Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಇದೋ ಕೇಳಿ ಇಲ್ಲಿ, ಫೇಸ್ ಮಸಾಜ್ ಎಂದರೆ ಹೀಗಿರಬೇಕು!
ಮಸಾಜ್ ಎಂದರೆ ಬೋರಲಾಗಿ ಮಲಗಿಸಿ ಬೆನ್ನು, ಸೊಂಟ ಕುತ್ತಿಗೆಗೆ ಮಾಡುವ ಮಸಾಜ್ ಮಾತ್ರ ಎಂದು ಹೆಚ್ಚಿನವರು ತಿಳಿದಿದ್ದಾರೆ. ಆದರೆ ನಮ್ಮ ಮುಖದ ಸ್ನಾಯುಗಳಿಗೂ ಮಸಾಜ್ ಬೇಕು ಎಂದು ಹೆಚ್ಚಿನವರು ತಿಳಿದುಕೊಂಡಿಲ್ಲ. ಇದರಿಂದ ಮುಖದ ಸ್ನಾಯುಗಳು ಸಡಿಲಗೊಳ್ಳುತ್ತವೆ ಮತ್ತು ರಕ್ತಸಂಚಾರ ಉತ್ತಮಗೊಳ್ಳುತ್ತದೆ.
ಇದರಿಂದ ಮುಖದ ಚರ್ಮದ ಅಡಿಯಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳು ಸೂಕ್ಷ್ಮರಂಧ್ರಗಳ ಮೂಲಕ ಹೊರಬರಲು ನೆರವಾಗುತ್ತದೆ. ಅಲ್ಲದೇ ವಿಶೇಷವಾಗಿ ಕಣ್ಣುಗಳ ಅಡಿಯ ಚರ್ಮದಲ್ಲಿ ಕೊಬ್ಬು ಸಂಗ್ರಹವಾಗದಿರಲು ಮತ್ತು ಚೀಲದಂತೆ ತುಂಬಿಕೊಳ್ಳದಿರಲು ನೆರವಾಗುತ್ತದೆ.

ಆದರೆ ಮಸಾಜ್ ಮಾಡುವುದು ಎಂದರೆ ಪಾತ್ರೆ ತಿಕ್ಕಿದಂತಲ್ಲ, ಬದಲಿಗೆ ನಿಮ್ಮ ಚರ್ಮಕ್ಕೆ ಸೂಕ್ತವಾದ ತೇವಕಾರಕ ಅಥವಾ ರಾತ್ರಿಯ ಕ್ರೀಂ ಬಳಸಿ ಒಂದು ಸೂಕ್ತ ವಿಧಾನದಲ್ಲಿ ತಕ್ಕಷ್ಟು ಮಾತ್ರ ಒತ್ತಡದೊಂದಿಗೆ ಮಸಾಜ್ ಮಾಡಬೇಕು.
ಮುಖದ ಮಸಾಜ್‌ನ ಅತ್ಯಂತ ಅಗತ್ಯವಾದ ಎಚ್ಚರಿಕೆ ಎಂದರೆ ಒತ್ತಡವನ್ನು ಕೇವಲ ಕೆಳಗಿನಿಂದ ಮೇಲಕ್ಕೆ ಬರುವಂತೆ ಮಾತ್ರ ಮಸಾಜ್ ಮಾಡಬೇಕೇ ವಿನಃ ಸರ್ವಥಾ ಮೇಲಿನಿಂದ ಕೆಳಕ್ಕೆ ಅಲ್ಲ. ಮುಖದ ಎಲ್ಲಾ ಭಾಗಕ್ಕೂ ಒಂದೇ ರೀತಿಯ ಮಸಾಜ್ ಸಹಾ ಸಲ್ಲದು. ಯಾವ ಅಂಗಗಳಿಗೆ ಹೇಗೆ ಮಸಾಜ್ ಮಾಡಬೇಕು ಎಂಬುದನ್ನು ಈಗ ನೋಡೋಣ: ತ್ವಚೆಯ ಸೌಂದರ್ಯಕ್ಕಾಗಿ ಫೇಶಿಯಲ್ ಮಸಾಜ್
ತುಟಿಗಳು
ನಿಮ್ಮ ಬೆರಳುಗಳ ತುದಿಯನ್ನು ಗಲ್ಲದ ಬಳಿಯಿಂದ ಪ್ರಾರಂಭಿಸಿ ಕೊಂಚವೇ ಒತ್ತಡದ ಮೂಲಕ ಮೇಲಕ್ಕೆ ಬರುವಂತೆ ಮಸಾಜ್ ಮಾಡಿ. ಬೆರಳುಗಳು ತುಟಿಗಳನ್ನು ದಾಟಿ ಮೂಗಿನ ಕೆಳಭಾಗಕ್ಕೆ ಬಂದು ಬಳಿಕ ಮೂಗಿನ ಪಕ್ಕದಿಂದ ಹಣೆಯ ನಡುಭಾಗಕ್ಕೆ ಬರುವಂತೆ ಮಸಾಜ್ ಮಾಡಿ. ಹೀಗೇ ಕೊಂಚಕೊಂಚವಾಗಿ ತುಟಿಯ ಅಷ್ಟೂ ಅಗಲಕ್ಕೆ ಮಸಾಜ್ ವಿಸ್ತರಿಸಿ.
