Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಮೋಡಿಮಾಡಲಿ ನಿಮ್ಮ ಬೆನ್ನಿನ ಸೌಂದರ್ಯ

ಆದರೆ ಮನೆಯಲ್ಲೇ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಸಮಸ್ಯೆಗಳಿಂದ ಬೆನ್ನನ್ನು ಮುಕ್ತಗೊಳಿಸುವುದು ಸಾಧ್ಯವಿದೆ.
ಬೆನ್ನನ್ನು ಕಾಂತಿಯುತಗೊಳಿಸಲು ಹೀಗೆ ಮಾಡಿ:
ಟೊಮೆಟೊ: ಕಳಿತ ಟೊಮೆಟೊ ರಸ ತೆಗೆದುಕೊಂಡು ಅದನ್ನು ಬೆನ್ನಿನ ಮೇಲೆ ಉಜ್ಜಿ ಕೆಲವು ನಿಮಿಷ ಹಾಗೆಯೇ ಬಿಡಬೇಕು. ಎರಡು ದಿನಗಳಿಗೊಮ್ಮೆ ಈ ರೀತಿ ಮಾಡಿಕೊಳ್ಳುತ್ತಿದ್ದರೆ ಫಲಿತಾಂಶವನ್ನು ನೀವು ಕಂಡುಕೊಳ್ಳಬಹುದು.
ನಿಂಬೆಹಣ್ಣು: ಮೊಡವೆ, ಗುಳ್ಳೆಗಳ ನಿವಾರಣೆ ವಿಷಯಕ್ಕೆ ಬಂದರೆ ನಿಂಬೆಹಣ್ಣು ತುಂಬಾ ಪರಿಣಾಮಕಾರಿ. ಒಂದೇ ಪ್ರಮಾಣದಲ್ಲಿ ನಿಂಬೆ ರಸ ಮತ್ತು ರೋಸ್ ವಾಟರ್ ಬೆರೆಸಿ ಬೆನ್ನಿಗೆ ಹಚ್ಚಿಕೊಂಡರೆ ಕಲೆ, ಮೊಡವೆ ಕ್ರಮೇಣ ಮಾಯವಾಗುತ್ತದೆ.
ಮೆಂತ್ಯೆ ಕಾಳು: ಮೆಂತ್ಯೆ ಕಾಳನ್ನು ನೆನೆಸಿ ರುಬ್ಬಿ ಮೊಡವೆ ಎದ್ದ ಜಾಗಕ್ಕೆ ಮಾತ್ರ ಲೇಪಿಸಿಕೊಂಡು ಅದು ಒಣಗುವವರೆಗೂ ಕಾದು ತೊಳೆಯಬೇಕು. ಹೀಗೆ ಮಾಡುವುದರಿಂದ ಬೆನ್ನಿನ ಮೇಲಿನ ಮೊಡವೆ ಗುಳ್ಳೆಗಳು ಬೇಗನೆ ಹೊರಟುಹೋಗುತ್ತವೆ.
ಕಿತ್ತಳೆ ಸಿಪ್ಪೆ: ಒಣಗಿದ ಕಿತ್ತಳೆ ಸಿಪ್ಪೆಯನ್ನು ನೀರಿನಲ್ಲಿ ನೆನೆಸಿ ಹಾಲನ್ನು ಸೇರಿಸಿ ರುಬ್ಬಿಕೊಂಡು ಅದನ್ನು ಬೆನ್ನಿಗೆ ಹಚ್ಚಿಕೊಂಡು 15 ರಿಂದ 20 ನಿಮಿಷ ಬಿಟ್ಟು ತೊಳೆದುಕೊಳ್ಳಬೇಕು. ಇದು ಬೆನ್ನಿಗೆ ಕಾಂತಿಯನ್ನು ನೀಡುತ್ತದೆ.
ಮೊಟ್ಟೆ: ಮೊಟ್ಟೆಯ ಬಿಳಿ ಭಾಗವನ್ನು ಬೇರ್ಪಡಿಸಿಕೊಂಡು ಬೆನ್ನಿಗೆ ಹಚ್ಚಿಕೊಳ್ಳಬೇಕು. ಅದು ಸಂಪೂರ್ಣ ಒಣಗಿದ ನಂತರವಷ್ಟೇ ತೊಳೆಯಬೇಕು. ಇದನ್ನು ಲೇಪಿಸಿಕೊಂಡಾಗ ಯಾವುದೇ ಕೆಲಸವನ್ನು ಮಾಡಬಾರದು.
ಈ ಟಿಪ್ಸ್ ಗಳನ್ನು ಅನುಸರಿಸಿದರೆ ನಿಮ್ಮ ಮುಖದಂತೆ ನಿಮ್ಮ ಬೆನ್ನೂ ಕೂಡ ಸುಂದರವಾಗಿ ಗೋಚರಿಸಲು ಸಾಧ್ಯವಿದೆ.



Click it and Unblock the Notifications
