Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ತಪ್ಪಾದ ಸೈಜ್ ನ ಬ್ರಾ ಬ್ಯೂಟಿ ಮತ್ತು ಹೆಲ್ತ್ ಗೆ ಆಪತ್ತು!
ನೂರರಲ್ಲಿ 60% ಮಹಿಳೆಯರು ಬ್ರಾ ಸೈಜ್ ಅನ್ನು ತಪ್ಪಾಗಿ ಆಯ್ಕೆ ಮಾಡುತ್ತಾರೆ. ತಮಗೆ ಯಾವ ರೀತಿಯ ಬ್ರಾ ಸೂಕ್ತ, ಎಷ್ಟು ಸೈಜ್ ಬ್ರಾ ಧರಿಸಬೇಕು ಎಂಬ ಅರಿವಿಲ್ಲದೆಯೇ ಕೊಳ್ಳುತ್ತಾರೆ. ಕೆಲವರಿಗೆ 32 ಸೈಜ್ ನ ಬ್ರಾ ಸಾಕಾಗಿರುತ್ತದೆ, ಆದರೆ 34 ಸೈಜ್ ಇರುವ ಬ್ರಾ ಕೊಳ್ಳುತ್ತಾರೆ, 34 ಬೇಕಾದವರೂ ತುಂಬಾ ಬಿಗಿಯಾದ ಬ್ರಾ ಕೊಳ್ಳುತ್ತಾರೆ.
ಸೈಜ್ ಸರಿಯಿಲ್ಲದ ಬ್ರಾ ಧರಿಸುವುದರಿಂದ ನಿಮ್ಮ ಫಿಗರ್ ಹಾಳು ಮಾಡಿಕೊಳ್ಳುವುದು ಮಾತ್ರವಲ್ಲ, ಆರೋಗ್ಯಕ್ಕೆ ಒಳ್ಳೆಯದಲ್ಲ. ತಪ್ಪಾದ ಸೈಜ್ ನ ಬ್ರಾ ಧರಿಸಿದರೆ ಈ ಕೆಳಗಿನ ತೊಂದರೆಗಳನ್ನು ಅನುಭವಿಸಬೇಕಾಗುವುದು:

ಎದೆ ನೋವು
ತಪ್ಪಾದ ಸೈಜ್ ನ ಬ್ರಾ ಧರಿಸಿದರೆ ಸ್ತನದಲ್ಲಿ ನೋವು ಕಂಡು ಬರುವುದು. ತುಂಬಾ ಬಿಗಿಯಾದ ಬ್ರಾ ರಕ್ತ ಸಂಚಲನಕ್ಕೆ ತೊಂದರೆ ಉಂಟು ಮಾಡುವುದರಿಂದ ಈ ರೀತಿಯ ನೋವು ಕಂಡು ಬರುವುದು.

ಬೆನ್ನು ನೋವು
ಆಶ್ಚರ್ಯವಾಗುತ್ತಿದೆಯೇ? ಹೌದು ನೀವು ಧರಿಸುವ ಬ್ರಾಕ್ಕೂ ನಿಮ್ಮ ಸೊಂಟ ನೋವಿಗೂ ನೇರ ಸಂಬಂಧವಿದೆ. ಸರಿಯಾದ ಸೈಜ್ ನ ಬ್ರಾ ನಿಮ್ಮ ಬೆನ್ನು ಮತ್ತು ಸೊಂಟಕ್ಕೆ ಬಲವನ್ನು ನೀಡುತ್ತದೆ. ತುಂಬಾ ಸಡಿಲವಾದ ಬ್ರಾ ಧರಿಸಿದರೆ ಸ್ತನಗಳು ಜೋತು ಬೀಳುವುದರಿಂದ ಬೆನ್ನಿನ ಮೇಲೆ ಒತ್ತಡ ಬೀಳುತ್ತದೆ, ಬಿಗಿಯಾದ ಬ್ರಾ ರಕ್ತ ಸಂಚಾರ ಮತ್ತು ಆಮ್ಲಜನಕದ ಪೂರೈಕೆಗೆ ಅಡಚಣೆಯನ್ನು ಉಂಟು ಮಾಡುತ್ತದೆ. ಇದರಿಂದ ಬೆನ್ನು ಮತ್ತು ಸೊಂಟ ನೋವು ಕಂಡು ಬರುವುದು.

