Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಕಂಕುಳದಲ್ಲಿರುವ ಕೂದಲನ್ನು ತೆಗೆಯಲು ಸಲಹೆಗಳು
ನಿಮ್ಮ ಕಂಕುಳ ಕೆಳಗೆ ಕೂದಲು ಬೆಳೆದು ಅಸಹ್ಯವೆನಿಸುತ್ತಿದೆಯೇ? ಹಾಗೆಂದು ಇದಕ್ಕೆ ಯಾವುದೇ ಬ್ಯೂಟಿ ಪಾರ್ಲರ್ ಅಥವಾ ಸ್ಪಾಗೆ ಹೋಗುವ ಅಗತ್ಯವಾಗಲಿ, ಇಲ್ಲವೇ ದುಬಾರಿ ಉತ್ಪನ್ನಗಳ ಮೊರೆ ಹೋಗುವ ಪ್ರಮೇಯವಾಗಲಿ ಇಲ್ಲ. ಬ್ಯೂಟಿ ಪಾರ್ಲರಿಗೆ ಹೋಗಿ ವ್ಯಾಕ್ಸಿಂಗ್ ಮಾಡಿಸುವುದು ಮತ್ತು ಮಾರುಕಟ್ಟೆಯಲ್ಲಿರುವ ಉತ್ಪನ್ನಗಳನ್ನು ಬಳಸಿ ಕಂಕುಳ ಕೆಳಗಿನ ಕೂದಲುಗಳನ್ನು ಹೋಗಲಾಡಿಸಿಕೊಳ್ಳುವುದು ಎರಡು ಸಹ ದುಬಾರಿಯಾದ ಪ್ರಕ್ರಿಯೆಯೆಂಬುದು ನೆನಪಿರಲಿ.
ಹಾಗಾದರೆ ಏನು ಮಾಡುವುದು? ಎಂಬ ಚಿಂತೆಯೇ, ಆ ಚಿಂತೆಯನ್ನು ಬಿಡಿ. ನಿಮ್ಮ ಮನೆಯಲ್ಲಿಯೇ ದೊರೆಯುವ ಕೆಲವೊಂದು ಪದಾರ್ಥಗಳನ್ನು ಬಳಸಿ, ಕಂಕುಳ ಕೆಳಗಿನ ಕೂದಲುಗಳನ್ನು ಬುದ್ಧಿವಂತಿಕೆಯಿಂದ ನಿವಾರಿಸಿಕೊಳ್ಳಿ. ಇದಕ್ಕಾಗಿ ಯಾವುದೇ ಅಪಾಯವನ್ನುಂಟು ಮಾಡದ ಪದಾರ್ಥಗಳು ನಿಮ್ಮ ಮನೆಯಲ್ಲಿಯೇ ದೊರೆಯುತ್ತವೆ. ಆದರೆ ಈ ಪದಾರ್ಥಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬ ಅಂಶ ನಿಮ್ಮ ಗಮನದಲ್ಲಿರಬೇಕು ಅಷ್ಟೇ!.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಂಕುಳನ್ನು ಕ್ಲೀನ್ ಆಗಿಡಲು ಕೆಲ ಸಲಹೆ..
ಕಂಕುಳ ಕೆಳಗಿರುವ ಕೂದಲುಗಳನ್ನು ನಿವಾರಿಸಿಕೊಳ್ಳಲು ಸಲಹೆಗಳು
ಹಂತ 1
ಸರಿಯಾಗಿ ಎರಡು ಕಪ್ ಸಕ್ಕರೆ, ¼ ಕಪ್ ನೀರು, ¼ ಕಪ್ ಜೇನು, ¼ ತಾಜಾ ನಿಂಬೆ ರಸಗಳನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಒಂದು ಸೆಪರೇಟರಿನಲ್ಲಿ ಹಾಕಿ.
