Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮುತ್ತಿಡುವಂತೆ ಇರಲಿ ನಿಮ್ಮ ಪಾದಗಳು

ಪಾದಗಳನ್ನು ಸುಂದರವಾಗಿ ಇಡುವ ಕೆಲವು ಸಲಹೆಗಳು:
* ಪಾದರಕ್ಷೆ ಸಡಿಲವಾಗಿರಲಿ: ತೊಡುವ ಪಾದ ರಕ್ಷೆಗಳು ಸ್ವಲ್ಪ ಸಡಿಲವಾಗಿರಲಿ. ಬಿಗಿ ಪಾದರಕ್ಷೆಗಳು ರಕ್ತಸಂಚಲನಕ್ಕೆ ಅಡ್ಡಿಯುಂಟು ಮಾಡಬಹುದು. ಸಾಕ್ಸ್ ಗಳನ್ನೂ ಕೂಡ ಯಾವಾಗಲೂ ತೊಟ್ಟಿರುವುದು ಒಳ್ಳೆಯದಲ್ಲ. ಪಾದಗಳಿಗೆ ಮುಕ್ತವಾಗಿ ಗಾಳಿ ಆಡುವಂತಿರಲಿ.
* ಎಣ್ಣೆ ಮಸಾಜ್: ಹೊರಗೆ ಹೋಗಿ ಬಂದ ನಂತರ ಚೆನ್ನಾಗಿ ಕಾಲುಗಳನ್ನು ತೊಳೆದುಕೊಳ್ಳಬೇಕು. ನಿತ್ಯ ಕೊಬ್ಬರಿ ಎಣ್ಣೆಯಿಂದ ಪಾದಗಳನ್ನು ಮಸಾಜ್ ಮಾಡಿಕೊಂಡರೆ ಪಾದಗಳು ರಿಲ್ಯಾಕ್ಸ್ ಆಗುತ್ತದೆ. ನಂತರ ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸ ಬೆರೆಸಿ ಕಾಲುಗಳನ್ನು ಒಂದತ್ತು ನಿಮಿಷ ನೆನೆಸಿದರೆ ಕಾಲು ಸ್ವಚ್ಛಗೊಳ್ಳುವುದರೊಂದಿಗೆ ಕಾಲು ನೋವಿದ್ದರೆ ಅದೂ ಕೂಡ ಕಡಿಮೆಯಾಗುತ್ತದೆ.
* ಫ್ಯೂಮಿಕ್ ಸ್ಟೋನ್ : ಔಷಧದ ಅಂಗಡಿಗಳಲ್ಲಿ ಸುಲಭವಾಗಿ ಸಿಗುವ ಫ್ಯೂಮಿಕ್ ಸ್ಟೋನ್ ನಿಂದ ಸ್ನಾನಕ್ಕೆ ಹೊರಡುವ ಮುನ್ನ ಪಾದಗಳನ್ನು ಚೆನ್ನಾಗಿ ಉಜ್ಜಿಕೊಂಡು ರೋಸ್ ವಾಟರ್ ಗೆ ಬಾದಾಮಿ ಎಣ್ಣೆ, ಗ್ಲಿಸರಿನ್ ಬೆರೆಸಿ ಬೆರಳುಗಳನ್ನು ಚೆನ್ನಾಗಿ ತಿಕ್ಕಿಕೊಳ್ಳಬೇಕು. ಆಗ ಪಾದಗಳು ಶುದ್ಧ ಮತ್ತು ಸುಂದರವಾಗಿ ಕಾಣುತ್ತವೆ.
* ನಿಸ್ತೇಜ ಪಾದ: ನಿಮ್ಮ ಪಾದ ನಿಸ್ತೇಜವಾಗಿ ಕಾಣುತ್ತಿದ್ದರೆ ಒಂದು ಚಿಕ್ಕ ಟಬ್ ಗೆ ಉಗುರು ಬೆಚ್ಚಗಿನ ನೀರು ಹಾಕಿಕೊಂಡು ಅದಕ್ಕೆ ಒಂದು ಚಮಚ ಶಾಂಪೂ ಮತ್ತು ಒಂದು ಚಮಚ ಉಪ್ಪು ಬೆರೆಸಿ ಪಾದವನ್ನು 10 ನಿಮಿಷ ಅದರಲ್ಲಿ ಇರಿಸಬೇಕು. ನಂತರ ಫ್ಯೂಮಿಕ್ ಸ್ಟೋನ್ ನಿಂದ ಚೆನ್ನಾಗಿ ಉಜ್ಜಿ ಬ್ರಷ್ ನಿಂದ ಉಗುರು ಸಂದಿಗಳನ್ನು ತಿಕ್ಕಿದರೆ ಕೊಳೆ ಸುಲಭವಾಗಿ ಬಿಟ್ಟು ಹೋಗಿ ಹೊಳಪು ಮೂಡುತ್ತದೆ.
* ಕಪ್ಪು ಪಾದಕ್ಕೆ: ಮೈ ಬಣ್ಣ ಬೇರೆಯಿದ್ದು, ಪಾದಗಳೇ ಬೇರೆ ಬಣ್ಣ ಇದ್ದರೆ ಬಿಸಿ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ 10 ನಿಮಿಷ ಪಾದವನ್ನು ಇಟ್ಟು ನಂತರ ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ನಿಂಬೆ ರಸವನ್ನು ಹಚ್ಚಿ 5 ನಿಮಿಷದ ನಂತರ ತೊಳೆಯಬೇಕು. ಹೀಗೆ ಎರಡು ವಾರಗಳಿಗೊಮ್ಮೆ ಮಾಡುತ್ತಿದ್ದರೆ ಪಾದಗಳೂ ಮೃದುವಾಗಿ ಬಿಳುಪಾಗಿ ಕಾಣಲು ಆರಂಭಿಸುತ್ತವೆ.
* ಪಾದದ ಸೌದರ್ಯಕ್ಕೆ ಸೂಕ್ತ ಪ್ಯಾಕ್: ಒಂದು ಬಟ್ಟಲು ಮೊಸರಿಗೆ ಒಂದು ಚಮಚ ಅರಿಶಿಣ ಮತ್ತು ತೊಗರಿ ಬೇಳೆ ಹಿಟ್ಟು ಸೇರಿಸಿ ಪಾದಗಳಿಗೆ ಹಚ್ಚುತ್ತಾ ಬಂದರೆ ಅನಗತ್ಯ ರೋಮ ನಿವಾರಣೆಯಾಗಿ ಹೊಳಪೂ ಹೆಚ್ಚುತ್ತದೆ. ಇದಾದ ನಂತರ ಪಾದಗಳಿಗೆ ಸೂಕ್ತವಾದ ಯಾವುದಾದರೂ ಕ್ರೀಂ ಹಚ್ಚಿಕೊಳ್ಳಬೇಕು.



Click it and Unblock the Notifications
