Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕಿವಿ ಶುಚಿಗೊಳಿಸಲು ಇಲ್ಲಿದೆ ನೈಸರ್ಗಿಕ ಮಾರ್ಗ

1.ಪಾರಾಫಿನ್ ಎಣ್ಣೆ: ಇದು ಕಿವಿಯ ಕೊಳಕನ್ನು ತೆಗೆಯಲು ಸುಲಭವಾದ ಮಾರ್ಗ. ಈ ಪ್ಯಾರಾಫಿನ್ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಕಿವಿಗೆ ಕೆಲವು ಹನಿಗಳನ್ನು ಹಾಕಿಕೊಳ್ಳಬೇಕು. ಅದು ಕಿವಿಯ ಪೂರಾ ಒಳಗೆ ಹೋಗಿ ಕರಗುವ ತನಕ ಕಾಯಬೇಕು. ನಂತರ ಗುಗ್ಗೆ ತೆಗೆದು ಬಿಸಿ ನೀರಿನಿಂದ ತೊಳೆದುಕೊಳ್ಳಬೇಕು.
2. ಹೈಡ್ರೋಜೆನ್ ಪೆರಾಕ್ಸೈಡ್: ಬಿಸಿ ಮಾಡಿದ ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಗೆ ಪೆರಾಕ್ಸೈಡ್ ಬೆರೆಸಿ ಎರಡೂ ಕಿವಿಗಳಿಗೆ ಒಂದೆರಡು ಹನಿಯನ್ನು ಹಾಕಬೇಕು. ಇದು ಕಿವಿಯನ್ನು ಬೇಗನೆ ಶುದ್ಧಗೊಳಿಸಿಬಿಡುತ್ತದೆ. ಕಿವಿಯಲ್ಲಿ ತುಂಬಿರುವ ಎಲ್ಲಾ ಕೊಳೆಯು ಹೊರಬರುವ ತನಕ ಈ ಹನಿಗಳನ್ನು ಗಂಟೆಗೆ ಒಂದು ಬಾರಿಯಂತೆ ಹಾಕುತ್ತಿರಬೇಕು.
3. ಗ್ಲಿಸರಿನ್: ಗ್ಲಿಸರಿನ್ ಹನಿಗಳನ್ನು ಕಿವಿಗೆ ಹಾಕಿದರೆ ಕಿವಿ ಒಳಗೆ ಸೇರಿರುವ ಘನ ರೂಪದ ಕೊಳೆ ಹೊರಬಂದು ತುರಿಕೆಯನ್ನು ಕಡಿಮೆಗೊಳಿಸುತ್ತದೆ.
4. ಬೆಳ್ಳುಳ್ಳಿ: ಕೊಬ್ಬರಿ ಎಣ್ಣೆಯೊಂದಿಗೆ ಒಂದೆರಡು ಎಸಳು ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ ಆ ಎಣ್ಣೆಯನ್ನು ಕಿವಿಯಿಂದ ಗುಗ್ಗೆ ತೆಗೆಯಲು ಉಪಯೋಗಿಸಬಹುದು. ಇದು ಆಂಟಿ ಬ್ಯಾಕ್ಟೀರಿಯಾದಂತೆಯೂ ಕೆಲಸ ನಿರ್ವಹಿಸಿ ಕಿವಿಗೆ ಇನ್ನಿತರ ಸೋಂಕು ತಗುಲುವುದನ್ನು ತಡೆಯುತ್ತದೆ. ಆದರೆ ಬೆಳ್ಳುಳ್ಳಿ ಕಿವಿಯ ಒಳಗೆ ಹೋಗದಂತೆ ಎಚ್ಚರಿಕೆವಹಿಸಿಬೇಕು.
5. ಬಿಸಿ ಆಲಿವ್ ಎಣ್ಣೆ: ಬಿಸಿ ಮಾಡಿದ ಆಲಿವ್ ಎಣ್ಣೆ ಯನ್ನು ಮೇಲೆ ಹೇಳಿದಂತೆ ಕಿವಿಗೆ ಹಾಕಿದರೆ ಗುಗ್ಗೆಯನ್ನು ಸಂಪೂರ್ಣವಾಗಿ ಹೊರತೆಗೆಯಬಹುದು.
6. ಕಿವಿಗಳಿಂದ ಗುಗ್ಗೆ ಹೊರತೆಗೆಯಲು ಪಿನ್ನುಗಳನ್ನು, ಕಡ್ಡಿಯನ್ನು ಮತ್ತು ಇನ್ನಿತರ ವಸ್ತುಗಳನ್ನು ಉಪಯೋಗಿಸಬಾರದು. ಉತ್ತಮವಾದ ಹತ್ತಿಯನ್ನು ಹೊಂದಿರುವ ಬಡ್ಸ್ ಗಳನ್ನು ಬಳಸಬಹುದು.



Click it and Unblock the Notifications