ಹಂತ 2
ಈಗ ಈ ಸೆಪರೇಟರ್ ಅಥವಾ ಸಾಸ್ ಪ್ಯಾನನ್ನು ಕಾಯಿಸಿ. ಆದರೆ ಉರಿ ಕಡಿಮೆ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಿ. ಅರ್ಧ ಗಂಟೆ ಈ ಪದಾರ್ಥಗಳನ್ನು ಕಾಯಿಸಿ. ಆ ನಂತರ ಈ ಮಿಶ್ರಣವು ಕಡುಕಂದು ಬಣ್ಣಕ್ಕೆ ಬರುತ್ತದೆ. ಆಗ ಇದರ ಉಷ್ಣತೆ ಕ್ಯಾಂಡಿ ಥರ್ಮೋಮೀಟರಿನಲ್ಲಿ 246 ಡಿಗ್ರಿ ತಲುಪಿರುತ್ತದೆ. ಈಗ ಈ ಪ್ಯಾನನ್ನು ಉರಿಯಿಂದ ಪಕ್ಕಕ್ಕೆ ಇಟ್ಟು, ಕೊಠಡಿಯ ತಾಪಮಾನದಲ್ಲಿ ತಣ್ಣಗಾಗಲು ಬಿಡಿ.
ಹಂತ 3
ಈಗ ನಿಮ್ಮ ಕಂಕುಳನ್ನು ಬೆವರು ಇರದಂತೆ ಸ್ವಚ್ಛವಾಗಿ ತೊಳೆದುಕೊಳ್ಳಿ. ನಂತರ ಅದನ್ನು ಒಣಗಲು ಬಿಡಿ. ಆಮೇಲೆ ಬೇಬಿ ಪೌಡರನ್ನು ಕಂಕುಳ ಕೆಳಗೆ ಸಿಂಪಡಿಸಿ. ಈ ಬೇಬಿ ಪೌಡರ್ ನಿಮ್ಮ ಕಂಕುಳ ಕೆಳಗೆ ಇರುವ ಹೆಚ್ಚಿನ ಪ್ರಮಾಣದ ಜಿಡ್ಡಿನಂಶವನ್ನು ನಿವಾರಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಳಿಗಾಲಕ್ಕೆ ಚರ್ಮಕ್ಕೆ ವಿಟಮಿನ್ ಇ ಆಹಾರಗಳು
ಹಂತ 4
ಈಗ ನಿಮ್ಮ ಬಳಿಯಿರುವ ಸ್ವಾಭಾವಿಕ ವ್ಯಾಕ್ಸ್ ದ್ರಾವಣವನ್ನು ಚಮಚದ ಅಥವಾ ಕೈಗಳ ಸಹಾಯದಿಂದ ಕಂಕುಳ ಕೆಳಗೆ ಇರುವ ಕೂದಲ ಭಾಗದಲ್ಲಿ ಲೇಪಿಸಿ. ಇದನ್ನು ಮೊದಲ ಬಾರಿ ಮಾಡುತ್ತಿದ್ದರೆ, ಕಂಕುಳ ಕೆಳಗಿನ ಪೂರ್ತಿ ಭಾಗಕ್ಕೆ ಲೇಪಿಸಬೇಡಿ, ಸ್ವಲ್ಪ ಭಾಗಕ್ಕೆ ಮಾತ್ರ ಲೇಪಿಸಿ. ಏಕೆಂದರೆ ವ್ಯಾಕ್ಸ್‌ನಿಂದ ನಿಮ್ಮ ದೇಹಕ್ಕೆ ಯಾವುದೇ ಅಲರ್ಜಿ ಉಂಟಾಗುತ್ತದೆಯೇ, ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳುವುದು ಅಗತ್ಯ. ಅದಕ್ಕಾಗಿ ಮಿತವಾಗಿ ಇದನ್ನು ಹಚ್ಚಿ ಪ್ರಯತ್ನಿಸಿ. ಒಮ್ಮೆ ನಿಮಗೆ ಯಾವುದೇ ಅಲರ್ಜಿ ಉಂಟಾಗುವುದಿಲ್ಲ ಎಂದು ಖಾತ್ರಿಯಾದ ಮೇಲೆ ಇದನ್ನು ನೀವು ಸಂಪೂರ್ಣವಾಗಿ ಬಳಸಲು ಯಾವುದೇ ಅಡ್ಡಿಯಿಲ್ಲ.
