Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಕರ್ಷಕ ಸೌಂದರ್ಯದ ರಹಸ್ಯ ನೋಡಿ ಇಲ್ಲಿದೆ!
ಕೆಲವರ ಹೊಳೆಯುವ ತ್ವಚೆ, ಆಕರ್ಷಕ ಕೂದಲು ನೋಡುವಾಗ ಎಷ್ಟು ನುಣಪಾಗಿ, ಸುಂದರವಾಗಿದೆ ಅನಿಸುತ್ತದೆ. ಈ ರೀತಿ ತ್ವಚೆ ಮತ್ತು ಕೂದಲಿನ ಸೌಂದರ್ಯ ನಮಗೂ ಬೇಕು ಅನಿಸುವುದು ಸಹಜ. ಅದರಲ್ಲೂ ಸಿನಿಮಾ ನಟಿಯರು ತ್ವಚೆ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುವುದರಿಂದ ಅವರ ತ್ವಚೆ ತುಂಬಾ ಆಕರ್ಷಕವಾಗಿ ಕಾಣುತ್ತದೆ. ನೀವೂ ಕೂಡ ಸ್ವಲ್ಪ ಪ್ರಯತ್ನಿಸಿದರೆ ಆ ರೀತಿಯ ತ್ವಚೆ ಸೌಂದರ್ಯ ಪಡೆಯುವುದು ಕಷ್ಟದ ವಿಷಯವಿಲ್ಲ. ಈ ಕೆಳಗ್ಗೆ ಕೆಲ ಸಲಹೆಗಳಿವೆ. ಅವುಗಳು ನಿಮ್ಮ ಅಂದವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುವುದು.

1. ಹೊಳೆಯುವ ಕೂದಲಿಗೆ: ಹೊಳೆಯುವ ಕೂದಲನ್ನು ಪಡೆಯಲು ತಲೆಬುಡಕ್ಕೆ ಉತ್ತಮವಾದ ರೀತಿಯಲ್ಲಿ ಆರೈಕೆ ಮಾಡಬೇಕು. ಬಾದಾಮಿ ಎಣ್ಣೆ ಮತ್ತು ಆಲೀವ್ ಎಣ್ಣೆಯನ್ನು ಮಿಶ್ರ ಮಾಡಿ ತಲೆಗೆ ಹಚ್ಚಿ 30 ನಿಮಿಷ ಬಿಟ್ಟು ತಲೆ ತೊಳೆಯಬೇಕು. ತಲೆಗೆ ಎಣ್ಣೆ ಹಚ್ಚಿದಾಗ ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ, ನಂತರ ನೀರನ್ನು ಚೆನ್ನಾಗಿ ಹಿಂಡಿ ತಲೆಗೆ ಸುತ್ತಬೇಕು. ಈ ರೀತಿ ಸುತ್ತಿದರೆ ತಲೆಗೆ ಎಣ್ಣೆ ಚೆನ್ನಾಗಿ ಹಿಡಿಯುತ್ತದೆ. ಹೊಟ್ಟಿನ ಸಮಸ್ಯೆ ಇದ್ದರೆ ಕೂದಲಿನ ಬುಡಕ್ಕೆ ಸರಿಯಾಗಿ ಎಣ್ಣೆ ಹಚ್ಚಿದರೆ ಕಮ್ಮಿಯಾಗುವುದು. ನಂತರ ಮೃದುವಾದ ಶ್ಯಾಂಪೂ ನಿಂದ ತಲೆ ತೊಳೆದರೆ ಕೂದಲು ಹೊಳಪನ್ನ ಪಡೆಯುತ್ತದೆ.
2. ಫೇಸ್ ಕ್ಲೆನ್ಸರ್: ಬಾದಾಮಿಯನ್ನು ಪುಡಿ ಮಾಡಿ ಅದನ್ನು ಜೇನಿನ ಜೊತೆ ಮಿಶ್ರ ಮಾಡಬೇಕು. ನಂತರ ಸ್ವಲ್ಪ ನಿಂಬೆ ರಸ ಸೆರಿಸಬೇಕು. ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಮೃದುವಾಗಿ ಉಜ್ಜಬೇಕು. ನಂತರ ಹದ ಬಿಸಿ ನೀರಿನಿಂದ ಮುಖ ತೊಳೆದರೆ ಮುಖ ಕಾಂತಿಯುತವಾಗುತ್ತದೆ.
3. ಫೇಸ್ ಮಾಸ್ಕ್ : ಮೊಟ್ಟೆಯ ಬಿಳಿಗೆ ಸ್ವಲ್ಪ ಸಕ್ಕರೆ ಮಿಶ್ರ ಮಾಡಿ ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆದರೆ ಮುಖದಲ್ಲಿ ಅಕಾಲಿಕ ಮುಪ್ಪು ಬರುವುದನ್ನು ತಡೆಯುತ್ತದೆ.
