Latest Updates
-
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್! -
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್
ಒಮ್ಮೆ ದಾಳಿಂಬೆ ಸಿಪ್ಪೆಯ 'ಮೌತ್ವಾಶ್' ಬಳಸಿ ನೋಡಿ...
ಬಾಯಿಯ ಸ್ವಚ್ಛತೆ ಮತ್ತು ಹಲ್ಲಿನ ಆರೈಕೆಗಾಗಿ ಹೆಚ್ಚಿನವರು ಈಗೀಗ ಮೌತ್ ವಾಶ್ ಬಳಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ನಿಮಗೆ ಬೇಕಾದಂತೆ ವಿವಿಧ ರೀತಿಯ ಮೌತ್ ವಾಶ್ಗಳು ಲಭ್ಯವಿದೆ. ಆದರೆ ಅದರಲ್ಲಿ ರಾಸಾಯನಿಕಗಳು ಇದ್ದೇ ಇರುತ್ತದೆ. ಇಂತಹ ಮೌತ್ ವಾಶ್ಗಳು ಬಾಯಿಯಲ್ಲಿ ಕೀಟಾಣುಗಳನ್ನು ಹೊರಹಾಕಿದರೂ ಅದರಿಂದ ಸಾಕಷ್ಟು ಅಡ್ಡಪರಿಣಾಮಗಳು ಉಂಟಾಗುವುದು ಖಚಿತ. ಇದರಿಂದ ಗಿಡಮೂಲಿಕೆಗಳ ಮೌತ್ ವಾಶ್ ಅನ್ನು ಬಳಸಿಕೊಂಡರೆ ಅದರಿಂದ ತುಂಬಾ ಲಾಭವಿದೆ. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮವೂ ಇಲ್ಲ.

ಇದಕ್ಕಾಗಿಯೇ ಮನೆಯಲ್ಲಿ ಮಾಡುವಂತಹ ದಾಳಿಂಬೆ ಸಿಪ್ಪೆಯ ಮೌತ್ ವಾಶ್ ಬಗ್ಗೆ ಈ ಲೇಖನದಲ್ಲಿ ಹೇಳಿಕೊಡಲಿದ್ದೇವೆ. ದಾಳಿಂಬೆ ಹಣ್ಣಿನಲ್ಲಿ ಇರುವಂತೆ ದಾಳಿಂಬೆಯ ಸಿಪ್ಪೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಹಲ್ಲುಗಳು ಕೆಡುವುದು, ಬಾಯಿ ವಾಸನೆ ಮತ್ತು ಬಾಯಿಯ ಅಲ್ಸರ್ ನಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಬಾಯಿ ದುರ್ವಾಸನೆಗೆ ನೈಸರ್ಗಿಕ ಮೌತ್ವಾಶ್
ಸ್ಟ್ರೆಪ್ಟೋಕಾಕಸ್ ಮ್ಯುಟಾನ್ಸ್ ಎನ್ನುವ ಬ್ಯಾಕ್ಟೀರಿಯಾವು ಬಾಯಿಯೊಳಗೆ ಸೇರಿಕೊಂಡು ಹಲ್ಲುಗಳ ಸವೆತ, ಬಾಯಿ ವಾಸನೆ ಮತ್ತು ಬ್ಯಾಕ್ಟೀರಿಯಾ ಶೇಖರಣೆ ಮಾಡುತ್ತದೆ. ಆದರೆ ದಾಳಿಂಬೆ ಸಿಪ್ಪೆಯಲ್ಲಿರುವ ಕೆಲವೊಂದು ಅಂಶಗಳು ಬ್ಯಾಕ್ಟೀರಿಯಾದ ನಿವಾರಣೆ ಮಾಡಿ ಹಲ್ಲುಗಳ ರಕ್ಷಣೆ ಮತ್ತು ಬಾಯಿ ವಾಸನೆ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ.
ದಾಳಿಂಬೆ ಸಿಪ್ಪೆಯಲ್ಲಿರುವ ಕ್ಯಾನ್ಸರ್ ನಿರೋಧಕ ಚಟುವಟಿಕೆಯು ಬಾಯಿಯ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಇನ್ನು ತಡ ಮಾಡುವುದು ಯಾಕೆ? ತಕ್ಷಣ ದಾಳಿಂಬೆ ಸಿಪ್ಪೆಯ ಮೌತ್ ವಾಶ್ ಮಾಡಿಕೊಳ್ಳಿ. ತಯಾರಿಸುವುದು ಹೇಗೆಂದು ಮುಂದೆ ಓದುತ್ತಾ ತಿಳಿಯಿರಿ. ದಾಳಿಂಬೆ ಸಿಪ್ಪೆ ಬಳಸಿ, ಸೌಂದರ್ಯ ವೃದ್ಧಿಸಿ
ಬಳಸುವುದು ಹೇಗೆ?
•ದಾಳಿಂಬೆ ಹಣ್ಣನ್ನು ನಾಲ್ಕು ತುಂಡುಗಳಾಗಿ ಮಾಡಿಕೊಂಡು ಸಿಪ್ಪೆಯನ್ನು ಬೇರ್ಪಡಿಸಿ. ಹಣ್ಣಿನ ಹಳದಿ ಭಾಗವನ್ನು
ತೆಗೆಯಿರಿ. ಇದು ತುಂಬಾ ಕಯಿಯಾಗಿರುತ್ತದೆ.
•ಕೆಲವು ದಿನಗಳ ಕಾಲ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ. ಸಿಪ್ಪೆಯಲ್ಲಿನ ತೇವಾಂಶವೆಲ್ಲವೂ ಹೋಗಬೇಕು.
•ಒಣಗಿದ ಸಿಪ್ಪೆಯನ್ನು ಮಿಕ್ಸಿಗೆ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಸಿಪ್ಪೆಯ ತುಂಡು ಉಳಿದುಕೊಳ್ಳಬಾರದು ಎನ್ನುವುದನ್ನು ದೃಢಪಡಿಸಿಕೊಳ್ಳಿ.
•ಒಂದು ಲೀಟರ್ ನೀರಿಗೆ 20 ಮಿ.ಗ್ರಾಂ. ದಾಳಿಂಬೆ ಸಿಪ್ಪೆಯ ಹುಡಿಯನ್ನು ಹಾಕಿಕೊಂಡು ನೀರನ್ನು ಬಿಸಿ ಮಾಡಿ. ಇದನ್ನು ಸೋಸಿಕೊಂಡು ತಂಪಾದ ಬಳಿಕ ಬಳಸಿ. ಇದನ್ನು ಪ್ರಿಡ್ಜ್ನಲ್ಲೂ ಇಟ್ಟು ಬಳಸಿಕೊಳ್ಳಬಹುದು. ಸ್ವರ್ಗಲೋಕದ ಹಣ್ಣು ದಾಳಿಂಬೆ ಸಿಪ್ಪೆಯ ಔಷಧೀಯ ಗುಣಗಳೇನು?



Click it and Unblock the Notifications

