Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಅಂದದ ಪಾದಕ್ಕೆ, ಮನೆಯಲ್ಲೇ ಪಾರ್ಲರ್ ಮಟ್ಟದ ಆರೈಕೆ
ನಮ್ಮ ಕಾಲು ಮತ್ತು ಪಾದಗಳನ್ನು ಅವರಿತವಾಗಿ ನಾವು ದುಡಿಸಿಕೊಳ್ಳುತ್ತೇವೆ. ಹೀಲ್ಸ್ ಮತ್ತು ಇತರೆ ಆರಾಮದಾಯಕ ಚಪ್ಪಲಿಗಳನ್ನು ಧರಿಸಿ ಅತ್ತಿಂದಿತ್ತ ಓಡಾಡುತ್ತೇವೆ. ನಮ್ಮ ಕಾಲುಗಳ ಸಹಾಯದಿಂದಲೇ ಎಷ್ಟೋ ಕಿಲೋಮೀಟರ್ ನಡೆಯುವುದು, ಓಡುವುದು, ಹೀಗೆ ಕಾಲುಗಳು ಮತ್ತು ಪಾದಗಳೇ ಇಲ್ಲ ಎಂದಾದರೆ ಆ ಸ್ಥಿತಿಯನ್ನು ನೆನೆಸಿಕೊಳ್ಳುವುದೂ ಕಷ್ಟ ಅಲ್ಲವೇ? ಹಾಗಿದ್ದರೆ ನಿಮಗಾಗಿ ಹಗಲಿರುಳೂ ಶ್ರಮಿಸುವ ಈ ಪಾದಗಳ ಆರೈಕೆಯನ್ನು ನೀವು ಸೂಕ್ತವಾಗಿ ಮಾಡಲೇಬೇಕು. ಇದಕ್ಕಾಗಿ ನೀವೇನು ತಿಂಗಳು, ವರ್ಷಗಳನ್ನು ವ್ಯಯಿಸಬೇಕಾಗಿಲ್ಲ ಕೆಲವೊಂದು ನಿಮಿಷಗಳು ಮಾತ್ರ ಸಾಕು.

ನಿಮ್ಮ ಪಾದಗಳ ಆರೈಕೆಗಾಗಿ ಸಲೂನ್ಗಳಲ್ಲಿ ಹಲವಾರು ವಿಧಗಳ ಪೆಡಿಕ್ಯೂರ್ಸ್ ಲಭ್ಯವಿದೆ. ನೀರಿನಲ್ಲಿ ಕಾಲುಗಳನ್ನು ಊರಿ ನಡೆಸುವ ಪೆಡಿಕ್ಯೂರ್ ಚಿಕಿತ್ಸೆಗಳೇ ಇದಾಗಿವೆ. ಸಲೂನ್ ಆಧಾರಿತ ಪೆಡಿಕ್ಯೂರ್ಗಳನ್ನು ಹಲವಾರು ಕ್ರೀಮ್ಗಳು ಇತರೆ ಉತ್ಪನ್ನಗಳನ್ನು ಒಳಗೊಂಡಿದ್ದು ಇವುಗಳು ಮೃತ ಕೋಶಗಳನ್ನು ನಿವಾರಿಸಿ ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸುತ್ತವೆ. ಅಂದದ ಪಾದಕ್ಕೆ, ಬೇಕಿದೆ ಚೆಂದದ ಆರೈಕೆ...
ಪಾದಗಳನ್ನು ಸುಕೋಮಲಗೊಳಿಸಲು ಮತ್ತು ವಿರಾಮ ನೀಡುವುದಕ್ಕಾಗಿ ಪಾರ್ಲರ್ಗಳು ರಾಸಾಯನಿಕಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಬಳಸುತ್ತಾರೆ. ಇವುಗಳ ಹೆಚ್ಚು ಪರಿಮಳಯುಕ್ತವಾಗಿದ್ದರೂ ಇದರಲ್ಲಿರುವ ವಿಷಕಾರಿ ಅಂಶಗಳು ಪಾದಗಳಲ್ಲಿ ಬೇರೆ ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಪಾದಗಳನ್ನು ನೆನೆಸಿಡುವುದು ಪಡೆಕ್ಯೂರ್ನ ವಿಧಾನಗಳಲ್ಲಿ ಒಂದಾಗಿದೆ.
