ಆಕರ್ಷಕವಾದ ಪಾದಗಳಿಗಾಗಿ 10 ಟಿಪ್ಸ್

By Super

ಒಣಗಿದ ಮತ್ತು ಒಡೆದ ಪಾದಗಳು ನೋಡಲು ಅಸಹ್ಯಕರವಾಗಿರುತ್ತವೆ. ಅಲ್ಲದೆ ಇವು ಒಟ್ಟಾರೆಯಾಗಿ ನಿಮ್ಮ ನಿಲುವಿನಲ್ಲಿ ಲೋಪವನ್ನುಂಟು ಮಾಡುತ್ತವೆ. ಅದರಲ್ಲಿಯೂ ನೀವು ಪಟ್ಟಿಯಿರುವ ಸ್ಯಾಂಡಲ್ಸ್ ಧರಿಸಲು ಬಯಸಿದರೆ, ಒರಟು ಪಾದವು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಆದಾಗಿಯೂ ನಮ್ಮಲ್ಲಿ ಹಲವರಿಗೆ ಈ ಸಮಸ್ಯೆಯು ಪ್ರತಿನಿತ್ಯದ ಸಂಗತಿಯಾಗಿದ್ದರೆ, ಕೆಲವರಿಗೆ ಕೆಲವು ಋತುವಿನಲ್ಲಿ ಮಾತ್ರ ಈ ಸಮಸ್ಯೆಯು ಕಾಡುತ್ತದೆ.

ಈ ಸಮಸ್ಯೆ ನಿಮಗೆ ಪ್ರತಿನಿತ್ಯ ಕಾಡುತ್ತದೆಯೋ ಅಥವಾ ಯಾವಗಲೋ ಒಮ್ಮೆ ಕಾಡುತ್ತದೆಯೋ ಎಂಬುದು ಮುಖ್ಯವಲ್ಲ. ಈ ಸಮಸ್ಯೆ ಬಂದರೆ ಅದನ್ನು ನೀವು ಉದಾಸೀನ ಮಾಡುವಂತಿಲ್ಲ. ಹಾಗಾಗಿ ನೀವು ಪಾದರಕ್ಷೆಗಳನ್ನು ಧರಿಸುವ ಇಚ್ಛೆಯುಳ್ಳವರಾಗಿದ್ದು, ಒಡೆದ ಪಾದಗಳನ್ನು, ಒರಟಾದ ತ್ವಚೆಯನ್ನು ಮತ್ತು ಕೊಳಕು ಉಗುರುಗಳನ್ನು ಹೊಂದಿದ್ದಲ್ಲಿ ನೀವು ಪಾದರಕ್ಷೆ ಧರಿಸಲು ಹಿಂಜರಿಯುತ್ತಿದ್ದೀರಾ? ಹಾಗಾದರೆ ನೀವು ಈ ಅಂಕಣವನ್ನು ಓದಲೇಬೇಕು. ಏಕೆಂದರೆ ನಾವು ಹೇಳಲು ಹೋಗುತ್ತಿರುವ ವಿಚಾರವನ್ನು ಕೇವಲ ಮಹಿಳೆಯರು ಮಾತ್ರ ಓದಬೇಕು ಎಂದಲ್ಲ ಪುರುಷರು ಸಹ ಇಲ್ಲಿರುವ 10 ಸುಲಭೋಪಾಯಗಳ ಪ್ರಯೋಜನವನ್ನು ಪಡೆಯಬಹುದು.

1. ಸ್ನಾನದ ಸಮಯದಲ್ಲಿ ನಿಮ್ಮ ಪಾದಗಳಿಗೆ ಗಮನಕೊಡಿ

1. ಸ್ನಾನದ ಸಮಯದಲ್ಲಿ ನಿಮ್ಮ ಪಾದಗಳಿಗೆ ಗಮನಕೊಡಿ

ನೀವು ಸ್ನಾನ ಮಾಡುವಾಗ ನಿಮ್ಮ ಪಾದಗಳಿಗೆ ಸಹ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಿ. ಸ್ನಾನ ಮಾಡುವಾಗ ನಿಮ್ಮ ಪಾದಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ನೀವು ಬಳಸುವ ಬಾಡಿ ವಾಷ್ ಅಥವಾ ಸೋಪಿನಿಂದ ನಿಮ್ಮ ಪಾದಗಳನ್ನು ಚೆನ್ನಾಗಿ ತಿಕ್ಕಿ ತೊಳೆಯಿರಿ.

