Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೆನೆಸಿಟ್ಟ ಒಣದ್ರಾಕ್ಷಿ ನೀರನ್ನು ಚೆಲ್ಲುವ ಮುನ್ನ ಈ ವಿಚಾರ ಗೊತ್ತಿರಲಿ!
ಒಣದ್ರಾಕ್ಷಿ ತಿನ್ನುವುದರಿಂದ ನಮ್ಮ ದೇಹಕ್ಕೆ ತುಂಬಾನೇ ಒಳ್ಳೆಯದು. ಅದರಲ್ಲೂ ರಾತ್ರಿ ದ್ರಾಕ್ಷಿಯನ್ನು ನೆನೆಸಿ ನೀರಿನಲ್ಲಿ ಬೆಳಗ್ಗೆ ತಿಂದ್ರೆ ಇನ್ನೂ ಒಳ್ಳೆಯದು. ಆದ್ರೆ ಇದೇ ದ್ರಾಕ್ಷಿಯ ನೀರನ್ನು ನೀವು ಏನು ಮಾಡ್ತೀರಾ? ಖಂಡಿತ ಬಳಕೆ ಮಾಡಿರ್ಲಿಕಿಲ್ಲ. ಹೊರಗಡೆ ಚೆಲ್ಲಿರ್ತೀರಾ. ನಿಮಗೊತ್ತಾ? ದ್ರಾಕ್ಷಿ ನೆನೆಸಿಟ್ಟ ನೀರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಹಾಗಾದ್ರೆ ದ್ರಾಕ್ಷಿ ನೆನೆಸಿಟ್ಟ ನೀರನ್ನು ಯಾವ ರೀತಿ ಉಪಯೋಗಿಸಬೇಕು? ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದಾ? ಇದರಿಂದಾಗುವ ಆರೋಗ್ಯಕರ ಪ್ರಯೊಜನಗಳು ಏನು ಅನ್ನೋದನ್ನ ತಿಳಿಯೋಣ.

ಒಣದ್ರಾಕ್ಷಿ ನೀರನ್ನು ಬೆಳಗ್ಗೆ ಕುಡಿಯುವುದರಿಂದ ಏನು ಪ್ರಯೋಜನ?
ಒಣದ್ರಾಕ್ಷಿಗಳು ಹೆಚ್ಚಿನ ಸಂಖ್ಯೆಯ ಆಹಾರದ ಫೈಬರ್ ಅಂಶವನ್ನು ಹೊಂದಿದೆ. ಇದು ನಿಮ್ಮ ದೀರ್ಘಕಾಲದ ಹಸಿವನ್ನು ನೀಗಿಸುತ್ತದೆ. ಇದ್ರಲ್ಲಿ ಸುಮಾರು 3.3 ಗ್ರಾಂ ಫೈಬರ್ ಅಂಶವಿದೆ. ದ್ರಾಕ್ಷಿ ನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ, ನಿಮ್ಮ ತೂಕ ನಷ್ಟ ಆಹಾರದ ಭಾಗವಾಗಿಯೂ ಸಹ ನೀವು ಇದನ್ನು ಸೇವಿಸಬಹುದು. ಒಣದ್ರಾಕ್ಷಿ ನೀರಿನಲ್ಲಿ ಹೆಚ್ಚಿನ ಸಂಖ್ಯೆಯ ಜೀವಸತ್ವಗಳಿವೆ. ಇದನ್ನು ಪ್ರತಿದಿನ ಬೆಳಿಗ್ಗೆ ಕುಡಿಯುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