ಹಂತ 5
ಈ ಸಕ್ಕರೆ ಮಿಶ್ರಿತ ವ್ಯಾಕ್ಸಿನ ಮಿಶ್ರಣವನ್ನು ಸ್ವಲ್ಪ ಗಟ್ಟಿಯಾಗಲು ಬಿಡಿ. ಕಂಕುಳ ಕೆಳಗೆ ಈ ವ್ಯಾಕ್ಸನ್ನು ಲೇಪಿಸುವಾಗ ಕಂಕುಳ ಭಾಗ ಬಿಗಿಯಾಗುವಂತೆ ಎತ್ತಿ, ಆಗ ಈ ಲೇಪನವು ಯಾವುದೇ ಸುಕ್ಕುಗಳನ್ನು ಉಂಟು ಮಾಡುವುದಿಲ್ಲ. ಆಗ ವ್ಯಾಕ್ಸನ್ನು ತೆಗೆಯುವುದು ಸಹ ನಿಮಗೆ ಸುಲಭವಾಗುತ್ತದೆ. ವ್ಯಾಕ್ಸನ್ನು ತೆಗೆಯುತ್ತ ಹೋದರೆ ಕೂದಲುಗಳು ಸಹ ಬರುತ್ತವೆ. ಹೀಗೆ ಕೂದಲು ನಿವಾರಣೆಯಾಗುತ್ತದೆ.
ಹಂತ 6
ಹೀಗೆ ಕೂದಲನ್ನು ನಿವಾರಿಸಿದ ಮೇಲೆ ಕೆಲವು ಭಾಗದಲ್ಲಿ ವ್ಯಾಕ್ಸ್ ಹಾಗೆಯೇ ಉಳಿದರೆ, ಸೋಪ್ ಮತ್ತು ಬೆಚ್ಚನೆಯ ನೀರನ್ನು ಬಳಸಿ ಅದನ್ನು ತೆಗೆಯಿರಿ. ಆನಂತರ ಲೈಟ್ ಮೊಯಿಶ್ಚರೈಸರ್ ಬಳಸಿ ಕಂಕುಳ ಕೆಳಗಿನ ವ್ಯಾಕ್ಸ್ ಹಚ್ಚಿದ ಭಾಗಕ್ಕೆ ಮೊಯಿಶ್ಚರೈಸ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಕಂಕುಳ ಭಾಗವು ಮೃದುವಾಗುತ್ತದೆ.
ನೀವು ತಯಾರಿಸಿದ ವ್ಯಾಕ್ಸನ್ನು ತಣ್ಣಗಿನ ಸ್ಥಳದಲ್ಲಿ ಸಂಗ್ರಹಿಸಿಡಿ. ಆ ನಂತರದಲ್ಲಿ ನಿಮಗೆ ಬೇಕಾದಾಗ ಈ ವ್ಯಾಕ್ಸನ್ನು ನೀವು ಬಳಸಬಹುದು. ಇದನ್ನು ಕೈ, ಕಾಲು ಮತ್ತು ಕಂಕುಳ ಭಾಗಕ್ಕೆ ಬಳಸಬಹುದು. ಇದನ್ನು ರೆಫ್ರಿಜಿರೇಟರಿನಲ್ಲಿ ಸಂಗ್ರಹಿಸಿಡುವ ಮೂಲಕ, ಇನ್ನು ಉತ್ತಮ ಸ್ಥಿತಿಯಲ್ಲಿ ಕಾಯ್ದಿಡಬಹುದು.



Click it and Unblock the Notifications