Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಸಿಗೆಯ ಸುಡು ಬಿಸಿಲಿಗೆ ಕೊಬ್ಬರಿ ಎಣ್ಣೆ ಬಳಕೆಯ ಮಹತ್ವವೇನು?
ಪ್ರತಿವರ್ಷದಂತೆ ಮಾರ್ಚ್‌ನೊಂದಿಗೆ ಬೇಸಿಗೆಯ ದಿನಗಳೂ ಬಂದಿವೆ. ಜೊತೆಯಲ್ಲಿ ಸೆಖೆ, ಬಾಯಾರಿಕೆ, ಒಣಚರ್ಮ, ತುರಿಕೆ ಮೊದಲಾದವೂ ಬೇಡದ ಅತಿಥಿಗಳಾಗಿ ಆಗಮಿಸುತ್ತವೆ. ಆದರೆ ಬಂದ ಅತಿಥಿಗಳನ್ನು ಸುಧಾರಿಸಬೇಕಲ್ಲ, ಇದಕ್ಕಾಗಿ ಅತ್ಯಂತ ಸೂಕ್ತವಾದ ಉಪಾಯವೆಂದರೆ ಕೊಬ್ಬರಿ ಎಣ್ಣೆಯ ಬಳಕೆ. ಶರೀರದ ಬಾಹ್ಯ ಅಂಗಳಾದ ಚರ್ಮ ಮತ್ತು ಕೂದಲಿನ ಆರೈಕೆಗೆ ಕೊಬ್ಬರಿ ಎಣ್ಣೆ ಬಹಳ ಹಿಂದಿನ ಕಾಲದಿಂದಲೂ ಉಪಯೋಗಿಸಲ್ಪಡುತ್ತಾ ಬಂದಿದೆ. ಇದರಿಂದ ಬೇಸಿಗೆಯ ಬಿಸಿಲಿಗೆ ಒಣಗುವ ಚರ್ಮ ಮೃದುವಾಗಿಯೇ ಉಳಿಯುತ್ತದೆ ಹಾಗೂ ಒಡೆಯದಿರಲು, ಬಿರಿಬಿಡದಿರಲು ಸಹಕರಿಸುತ್ತದೆ. ತೆಂಗಿನೆಣ್ಣೆಯನ್ನು ಬಳಸಿ ತಯಾರಿಸಿದ 10 ಅತ್ಯುತ್ತಮ ಮನೆಮದ್ದುಗಳು
ಕೂದಲಿನ ಬುಡ ಮತ್ತು ತಲೆಯ ಮೇಲಿನ ಚರ್ಮಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಮೂಲಕ ಕೂದಲು ಉದುರದಂತೆ, ಹೊಟ್ಟು ಉತ್ಪತ್ತಿಯಾಗದಂತೆ ತಡೆಯುತ್ತದೆ. ಪ್ರತಿದಿನದ ಸ್ನಾನದ ಬಳಿಕ ಅಲ್ಪ ಪ್ರಮಾಣದಲ್ಲಿ ತೆಂಗಿನೆಣ್ಣೆಯನ್ನು ಚರ್ಮಕ್ಕೆ, ಅದರಲ್ಲೂ ವಿಶೇಷವಾಗಿ ಸೂರ್ಯನ ಬಿಸಿಲಿಗೆ ಒಡ್ಡುವ ಚರ್ಮದ ಭಾಗಗಳಿಗೆ ಹಚ್ಚುವುದರಿಂದ ಬಿಸಿಲಿನ ಪ್ರಭಾವವನ್ನು ಸಾಕಷ್ಟು ಮಟ್ಟಿಗೆ ತಗ್ಗಿಸಬಹುದು ಹಾಗೂ ಸಹಜ ಕಾಂತಿಯನ್ನು ಉಳಿಸಿಕೊಳ್ಳಬಹುದು. ಕೊಬ್ಬರಿ ಎಣ್ಣೆಯ ಬಳಕೆಯಿಂದ ಬೇಸಿಗೆಯಲ್ಲಿ ಚರ್ಮದ ಮತ್ತು ಕೂದಲಿನ ಆರೈಕೆ ಹೇಗೆ ಎಂಬುವುದರ ಬಗ್ಗೆ ಹಲವು ಉಪಯುಕ್ತ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ತಲೆಗೂದಲ ಬುಡದ ಚರ್ಮವನ್ನು ಮೃದುಗೊಳಿಸುತ್ತದೆ
ಬಿಸಿಲಿನಲ್ಲಿ ಕೂದಲು ಉದುರುವುದಕ್ಕೆ ಮುಖ್ಯ ಕಾರಣ ತಲೆಯ ಮೇಲಿನ ಚರ್ಮದಲ್ಲಿ ತೇವಾಂಶ ಕಡಿಮೆಯಾಗಿ ಒಣಗುವುದು. ಪರಿಣಾಮವಾಗಿ ಚರ್ಮದ ಮೇಲ್ಪದರ ಪಕಳೆಗಳಂತೆ ಒಣಗಿ ಮೇಲೇಳುತ್ತದೆ. ಇದೇ ತಲೆಹೊಟ್ಟು. ಒಣಗಿದ ಚರ್ಮ ದೃಢವಾಗಿ ಕೂದಲ ಬುಡ ಸಡಿಲವಾಗುತ್ತದೆ. ಈಗ ಕೂದಲು ಸುಲಭವಾಗಿ ಉದುರುತ್ತದೆ. ಎಷ್ಟು ಸುಲಭ ಎಂದರೆ ಆಡುತ್ತಿರುವ ಗಾಳಿಗೆ ತಲೆಯೊಡ್ಡಿದರೇ ಕೆಲವು ಕೂದಲುಗಳು ಉದುರಿ ಬೀಳುತ್ತವೆ. ಕೂದಲ ಬುಡಕ್ಕೆ ಪ್ರತಿದಿನ ಕೊಬ್ಬರಿ ಎಣ್ಣೆಯ ನಿಯಮಿತ ಮಸಾಜ್ ಮಾಡುವುದರಿಂದ ಚರ್ಮಕ್ಕೆ ಅಗತ್ಯವಾದ ತೇವಾಂಶ ದೊರೆತು ಕೂದಲು ಉದುರುವುದನ್ನು ತಡೆಗಟ್ಟಬಹುದು.

ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನು ನೀಡುತ್ತದೆ
ಬಿಸಿಲಿಗೆ ಒಡ್ಡುವ ಚರ್ಮ ಬಹುತೇಕ ಒಣಗುವುದರಿಂದ ಚರ್ಮ ತನ್ನಲ್ಲಿರುವ ಆರ್ದ್ರತೆಯನ್ನು ಸುಲಭವಾಗಿ ಕಳೆದುಕೊಳ್ಳುತ್ತದೆ. ಇದಕ್ಕೆ ಶೀಘ್ರವೇ ಪುನಃಶ್ಚೇತನಗೊಳಿಸದಿದ್ದಲ್ಲಿ ಹೊರಚರ್ಮ ಬಿರಿಬಿಡುತ್ತಾ ಹೋಗುತ್ತದೆ ಹಾಗೂ ಒಳಚರ್ಮ ಗಾಳಿಗೆ ತೆರೆದುಕೊಳ್ಳುತ್ತದೆ. ಗಾಳಿಯಲ್ಲಿರುವ ಅತಿಸೂಕ್ಷ್ಮ ಕಣಗಳಿಗೆ ಒಳಚರ್ಮ ಸಂವೇದಿಯಾಗಿರುವುದರಿಂದ ತುರಿಕೆ ಪ್ರಾರಂಭವಾಗುತ್ತದೆ. ಇದನ್ನು ತಡೆಗಟ್ಟಲು ಚರ್ಮಕ್ಕೆ, ಅದರಲ್ಲೂ ವಿಶೇಷವಾಗಿ ಬಿಸಿಲಿಗೆ ಒಡ್ಡುವ ಚರ್ಮದ ಭಾಗಕ್ಕೆ ನಿಯಮಿತವಾಗಿ ಕೊಬ್ಬರಿ ಎಣ್ಣೆಯನ್ನು ಸವರುವುದರಿಂದ ಚರ್ಮ ಕಾಂತಿಯನ್ನು ಉಳಿಸಿಕೊಳ್ಳುತ್ತದೆ.

ಕಣ್ಣಕೆಳಗಿನ ಕಪ್ಪು ಕಲೆಗಳನ್ನು ನಿವಾರಿಸುತ್ತದೆ
ಕಣ್ಣ ಕೆಳಗಣ ಚರ್ಮ ಅತ್ಯಂತ ತೆಳುವಾಗಿದೆ. ಅಂದರೆ ಹೊರ ಮತ್ತು ಒಳಚರ್ಮಗಳ ನಡುವಣ ಅಂತರ ಕಡಿಮೆ. ಹಾಗಾಗಿ ಈ ಭಾಗದಲ್ಲಿ ಚರ್ಮ ಬೇರೆ ಭಾಗಗಳಿಗಿಂತಲೂ ಬೇಗನೇ ಕಪ್ಪಗಾಗುತ್ತದೆ. ಇದನ್ನು ತಪ್ಪಿಸಲು ಪ್ರತಿದಿನ ರಾತ್ರಿ ಮಲಗುವ ಮುನ್ನ ಹತ್ತಿಯ ಉಂಡೆಯಿಂದ ಕೊಬ್ಬರಿ ಎಣ್ಣೆಯನ್ನು ನಯವಾಗಿ ಕಣ್ಣಿನ ಕೆಳಭಾಗದಲ್ಲಿ (ಮೂಗಿನ ಕಡೆಯಿಂದ ಹಣೆಯ ಕಡೆಗೆ ಒಮ್ಮುಖವಾಗಿ) ಒರೆಸಿ. ಮರುದಿನ ಬೆಳಿಗ್ಗೆ ಮೊದಲು ಉಗುರುಬೆಚ್ಚನೆಯ ನೀರಿನಿಂದ ಬಳಿಕ ಸೌಮ್ಯ ಮುಖದ ಸೋಪು (facewash) ಅಥವಾ ಕ್ಲೀನ್ಸರ್ ಬಳಸಿ ತೊಳೆದುಕೊಳ್ಳಿರಿ.