ಚರ್ಮಕ್ಕೆ ಆಗುವ ಪ್ರಯೋಜನಗಳೇನು?
1. ನಿಮ್ಮ ಚರ್ಮವನ್ನು ಕಲ್ಮಶ ಮುಕ್ತವಾಗಿಸುತ್ತದೆ
ಪ್ರತಿಯೊಬ್ಬ ಮಹಿಳೆಗೂ ಕಾಂತಿಯುತ ತ್ವಚೆಯನ್ನು ಪಡೆಯುವ ಆಸೆ ಖಂಡಿತ ಇರುತ್ತದೆ. ಆದರೆ ನಮ್ಮ ರಕ್ತವನ್ನು ಟಾಕ್ಸಿನ್‌ಗಳು, ತ್ಯಾಜ್ಯ ವಸ್ತುಗಳು ಮತ್ತು ಹಲವಾರು ಇತರ ಕಲ್ಮಶಗಳಿಂದ ಮುಕ್ತವಾಗಿಡಲು ನಮಗೆ ಕಷ್ಟವಾಗುತ್ತದೆ. ಇದರ ಪರಿಣಾಮವಾಗಿ ನಮ್ಮ ಚರ್ಮವು ಶುಷ್ಕ, ಮೊಡವೆ-ಪೀಡಿತವಾಗುತ್ತದೆ.
ಕಪ್ಪು ಒಣದ್ರಾಕ್ಷಿಗಳು ನೈಸರ್ಗಿಕ ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿರುವುದರಿಂದ ಅವು ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯಗಳನ್ನು ವೇಗಗೊಳಿಸುತ್ತವೆ. ಇದಲ್ಲದೆ, ನಮ್ಮ ದೇಹದಿಂದ ಹಾನಿಕಾರಕ ಸ್ವತಂತ್ರ ರಾಡಿಕಲ್ಗಳನ್ನು ತೆಗೆದುಹಾಕುತ್ತವೆ. ಇದು ನಮಗೆ ಸ್ವಚ್ಛ ಕಾಂತಿಯುತ ಚರ್ಮವನ್ನು ಪಡೆಯಲು ಸಹಕಾರಿಯಾಗಿದೆ.

2. ಯಂಗ್ ಆಗಿ ಕಾಣಿಸಿಕೊಳ್ಳಬಹುದು
ಕಪ್ಪು ಒಣದ್ರಾಕ್ಷಿಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಅಗತ್ಯ ಫೈಟೊಕೆಮಿಕಲ್‌ಗಳ ಅಂಶವು ಅಧಿಕವಾಗಿವೆ. ಈ ಎರಡೂ ಸಂಯುಕ್ತಗಳು ನಮ್ಮ ಚರ್ಮದ ಕೋಶಗಳನ್ನು ಸೂರ್ಯನಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಉಂಟಾಗುವ ಸಂಭಾವ್ಯ ಹಾನಿಯಿಂದ ರಕ್ಷಿಸಲು ಸಮರ್ಥವಾಗಿವೆ. ಇನ್ನೂ ಇದನ್ನು ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ನಮ್ಮ ಸ್ನಾಯುವಿನ ನಾರುಗಳ ಸ್ಥಿತಿಸ್ಥಾಪಕತ್ವವು ಹೆಚ್ಚಾಗುತ್ತದೆ. ಪರಿಣಾಮವಾಗಿ ನಮ್ಮ ವಯಸ್ಸು ಆದಷ್ಟು ಬೇಗ ಗೋಚರವಾಗೋದಿಲ್ಲ.
3. ಒಣದ್ರಾಕ್ಷಿ ನೀರಿನಲ್ಲಿ ವಿಟಮಿನ್ ಎ ಮತ್ತು ಇ ಹೆಚ್ಚಿನ ಅಂಶವು ನಿಮ್ಮ ಚರ್ಮಕ್ಕೆ ಒಳಗಿನಿಂದ ಆಳವಾದ ಪೋಷಣೆಯನ್ನು ಒದಗಿಸುತ್ತದೆ.
4. ಒಣದ್ರಾಕ್ಷಿ ನೀರು ನಿಮ್ಮ ಚರ್ಮದಲ್ಲಿ ಅಗತ್ಯವಾದ ಪೋಷಕಾಂಶಗಳನ್ನು ಪುನರ್ ಸ್ಥಾಪಿಸುತ್ತದೆ. ಮತ್ತು ಚರ್ಮದ ಮೇಲಿನ ಎಲ್ಲಾ ಗುರುತುಗಳು ಅಥವಾ ಕಲೆಗಳನ್ನು ನಿವಾರಿಸುತ್ತದೆ. ಮೊಡವೆ ಸಮಸ್ಯೆಗಳನ್ನು ದೂರವಿಡುವಲ್ಲಿಯೂ ಇದು ಸಹಾಯಕವಾಗಿದೆ.
5. ಒಣದ್ರಾಕ್ಷಿಯಲ್ಲಿ ವಿಟಮಿನ್ ಸಿ ಮತ್ತು ಆಹಾರದ ಫೈಬರ್‌ಗಳು ಸಮೃದ್ಧವಾಗಿದೆ. ಇದು ಕರುಳಿನ ಆರೋಗ್ಯಕ್ಕೆ ತಂಬಾನೇ ಒಳ್ಳೆಯದು ಹಾಗೂ ಜೀರ್ಣಕ್ರಿಯೆಗೂ ಸಹಾಯಕವಾಗಿದೆ.
6. ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಕಾರಿಯಾಗಿದೆ ಮತ್ತು ನಿಮ್ಮ ಚರ್ಮಕ್ಕೆ ಸ್ಪಷ್ಟವಾದ ಹೊಳಪನ್ನು ನೀಡುತ್ತದೆ. ನಿಮ್ಮ ಚರ್ಮದ ಮೇಲಿನ ಕಲೆಗಳು ಮಾಯವಾಗುತ್ತದೆ.
7. ಒಣದ್ರಾಕ್ಷಿಯ ನೀರು ಫೈಟೊಕೆಮಿಕಲ್ಸ್ ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಇದು ಸೂರ್ಯನ ಬೆಳಕಿನಿಂದ ಆಗುವ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ.