4. ಟೊಮೆಟೊದಿಂದ ಆರೈಕೆ: ಹಣ್ಣಾದ ಟೊಮೆಟೊವನ್ನು ಕತ್ತರಿಸಿ ಮುಖಕ್ಕೆ ಉಜ್ಜಿದರೆ ಮುಖ ಹೊಳಪನ್ನು ಪಡೆಯುತ್ತದೆ. ಈ ರೀತಿ ವಾರದಲ್ಲಿ 3-4 ಬಾರಿ ಮಾಡಿದರೆ ಸಾಕು.
5. ಕಣ್ಣಿನ ಆರೈಕೆ: ಕಣ್ಣಿನ ಸುತ್ತ ಕಪ್ಪು ವರ್ತುಲ ಬಂದರೆ ಸೌಂದರ್ಯವನ್ನು ಮಂಕಾಗಿಸುತ್ತದೆ. ಆದ್ದರಿಂದ ಸೌತೆಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿ ಕಣ್ಣಿನ ಮೇಲೆ ಇಟ್ಟು 15 ನಿಮಿಷ ಕೂರುವುದು ಅಥವ ಸೌತೆಕಾಯಿಯನ್ನು ಪೇಸ್ಟ್ ರೀತಿ ಮಾಡಿ ಸ್ವಲ್ಪ ನಿಂಬೆ ರಸ ಮತ್ತು ಅರಿಶಿಣ ಪುಡಿ ಹಾಕಿ ಮಿಶ್ರ ಮಾಡಬೇಕು. ಈ ಮಿಶ್ರಣವನ್ನು ಕಪ್ಪು ಕಲೆಗಳ ಮೇಲೆ ಹಚ್ಚಿದರೆ ಕಪ್ಪು ಕಲೆ ಮಾಯವಾಗುವುದು. ಆದರೆ ಈ ರೀತಿ ಹಚ್ಚುವಾಗ ಮಿಶ್ರಣ ಕಣ್ಣಿಗೆ ತಾಗಿಸಬೇಡಿ.
6. ಆಲೂಗಡ್ಡೆಯಿಂದ ಆರೈಕೆ: ಹಸಿ ಆಲೂಗೆಡ್ಡೆಯನ್ನು ವೃತ್ತಾಕಾರವಾಗಿ ಕತ್ತರಿಸಿ ಕಣ್ಣಿನ ಮೇಲೆ ಇಟ್ಟರೆ, ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಕಡಿಮೆಯಾಗುತ್ತದೆ. ಹಸಿ ಆಲೂಗೆಡ್ಡೆ ತುಂಡಿನಿಂದ ಮುಖಕ್ಕೆ ಉಜ್ಜಿದರೆ ತ್ವಚೆ ಹೊಳಪನ್ನು ಪಡೆಯುತ್ತದೆ.
7. ಎಣ್ಣೆಯಿಂದ ಆರೈಕೆ: ಆಲೀವ್ ಅಥವಾ ಬಾದಾಮಿ ಎಣ್ಣೆಯನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಳಿಕ ತೊಳದರೆ ತ್ವಚೆ ಆರೋಗ್ಯಕ್ಕೆ ಒಳ್ಳೆಯದು.
8. ಕಡಲೆ ಹಿಟ್ಟು: ಮುಖಕ್ಕೆ ಸೋಪು ಬಳಸುವ ಬದಲು ಕಡಲೆಹಿಟ್ಟು ಹಚ್ಚಿ ಒಣಗಿದ ನಂತರ ಸ್ವಲ್ಪ ಬಿಸಿ ನೀರಿನಿಂದ ಮುಖ ತೊಳೆದರೆ ಒಳ್ಳೆಯದು.
9. ರೋಸ್ ವಾಟರ್: ಹೊರಗಡೆ ಸುತ್ತಾಡಿ ಬಂದ ನಂತರ ಮುಖ ತೊಳೆದು ರೋಸ್ ವಾಟರ್ ನಲ್ಲಿ ಹತ್ತಿ ಅದ್ದಿ ಮುಖಕ್ಕೆ ಉಜ್ಜುವುದು ಒಳ್ಳೆಯದು. ಇಲ್ಲದಿದ್ದರೆ ಐಸ್ ನಿಂದ ಮುಖಕ್ಕೆ ಮಸಾಜ್ ಮಾಡಿದರೆ ಕೂಡ ತ್ವಚೆ ತಾಜಾತನದಿಂದ ಹೊಳೆಯುವುದು.
10. ನೀರು: ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯದಿಂದ ಇರಲು ಮತ್ತು ಹೊಳಪಿನ ತ್ವಚೆ ಪಡೆಯಲು ಸಾಕಷ್ಟು ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಈ ಸಲಹೆಗಳನ್ನು ಪಾಲಿಸಿದರೆ ಸಿನಿಮಾ ನಟಿಯರಂತೆಯ ಹೊಳೆಯುವ ತ್ವಚೆ ನಿಮ್ಮದಾಗುವುದು.



Click it and Unblock the Notifications