2. ನಿಮ್ಮ ಪಾದಗಳಿಗಾಗಿ ಹಾಲಿನ ಥೆರಪಿಯನ್ನು ಮಾಡಿ

2. ನಿಮ್ಮ ಪಾದಗಳಿಗಾಗಿ ಹಾಲಿನ ಥೆರಪಿಯನ್ನು ಮಾಡಿ

ತಿಂಗಳಿಗೊಮ್ಮೆ ಕಾಲು ಲೀಟರ್ ಬೆಚ್ಚಗೆ ಇರುವ ಹಾಲು ತೆಗೆದುಕೊಂಡು ಅದರಲ್ಲಿ ನಿಮ್ಮ ಪಾದಗಳನ್ನು ನೆನೆಸಿ.

ಹೀಗೆ ಮಾಡುವುದರಿಂದ ಹಾಲಿನಲ್ಲಿ ಇರುವ ಲ್ಯಾಕ್ಟಿಕ್ ಆಮ್ಲವು ನಿಮ್ಮ ಪಾದದಲ್ಲಿರುವ ಒಣಗಿದ ಭಾಗಗಳನ್ನು ನಿವಾರಿಸಿ, ನಿಮ್ಮ ಪಾದಗಳನ್ನು ಅತ್ಯಂತ ಮೃದುವನ್ನಾಗಿಸಬಹುದು.

3. ನಿಮ್ಮ ಪಾದಗಳನ್ನು ನೆನೆಸಿ

3. ನಿಮ್ಮ ಪಾದಗಳನ್ನು ನೆನೆಸಿ

ಸ್ನಾನ ಮಾಡಿ ಪಾದಗಳನ್ನು ತೊಳೆದ ಮಾತ್ರಕ್ಕೆ ನಿಮ್ಮ ಪಾದಗಳು ಮೃದುವಾಗುವುದಿಲ್ಲ. ಇದರ ಜೊತೆಗೆ ಸ್ನಾನ ಮಾಡುವಾ ನಿಮ್ಮ ಪಾದಗಳನ್ನು ಬೆಚ್ಚಗಿನ ನೀರಿನಲ್ಲಿ 5-10 ನಿಮಿಷಗಳ ಕಾಲ ನೆನೆಸಿ. ಹೀಗೆ ಮಾಡುವುದರಿಂದ ನಿಮ್ಮ ಒಣ ಹಾಗು ಒಡೆದ ಪಾದಗಳನ್ನು ಮೃದುವಾಗಿಸಬಹುದು. ಪಾದಗಳಲ್ಲಿರುವ ನಿರ್ಜೀವ ಕೋಶಗಳನ್ನು ಸುಲಭವಾಗಿ ತೊಡೆದು ಹಾಕಬಹುದು. ಆದರೆ ನಿಮ್ಮ ಪಾದಗಳನ್ನು ತುಂಬಾ ಹೊತ್ತು ನೆನೆಸಲು ಹೋಗಬೇಡಿ.

4. ಪ್ಯೂಮಿಕ್ ಸ್ಟೋನ್ ನಿಂದ ಕಾಲು ತಿಕ್ಕಿ

4. ಪ್ಯೂಮಿಕ್ ಸ್ಟೋನ್ ನಿಂದ ಕಾಲು ತಿಕ್ಕಿ

ವಾರಕ್ಕೆ ಎರಡು ಬಾರಿಯಾದರು ಮೈ ಉಜ್ಜುವ ಕಲ್ಲಿನಿಂದ ನಿಮ್ಮ ಪಾದಗಳನ್ನು. ಬೆರಳುಗಳನ್ನು ಮತ್ತು ಅಂಗಾಲುಗಳನ್ನು ಮೃದುವಾಗಿ ತಿಕ್ಕಿ ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಪಾದದಲ್ಲಿನ ನಿರ್ಜೀವ ಕೋಶಗಳನ್ನು ನಿವಾರಿಸಬಹುದು. ಪ್ರತಿ ಪಾದವನ್ನು ಎರಡು ನಿಮಿಷಗಳ ಕಾಲ ಮೆದುವಾಗಿ ತಿಕ್ಕುವುದರಿಂದ ಪಾದಗಳು ಮೃದುವಾಗುತ್ತವೆ ಮತ್ತು ರೇಶ್ಮೆಯಂತೆ ಹೊಳೆಯುತ್ತವೆ. ಆದರೆ ಯಾವುದೇ ಕಾರಣಕ್ಕು ಜೋರಾಗಿ ತಿಕ್ಕಬೇಡಿ. ಇದರಿಂದ ಚರ್ಮ ಹರಿಯುವ ಮತ್ತು ಕಿರಿಕಿರಿಯುಂಟು ಮಾಡುವ ಸಾಧ್ಯತೆಯಿದೆ.