ಆದರೆ ಈ ಪೆಡಿಕ್ಯೂರ್ಗಾಗಿ ಸರಿಯಾದ ರೀತಿಯ ಸಾಮಾಗ್ರಿಗಳನ್ನು ಬಳಸುವುದರಿಂದ ಪ್ರಯೋಜನ ಇನ್ನಷ್ಟು ಉತ್ತಮವಾಗಿರುತ್ತದೆ. ನೀವು ಇದಕ್ಕಾಗಿ ನೈಸರ್ಗಿಕ ಉತ್ಪನ್ನಗಳನ್ನು ಬಳಸುವುದರಿಂದ ನಿಮ್ಮ ಪೆಡಿಕ್ಯೂರ್ ಚಿಕಿತ್ಸೆಯನ್ನು ಉತ್ತಮಗೊಳಿಸಬಹುದಾಗಿದೆ. ನಿಮ್ಮ ಪಾದಗಳನ್ನು ನೆನೆಯಿಸುವುದಕ್ಕಾಗಿ ನರಿಶಿಂಗ್ ದ್ರಾವಣಗಳನ್ನು ಬಳಸಬೇಕಾಗುತ್ತದೆ.
ಹಾಲು, ಜೇನು ಮತ್ತು ಇತರ ಸಾಮಾಗ್ರಿಗಳು ಕಾಲುಗಳನ್ನು ನೆನೆಯಿಸುವುದರ ಜೊತೆಗೆ ಎಕ್ಸ್ಫೋಲಿಯೇಟಿಂಗ್ ಅಂಶಗಳನ್ನು ಒಳಗೊಂಡಿವೆ. ಹಾಗಿದ್ದರೆ ಇಂತಹ ವಸ್ತುಗಳನ್ನು ಬಳಸಿ ಮನೆಯಲ್ಲೇ ಪಾರ್ಲರ್ ರೀತಿಯ ಪೆಡಿಕ್ಯೂರ್ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಕಂಡುಕೊಳ್ಳೋಣ.
ತ್ವರಿತ ಮತ್ತು ಸುಲಭ ಮಾಯಿಶ್ಚರೈಸಿಂಗ್ ಸೋಕ್
ಇದು ಹೆಚ್ಚು ಸರಳ ಮತ್ತು ಬಜೆಟ್ ಸ್ನೇಹಿ ಸೋಕ್ ಆಗಿದೆ. ಅಂತೆಯೇ ಈ ಸಾಮಾಗ್ರಿಗಳು ಸುಲಭವಾಗಿ ದೊರೆಯುತ್ತವೆ. ಹಾಲು ನಿಮ್ಮ ಪಾದಗಳನ್ನು ಮಾಯಿಶ್ಚರೈಸ್ ಮಾಡಿ, ಎಕ್ಸ್ಫೋಲಿಯೇಟ್ ಮಾಡುತ್ತದೆ. ಟೀ ಟ್ರಿ ಆಯಿಲ್ ನಿಮ್ಮ ಪಾದಗಳಿಗೆ ಆರಾಮ ನೀಡುತ್ತದೆ. ಉಪ್ಪು ಪಾದಗಳಿಗೆ ಉತ್ತಮ ಆರೈಕೆಯನ್ನು ನೀಡಿ ನೋವುಗಳನ್ನು ದೂರಮಾಡುತ್ತದೆ. ಸಕ್ಕರೆ ಹೆಚ್ಚು ಶಕ್ತಿಯುತವಾಗಿ ಎಕ್ಸ್ಫೋಲಿಯೇಂಟ್ ಮಾಡುತ್ತದೆ.
