Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮುಖದಲ್ಲಿರುವ ಕೂದಲನ್ನು ಹೋಗಲಾಡಿಸಬೇಕೆ?
ಮುಖದಲ್ಲಿ ಕೂದಲು ಬರುವುದು ಹೆಚ್ಚಿನ ಮಹಿಳೆಯರಲ್ಲಿ ಕಂಡು ಬರುತ್ತಿರುವ ಸೌಂದರ್ಯ ಸಮಸ್ಯೆಯಾಗಿದೆ. ಇದನ್ನು ಬ್ಲೀಚಿಂಗ್ ಅಥವಾ ಫೇಶಿಯಲ್ ಮಾಡಿಸಿ ತಾತ್ಕಾಲಿಕವಾಗಿ ಹೋಗಲಾಡಿಸಬಹುದು. ಮುಖದಲ್ಲಿರುವ ಕೂದಲನ್ನು ಥ್ರೆಡ್ಡಿಂಗ್ ಕೂಡ ಮಾಡಬಹುದು. ಥ್ರೆಡ್ಡಿಂಗ್, ಬ್ಲೀಚಿಂಗ್ ಇವೆಲ್ಲಾ ಮಾಡಿಸಿದರೆ ಸ್ವಲ್ಪ ದಿನಗಳ ಬಳಿಕ ಕೂದಲು ಮತ್ತೆ ಕಾಣಿಸಿಕೊಳ್ಳುತ್ತದೆ.
ಇದನ್ನು ಶಾಶ್ವತವಾಗಿ ಪರಿಹರಿಸಲು ನೈಸರ್ಗಿಕವಾದ ವಿಧಾನವನ್ನು ಕಂಡು ಹಿಡಿಯುವುದು ಒಳ್ಳೆಯದು. ಈ ಕೆಳಗೆ ಕೆಲವೊಂದು ವಿಧಾನಗಳ ಬಗ್ಗೆ ಹೇಳಲಾಗಿದೆ. ಅವುಗಳನ್ನು ಪಾಲಿಸಿದರೆ ಮುಖದಲ್ಲಿರುವ ಕೂದಲನ್ನು ಹೋಗಲಾಡಿಸಬಹುದು.

ಅರಿಶಿಣ
ಅರಿಶಿಣವನ್ನು ಅರಿದು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ತೊಳೆಯಿರಿ. ಈ ರೀತಿ ಮಾಡುತ್ತಾ ಬಂದರೆ ಮುಖದಲ್ಲಿರುವ ಕೂದಲನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು. ಆದರೆ ಈ ವಿಧಾನದಲ್ಲಿ ಮುಖದಲ್ಲಿರುವ ಕೂದಲು ಹೋಗಲು ತುಂಬಾ ಸಮಯ ತೆಗದುಕೊಳ್ಳುತ್ತದೆ.

ಅರಿಶಿಣ ಮತ್ತು ಉಪ್ಪು
ಅರಿಶಿಣ ಪುಡಿಗೆ ಸ್ವಲ್ಪ ಉಪ್ಪು ಹಾಕಿ ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಅವುಗಳನ್ನು ಕಲೆಸಿ ಹುಬ್ಬು ಬಿಟ್ಟು ಮುಖಕ್ಕೆ ಸ್ಕ್ರಬ್ ಮಾಡಿದರೆ ಚಿಕ್ಕ ಚಿಕ್ಕ ಕೂದಲು ಉದುರುತ್ತದೆ. ಈ ರೀತಿ ವಾರದಲ್ಲಿ 3 ಬಾರಿಯಂತೆ ಮಾಡುತ್ತಾ ಬನ್ನಿ. ಒಂದು ತಿಂಗಳಿನಲ್ಲಿ ಕೂದಲು ರಹಿತ ಮುಖ ನಿಮ್ಮದಾಗುವುದು.

ನಿಂಬೆರಸ ಮತ್ತು ಜೇನು
ಜೇನಿಗೆ ಸ್ವಲ್ಪ ನಿಂಬೆ ರಸ ಹಿಂಡಿ ಅವುಗಳನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡುತ್ತಾ ಬಂದರೆ ಮುಖದಲ್ಲಿ ಕೂದಲು ಬೆಳೆಯುವುದಿಲ್ಲ.

ಸಕ್ಕರೆ ಸ್ಕ್ರಬ್
ಸಕ್ಕರೆ ಸ್ಕ್ರಬ್ ಅನ್ನು ವಾರದಲ್ಲಿ ಎರಡು ಬಾರಿ ಹಚ್ಚುತ್ತಾ ಬನ್ನಿ. ಈ ರೀತಿ ಮಾಡಿದರೆ ಮುಖದಲ್ಲಿರುವ ಕೂದಲು ನಿಧಾನಕ್ಕೆ ಮಾಯವಾಗುತ್ತದೆ.

ಜೋಳದ ಹಿಟ್ಟು, ಸಕ್ಕರೆ ಮತ್ತು ಮೊಟ್ಟೆ
ಒಂದು ಬಟ್ಟಲಿನಲ್ಲಿ 2 ಚಮಚ ಜೋಳದ ಹಿಟ್ಟು, 2 ಚಮಚ ಸಕ್ಕರೆ ಮತ್ತು ಒಂದು ಮೊಟ್ಟೆಯ ಬಿಳಿ ಹಾಕಿ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ ಸಾಕು ಮುಖದಲ್ಲಿರುವ ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಬಹುದು.

ಮೊಟ್ಟೆ, ಕಡಲೆಹಿಟ್ಟು ಮತ್ತು ಅರಿಶಿಣ
ಮೊಟ್ಟೆಯ ಬಿಳಿ , ಸ್ವಲ್ಪ ಕಡಲೆ ಹಿಟ್ಟು, ಸ್ವಲ್ಪ ಅರಿಶಿಣವನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ 2 ಬಾರಿ ಮಾಡಿದರೆ ಸಾಕು ನಿಮಗೆ ಯಾವ ಥ್ರೆಡ್ಡಿಂಗ್ ಬೇಕಾಗಿರುವುದಿಲ್ಲ.

ಮೊಟ್ಟೆ ಮತ್ತು ಹೆಸರು ಬೇಳೆ
ಹೆಸರು ಬೇಳೆಯನ್ನು ಪುಡಿ ಮಾಡಿಡಿ. ನಂತರ 2 ದಿನಕ್ಕೊಮ್ಮೆ ಸ್ವಲ್ಪ ಮೊಟ್ಟೆಯ ಬಿಳಗೆ 1 ಚಮಚ ಹೆಸರು ಬೇಳೆ ಪುಡಿ ಹಾಕಿ ಮಿಶ್ರ ಮಾಡಿ ತಿಕ್ಕಿದರೆ ಸಾಕು ಮುಖದಲ್ಲಿರುವ ಕೂದಲನ್ನು ಹೋಗಲಾಡಿಸಬಹುದು.



Click it and Unblock the Notifications
