For Quick Alerts
ALLOW NOTIFICATIONS  
For Daily Alerts

ಬಾಲಿವುಡ್‌ ಚೆಲುವೆಯರ ಬ್ಯೂಟಿ ಸೀಕ್ರೆಟ್ ಇದೇ ನೋಡಿ

|

ಯಾವತ್ತಾದರೂ ಬಾಲಿವುಡ್ ನಟಿಯರನ್ನು ಭೇಟಿ ಮಾಡಿದ್ದೀರಾ? ಅವರು ತಮ್ಮ ನಿತ್ಯ ಜೀವನದಲ್ಲಿ ಪರದೆಯ ಮೇಲೆ ಕಾಣುವುದಕ್ಕಿಂತಲೂ ಅದ್ಭುತವಾಗಿ ಇರುತ್ತಾರೆ. ಸುಂದರವಾಗಿ ಕಾಣುವುದು ಕೂಡ ಒಂದು ಕಲೆ.

Bollywood Beauty Secrets You should Know To Enhance Your Beauty

ಪ್ರಕೃತಿ ನೀಡಿರುವುದನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕಾಗುತ್ತದೆ. ಕೆಲವು ಬಾಲಿವುಡ್ ನಟಿಯರು ತಮ್ಮಸೌಂದರ್ಯ ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬುದನ್ನು ತಿಳಿಯಲು ಪ್ರಯತ್ನಿಸಿದಾಗ ಸಾಮಾನ್ಯ ಅಂಶಗಳೊಂದಿಷ್ಟು ಎಲ್ಲರ ಜೀವನದಲ್ಲೂ ಕಾಣಸಿಗುತ್ತದೆ. ನೀವು ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಬ್ಯೂಟಿಯನ್ನು ಹೆಚ್ಚಿಸಿಕೊಳ್ಳಬಹುದು.

ನೀವು ಬಾಲಿವುಡ್ ನಟಿಯರು ಕೇವಲ ಉತ್ತಮ ಮೇಕಪ್ ನಿಂದಾಗಿ ಸುಂದರ ಕಾಣುತ್ತಾರೆ ಎಂದು ಭಾವಿಸಿರಬಹುದು. ಆದರೆ ಹೆಚ್ಚಿನ ಎಲ್ಲಾ ನಟಿಮಣಿಯರೂ ಕೂಡ ಕೆಲವು ಬ್ಯೂಟಿ ಸೀಕ್ರೆಟ್ ನ್ನು ಹೊಂದಿದ್ದಾರೆ.

ಕೇವಲ ಕೂದಲು ಮತ್ತು ಮುಖದ ಮೇಕಪ್ ಮಾತ್ರವಲ್ಲ ಬದಲಾಗಿ ಜೀವನಶೈಲಿಯಲ್ಲೇ ಕೆಲವು ಗುಟ್ಟುಗಳಿವೆ. ಅದೇ ಕಾರಣದಿಂದಾಗಿ ಅವರು ಬಹಳ ಸುಂದರವಾಗಿ ಕಾಣುತ್ತಾರೆ. ಕೆಲವು ದೈನಂದಿನ ಚಟುವಟಿಕೆಗಳ ಅವರ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಅವುಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಇವೆಲ್ಲವೂ ಮನೆಯಲ್ಲೇ ಅನುಸರಿಸಬೇಕಾಗಿರುವ ಬ್ಯೂಟಿ ಸೀಕ್ರೇಟ್ ಗಳಾಗಿವೆ. ನಿಮ್ಮ ಜೀವನಕ್ಕೂ ನೀವಿದನ್ನು ಅಳವಡಿಸಿಕೊಳ್ಳಬಹುದು.

ನೀವು ತಿಳಿದಿರಬೇಕಾದ ಬಾಲಿವುಡ್ ನಟಿಯರ ಟಾಪ್ 12 ಬ್ಯೂಟಿ ಸೀಕ್ರೆಟ್ ಗಳು ಹೀಗಿವೆ ಮುಂದೆ ಓದಿ.