8. ಕೂದಲ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ
ಪ್ರತಿ ನಿತ್ಯ ಒಣದ್ರಾಕ್ಷಿ ಹಾಗೂ ಅದರ ನೀರನ್ನು ಸೇವಿಸುದರಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು. ದ್ರಾಕ್ಷಿಯಲ್ಲಿ ಕಬ್ಬಿಣದ ಅಂಶ ಅಧಿಕ ಪ್ರಮಾಣದಲ್ಲಿದೆ. ಇದು ನಮ್ಮ ದೇಹಕ್ಕೆ ಪ್ರಮುಖ ಮತ್ತು ಅಗತ್ಯವಾದ ಪೋಷಕಾಂಶವಾಗಿದೆ. ಇದರಿಂದ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಹೀಗಾಗಿ ಇದು ಕೂದಲು ಬೆಳೆಯಲು ಪ್ರಚೋದನೆ ನೀಡುತ್ತದೆ.

9. ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು
ದಿನನಿತ್ಯದ ಕಪ್ಪು ಒಣದ್ರಾಕ್ಷಿ ಹಾಗೂ ಅದರ ನೀರನ್ನು ಸೇವಿಸುವುದರಿಂದ ನಿಮ್ಮ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಬಹುದು. ಇದರಲ್ಲಿ ಕಬ್ಬಿಣದ ಅಂಶದ ಜೊತೆಗೆ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದೆ. ಇದು ಖನಿಜವನ್ನು ವೇಗವಾಗಿ ಹೀರಿಕೊಳ್ಳಲು ಮತ್ತು ಕೂದಲಿಗೆ ಸರಿಯಾದ ಪೋಷಣೆಯನ್ನು ಒದಗಿಸಲು ನೆರವಾಗುತ್ತದೆ. ಆದ್ದರಿಂದ, ಕಪ್ಪು ಒಣದ್ರಾಕ್ಷಿಗಳನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ಕೂದಲಿನ ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಲು ತುಂಬಾನೇ ಸಹಕಾರಿಯಾಗಿದೆ.
ಹೊರಗಿನ ಜಂಕ್ ಫುಡ್‌ಗಳನ್ನು ತಿನ್ನುವುದರ ಬದಲು ಆರೋಗ್ಯಕಾರಿ ವಸ್ತುಗಳನ್ನು ಸೇವಿಸುವುದರಿಂದ ತುಂಬಾನೇ ಆರೋಗ್ಯಕಾರಿ ಲಾಭವಿದೆ. ಅವುಗಳಲ್ಲಿ ಒಣದ್ರಾಕ್ಷಿ ನೀರು ಕೂಡ ಒಂದು. ನಿತ್ಯ ಇದರ ಸೇವನೆಯಿಂದ ಅನೇಕ ಪ್ರಯೋಜನಗಳಿದೆ.



Click it and Unblock the Notifications