Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ಉಗುರಿನ ಅಂದ ಹೆಚ್ಚಿಸಲು ಒಂದಿಷ್ಟು ನೈಸರ್ಗಿಕ ಟಿಪ್ಸ್
ನಾವೆಲ್ಲಾ ಸಾಮಾನ್ಯವಾಗಿ ಉಗುರುಗಳ ಮೇಲೆ ಹಚ್ಚುವ ಬಣ್ಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆಯೇ ವಿನಃ ಉಗುರಿನ ನೈಸರ್ಗಿಕ ಬಣ್ಣಕ್ಕಲ್ಲ. ಆರೈಕೆಯ ಕೊರತೆಯಿಂದ ಸಾಮಾನ್ಯವಾಗಿ ಉಗುರು ಹಳದಿ ಬಣ್ಣಕ್ಕೆ ತಿರುಗಿರುವುದನ್ನು ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಗಮನಿಸಬಹುದು. ಇದು ಮುಜುಗರಕ್ಕೂ ಕಾರಣವಾಗಬಹುದು. ಸಾಮಾನ್ಯವಾಗಿ ಉಗುರುಗಳಿಗೆ ಹಳದಿಬಣ್ಣ ಬರಲು ಉಗುರಿನ ಪಾಲಿಶ್ ಕಾರಣ. ಬಣ್ಣಕ್ಕಾಗಿ ಉಪಯೋಸಿರುವ ರಾಸಾಯನಿಕಗಳು, ಅದರಲ್ಲೂ ವಿಶೇಷವಾಗಿ ಗಾಢವಾದ ಬಣ್ಣಗಳಲ್ಲಿರುವ ರಾಸಾಯನಿಕಗಳು ಉಗುರಿನ ಬಣ್ಣವನ್ನು ನಿಧಾನವಾಗಿ ಹಳದಿಗೊಳಿಸುತ್ತಾ ಹೋಗುತ್ತದೆ. ಇದನ್ನು ತಡೆಯಲು ಉತ್ತಮ ಮಾರ್ಗವೆಂದರೆ ಪಾರದರ್ಶಕ ಬೇಸ್ ಕೋಟ್ ಮೊದಲು ಹಚ್ಚಿ ಆ ಬಳಿಕ ಇದರ ಮೇಲೆ ತಮ್ಮ ಇಷ್ಟದ ಬಣ್ಣವನ್ನು ಹಚ್ಚುವುದು. ನೇಲ್ ಪಾಲಿಷ್ ಕಲೆ ನಿವಾರಿಸಲು ಸಮರ್ಥ ವಿಧಾನಗಳು
ಇತರ ಕಾರಣಗಳೆಂದರೆ ಶಿಲೀಂಧ್ರದ ಸೋಂಕು, ಯಕೃತ್‌ನ ಗಂಭೀರ ತೊಂದರೆ, ಅತಿ ಹೆಚ್ಚಿನ ಧೂಮಪಾನ, ಕ್ರಮಬದ್ದವಲ್ಲದ ಜೀವನಶೈಲಿ, ಅನಾರೋಗ್ಯಕರ ಆಹಾರ ಇತ್ಯಾದಿಗಳು. ಹಳದಿ ಉಗುರುಗಳನ್ನು ನೈಸರ್ಗಿಕ ಬಣ್ಣಕ್ಕೆ ಬದಲಿಸಲು ಕೆಲವು ಮನೆಮದ್ದುಗಳು ಲಭ್ಯವಿವೆ. ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಈ ವಿಧಾನಗಳಲ್ಲಿ ನಿಮಗೆ ಸೂಕ್ತವಾದುದನ್ನು ಆರಿಸಿ ಬಳಸಿ ಸುಂದರ ಉಗುರುಗಳನ್ನು ಪಡೆಯಿರಿ: ಅಂದದ ಉಗುರಿನ ಆರೈಕೆಗೆ ಸರಳ ಮಾರ್ಗೋಪಾಯ

ಲಿಂಬೆ ಮತ್ತು ಅಡುಗೆ ಸೋಡಾ
ಲಿಂಬೆರಸದಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಮತ್ತು ಪ್ರತಿಜೀವಕ ಗುಣಗಳು ಮತ್ತು ಬಿಳಿಚಿಸುವ ಗುಣ ಹಳದಿ ಬಣ್ಣವನ್ನು ನಿವಾರಿಸಲು ಸಮರ್ಥವಾಗಿದೆ. ಅಡುಗೆಸೋಡಾದಲ್ಲಿರುವ ಸತ್ತ ಜೀವಕೋಶಗಳನ್ನು ನಿವಾರಿಸುವ ಗುಣ (exfoliation) ಉಗುರುಗಳ ಆರೋಗ್ಯ ಹೆಚ್ಚಿಸಲು ಸಮರ್ಥವಾಗಿದೆ. ಇವೆರಡರ ಮಿಶ್ರಣ ಉಗುರಿನ ಹಳದಿಬಣ್ಣವನ್ನು ನಿವಾರಿಸಲು ಉತ್ತಮ ಆಯ್ಕೆಯಾಗಿದೆ.

