Latest Updates
-
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ!
ಟೈಟಾದ ಬಟ್ಟೆ ಆರೋಗ್ಯ ಕೆಡಿಸೀತು ಜೋಕೆ!

ಬಿಗಿಯಾಗಿ ಉಡುಪು ತೊಡುವುದರಿಂದ ಆಗುವ ತೊಂದರೆಗಳು:
1. ಚರ್ಮದಲ್ಲಿ ಹುಣ್ಣು: ತುಂಬಾ ಹೆಚ್ಚು ಅವಧಿ ಮೈಗಂಟುವ ಬಟ್ಟೆಗಳನ್ನು ತೊಟ್ಟರೆ ಅದು ಚರ್ಮದ ಮೇಲೆ ಹುಣ್ಣನ್ನು ಉಂಟು ಮಾಡಬಹುದು. ತುಂಬಾ ಬಿಗಿಯಾದ ಉಡುಪು ತೊಡುವುದರಿಂದ ಚರ್ಮದಲ್ಲಿ ಅತಿಯಾದ ಬೆವರು ಉತ್ಪಾದನೆಯಾಗಿ ಗಾಳಿಯಾಡದೆ ಇದ್ದ ಸಂದರ್ಭದಲ್ಲಿ ಬೆವರು ಅಲ್ಲೆ ಸೇರಿಕೊಂಡು ತುರಿಕೆ ಉಂಟಾಗಿ, ಕಜ್ಜಿ ಹುಣ್ಣುಗಳಾಗುವ ಸಂಭವ ಹೆಚ್ಚು. ಆದ್ದರಿಂದ ಪ್ಯಾಂಟ್ ಗಳನ್ನು ಆಯ್ಕೆ ಮಾಡುವಾಗ ಎಚ್ಚರದಿಂದ ಆಯ್ಕೆ ಮಾಡಿ.
2. ಚರ್ಮದ ಗುಳ್ಳೆ: ಮೈಗಂಟುವ ಜೀನ್ಸ್ ಗಳು ಮತ್ತು ಎಲ್ಲಾ ಒಳ ಉಡುಪುಗಳನ್ನು ಧರಿಸುವಾಗ ಎಚ್ಚರದಿಂದಿರಿ. ಅತಿಯಾದ ಒತ್ತಡ ಮತ್ತು ಗಾಳಿಗೆ ಸರಿಯಾದ ಅವಕಾಶವಿಲ್ಲದಿರುವುದು ಕೆಂಪು ಗುಳ್ಳೆಗಳನ್ನು ಉಂಟು ಮಾಡಬಹುದು.
3. ತುರಿಕೆ : ತುಂಬಾ ಬೆವರುವವರು ಈ ಟೈಟ್ ಉಡುಪುಗಳನ್ನು ತೊಟ್ಟರೆ ಅದು ಕೀಟಾಣು ಮತ್ತು ಬ್ಯಾಕ್ಟೀರಿಯಾಗಳು ಬೇಗನೆ ಬೆವರಿನ ಮೂಲಕ ಚರ್ಮಕ್ಕೆ ಸೋಂಕು ತಗುಲುವಂತೆ ಮಾಡುತ್ತದೆ. ಗಟ್ಟಿಯಾದ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸುವುದರಿಂದ ಗುಪ್ತಾಂಗಗಳಲ್ಲಿ ತುರಿಕೆ ಸಂಭವಿಸಬಹುದು. ನೀವು ಎಷ್ಟೇ ಔಷಧಿ ತೆಗೆದುಕೊಂಡರೂ ಸಹ ಬಿಗಿ ಉಡುಪು ಧರಿಸುವುದನ್ನು ನಿಲ್ಲಿಸುವವರೆಗೂ ಅದೂ ನಿಮ್ಮನ್ನು ಬಿಡುವುದಿಲ್ಲ.
4. ರಕ್ತ ಸಂಚಲನ ಕುಂದುವಿಕೆ: ನಿಮ್ಮ ಚರ್ಮ ಮತ್ತು ಆರೋಗ್ಯ ಸಮತೋಲನದಲ್ಲಿರಬೇಕೆಂದರೆ ದೇಹದಲ್ಲಿ ರಕ್ತ ಸಂಚಲನ ಸರಿಯಾಗಿ ನಡೆಯಬೇಕು. ಆದರೆ ಈ ಗಟ್ಟಿ ಉಡುಪುಗಳು ರಕ್ತ ಸಂಚಲನವನ್ನು ಕುಂಠಿತಗೊಳಿಸುತ್ತದೆ.
ಇಂತಹ ಬಿಗಿ ಉಡುಪುಗಳನ್ನು ತೊಟ್ಟು ಆರೋಗ್ಯಕ್ಕೆ ಸುಖಾಸುಮ್ಮನೆ ತೊಂದರೆ ತಂದುಕೊಳ್ಳುವುದರ ಬದಲು ಸ್ವಲ್ಪ ಸಡಿಲವಾದ ಉಡುಪು ತೊಟ್ಟು ನಿಮ್ಮ ತ್ವಚೆ ಸ್ವಚ್ಛಂದವಾಗಿ ಉಸಿರಾಡಲು ಅವಕಾಶ ಮಾಡಿಕೊಡಿ. ಆಗ ನಿಮ್ಮ ಆರೋಗ್ಯಕರ ತ್ವಚೆ ಬಿಗಿ ಉಡುಪುಗಳ ಹೊರತಾಗಿಯೂ ನಿಮ್ಮನ್ನು ಚೆಂದವಾಗಿ ಕಾಣಲು ಅವಕಾಶ ಮಾಡಿಕೊಡುತ್ತದೆ. ಅಥವಾ ಟೈಟ್ ಬಟ್ಟೆಗಳನ್ನು ತೊಡಲೇಬೇಕೆಂದಿದ್ದರೆ ಆಗಾಗ ಮಾತ್ರ ತೊಟ್ಟುಕೊಳ್ಳಿ ಮತ್ತು ವ್ಯಾಯಾಮ ಮಾಡುವುದನ್ನೂ ಹೆಚ್ಚಾಗಿ ರೂಢಿಸಿಕೊಳ್ಳಿ.



Click it and Unblock the Notifications
