Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸ್ನಾನ ಮಾಡುವಾಗ ಈ ರೀತಿಯ ತಪ್ಪು ಮಾತ್ರ ಮಾಡಬೇಡಿ!
ಕೆಲವೊಂದು ಕೆಲಸಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಅದರಲ್ಲಿ ಬೆಳಿಗ್ಗೆ ಎದ್ದು ಹೋಗಿ ಸ್ನಾನ ಮಾಡುವುದು, ವಾಕಿಂಗ್‌ಗೆ ಹೋಗುವುದು, ಉಪಹಾರ ಮಾಡುವುದು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸ್ನಾನ ಮಾಡದೆ ಇದ್ದರೆ ಅದು ನಮಗೆ ಮಾತ್ರವಲ್ಲದೆ ನಮ್ಮ ಸಮೀಪದಲ್ಲಿ ಇರುವವರಿಗೂ ತೊಂದರೆಯನ್ನು ಉಂಟು ಮಾಡುತ್ತದೆ.
ಸ್ನಾನ ಮಾಡುವುದು ಅತೀ ಅಗತ್ಯವಾಗಿದೆ. ಎರಡೂ ಹೊತ್ತು ಸ್ನಾನ ಮಾಡುವವರು ಇದ್ದಾರೆ. ಸ್ನಾನ ಮಾಡುವುದರಿಂದ ದೇಹದ ಆಯಾಸ ಕಡಿಮೆಯಾಗಿ ಉಲ್ಲಾಸ ಉಂಟಾಗುತ್ತದೆ. ಬಿಸಿ ನೀರಿನ ಸ್ನಾನ, ಎಣ್ಣೆ ಸ್ನಾನ ಹಾಗೂ ತಣ್ಣೀರಿನ ಸ್ನಾನ ಹೀಗೆ ಹಲವಾರು ವಿಧದಲ್ಲಿ ಜನರು ಸ್ನಾನ ಮಾಡುತ್ತಾರೆ. ಆದರೆ ಸ್ನಾನ ಮಾಡುವಾಗ ನಾವು ಮಾಡುವಂತಹ ಕೆಲವೊಂದು ತಪ್ಪುಗಳ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಇದನ್ನು ಈ ಲೇಖನದಲ್ಲಿ ತಿಳಿದುಕೊಂಡು ಮುಂದೆ ಅದನ್ನು ತಿದ್ದುಕೊಳ್ಳಬಹುದು.

ಬಿಸಿ ನೀರಿನ ಸ್ನಾನ
ಬಿಸಿ ನೀರಿನ ಸ್ನಾನ ಮಾಡುವುದರಿಂದ ದೇಹದಲ್ಲಿನ ಸ್ನಾಯಗಳಿಗೆ ಆರಾಮ ಸಿಗಬಹುದು. ಆದರೆ ಚರ್ಮದಲ್ಲಿನ ನೈಸರ್ಗಿಕ ಎಣ್ಣೆಯು ಬಿಸಿ ನೀರಿನಿಂದಾಗಿ ಕಳೆದುಹೋಗುವುದು. ಬಿಸಿ ನೀರಿನ ಸ್ನಾನದಿಂದ ಚರ್ಮವು ಒಣಗಿದಂತೆ ಆಗಬಹುದು. ತುಂಬಾ ತಂಪಾದ ಹವಾಮಾನವಿರುವ ಪ್ರದೇಶದಲ್ಲಿ ವಾಸಿಸುತ್ತಾ ಇದ್ದರೆ ಆಗ ಅತಿ ಬಿಸಿ ನೀರಿನ ಬದಲಿಗೆ ಉಗುರು ಬೆಚ್ಚಗಿನ ನೀರನ್ನು ಬಳಸಿ. 'ತಣ್ಣೀರಿನ ಸ್ನಾನ' ನಿಜಕ್ಕೂ ಇದು ಆರೋಗ್ಯಕ್ಕೆ ಸೋಪಾನ....
ಸ್ನಾನ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದು
ಸ್ನಾನ ಮಾಡಲು ನಿಮಗೆ ಅರ್ಧ ಗಂಟೆ ಬೇಕಾಗುತ್ತದೆಯಾ? ಹಾಗಾದರೆ ಇದನ್ನು ಓದಿ. ಯಾಕೆಂದರೆ ದೀರ್ಘ ಸಮಯ ಸ್ನಾನ ಮಾಡುವುದರಿಂದಾಗಿ ಚರ್ಮದಲ್ಲಿನ ನೈಸರ್ಗಿಕ ಎಣ್ಣೆಯಂಶವು ಕಡಿಮೆಯಾಗುವುದು. ಇದರಿಂದ ಚರ್ಮದಲ್ಲಿ ತೇವಾಂಶವು ಉಳಿದುಕೊಳ್ಳುವುದಿಲ್ಲ. ಸ್ನಾನ ಮಾಡಲು 10 ನಿಮಿಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳದಿರಿ.
