Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬೇಸಿಗೆಯಲ್ಲಿ ಪಾದಗಳ ಆರೈಕೆ ಹೀಗಿರಲಿ
ಪಾದಗಳಲ್ಲಿ ಸಮಸ್ಯೆ ಚಳಿಗಾಲದಲ್ಲಿ ಮಾತ್ರವಲ್ಲ, ಕೆಲವರಿಗೆ ಬೇಸಿಗೆಯಲ್ಲೂ ಕಂಡು ಬರುತ್ತದೆ. ಪಾದಗಳ ತ್ವಚೆ ತುಂಬಾ ಒಣಗಿ ಬಿರುಕು ಕಂಡು ಬರಬಹುದು. ಕೆಲವೊಮ್ಮೆ ಚಪ್ಪಲಿ, ಶೂ ಕೂಡ ಪಾದಗಳಲ್ಲಿ ತುರಿಕೆ, ಗುಳ್ಳೆಗಳು, ಪಾದಗಳಲ್ಲಿ ಬಿರುಕು, ಪಾದ ಬೆವರಿ ಕೆಟ್ಟ ವಾಸನೆ ಬೀರಲು ಕಾರಣವಾಗಿರುತ್ತದೆ.
ಆದ್ದರಿಂದ ಬೇಸಿಗೆಯಲ್ಲಿ ಪಾದಗಳ ಆರೈಕೆಯನ್ನು ಈ ರೀತಿ ಮಾಡಿದರೆ ಮೇಲೆ ಹೇಳಿದ ತೊಂದರೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಉಂಟಾಗುವುದಿಲ್ಲ:

ಹೊರಗಡೆ ಹೋಗಿ ಬಂದ ಮೇಲೆ ಪಾದ ತೊಳೆಯಿರಿ
ಹೊರಗಡೆ ಸುತ್ತಾಡಿ ಬಂದ ಮೇಲೆ ಪಾದಗಳಿಗೆ ತಣ್ಣೀರು ಹಾಕಿ ತೊಳೆಯಿರಿ. ಸೋಪು ಹಾಕಿ ದಿನದಲ್ಲಿ ಎರಡು ಬಾರಿ ತೊಳೆದರೆ ಸಾಕು, ಇಲ್ಲದಿದ್ದರೆ ಸೋಪು ನಿಮ್ಮ ತ್ವಚೆಯನ್ನು ಮತ್ತಷ್ಟು ಡ್ರೈಯಾಗಿಸುತ್ತದೆ.

ವಾರಕ್ಕೊಮ್ಮೆ ಎಕ್ಸ್ ಫೋಲೆಟ್ ಮಾಡಿ
ಕಾಲನ್ನು ಉಪ್ಪು ಹಾಕಿದ ಹದ ಬಿಸಿ ನೀರಿನಲ್ಲಿ ಇಳಿಬಿಟ್ಟು ನಂತರ ಬ್ರಷ್ ಹಾಕಿ ತಿಕ್ಕಿ ಶುಚಿ ಮಾಡಿ. ಇದರಿಂದ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು. ಈ ರೀತಿ ಮಾಡಿದರೆ ಕಾಲುಗಳಲ್ಲಿ ಬಿರುಕು ಬೀಳುವುದಿಲ್ಲ.

ಪಾದಗಳಿಗೆ ಉಸಿರಾಡಲು ಅವಕಾಶ ಕೊಡಿ
ಹೆಚ್ಚಿನವರು ದಿನಾಪೂರ್ತಿ ಶೂ ಹಾಕಿರುತ್ತಾರೆ. ಮನೆಗೆ ಬಂದ ಮೇಲೆ ಮತ್ತೆ ಸಾಕ್ಸ್ ಹಾಕಿ ಕೊಂಡು ಓಡಾಡಬೇಡಿ. ಕಾಲನ್ನು ತೊಳೆದು ಸ್ವಲ್ಪ ಹೊತ್ತು ಬರಿಗಾಲಿನಲ್ಲಿರಿ. ಇದರಿಂದ ಪಾದಗಳ ತ್ವಚೆಯ ಉಸಿರಾಟಕ್ಕೆ ಸಹಾಯವಾಗುವುದು.

ಬಿಸಿಲಿನಲ್ಲಿ ಓಡಾಡುವಾಗ ಚಪ್ಪಲಿ ಒಳ್ಳೆಯದು
ಬಿಸಿಲಿನಲ್ಲಿ ಓಡಾಡುವಾಗ ಚಪ್ಪಲಿ ಒಳ್ಳೆಯದು, ಕಾಲು ಕಪ್ಪಾಗದಿರಲು ಸನ್ ಸ್ಕ್ರೀನ್ ಲೋಷನ್ ಹಚ್ಚಿ.

ಮಾಯಿಶ್ಚರೈಸರ್
ಪ್ರತೀದಿನ ಪಾದಗಳನ್ನು ಮಾಯಿಶ್ಚರೈಸರ್ ನಿಂದ ಮಸಾಜ್ ಮಾಡಿದರೆ ಪಾದಗಳು ಮೃದುವಾಗಿರುತ್ತದೆ. ತೆಂಗಿನೆಣ್ಣೆ ಮಸಾಜ್ ಮಾಡಲು ಬೆಸ್ಟ್.

ಪೆಡಿಕ್ಯೂರ್
ಪೆಡಿಕ್ಯೂರ್ ಮಾಡಿಸಿಕೊಳ್ಳಿ. ಇದರಿಂದ ನಿಮ್ಮ ಪಾದಗಳು ಮೃದುವಾಗಿರುವುದು, ನೋಡಲು ಆಕರ್ಷಕವಾಗಿ ಕಾಣುವುದು.

ಪಾದದಳಿಗೆ ಮಸಾಜ್
ಪಾದಗಳಿಗೆ ಮಸಾಜ್ ಮಾಡಿದರೆ ದೇಹದಲ್ಲಿರುವ ಆಯಾಸ ಕಡಿಮೆಯಾಗಿ ನವಚೈತನ್ಯದಿಂದ ಇರುವಿರಿ.



Click it and Unblock the Notifications