1. ಫಿಟ್ನೆಸ್ ಗುಟ್ಟುಗಳು

1. ಫಿಟ್ನೆಸ್ ಗುಟ್ಟುಗಳು

ನೋಟಕ್ಕಿಂತ ಹೆಚ್ಚಾಗಿ ಅವರ ಒಳಾಂಗಣ ಸೌಂದರ್ಯ ಮತ್ತು ಆರೋಗ್ಯ ಬಹಳ ಮುಖ್ಯ ಎಂದು ಪ್ರತಿಯೊಬ್ಬ ಕಲಾವಿದೆಯೂ ಭಾವಿಸುತ್ತಾರೆ. ಮೇಕಪ್ ನಿಂದಾಗಿ ಗ್ಲಾಮರಸ್ ಆಗಿ ಕಾಣುವುದು ಬಹಳ ಸುಲಭ ಮತ್ತು ಈಗಿನ ಜಮಾನದಲ್ಲಿ ನಾವು ತಿನ್ನುತ್ತಿರುವ ಜಂಕ್ ಫುಡ್ ಗಳ ಕಾರಣದಿಂದಾಗಿ ನಮ್ಮ ದೈಹಿಕ ಆರೋಗ್ಯ ಸರಿಯಾಗಿರುವಂತೆ ನೋಡಿಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿದೆ.

ಯೋಗ, ಸ್ವಿಮ್ಮಿಂಗ್, ವ್ಯಾಯಾಮ ಮತ್ತು ಬೆಳಗಿನ ವಾಕ್ ಗಳು ಕೆಲವು ಸರಳ ಚಟುವಟಿಕೆಗಳನ್ನು ಹೆಚ್ಚಿನ ಬಾಲಿವುಡ್ ಸ್ಟಾರ್ ಗಳು ತಮ್ಮ ಜೀವನದಲ್ಲಿ ಪ್ರತಿದಿನ ಅಳವಡಿಸಿಕೊಂಡಿದ್ದಾರೆ. ಆ ಮೂಲಕ ಅವರ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಆರೋಗ್ಯವಾಗಿ ಮತ್ತು ಯೌವನಯುಕ್ತವಾಗಿ ಕಾಣುತ್ತಾರೆ.

ಕೆಲವು ಆರೋಗ್ಯಕಾರಿ ಹವ್ಯಾಸಗಳನ್ನು ನೀವು ಬಾಲಿವುಡ್ ನಟಿಯರಿಂದ ಕಲಿಯಬಹುದು.‌ ಉದಾಹರಣೆಗೆ ಶಿಲ್ಪಾ ಶೆಟ್ಟಿ ಯೋಗ ಮಾಡಿದರೆ ಬಿಪಾಷ ಬಸು ಜಿಮ್ ನಲ್ಲಿ ಉತ್ತಮ ಸಮಯವನ್ನು ಕಳೆಯುತ್ತಾರೆ.

2. ತೇವಾಂಶ ಕಾಯ್ದುಕೊಳ್ಳುವಿಕೆ

2. ತೇವಾಂಶ ಕಾಯ್ದುಕೊಳ್ಳುವಿಕೆ

ಆರೋಗ್ಯವಾಗಿರುವುದಕ್ಕೆ ನಾವೆಲ್ಲರೂ ಪ್ರತಿದಿನ ಕನಿಷ್ಟ 2 ಲೀಟರ್ ನೀರು ಕುಡಿಯಲೇಬೇಕು. ಆದರೆ ಬ್ಯೂಟಿಗೆ ಕೇವಲ ನೀರು ಮಾತ್ರವೇ ಅಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಹೆಚ್ಚು ನೀರು ಕುಡಿಯುವುದರಿಂದಾಗಿ ಚರ್ಮವು ಕಾಂತಿಯುತವಾಗಿರುತ್ತದೆ. ಆದರೆ ಹೆಚ್ಚು ನೀರು ಕುಡಿಯುವುದರಿಂದಾಗಿ ಹೆಚ್ಚು ಟಾಕ್ಸಿನ್ ಗಳೂ ಕೂಡ ನಿಮ್ಮ ದೇಹದಿಂದ ಹೊರ ಹಾಕಲ್ಪಡುತ್ತದೆ. ನೀರನ್ನು ಡೀಟಾಕ್ಸ್ ಮಾಡುವುದಕ್ಕಾಗಿ ನೀವು ಆದಷ್ಟು ತೇವಾಂಶಭರಿತರಾಗಿ ಇರುವಂತೆ ನೋಡಿಕೊಳ್ಳಬಹುದು. ನಟನಟಿಯರು ಯಾವಾಗಲೂ ಹೆಚ್ಚು ತೇವಾಂಶದಿಂದ ಕೂಡಿರುವುದಕ್ಕೆ ಪ್ರಯತ್ನಿಸುತ್ತಾರೆ.