ಸಾಮಾಗ್ರಿಗಳು
*3 ಕಪ್ಗಳಷ್ಟು ಹಾಲು - ಸಂಪೂರ್ಣ ಹಾಲು ಅಗತ್ಯ
*5 ಲೀಟರ್ಗಳಷ್ಟು ನೀರು
*1 ಚಮಚ ಸಮುದ್ರ ಉಪ್ಪು
*1/2 ಚಮಚ ಟೀ ಟ್ರಿ ಆಯಿಲ್
*1/2 ಕಪ್ ಬಿಳಿ ಸಕ್ಕರೆ
*1/2 ಕಪ್ ಬ್ರೌನ್ ಸಕ್ಕರೆ
ತಯಾರಿಸುವ ವಿಧಾನ
*ಟಬ್ಗೆ ನೀರನ್ನು ತುಂಬಿಸಿ. ಇದರಲ್ಲಿ ನಿಮ್ಮ ಪಾದಗಳನ್ನು 5 ನಿಮಿಷಗಳ ಕಾಲ ಮುಳುಗಿಸಿಡಿ.
*ಇದಕ್ಕೆ ಹಾಲು, ಉಪ್ಪು ಮತ್ತು ಟೀ ಟ್ರಿ ಆಯಿಲ್ ಸೇರಿಸಿ. ನಂತರ 15 ನಿಮಿಷ ಮುಳುಗಿಸಿಡಿ
*ಸಕ್ಕರೆ ರೀತಿಯ ಎರಡೂ ಸಾಮಾಗ್ರಿಗಳನ್ನು ಮಿಶ್ರ ಮಾಡಿ ನಿಮ್ಮ ಪಾದಗಳನ್ನು ಬ್ರೌನ್ ಮತ್ತು ಬಿಳಿ ಸಕ್ಕರೆಯೊಂದಿಗೆ ಎಕ್ಸ್ಫೋಲಿಯೇಟ್ ಮಾಡಿ.
*ಹೆಚ್ಚುವರಿ 5 ನಿಮಿಷಗಳ ಕಾಲ ಪಾದಗಳನ್ನು ನೆನೆಯಿಸಿ.
*ಎಮರಿ ಬೋರ್ಡ್ ಬಳಸಿ ಪಾದಗಳನ್ನು ತೊಳೆಯಿರಿ.
*ನಿಮ್ಮ ಉಗುರುಗಳ ಸುತ್ತ ತ್ವಚೆಯನ್ನು ಮೃದುಗೊಳಿಸಲು ಕ್ಯುಟಿಕಲ್ ಕ್ರೀಮ್ ಹಚ್ಚಿಕೊಳ್ಳಿ. ಕ್ಯುಟಿಕಲ್ಸ್ ಸ್ವಚ್ಛಮಾಡಿ.
*ಉಗುರು ಬೆಚ್ಚನೆಯ ನೀರಿನಲ್ಲಿ ಪಾದಗಳನ್ನು ತೊಳೆದುಕೊಂಡು ಪಾದಗಳನ್ನು ಒಣಗಿಸಿ
*ನಿಮ್ಮ ಪಾದಗಳನ್ನು ಮೃದುವಾದ ಮಾಯಿಶ್ಚರೈಸರ್ ಬಳಸಿಕೊಂಡು ಮಾಯಿಶ್ಚರೈಸ್ ಮಾಡಿಕೊಳ್ಳಿ. ನೈಸರ್ಗಿಕ ಮಾಯಿಶ್ಚರೈಸ್ ಬಳಸಿ ಇನ್ನಷ್ಟು ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು.
*ಕೊನೆಯದಾಗಿ ನಿಮ್ಮ ಉಗುರುಗಳಿಗೆ ಬಣವನ್ನು ಹಚ್ಚಿ ಇನ್ನಷ್ಟು ಸುಂದರಗೊಳಿಸಬಹುದಾಗಿದೆ.



Click it and Unblock the Notifications



