Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮೈ ಮನ ಹಗುರಗೊಳಿಸಿ ; ವೀಕೆಂಡ್ ಬ್ಯೂಟಿ ಕೇರ್

ವೀಕೆಂಡ್ ಬ್ಯೂಟಿ ಕೇರ್ ಸಲಹೆಗಳನ್ನು ಇಲ್ಲಿ ತಿಳಿಯಿರಿ:
1. ಮೊದಲು ಕೂದಲಿನತ್ತ ಗಮನ ಹರಿಸಿ. ಒಂದು ಮೊಟ್ಟೆ ಬಿಳಿ ಭಾಗಕ್ಕೆ ಸ್ವಲ್ಪ ಹರಳೆಣ್ಣೆ ಮತ್ತು ಗ್ಲಿಸರಿನ್ ಬೆರೆಸಿ ತಲೆ ಮತ್ತು ಕೂದಲಿಗೆ ಮಸಾಜ್ ಮಾಡಿಕೊಂಡು ಹಾಗೇ ಬಿಡಬೇಕು.
2. ನಂತರ ನಿಮ್ಮ ಮುಖವನ್ನು ಸ್ವಲ್ಪ ಹಾಲು ಮತ್ತು ರೋಸ್ ವಾಟರ್ ಮಿಶ್ರಣದಿಂದ ಶುದ್ಧಗೊಳಿಸಬೇಕು. ಆಲಿವ್ ಅಥವಾ ಎಳ್ಳೆಣ್ಣೆಯಿಂದ ಮಸಾಜ್ ಮಾಡಿಕೊಂಡು ಕೊನೆಗೆ ಮೊಟ್ಟೆಯ ಬಿಳಿ ಲೋಳೆಗೆ ಜೇನು ಸೇರಿಸಿ ಫೇಸ್ ಪ್ಯಾಕ್ ಮಾಡಿಕೊಳ್ಳಬೇಕು. ಅದು ಪೂರ ಒಣಗುವ ತನಕ ಕಾದು ಮುಖ ತೊಳೆದುಕೊಳ್ಳಬೇಕು.
3. ಕೂದಲು ಮತ್ತು ತ್ವಚೆಯ ಮಸಾಜ್ ಮುಗಿಯುತ್ತಿದ್ದಂತೆ ದೇಹದತ್ತ ಲಕ್ಷ್ಯ ಕೊಡಬೇಕು. ತೆಂಗಿನ ಎಣ್ಣೆ, ಆಲಿವ್ ಅಥವಾ ಎಳ್ಳೆಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಿಕೊಳ್ಳಬಹುದು. ಎಣ್ಣೆಯೊಂದಿಗೆ ಸ್ವಲ್ಪ ನಿಂಬೆರಸ ಸೇರಿಸಿ ಮಸಾಜ್ ಮಾಡಿಕೊಂಡರೆ ಕೈಕಾಲುಗಳು ಕಪ್ಪಗಾಗಿರುವುದನ್ನು ಕಡಿಮೆ ಮಾಡಿಕೊಳ್ಳಬಹುದು.
4. ನಂತರ ಕಾಲಿನ ಮತ್ತು ಕೈಗಳ ಉಗುರುಗಳನ್ನು ಶುದ್ಧಗೊಳಿಸಬೇಕು. ಚಿಕ್ಕ ಬಟ್ಟಲಿನಲ್ಲಿ ಸಕ್ಕರೆ ಇಟ್ಟು ಅದಕ್ಕೆ ಅರ್ಧ ಹೋಳು ನಿಂಬೆಹಣ್ಣಿನ ಹೋಳನ್ನು ಅದ್ದು ಅದನ್ನು ಉಗುರಿನ ಸಂದಿಗಳಿಗೆ ಮತ್ತು ಬೆರಳಿಗೆ ಚೆನ್ನಾಗಿ ತಿಕ್ಕಬೇಕು. ಇದು ಕೊಳೆ ಮತ್ತು ಟ್ಯಾನ್ ನಿವಾರಿಸಿ ಉಗುರು ಮತ್ತು ಬೆರಳುಗಳು ಸುಂದರವಾಗಿ ಕಾಣುವಂತೆ ಮಾಡುತ್ತದೆ.
5. ಈ ಎಲ್ಲ ಮಸಾಜ್ ಗಳು ಮುಗಿದ ಮೇಲೆ ನಿಮ್ಮ ಕಣ್ಣುಗಳತ್ತ ಗಮನ ಹರಿಸಿ. ರೋಸ್ ವಾಟರ್ ನಲ್ಲಿ ಹತ್ತಿಯನ್ನು ಅದ್ದಿ, ಆ ಹತ್ತಿಯನ್ನು ಕಣ್ಣುಗಳ ಮೇಲೆ ಇಟ್ಟು 10 ನಿಮಿಷ ಮಲಗಬೇಕು.
6. ಈ ಎಲ್ಲ ಮುಗಿದ ನಂತರ ಕೊನೆಗೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು. ಸ್ನಾನದ ನೀರಿಗೆ ಲ್ಯಾವೆಂಡರ್ ಆಯಿಲ್ ಹನಿಗಳನ್ನು ಉಪಯೋಗಿಸಬಹುದು.ಕಡಲೆಹಿಟ್ಟನ್ನು ದೇಹಕ್ಕೆ ಸವರಿಕೊಂಡು 7 ನಿಮಿಷದ ನಂತರ ಸ್ನಾನ ಮಾಡಿದರೆ ದೇಹ ಮೃದುಗೊಳ್ಳುತ್ತದೆ.
ದೇಹವನ್ನು ಮತ್ತು ತ್ವಚೆಯನ್ನು ಸರಳ ಸುಂದರಗೊಳಿಸಬೇಕೆಂದರೆ ಈ ಇಷ್ಟು ನಿಯಮಗಳನ್ನು ಪಾಲಿಸಿದರೆ ಸಾಕು. ಸಲೂನ್ ಗಳಿಗೆ ಹೋಗಿ ಹಣ ವ್ಯಯ ಮಾಡುವ ಬದಲು ಈ ರೀತಿ ಮನೆಯಲ್ಲೇ ಮಾಡಿಕೊಂಡು ಹಣವನ್ನೂ ಉಳಿಸಬಹುದು, ಸಂಪೂರ್ಣ ಪೋಷಣೆಯನ್ನೂ ಹೊಂದಬಹುದು. ವೀಕೆಂಡ್ ನಲ್ಲಿ ಮೈ ಮನಸ್ಸು ಎರಡನ್ನೂ ಸಹ ಸುಲಭವಾಗಿ ರಿಲ್ಯಾಕ್ಸ್ ಮಾಡಿಕೊಳ್ಳಬಹುದು.



Click it and Unblock the Notifications
