿರೋಧಕಗಳು ಕಣ್ಣುಗಳ ಫಫಿನೆಸ್ ನ್ನು ಕಡಿಮೆ ಮಾಡುತ್ತದೆ, ಜೊತೆಗೆ ಅವುಗಳ ಹೊಳಪನ್ನು ಮರಳಿ ತರುತ್ತದೆ.

4. ಜೇನುತುಪ್ಪ ಮತ್ತು ಬಾದಾಮಿ ಎಣ್ಣೆ:
ಕಣ್ಣುಗಳಡಿ ಬಂದಿರುವ ಡಾರ್ಕ್‌ಸರ್ಕಲ್‌ಗಳನ್ನು ಹೋಗಲಾಡಿಸಲು ಇದು ಬಹಳ ಪ್ರಯೋಜನಕಾರಿ. ಇದಕ್ಕಾಗಿ 1 ಚಮಚ ಬಾದಾಮಿ ಎಣ್ಣೆ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ, ಅದನ್ನು ನಿಮ್ಮ ಕಣ್ಣುಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹಚ್ಚಿ, 15-20 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.
ಹೇಗೆ ಸಹಕಾರಿ:
ಬಾದಾಮಿ ಎಣ್ಣೆ ಮತ್ತು ಜೇನುತುಪ್ಪವು ಹೈಡ್ರೇಟಿಂಗ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು, ಕಪ್ಪು ವಲಯಗಳ ನೋಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5. ಕಾಫಿ ಮತ್ತು ತೆಂಗಿನ ಎಣ್ಣೆ:
ಒಂದು ಚಮಚ ಕಾಫಿ ಪುಡಿಯನ್ನು ತೆಗೆದುಕೊಂಡು ಅದನ್ನು ತೆಂಗಿನ ಎಣ್ಣೆ ಮತ್ತು ಅರ್ಧ ಚಮಚ ಕರಿಮೆಣಸಿನ ಪುಡಿಯೊಂದಿಗೆ ಬೆರೆಸಿ. ಕೆಲವು ಹನಿ ನೀರನ್ನು ಸೇರಿಸಬಹುದು. ಈ ಪೇಸ್ಟ್ ಅನ್ನು ನಿಮ್ಮ ಕಣ್ಣಿನ ಕೆಳಗೆ ಹಚ್ಚಿ, 15 ನಿಮಿಷಗಳ ಕಾಲ ಬಿಡಿ ಮತ್ತು ನಂತರ ತಣ್ಣೀರಿನಿಂದ ತೊಳೆಯಿರಿ.
ಹೇಗೆ ಸಹಕಾರಿ?:
ತೆಂಗಿನ ಎಣ್ಣೆಯೊಂದಿಗೆ ಬೆರೆಸಿದ ಕಾಫಿಯು ಕಣ್ಣುಗಳ ಕೆಳಗಿನ ಚರ್ಮವನ್ನು ಕಾಂತಿಯುಗೊಳಿಸಲು, ಬಿಗಿಗೊಳಿಸಲು ಮತ್ತು ಮೃದುಗೊಳಿಸಲು ಸಹಾಯ ಮಾಡುತ್ತದೆ .



Click it and Unblock the Notifications