3. ಅರಿಶಿಣ

3. ಅರಿಶಿಣ

ಅರಿಶಿನ, ಹೌದು ಸಾಕಷ್ಟು ಒಳ್ಳೆಯದನ್ನು ಇದು ನಮ್ಮ ದೇಹಕ್ಕೆ ಮಾಡುತ್ತದೆ. ಹಸಿ ಅರಿಶಿನ ಬಹಳ ಒಳ್ಳೆಯದು. ದೇಹಕ್ಕೆ ಕೀಟಾಣುಗಳಿಂದ ರಕ್ಷಣೆ ನೀಡುವ ಕೆಲಸವನ್ನು ಇದು ಮಾಡುತ್ತದೆ. ಇದರ ಸೇವನೆಯೂ ಕೂಡ ಆರೋಗ್ಯವಾಗಿರುವುದಕ್ಕೆ ನೆರವಾಗುತ್ತದೆ. ಹಸಿ ಅರಿಶಿನದಿಂದಾಗಿ ನಿಮ್ಮ ಚರ್ಮಕ್ಕೆ ಹೊಳಪು ಮತ್ತು ಬಿಳುಪು ಎರಡೂ ಒದಗುತ್ತದೆ. ಹಾಗಾಗಿ ನೀವು ಹಾಲಿನೊಂದಿಗೆ ಅರಿಶಿನ ಸೇವಿಸಲೂ ಬಹುದು ಅಥವಾ ನಿಮ್ಮ ಚರ್ಮಕ್ಕೆ ನೇರವಾಗಿ ಅಪ್ಲೈ ಮಾಡಿಕೊಳ್ಳಲೂ ಬಹುದು.

4. ತೆಂಗಿನಕಾಯಿ

4. ತೆಂಗಿನಕಾಯಿ

ಹೆಚ್ಚಿನ ನಟನಟಿಯರಿಗೆ ತೆಂಗು ಅವರ ಸೌಂದರ್ಯ ರಕ್ಷಕವಾಗಿದೆ. ಕೊಬ್ಬಿನಾಂಶ ಹೊರಹಾಕುವಿಕೆಯ ಜೊತೆಗೆ ತೆಂಗಿನ ಎಣ್ಣೆ ಮತ್ತು ಎಳನೀರು ಬಹಳ ಸಹಕಾರಿಯಾಗಿದೆ. ಎಳನೀರು ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ನಿಮ್ಮ ದೇಹದಲ್ಲಿರುವ ಎಲ್ಲಾ ಟಾಕ್ಸಿನ್ ಗಳನ್ನು ಹೊರಹಾಕುವುದಕ್ಕೆ ಇದು ನೆರವು ನೀಡುತ್ತದೆ. ತೆಂಗಿನ ಎಣ್ಣೆ ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯ ರಕ್ಷಣೆಯಲ್ಲಿ ಬಹಳ ಪ್ರಮುಖವಾದುದ್ದಾಗಿದೆ.

5. ನಿಂಬೆ,ಜೇನು ಮತ್ತು ಬಿಸಿ ನೀರು

5. ನಿಂಬೆ,ಜೇನು ಮತ್ತು ಬಿಸಿ ನೀರು

ಯಾರು ತೂಕ ಇಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುತ್ತೀರೋ ಅವರು ನಿಂಬರ,ಜೇನನ್ನು ಬಿಸಿನೀರಿನಲ್ಲಿ ಸೇರಿಸಿ ಕುಡಿಯಬಹುದು. ಈ ಮಿಶ್ರಣವು ಹೆಚ್ಚುವರಿ ಕೊಬ್ಬನ್ನು ಹೊರಹಾಕುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಇದನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದು ಒಳ್ಳೆಯದು.