ಕೆನ್ನೆಗಳು
ಬಳಿಕ ನಿಮ್ಮ ನಾಲ್ಕೂ ಬೆರಳುಗಳ ತುದಿ ಮೂಗಿನ ಪಕ್ಕ ಬರುವಂತೆ ಇರಿಸಿ ಕೊಂಚವೇ ಒತ್ತಡದಿಂದ ಕಿವಿಯವರೆಗೆ ಬರುವಂತೆ ಮಸಾಜ್ ಮಾಡಿ.
ಕಿವಿಗಳು
ಒಂದು ಬೆರಳು ಕಿವಿಯ ಹಿಂಭಾಗದಲ್ಲಿಯೂ, ಇನ್ನೊಂದು ಮುಂಭಾಗದಲ್ಲಿಯೂ ಬರುವಂತೆ ಹಿಡಿದು ಕಿವಿಯ ವಾರೆಕೋರೆಗಳು ಹೇಗಿವೆಯೋ ಹಾಗೇ ಕೊಂಚವೇ ಒತ್ತಡದಿಂದ ಮಸಾಜ್ ಮಾಡಿ. ಅಪ್ಸರೆಯಂತಹ ತ್ವಚೆಗಾಗಿ ತಾಜಾ ಹಣ್ಣಿನ ಫೇಸ್ ಪ್ಯಾಕ್
ದವಡೆ
ನಿಮ್ಮ ಹಲ್ಲುಗಳನ್ನು ಕೊಂಚ ಕಚ್ಚಿ ಹಿಡಿಯಿರಿ. ಹೀಗೆ ಹಿಡಿದಾಗ ದೃಢವಾಗುವ ದವಡೆ ಮತ್ತು ದವಡೆಯ ಕೆಳಭಾಗದಲ್ಲಿ ವೃತ್ತಾಕಾರದಲ್ಲಿ ಬೆರಳಿನ ತುದಿಯಿಂದ ಮಸಾಜ್ ಮಾಡಿ.
ಹುಬ್ಬುಗಳು
ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳಿನಿಂದ ಹುಬ್ಬುಗಳ ಕೂದಲನ್ನು ಕೀಳುವ ಪರಿಯಲ್ಲಿ ಕೊಂಚವೇ ಒತ್ತಡದಿಂದ ಹಿಂಡುತ್ತಾ ಮಧ್ಯಭಾಗದಿಂದ ಇನ್ನೊಂದು ತುದಿಯತ್ತ ಬರುವಂತೆ ಮಸಾಜ್ ಮಾಡಿ. ಹೀಗೇ ಇನ್ನೊಂದು ಬದಿಗೂ ಮಾಡಿ. ಆದರೆ ವಿರುದ್ದ ದಿಕ್ಕಿನಲ್ಲಿ ಸಲ್ಲದು.
ಹಣೆ
ಕುಂಕುಮವಿಡುವ ಹಣೆಯ ಭಾಗದಿಂದ ಕೂದಲು ಪ್ರಾರಂಭವಾಗುವತ್ತ ಬರುವಂತೆ ಬೆರಳಿನ ತುದಿಯಿಂದ ಕೊಂಚವೇ ಒತ್ತಡದಿಂದ ಮಸಾಜ್ ಮಾಡಿ. ಇದೂ ಮೇಲ್ಮುಖವಾಗಿ ಮಾತ್ರ, ಕೆಳಮುಖ ಮಸಾಜ್ ಸಲ್ಲದು.
ಕಣ್ಣುಗಳು
ಕೈಬೆರಳುಗಳು ಕಣ್ಣುಗಳ ಸುತ್ತಲೂ ಬರುವಂತೆ ಇರಿಸಿ ಕೊಂಚವೇ ಒತ್ತಡದಿಂದ ಮೇಲ್ಮುಖವಾಗಿ ಸೆಳೆಯಿರಿ. ಬಳಿಕ ಕಣ್ಣುಮುಚ್ಚಿ ಹೆಬ್ಬೆಟ್ಟಿನಿಂದ ಕೊಂಚವೇ ಒತ್ತಡ ಹಾಕಿ ಕೆಲವು ಸೆಕೆಂಡುಗಳ ಕಾಲ ಹಾಗೇ ಇರಲು ಬಿಡಿ.
ಮುಖದ ಇತರ ಭಾಗಗಳು
ಮಸಾಜ್ ದೊರೆತಿರದ ಇತರ ಭಾಗಗಳಾದ ಕುತ್ತಿಗೆ ಮತ್ತು ಕಣ್ಣಿನ ಕೆಳಭಾಗ ಮೊದಲಾದವುಗಳನ್ನು ಬೆರಳುಗಳನ್ನು ಕುತ್ತಿಗೆಯ ಕೆಳಭಾಗದಿಂದ ಹಣೆಯವರೆಗೆ ಬರುವಂತೆ ಕೆಳಗಿನಿಂದ ಮೇಲಕ್ಕೆ ಬರುವಂತೆ ನಯವಾಗಿ ಮಸಾಜ್ ಮಾಡಿ. ಮುಖದ ಮಸಾಜ್ ಮುಗಿದ ಬಳಿಕ ಕೊಂಚ ಹೊತ್ತು ಹಾಗೇ ಕಣ್ಣುಗಳನ್ನು ಮುಚ್ಚಿ ವಿಶ್ರಮಿಸಿ ಬಳಿಕ ಒದ್ದೆಯಾದ ಸ್ಪಂಜು ಬಳಸಿ ಹೆಚ್ಚುವರಿ ಎಣ್ಣೆ ಅಥವಾ ಕ್ರೀಂ ಅನ್ನು ಒರೆಸಿ ತೆಗೆಯಿರಿ.



Click it and Unblock the Notifications