ಸ್ತನಗಳು ಜೋತು ಬಿದ್ದು ದೇಹದ ಆಕರ್ಷಕ ಭಂಗಿ ಹಾಳಾಗುವುದು
ಸ್ತನಗಳು ಜೋತು ಬಿದ್ದರೆ ದೇಹದ ಆಕರ್ಷಕ ನಿಲುವು ಹಾಳಾಗುವುದು, ಆದ್ದರಿಂದ ಸ್ತನಗಳನ್ನು ಜೋತು ಬೀಳದಂತೆ ತಡೆಯಬೇಕು. ಸರಿಯಾದ ಸೈಜ್ ನ ಬ್ರಾ ಮತ್ತು ಮಸಾಜ್ ವಯಸ್ಸಾದರೂ ನಿಮ್ಮ ಸ್ತನ ಜೋತು ಬೀಳುವುದನ್ನು ತಡೆದು ನಿಮ್ಮ ಬ್ಯೂಟಿ ಹೆಚ್ಚಿಸುತ್ತದೆ.

ಭುಜ ಮತ್ತು ಕುತ್ತಿಗೆ ನೋವು
ಬ್ರಾ ಸೈಜ್ ತಪ್ಪಾಗಿ ಇದ್ದರೆ ಭುಜ ಮತ್ತು ಕುತ್ತಿಗೆ ನೋವು ಸಹ ಕಂಡು ಬರುವುದು. ಈ ತೊಂದರೆಗಳು ಬಾರದಿರಲು ಸರಿಯಾದ ಸೈಜ್ ನ ಬ್ರಾ ಆಯ್ಕೆ ಮಾಡಿ.

ಎದೆಯ ಗಾತ್ರ ಹಾಳಾಗುವುದು
ಬಿಗಿಯಾದ ಬ್ರಾ ಸ್ತನದ ಕೆಳಗೆ ಗೆರೆಯನ್ನು ಮೂಡಿಸುವುದು, ಸಡಿಲವಾದ ಬ್ರಾ ಸ್ತನದ ಸ್ನಾಯುಗಳನ್ನು ಸಡಿಲ ಮಾಡಿ ಜೋತು ಬೀಳುವಂತೆ ಮಾಡುತ್ತದೆ.

ಡ್ರೆಸ್ ಆಕರ್ಷಕವಾಗಿ ಕಾಣುವುದಿಲ್ಲ
ನಮ್ಮ ದೇಹದ ಭಂಗಿ ಸರಿಯಾಗಿದ್ದರೆ ಮಾತ್ರ ನಾವು ಧರಿಸುವ ಡ್ರೆಸ್ ಗೆ ನಮ್ಮ ಚೆಲುವನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯ. ತಪ್ಪದ ಬ್ರಾ ಸೈಜ್ ಹಾಕಿ, ಆಕರ್ಷಕ ಡ್ರೆಸ್ ಹಾಕಿದರೆ ಚೆಂದ ಕಾಣುವಿರಿ ಎಂದು ಊಹಿಸಬೇಡಿ.

ಸ್ತನದ ಗಾತ್ರ
ಸರಿಯಾದ ಗಾತ್ರದ ಬ್ರಾ ಧರಿಸದಿದ್ದರೆ ನಿಮ್ಮ ಸ್ತನ ಗಾತ್ರ ಒಂದೋ ಹೆಚ್ಚಾಗಬಹುದು, ಇಲ್ಲದಿದ್ದರೆ ಚಿಕ್ಕದಾಗಬಹುದು. ಸರಿಯಾದ ಸೈಜ್ ನ ಬ್ರಾ ನಿಮ್ಮ ಲುಕ್ ಕಾಪಾಡುತ್ತೆ.

ಸ್ತನ ಕ್ಯಾನ್ಸರ್
ರಕ್ತ ಸಂಚಾರ ಸರಿಯಾಗಿ ನಡೆಯಲು ಸಹಾಯ ಮಾಡುವಂತಹ ಬ್ರಾ ಸೈಜ್ ಧರಿಸಿ. ರಕ್ತ ಸಂಚಾರ ಸರಿಯಾಗಿ ಆಗದಿದ್ದರೆ ರಕ್ತ ಹೆಪ್ಪುಗಟ್ಟಿ, ಸ್ತನದಲ್ಲಿ ಗಡ್ಡೆಗಳು ಉಂಟಾಗಿ ಸ್ತನ ಕ್ಯಾನ್ಸರ್ ಉಂಟಾಗಬಹುದು. ಆದ್ದರಿಂದ ಬ್ರಾ ಸೈಜ್ ಬಗ್ಗೆ ಜಾಗ್ರತೆ.

ಸ್ತನದ ಮೇಲೆ ಕಲೆಗಳು
ತಪ್ಪಾದ ಸೈಜ್ ನ ಬ್ರಾ ಧರಿಸುವುದರಿಂದ ಸ್ತನ ತ್ವಚೆಯಲ್ಲೂ ಸಮಸ್ಯೆಗಳು ಕಂಡು ಬಂದು ಕಲೆಗಳು ಉಂಟಾಗುವುದು. ಆದ್ದರಿಂದ ಸರಿಯಾದ ಸೈಜ್ ನ ಬ್ರಾ ನಿಮ್ಮ ಆಯ್ಕೆಯಾಗಿರಲಿ.



Click it and Unblock the Notifications