6. ಇತರೆ ಎಣ್ಣೆಗಳು

6. ಇತರೆ ಎಣ್ಣೆಗಳು

ತಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯದ ರಕ್ಷಣೆಗಾಗಿ ಬಾಲಿವುಡ್ ನಟನಟಿಯರು ಹಲವು ವಿಧದ ಎಣ್ಣೆಯನ್ನು ಬಳಕೆ ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಎಣ್ಣೆಗಳು ಮಾರುಕಟ್ಟೆ ಯಲ್ಲಿ ಸಿದ್ಧ ರೀತಿಯಲ್ಲಿ ಲಭ್ಯವಿರುತ್ತದೆ. ಉದಾಹರಣೆಗೆ ನೆಲ್ಲಿಕಾಯಿ, ಬಾದಾಮಿ, ಎಳ್ಳು ಇತ್ಯಾದಿ ಎಣ್ಣೆಗಳನ್ನು ಬಳಕೆ ಮಾಡುತ್ತಾರೆ.

7. ಹಸಿರು ತರಕಾರಿಗಳು

7. ಹಸಿರು ತರಕಾರಿಗಳು

ಉತ್ತಮ ಹೊಟ್ಟೆ ಉತ್ತಮ ದೈಹಿಕ ಆರೋಗ್ಯದ ಲಕ್ಷಣ. ಹಾಗಾಗಿ ಹೆಚ್ಚು ಹಸಿರು ತರಕಾರಿಗಳನ್ನು ಸೇವಿಸುವುದರಿಂದಾಗಿ ಆರೋಗ್ಯ ಕಾಪಾಡಿಕೊಳ್ಳಬಹುದು. ಹಸಿರು ತರಕಾರಿಗಳಿಂದಾಗಿ ದೇಹದ ಎಲ್ಲಾ ಟಾಕ್ಸಿನ್ ಗಳನ್ನು ಹೊರ ಹಾಕುವುದಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ ಫಿಟ್ ಮತ್ತು ಸುಂದರವಾಗಿ ಕಾಣುವ ಉದ್ದೇಶದಿಂದ ನಟನಟಿಯರು ಹಸಿರು ತರಕಾರಿಗಳ ಸೇವನೆ ಮಾಡುತ್ತಾರೆ.

8. ಹಾಲು ಮತ್ತು ಮೊಸರು

8. ಹಾಲು ಮತ್ತು ಮೊಸರು

ಹಾಲು ಮತ್ತು ಮೊಸರು ನಿಮ್ಮ ಹೊಳಪನ್ನು ಹೆಚ್ಚಿಸುತ್ತದೆ. ಯಾರು ಹಾಲು ಮತ್ತು ಮೊಸರನ್ನು ತಮ್ಮ ಚರ್ಮಕ್ಕೆ ಹಚ್ಚಿಕೊಳ್ಳುತ್ತಾರೋ ಅವರು ಈ ಫಲಿತಾಂಶವನ್ನು ಪಡೆಯಬಹುದು. ಇದು ಬಾಲಿವುಡ್ ನಟಿಯರ ಒಂದು ಅಧ್ಬುತ ಬ್ಯೂಟಿ ಸಿಕ್ರೇಟ್ ಆಗಿದೆ.

9. ಮೀನು

9. ಮೀನು

ನಿಮ್ಮ ದೇಹಾರೋಗ್ಯಕ್ಕೆ ಹೆಚ್ಚು ಪೋಷಕಾಂಶಗಳನ್ನು ಒದಗಿಸುವ ಉದ್ದೇಶದಿಂದಾಗಿ ನಿಮ್ಮ ಡಯಟ್ ನಲ್ಲಿ ಮೀನಿನ ಬಳಕೆ ಮಾಡುವುದು ಬಹಳ ಒಳ್ಳೆಯದು. ನಿಮ್ಮ ದೇಹಕ್ಕೆ ಅಗತ್ಯವಿರುವ ಆಂಟಿ ಆಕ್ಸಿಡೆಂಟ್ ಗಳನ್ನು ಇದು ಒದಗಿಸುತ್ತದೆ. ಚರ್ಮಕ್ಕೆ ವಯಸ್ಸಾಗದಂತೆ ತಡೆಯುವ ಶಕ್ತಿಯನ್ನು ಹೊಂದಿರುವ ಕೆಲವು ಪೋಷಕಾಂಶಗಳು ಮೀನಿನಿಂದ ಲಭ್ಯವಾಗುತ್ತದೆ.