ಸೋಪಿನ ಸುವಾಸನೆ ನಿಮಗಿಷ್ಟವೇ?
ಕೆಲವೊಂದು ಸೋಪುಗಳಲ್ಲಿ ಸುವಾಸನೆಗೆ ಬಳಸಿರುವಂತಹ ರಾಸಾಯನಿಕಗಳು ಚರ್ಮದ ತೇವಾಂಶವನ್ನು ಕಡಿಮೆ ಮಾಡಬಹುದು. ಇದು ಚರ್ಮವು ಒಣಗುವಂತೆ ಅಥವಾ ಜೋತು ಬೀಳುವಂತೆ ಮಾಡಬಹುದು. ಪರಾಬೆನ್ ಗಳಿಂದ ಸಂಸ್ಕರಣೆಗೊಂಡ ವಿಷಪೂರಿತ, ಕೃತಕ ಬಣ್ಣ, ಸುವಾಸನೆ, ಸೋಡಿಯಂ ಲೌರ್ಯಲ್ ಸಲ್ಫೇಟ್ ಮತ್ತು ಫಾರ್ಮಲ್ಡಿಹೈಡ್ ಹೊಂದಿರುವಂತಹ ಸೋಪುಗಳಿಂದ ದೂರವಿರಿ. ಸಾರಭೂತ ತೈಲವನ್ನು ಹೊಂದಿರುವ ಸೋಪುಗಳನ್ನು ಬಳಸಿ.
ಮೈಯುಜ್ಜುವ ಬ್ರಶ್ ಬದಲಿಸದೆ ಇರುವುದು
ಚರ್ಮವನ್ನು ಮೈಯುಜ್ಜುವ ಬ್ರಶ್ ನಿಂದ ಉಜ್ಜಿಕೊಂಡರೆ ಸತ್ತ ಚರ್ಮದ ಕೋಶಗಳು ಎದ್ದು ಹೋಗುವುದು. ಇದು ಒಳ್ಳೆಯ ಅಭ್ಯಾಸ. ಆದರೆ ಹಳೆದ ಬ್ರಶ್ ಗಳಲ್ಲಿ ಬ್ಯಾಕ್ಟೀರಿಯಾವು ಶೇಖರಣೆಯಾಗಿರುತ್ತದೆ. ಇದು ನಿಮ್ಮ ಚರ್ಮಕ್ಕೆ ಹಾನಿಕರ. ಇದರಿಂದ ಬ್ರಶ್ ಅನ್ನು ತಿಂಗಳಿಗೊಮ್ಮೆ ಬದಲಾಯಿಸುತ್ತಾ ಇರಿ. ಬ್ಯಾಕ್ಟೀರಿಯಾವಿರುವ ಬ್ರಶ್‌ನಿಂದ ಮೈಯುಜ್ಜಿಕೊಂಡರೆ ತುರಿಕೆ ಕಾಣಿಸಿಕೊಳ್ಳಬಹುದು. ಬ್ರಶ್ ಬದಲಾಗಿ ಬಟ್ಟೆಯನ್ನು ಬಳಸಿದರೆ ಒಳ್ಳೆಯದು.
ಸರಿಯಾಗಿ ತೊಳೆಯಿರಿ
ಸೋಪು ಹಾಗೂ ತಲೆಗೆ ಬಳಸುವಂತಹ ಯಾವುದೇ ಉತ್ಪನ್ನಗಳನ್ನು ಮೊದಲು ಸರಿಯಾಗಿ ತೊಳೆದುಕೊಂಡರೆ ಒಳ್ಳೆಯದು. ಇಲ್ಲವಾದರೆ ಅದರಲ್ಲಿನ ಬ್ಯಾಕ್ಟೀರಿಯಾಗಳು ಚರ್ಮದಲ್ಲಿ ಸೇರಿಕೊಂಡು ರಂಧ್ರವನ್ನು ತಡೆದು ಮೊಡವೆಗಳಿಗೆ ಕಾರಣವಾಗಬಹುದು. ಕೂದಲನ್ನು ಸರಿಯಾಗಿ ತೊಳೆದುಕೊಳ್ಳಿ.



Click it and Unblock the Notifications