5. ನಿಮ್ಮ ಕಾಲ್ಬೆರಳಿನ ಉಗುರುಗಳಿಗೆ ಒಂದು ರೂಪ ಕೊಡಿ

5. ನಿಮ್ಮ ಕಾಲ್ಬೆರಳಿನ ಉಗುರುಗಳಿಗೆ ಒಂದು ರೂಪ ಕೊಡಿ

ಉಗುರು ಕತ್ತರಿಸುವ ಸಾಧನ ತೆಗೆದುಕೊಂಡು ಹೆಚ್ಚಾಗಿ ಬೆಳೆದಿರುವ ಉಗುರನ್ನು ಕತ್ತರಿಸಿ. ನಿಮ್ಮ ಕಾಲ್ಬೆರಳಿಗೆ ಸ್ನಾನದ ಥೆರಪಿ ಕೊಟ್ಟಂತೆ, ಉಗುರುಗಳಿಗು ಸಹ ಒಂದು ರೂಪ ಕೊಡಿ. ಉದ್ದವಾದ ಕಾಲ್ಬೆರಳಿನ ಉಗುರುಗಳು ನಂಜುಕಾರಕವಾದ ಕೊಳೆ ಮತ್ತು ಬ್ಯಾಕ್ಟೀರಿಯಾಗಳಿಗೆ ಆಶ್ರಯವನ್ನು ಒದಗಿಸುತ್ತದೆ.

6. ನಿಮ್ಮ ಶೂಗಳನ್ನು ಗಾಳಿಗೆ ತೆರೆದಿಡಿ

6. ನಿಮ್ಮ ಶೂಗಳನ್ನು ಗಾಳಿಗೆ ತೆರೆದಿಡಿ

ನೀವು ಶೂ ಧರಿಸುವ ಮುನ್ನ ಅದನ್ನು ಒಂದು ದಿನದ ಮಟ್ಟಿಗಾದರು ಗಾಳಿಗೆ ತೆರೆದಿಡಿ. ಅದರಲ್ಲಿಯೂ ವಿಶೇಷವಾಗಿ ಸ್ನೀಕರ್ಸ್ ಮತ್ತು ಬೂಟುಗಳನ್ನು ಗಾಳಿಗೆ ತೆರೆದಿಡಲು ಮರೆಯಬೇಡಿ. ಅಕಸ್ಮಾತ್ ನಿಮ್ಮ ಸ್ನೀಕರ್ಸ್ ಏನಾದರು ದುರ್ವಾಸನೆ ಬರುತ್ತಿದ್ದರೆ ಅದನ್ನು ಹೊರಗೆ ಹಾಕಿ ಅಥವಾ ಮೊದಲು ಅದನ್ನು ಸ್ವಚ್ಛಗೊಳಿಸಿ. ದುರ್ವಾಸನೆ ಬರುವ ಶೂಗಳನ್ನು ಧರಿಸುವುದರಿಂದ ಸಹ ನಿಮ್ಮ ಪಾದಗಳಿಗೆ ಹಾನಿಯಾಗುತ್ತದೆ.

