Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕರ್ಪೂರದಲ್ಲಿದೆ ತ್ವಚೆ ಹಾಗೂ ಕೂದಲಿನ ಸಮಸ್ಯೆಗೆ ಪರಿಹಾರ
ಕರ್ಪೂರದಲ್ಲಿ ಅನೇಕ ಔಷಧೀಯ ಗುಣಗಳಿವೆ. ಆದ್ದರಿಂದಲೇ ಇದನ್ನು ತ್ವಚೆ ಹಾಗೂ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುವುದು. ಆರ್ಯುವೇದದಲ್ಲಿ ಅನೇಕ ಬ್ಯೂಟಿ ಟ್ರೀಟ್ ಮೆಂಟ್ ಗಳಿವೆ ಕರ್ಪೂರವನ್ನು ಬಳಸುತ್ತಾರೆ.
ಕರ್ಪೂರ ಮೊಡವೆ ಹೋಗಲಾಡಿಸುವಲ್ಲಂತೂ ತುಂಬಾ ಪರಿಣಾಮಕಾರಿ. ಕರ್ಪೂರ ಬಳಸಿ ತ್ವಚೆ, ಕೂದಲಿನ ಆರೈಕೆಯನ್ನು ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ:

ತ್ವಚೆಯಲ್ಲಿ ತುರಿಕೆ ಕಂಡು ಬಂದರೆ
ತ್ವಚೆಯಲ್ಲಿ ವಿಪರೀತ ತುರಿಕೆ ಕಂಡು ಬಂದರೆ ಅದನ್ನು ಕರ್ಪೂರ ಬಳಸಿ ಕಡಿಮೆಮಾಡಬಹುದು. ಕರ್ಪೂರದ ಪೇಸ್ಟ್ ಅನ್ನು ತುರಿಕೆ ಇರುವ ಕಡೆ ಹಚ್ಚಿದರೆ ತಕ್ಷಣ ಕಡಿಮೆಯಾಗುವುದು.

ಗಾಯವನ್ನು ಒಣಗಿಸಲು
ಕೆಲವರಿಗೆ ಗಾಯವಾದರೆ ಬೇಗನೆ ಒಣಗುವುದಿಲ್ಲ, ಅಂತವರು ಕರ್ಪೂರವನ್ನು ನೀರಿನಲ್ಲಿ ಕರಗಿಸಿ ಗಾಯವನ್ನು ಸ್ವಚ್ಛ ಮಾಡುತ್ತಾ ಬಂದರೆ ಗಾಯ ಗುಣವಾಗುವುದು. ಆಗಷ್ಟೇ ಆದ ಗಾಯಕ್ಕೆ ಕರ್ಪೂರ ಹಾಕಬೇಡಿ. ತುಂಬಾ ದಿನವಾದರೂ ಒಣಗಿದ್ದ ಗಾಯವನ್ನು ಒಣಗಿಸಲು ಮಾತ್ರ ಕರ್ಪೂರ ಬಳಸಿ.

ಮೊಡವೆ
ಕರ್ಪೂರದ ಎಣ್ಣೆಯನ್ನು ಮೊಡವೆ ಇರುವ ಕಡೆ ಹಚ್ಚಿದರೆ ಮೊಡವೆ ಒಣಗುವುದು, ಹಾಗೂ ಮೊಡವೆ ಏಳುವುದನ್ನೂ ತಡೆಗಟ್ಟುತ್ತದೆ.

ತ್ವಚೆಯಲ್ಲಿ ಗುಳ್ಳೆಗಳು ಕಂಡುಬಂದರೆ
ಕೆಲವೊಮ್ಮೆ ತ್ವಚೆಯಲ್ಲಿ ತುರಿಕೆಯ ಜೊತೆ ಚಿಕ್ಕ-ಚಿಕ್ಕ ಗುಳ್ಳೆಗಳು ಕಂಡುಬರುತ್ತದೆ, ಆ ಸಮಸ್ಯೆಯನ್ನು ಹೋಗಲಾಡಿಸಲು ಕರ್ಪೂರವನ್ನು ಮೈಗೆ ಲೇಪಿಸಿದರೆ ಸಾಕು.

ಪಾದಗಳು ಬಿರುಕು ಬಿಟ್ಟಿದ್ದರೆ
ಬಿರುಕು ಪಾದಗಳು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಆ ಸಮಸ್ಯೆ ಕಡಿಮೆಯಾಗಿರುವುದಿಲ್ಲ. ಅಂತವರು ಈ ರೀತಿ ಒಮ್ಮೆ ಟ್ರೈ ಮಾಡಿ ನೋಡಿ.
ಪ್ರತೀದಿನ ಕರ್ಪೂರ ಹಾಕಿ ಉಗುರು ಬೆಚ್ಚಗಿನ ನೀರಿನಲ್ಲಿ 5 ನಿಮಿಷ ಪಾದಗಳನ್ನು ನೆನೆಸಿ, ನಂತರ ಸ್ಕ್ರಬ್ ಮಾಡಿ. ಈ ರೀತಿ ಮಾಡುವುದರಿಂದ ಪಾದಗಳಲ್ಲಿ ಬಿರುಕು ಕಡಿಮೆಯಾಗುವುದು.

ಕೂದಲಿನ ಆರೋಗ್ಯಕ್ಕೆ
ಕರ್ಪೂರ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕರ್ಪೂರದ ಎಣ್ಣೆ ಕೂದಲನ್ನು ಮಂದವಾಗಿಸುತ್ತದೆ, ಕೂದಲಿನ ಬುಡವನ್ನು ಬಲವಾಗಿಸುತ್ತದೆ. ಕರ್ಪೂರವನ್ನು ಮೊಸರು ಜೊತೆ ಮಿಕ್ಸ್ ಮಾಡಿ ಹಚ್ಚಿದರೆ ಕೂದಲಿನ ಹೊಳಪು ಹೆಚ್ಚುವುದು.

ಕೂದಲು ಉದುರುವುದನ್ನು ಕಮ್ಮಿ ಮಾಡುತ್ತದೆ
ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ತಲೆಯನ್ನು ಕರ್ಪೂರ ಮತ್ತು ಎಣ್ಣೆ ಮಿಕ್ಸ್ ಮಾಡಿ ಮಸಾಜ್ ಮಾಡಿದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದು.



Click it and Unblock the Notifications
