Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ
ಬೇಬಿ ಆಯಿಲ್ ದೊಡ್ಡವರ ತ್ವಚೆಯನ್ನು ಮೃದುವಾಗಿಸುವುದೇ?
ಮಕ್ಕಳ ಮೃದುವಾದ ತ್ವಚೆಗೆ ಬೇಬಿ ಆಯಿಲ್ ಹಚ್ಚುತ್ತೇವೆ. ಆದರೆ ಇದೇ ಬೇಬಿ ಆಯಿಲ್ ಅನ್ನು ನಮ್ಮ ತ್ವಚೆಗೂ ಹಚ್ಚಿದರೆ ಪ್ರಯೋಜನ ದೊರೆಯುವುದೇ ಎಂದು ನೀವು ಕೇಳುವುದಾದರೆ ಹೌದು ಎಂದು ಹೇಳ ಬಲ್ಲೆ. ನಮ್ಮ ತ್ವಚೆ ಮಗುವಿನ ತ್ವಚೆಗಿಂತ ಗಟ್ಟಿಯಾಗಿರುತ್ತದೆ ಅನ್ನುವುದು ನಿಜ, ಆದರೆ ಈ ಆಯಿಲ್ ಅನ್ನು ನಮ್ಮ ತ್ವಚೆಗೆ ಹಚ್ಚಿದರೆ ಮಗುವಿನಷ್ಟು ಅಲ್ಲದಿದ್ದರೂ, ಮೃದುವಾದ ತ್ವಚೆಯನ್ನು ನೀಡುತ್ತದೆ.
ಅದರಲ್ಲಂತೂ ಮೇಕಪ್ ರಿಮೂವರ್ ಆಗಿ ಈ ಎಣ್ನೆಯನ್ನು ಬಳಸಬಹುದು, ಮುಖಕ್ಕೆ ಬಣ್ಣ ಮೆತ್ತಿದರೆ ಅದನ್ನು ತೆಗೆಯಲು ಬೇಬಿ ಆಯಿಲ್ ಬಳಸುವುದು ಸೂಕ್ತ. ಬೇಬಿ ಆಯಿಲ್ ಬಳಸಿದರೆ ಮೃದುವಾದ ತ್ವಚೆ ಪಡೆಯುವುದರ ಜೊತೆಗೆ ಈ ಕೆಳಗಿನ ಸೌಂದರ್ಯವರ್ಧಕ ಗುಣಗಳನ್ನು ಪಡೆಯಬಹುದು:

ಮಾಯಿಶ್ಚರೈಸರ್
ಬೇಬಿ ಆಯಿಲ್ ಸೂಪರ್ ಆದ ಮಾಯಿಶ್ಚರೈಸರ್, ಅದರಲ್ಲಿ ಸ್ಕಿನ್ ಡ್ರೈಯಾಗಿದ್ದರೆ, ಪಾದಗಳಲ್ಲಿ ಬಿರುಕು ಕಂಡು ಬಂದರೆ, ಚಳಿಗಾಲದಲ್ಲಿ ಕಂಡು ಬರುವ ತ್ವಚೆ ಸಮಸ್ಯೆ ಇವುಗಳೆನ್ನೆಲ್ಲಾ ಹೋಗಲಾಡಿಸಲು ಬೇಬಿ ಆಯಿಲ್ ಸಾಕು.

ಮೇಕಪ್ ತೆಗೆಯಲು
ಮುಖದ ಮೇಕಪ್ ತೆಗೆಯಲು ಕೆಮಿಕಲ್ ಇರುವ ರಿಮೂವರ್ ಬಳಸುವ ಬದಲು ಬೇಬಿ ಆಯಿಲ್ ಬಳಸಿ, ಮೇಕಪ್ ತ್ವಚೆಯನ್ನು ಹಾಳು ಮಾಡದಂತೆ ತಡೆದು ತ್ವಚೆಯನ್ನು ಮೃದುವಾಗಿ ಇಡುತ್ತದೆ.

ಮಸಾಜ್ ಆಯಿಲ್
ಈ ಎಣ್ಣೆಯನ್ನು ಮಗುವಿನ ದೇಹ ಮಾತ್ರವಲ್ಲ, ನಿಮ್ಮ ದೇಹವನ್ನು ಮಸಾಜ್ ಮಾಡಲು ಬಳಸಬಹುದು.

ಶೇವ್ ಮಾಡುವಾಗ
ಬೇಬಿ ಆಯಿಲ್ ಹಚ್ಚಿ ಶೇವ್ ಮಾಡಿದರೆ ಸುಲಭದಲ್ಲಿ ಶೇವ್ ಮಾಡಬಹುದು, ಶೇವ್ ಮಾಡಿದ ಬಳಿಕ ಇದರಿಂದ ಮುಖವನ್ನು ಮಸಾಜ್ ಮಾಡಿ, ತ್ವಚೆಯೂ ಮೃದುವಾಗಿರುತ್ತದೆ.

ಸ್ನಾನ ಮಾಡುವಾಗ
ಸ್ನಾನ ಮಾಡುವಾಗ ಸ್ವಲ್ಪ ಬೇಬಿ ಆಯಿಲ್ ಅನ್ನು ಒಂದು ಮಗ್ ನೀರಿನಲ್ಲಿ ಹಾಕಿಡಿ. ಸ್ನಾನದ ನಂತರ ಈ ನೀರನ್ನು ಮೈಗೆ ಸುರಿದು, ನಂತರ ಟವಲ್ ನಿಂದ ಮೈ ಒರೆಸಿ. ಇದು ನಿಮ್ಮ ಮೈಯಲ್ಲಿ ಮಾಯಿಶ್ಚರೈಸರ್ ಕಾಪಾಡುತ್ತದೆ ಹಾಗೂ ದೇಹವೂ ಸುಗಂಧವಾಸನೆಯಿಂದ ಕೂಡಿರುತ್ತದೆ.

ಮೈಯನ್ನು ಬೆಚ್ಚಗಿಡುತ್ತದೆ
ಚಳಿ ಮತ್ತು ಮಳೆಗಾಲದಲ್ಲಿ ಈ ಎಣ್ಣೆಯಿಂದ ಮಸಾಜ್ ಮಾಡಿದರೆ ಮೈ ಬೆಚ್ಚಗಿರುತ್ತದೆ.

ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸುತ್ತದೆ
ಸಾಮಾನ್ಯವಾದ ಎಣ್ಣೆಗಳಲ್ಲಿ ಈ ಗುಣ ಇರುವುದಿಲ್ಲ. ಆದರೆ ಬೇಬಿ ಆಯಿಲ್ ಬಳಸಿ ಸ್ಟ್ರೆಚ್ ಮಾರ್ಕ್ಸ್ ಬೀಳುವುದನ್ನು ತಡೆಯಬಹುದು, ಬಿದ್ದ ಸ್ಟ್ರೆಚ್ ಮಾರ್ಕ್ಸ್ ಎದ್ದು ಕಾಣದಂತೆ ತಡೆಯಬಹುದು.



Click it and Unblock the Notifications