7. ನಿಮ್ಮ ಪಾದಗಳಿಗೆ ಮೊಯಿಶ್ಚರೈಸರ್ ಹಚ್ಚಿ

7. ನಿಮ್ಮ ಪಾದಗಳಿಗೆ ಮೊಯಿಶ್ಚರೈಸರ್ ಹಚ್ಚಿ

ನಿಮ್ಮ ಪಾದಗಳಿಗೆ ಮೊಯಿಶ್ಚರೈಸರ್ ಅನ್ನು ಲೇಪಿಸಿ ಹಾಗು ಶುದ್ಧವಾದ ಹತ್ತಿಯ ಸಾಕ್ಸ್ ಗಳನ್ನು ತೊಡಿ. ಇದನ್ನು ಮಲಗುವ ಮೊದಲು ಮಾಡಿದರೆ ಅದರ ಫಲಿತಾಂಶವು ಪರಿಣಾಮಕಾರಿಯಾಗಿರುತ್ತದೆ. ನಿಮಗೆ ಮೊಯಿಶ್ಚರೈಸರ್ ಬೇಡವಾದಲ್ಲಿ ಯಾವುದಾದರು ಸಸ್ಯ ಜನ್ಯ ಎಣ್ಣೆಯನ್ನು ಬಳಸಬಹುದು.

8. ಸೂಕ್ತವಾದ ಶೂಗಳನ್ನು ಧರಿಸಿ

8. ಸೂಕ್ತವಾದ ಶೂಗಳನ್ನು ಧರಿಸಿ

ನಿಮಗೆ ಸರಿಹೊಂದುವ ಸೂಕ್ತವಾದ ಶೂಗಳನ್ನು ಧರಿಸಿ. ಸರಿಯಾದ ಗಾತ್ರದ ಶೂಗಳು ನಿಮ್ಮ ಹಿಮ್ಮಡಿಗಳನ್ನು ಒಡೆಯುವುದನ್ನು ಪರಿಣಾಮಕಾರಿಯಾಗಿ ತಡೆಯುತ್ತವೆ. ಆರಾಮದಾಯಕವಾದ ಶೂಗಳು ಹಿಮ್ಮಡಿಗಳ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರುತ್ತವೆ. ಪಾದರಕ್ಷೆಗಳು ಹೇಗೆ ಇರಬೇಕು ಎಂದರೆ ಅವುಗಳನ್ನು ಹಾಕಿಕೊಂಡು ನಡೆಯುವಾಗ ಯಾವುದೇ ರೀತಿಯ ನೋವು ಅಥವಾ ಕಿರಿಕಿರಿಯುಂಟಾಗಬಾರದು.

9. ವಿಶ್ರಾಂತಿಯು ಅತ್ಯಾವಶ್ಶಕ

9. ವಿಶ್ರಾಂತಿಯು ಅತ್ಯಾವಶ್ಶಕ

ತುಂಬಾ ಹೊತ್ತು ನಿಲ್ಲುವುದು ಅಥವಾ ನಡೆದಾಡುವುದರಿಂದ ಪಾದಗಳಲ್ಲಿ ಒಡೆತ ಉಂಟಾಗುತ್ತದೆ. ಹಾಗಾಗಿ ಒಡೆತ ಮತ್ತು ಕುರುಗಳಾಗುವುದನ್ನು ತಡೆಯಲು ನಿಮ್ಮ ಪಾದಗಳಿಗೆ ಸ್ವಲ್ಪ ವಿಶ್ರಾಂತಿಯನ್ನು ಆಗಾಗ್ಗೆ ನೀಡುತ್ತಿರಿ.

10. ನಿಮ್ಮ ಪಾದಗಳಿಗೆ ಒಂದು ಚೆಂದದ ಮಸಾಜನ್ನು ನೀಡಿ

10. ನಿಮ್ಮ ಪಾದಗಳಿಗೆ ಒಂದು ಚೆಂದದ ಮಸಾಜನ್ನು ನೀಡಿ

ಪಾದಗಳಿಗೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಚೆನ್ನಾಗಿ ಆಗಿ ಪಾದಗಳಿಗೆ ಆರಾಮವನ್ನು ಒದಗಿಸುತ್ತದೆ. ಮಸಾಜ್ ಮಾಡಬೇಕಾದರೆ ಪಾದದ ಮೇಲೆ ಬೀಳುವ ಒತ್ತಡ ಮತ್ತು ಎಣ್ಣೆಯು ನಿಮ್ಮ ಪಾದಗಳು ಮೃದುವಾದ ಮತ್ತು ನವ ಚೈತನ್ಯವನ್ನು ಪಡೆದ ಅನುಭವವನ್ನು ನೀಡುತ್ತದೆ.

X
Desktop Bottom Promotion