ಒಣಚರ್ಮದ ಪದರವನ್ನು ನಿವಾರಿಸಲು
ಒಡೆದ ಚರ್ಮದ ಹೊರಭಾಗದ ಜೀವಕೋಶಗಳು ಸತ್ತು ತೆಳುವಾದ ಪದರದಂತೆ ಅಂಟಿಕೊಂಡಿರುತ್ತದೆ. ಈ ಪದರ ಸ್ವಾಭಾವಿಕವಾಗಿ ಉದುರಬೇಕು. ಆದರೆ ಬೇಸಿಗೆಯಲ್ಲಿ ಒಣಗಿರುವ ಚರ್ಮದ ಕಾರಣ ಸುಲಭವಾಗಿ ಉದುರದೇ ಅಂಟಿಕೊಂಡೇ ಇರುತ್ತದೆ. ಇದನ್ನು ನಿವಾರಿಸಲು ಮೂರು ಚಮಚ ಸಕ್ಕರೆಗೆ ಒಂದು ಅಥವಾ ಎರಡು ಚಮಚ ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಚರ್ಮದ ಮೇಲೆ ಹಚ್ಚಿ ಉಜ್ಜಿಕೊಳ್ಳಿ. ಇದರಿಂದ ಸತ್ತ ಜೀವಕೋಶಗಳ ಪದರ ಸುಲಭವಾಗಿ ಹೊರಬರುತ್ತದೆ ಹಾಗೂ ಚರ್ಮದ ಕಾಂತಿ ಹೆಚ್ಚುತ್ತದೆ. ಬಳಿಕ ಸ್ವಚ್ಛನೀರಿನಿಂದ ತೊಳೆದುಕೊಳ್ಳಿ.

ಹಲ್ಲುಗಳ ಬಿಳುಪಿಗಾಗಿ
ಹೌದು, ಹಲ್ಲುಗಳ ಬಿಳುಪಿಗಾಗಿಯೂ ಕೊಬ್ಬರಿ ಎಣ್ಣೆಯ ಬಳಕೆ ಉತ್ತಮವಾಗಿದೆ. ಪ್ರತಿದಿನ ನೀವು ಉಪಯೋಗಿಸುವ ಹಲ್ಲುಜ್ಜುವ ಪೇಸ್ಟ್ ಮೇಲೆ ಒಂದು ಅಥವಾ ಎರಡು ಬಿಂದು ಕೊಬ್ಬರಿ ಎಣ್ಣೆಯನ್ನು ಸೇರಿಸಿ ಎಂದಿನಂತೆ ಹಲ್ಲುಜ್ಜುವ ಮೂಲಕ ಹಲ್ಲುಗಳ ಬಿಳುಪು ಹೆಚ್ಚುತ್ತದೆ.

ಮೇಕಪ್ ನಿವಾರಿಸಲು
ಸಿಂಗಾರಕ್ಕಾಗಿ, ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉಪಯೋಗಿಸುವ ಮೇಕಪ್ ನಿವಾರಣೆಗೂ ಕೊಬ್ಬರಿ ಎಣ್ಣೆ ಅತ್ಯುತ್ತಮವಾಗಿದೆ. ಇದರಲ್ಲಿ ಯಾವುದೇ ಅಡ್ಡಪರಿಣಾಮ ಇಲ್ಲದಿರುವುದರಿಂದ ಯಾವುದೇ ಅಳುಕಿಲ್ಲದೇ ಉಪಯೋಗಿಸಬಹುದು. ಇದಕ್ಕಾಗಿ ಮೇಕಪ್ ಮಾಡಿದ ಸ್ಥಳವನ್ನು ಕೊಬ್ಬರಿ ಎಣ್ಣೆಯಲ್ಲಿ ತೋಯಿಸಿ ಕೆಲವು ನಿಮಿಷ ಬಿಡಿ. ಬಳಿಕ ಟವೆಲ್ ಅಥವಾ ಹತ್ತಿಯ ಉಂಡೆಯಿಂದ ನಿಧಾನವಾಗಿ ಒರೆಸುತ್ತಾ ಬನ್ನಿ. ಕಡೆಗೆ ಉಳಿದಿರುವ ತೆಳುವಾದ ಪದರವನ್ನು ಹತ್ತಿಯ ಉಂಡೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಮುಳುಗಿಸಿ ಒರೆಸಿ ತೆಗೆಯಿರಿ. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ಮೊದಲು ಬಳಿಕ ಸೌಮ್ಯವಾದ ಮುಖದ ಸೋಪು (facewash) ಉಪಯೋಗಿಸಿ ತೊಳೆದುಕೊಳ್ಳಿರಿ.



Click it and Unblock the Notifications