10. ಮಾಯಿಶ್ಚರೈಸರ್

10. ಮಾಯಿಶ್ಚರೈಸರ್

ಅಧ್ಬುತ ಚರ್ಮ ಪಡೆಯುವುದಕ್ಕಾಗಿ ಅತೀ ಹೆಚ್ಚು ನೀರು ಕುಡಿಯುವುದು ಮಾತ್ರವೇ ಸಾಕಾಗುವುದಿಲ್ಲ. ನಿಮ್ಮ ಮುಖ ಮತ್ತು ದೇಹವನ್ನು ಮಾಯಿಶ್ಚರೈಸರ್ ನಿಂದ ಯಾವಾಗಲೂ ಕೂಡಿರುವಂತೆ ನೋಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ನಟಿಯರಾಗಿರುವ ನಗ್ರೀಸ್ ಫಕ್ರಿಗೆ ಮಾಯ್ಚರೈಸರ್ ಬಳಕೆಯ ಲಾಭಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ನಿಮ್ಮ ಚರ್ಮಕ್ಕೆ ಹೊಂದಾಣಿಕೆಯಾಗುವ ಮಾಯ್ಚರೈಸರ್ ನ್ನು ಬಳಕೆ ಮಾಡಿ. ಹಗಲಿನಲ್ಲಿ ಡೇ ಕ್ರೀಮ್ ಗಳು ಮತ್ತು ರಾತ್ರಿಯ ವೇಳೆಗೆ ನೈಟ್ ಕ್ರೀಮ್ ಗಳನ್ನು ಚರ್ಮಕ್ಕೆ ಬಳಕೆ ಮಾಡಿ. ನಿಮ್ಮ ಚರ್ಮದ ವಿಧವನ್ನು ತಿಳಿದುಕೊಳ್ಳಿ. ಮೃದುವಾದ ಮತ್ತು ಅಧ್ಭುತವಾಗಿರುವ ಚರ್ಮಕ್ಕೆ ಇದು ಬಹಳ ಪ್ರಯೋಜನಕಾರಿ.

11. ಸ್ವಚ್ಛತೆ

11. ಸ್ವಚ್ಛತೆ

ನಿಮ್ಮ ನೋಟವು ಅಧ್ಬುತವಾಗಿರಲು ಮುಖ್ಯವಾಗಿರುವ ಅಂಶವೇನೆಂದರೆ ಸ್ವಚ್ಛತೆ. ನಿಮ್ಮ ಚರ್ಮವನ್ನು ನೀವು ಸ್ವಚ್ಛಗೊಳಿಸದೆ ಇದ್ದರೆ ಚರ್ಮದ ರಂಧ್ರಗಳು ಮುಚ್ಚುತ್ತದೆ ಮತ್ತು ಚರ್ಮವು ಹೆಚ್ಚು ಕಾಲ ರೇಡಿಯಂಟ್ ಆಗಿ ಕಾಣುವುದಿಲ್ಲ. ಹಾಗಾಗಿ ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಬೇಕು.

12. ಮೇಕಪ್ ಸೀಕ್ರೆಟ್

12. ಮೇಕಪ್ ಸೀಕ್ರೆಟ್

ಪರದೆಯಲ್ಲಿ ನಟಿಯರ ಚರ್ಮವು ಸ್ವಚ್ಛ ವಾಗಿರುವಂತೆ ಕಾಣುವುದಕ್ಕೆ ಪ್ರಮುಖ ಕಾರಣ ಅವರ ಮೇಕಪ್ ಆರ್ಟಿಸ್ಟ್ ಗಳು ಹೇಗೆ ಬ್ರಷ್ ಗಳನ್ನು ಅವರ ಮುಖದ ಮೇಲೆ ಆಡಿಸಿದ್ದಾರೆ ಎಂಬುದು ಕೂಡ ಆಗಿರುತ್ತದೆ. ಮ್ಯಾಟ್ ಫಿನಿಶ್ ಅಥವಾ ಗ್ಲೋಯಿಂಗ್ ಮುಖ ಕಾಣುವುದಕ್ಕೆ ಇದು ಕೂಡ ಪ್ರಮುಖ ಕಾರಣ.