ವಿಧಾನ
*ಒಂದು ಚಿಕ್ಕ ಬೋಗುಣಿಯಲ್ಲಿ ಕೊಂಚ ಲಿಂಬೆ ರಸವನ್ನು ಸಂಗ್ರಹಿಸಿ ಇದಕ್ಕೆ ಕೊಂಚ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
*ಈ ಮಿಶ್ರಣವನ್ನು ಉಗುರುಗಳ ಮೇಲೆ ತೆಳ್ಳಗೆ ಹಚ್ಚಿ ಸುಮಾರು ಹತ್ತರಿಂದ ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
*ಬಳಿಕ ನಿಮ್ಮ ನೆಚ್ಚಿನ ತೇವಕಾರಕ ಅಥವಾ ಮಾಯಿಶ್ಚರೈಸರ್ ಉಗುರು ಮತ್ತು ಇಡಿಯ ಹಸ್ತಕ್ಕೆ ಹಚ್ಚಿಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿ.

ಹಲ್ಲುಜ್ಜುವ ಪೇಸ್ಟ್
ಈ ಪೇಸ್ಟ್ ನಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಎಂಬ ರಾಸಾಯನಿಕವಿದೆ. ಇದು ಹಲ್ಲುಗಳಿಗೆ ಬಿಳುಪು ನೀಡುವ ಕೆಲಸ ಮಾಡುತ್ತದೆ. ಈ ಗುಣ ಉಗುರಿನ ಹಳದಿತನವನ್ನೂ ನಿವಾರಿಸಲು ನೆರವಾಗುತ್ತದೆ. ಆದರೆ ಇದು ಪ್ರಬಲವಾಗಿರಬಾರದು. ಇದರ ಪ್ರಮಾಣ 3%ಕ್ಕಿಂತ ಹೆಚ್ಚಿರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿ.

ವಿಧಾನ
*ಈ ಪೇಸ್ಟ್ ನಲ್ಲಿರುವ ರಾಸಾಯನಿಕ ಸುರಕ್ಷಿತ ಎಂದು ಪರೀಕ್ಷಿಸಿಕೊಂಡ ಬಳಿಕ ಇದನ್ನು ತೆಳ್ಳಗೆ ಹಚ್ಚಿ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ
*ಬಳಿಕ ಸೌಮ್ಯವಾದ ಬ್ರಶ್ ಉಪಯೋಗಿಸಿ ಈ ಲೇಪನವನ್ನು ಕೆರೆದು ಸಡಿಲಗೊಳಿಸಿ.
*ಒಂದು ಹತ್ತಿಯುಂಡೆಯನ್ನು ಉಗುರುಬೆಚ್ಚನೆಯ ನೀರಿನಲ್ಲಿ ಮುಳುಗಿಸಿ ಸಡಿಲವಾಗಿದ್ದ ಲೇಪನವನ್ನು ನಿವಾರಿಸಿ.
*ಬಳಿಕ ಹೀಗೇ ಕೈಗಳು ಒಣಗಿರುವಂತೆ ನೋಡಿಕೊಳ್ಳಿ. ಈ ವಿಧಾನವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿ.

ಇತರ ಎಚ್ಚರಿಕಾ ವಿಧಾನಗಳು
ಪ್ರತಿಬಾರಿ ಉಗುರಿಗೆ ಬಣ್ಣ ಹಚ್ಚುವ ಮೊದಲು ಪಾರದರ್ಶಕವಾದ ಬೇಸ್ ಕೋಟ್ ಹಚ್ಚಿಕೊಂಡು ಒಣಗಿದ ಬಳಿಕವೇ ನಿಮ್ಮ ನೆಚ್ಚಿನ ಬಣ್ಣ ಹಚ್ಚಿ. ಇದು ನಿಮ್ಮ ಪೆಡಿಕ್ಯೂರ್ ಮತ್ತು ಮ್ಯಾನಿಕ್ಯೂರ್ ಆರೈಕೆಗಳನ್ನು ಹೆಚ್ಚಿನ ಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇತರ ಎಚ್ಚರಿಕಾ ವಿಧಾನಗಳು
ಆಗಾಗ ಉಗುರುಗಳಿಗೆ ಬಫರ್ ಬಳಸಿ, ಇದರಿಂದ ಹಳದಿ ಬಣ್ಣ ನಿವಾರಣೆಯಾಗಲು ಹೆಚ್ಚಿನ ನೆರವು ದೊರಕುತ್ತದೆ. ಜೊತೆಗೇ ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆ ಸವರಿ ಮಲಗುವ ಮೂಲಕ ಉತ್ತಮ ಪೋಷಣೆ ಪದೆಯುತ್ತದೆ. ಅಂತೆಯೇ ಲಿಂಬೆರಸವನ್ನು ಹಗಲಿನಲ್ಲಿ ಕೆಲವು ಗಂಟೆಗಳ ಕಾಲ ಹಚ್ಚಿಕೊಳ್ಳಿ.



Click it and Unblock the Notifications