ಸುಂದರವಾಗಿ ಕಾಣುವುದು ಕೂಡ ಕಠಿಣವಾಗಿರುವ ಕೆಲಸ. ಅದರಲ್ಲೂ ಕೆಟ್ಟ ಚರ್ಮವಿದ್ದರೆ ಸುಂದರತೆ ಕಾಣುವುದೇ ಇಲ್ಲ. ಚರ್ಮದಲ್ಲಿರುವ ಸಮಸ್ಯೆಗಳನ್ನು ಕಾಣದಂತೆ ಮೇಕಪ್ ಮಾಡುವುದು ಕೂಡ ಒಂದು ಕಲೆ. ಬಾಲಿವುಡ್ ನಟಿಯರು ಪ್ರಮುಖವಾಗಿ ಮೂರು ಮೇಕಪ್ ಮೆಟಿರಿಯಲ್ ಗಳಿಂದ ಇದನ್ನು ಸಾಧಿಸುತ್ತಾರೆ.

ಸರಿಯಾದ ಫೌಂಡೇಷನ್ ನ್ನು ಚರ್ಮದ ಟೋನಿಗೆ ಸರಿ ಹೊಂದುವಂತೆ ಬಳಸುವುದು, ಕೌನ್ಸಿಲರ್ ಬಳಕೆ ಮತ್ತು ಉತ್ತಮ ಕಾಂಪ್ಯಾಕ್ಟ್ ನ್ನು ಬಳಕೆ ಚರ್ಮದ ಕಲೆಗಳಿ ಕಾಣದಂತೆ ಮಾಡುವುದು ಪ್ರಮುಖ ಮೂರು ಅಂಶಗಳಾಗಿವೆ. ಉತ್ತಮವಾಗಿ ಕಾಣುವುದಕ್ಕಾಗಿ ನಿಮಗೆ ಸರಿ ಹೊಂದುವ ಬಣ್ಣದ ಆಯ್ಕೆ ಬಹಳ ಮುಖ್ಯವಾಗಿರುತ್ತದೆ.

ಯಾವುದೇ ಮೇಕಪ್ ಟ್ರೆಂಡ್ ನ್ನು ಕುರುಡರಂತೆ ಅನುಸರಿಸಬೇಡಿ!

ಬಾಲಿವುಡ್ ನಟಿಯರಾದ ರೇಖಾ,ಹೇಮಮಾಲಿನಿ,ಐಶ್ವರ್ಯಾ, ಜೂಹಿ,ಸೊನಾಲಿ ಬೇಂದ್ರೆ ಮತ್ತು ಕರೀಷ್ಮಾ ವಯಸ್ಸಾದರೂ ಕೂಡ ಆರೋಗ್ಯಯುತ ಜೀವನಶೈಲಿ ರೂಢಿಸಿಕೊಂಡಿರುವುದಕ್ಕೆ ಇರುವ ಅದ್ಭುತ ಉದಾಹರಣೆಗಳಾಗಿದ್ದಾರೆ.,

ಬ್ಯೂಟಿ ಅನ್ನುವುದು ಪ್ರಕೃತಿ ದೈವದತ್ತವಾಗಿ ನೀಡುವುದು ಮಾತ್ರವಲ್ಲ ನೀವು ಅನುಸರಿಸುವ ಜೀವನಶೈಲಿಯಿಂದ ಕೂಡ ಅವಲಂಬಿತವಾಗಿರುತ್ತದೆ. ಹಾಗಾಗಿ ಸೌಂದರ್ಯದ ಬಗೆಗೆ ನಟಿಯರು ತೆಗೆದುಕೊಳ್ಳುವ ಕಾಳಜಿಯನ್ನು ನೀವೂ ತೆಗೆದುಕೊಂಡರೆ ಖಂಡಿತ ಸುಂದರವಾಗಿ ಕಾಣಿಸಬಹುದು.

English summary

Bollywood Beauty Secrets You should Know To Enhance Your Beauty

Here are bollywood beauty secrets you must know to enhance your beauty, have a look...
Story first published: Saturday, July 18, 2020, 17:43 [IST]
X
Desktop Bottom Promotion