Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ತ್ವಚೆ ತುಂಬಾ ಎಣ್ಣೆಯಾಗುವುದೇ? ಬೇಸಿಗೆಯಲ್ಲಿ ಈ ಆಯುರ್ವೇದ ಟಿಪ್ಸ್ ಟ್ರೈ ಮಾಡಿ
ಒಬ್ಬೊಬ್ಬರು ಒಂದೊಂದು ರೀತಿಯಾದ ತ್ವಚೆ ಹೊಂದಿರುತ್ತಾರೆ. ಕೆಲವರಿಗೆ ಶುಷ್ಕ ತ್ವಚೆ ಇದ್ದರೆ ಇನ್ನೂ ಕೆಲವರಿಗೆ ಎಣ್ಣೆಯುತ್ತ ತ್ವಚೆ ಇರುತ್ತದೆ ಮತ್ತು ಹಲವರ ತ್ವಚೆ ಅತ್ಯಂತ ಸೆನ್ಸಿಟಿವ್ ಆಗಿರುತ್ತದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಕೆಲವರಿಗೆ ಎಣ್ಣೆಯುಕ್ತ ತ್ವಚೆ ಸಾಕಷ್ಟು ಸಮಸ್ಯೆಯನ್ನು ಉಂಟುಮಾಡುತ್ತದೆ.
ಅದರಲ್ಲೂ ಬೇಸಿಗೆಯಲ್ಲಿ ನಿಮ್ಮ ಚರ್ಮ ಅಥವಾ ತ್ವಚೆ ಎಣ್ಣೆಯುಕ್ತವಾಗಿರುವುದು ಮಾತ್ರವಲ್ಲದೇ ಬೇಸಿಗೆಯಲ್ಲಿ ಹೆಚ್ಚಾಗಿ ಬೆವರುವುದರಿಂದ ಸಾಕಷ್ಟು ಸಮಸ್ಯೆ ಕಾಣಿಸಿಕೊಳ್ಳಬಹುದು. ಆದರೆ ಚಿಂತೆ ಬೇಡ. ನೀವು ಯಾವುದೇ ರಾಸಾಯನಿಕ ಬಳಸದೆ ಮನೆಯಲ್ಲಿಯೇ ಆಯುರ್ವೇದಿಕ್ ವಸ್ತುಗಳನ್ನು ಬಳಸಿ ತ್ವಚೆಯ ರಕ್ಷಣೆ ಮಾಡಿಕೊಳ್ಳಬಹುದು.

ಸ್ಯಾಂಡಲ್/ಶ್ರೀಗಂಧದ ಪುಡಿ:
ಅರ್ಧ ಚಮಚದಷ್ಟು ಶ್ರೀಗಂಧದ ಪುಡಿಗೆ ನೀರು ಬೆರೆಸಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ ಹತ್ತು ನಿಮಿಷಗಳ ನಂತರ ತೊಳೆಯಿರಿ. ಇದರಿಂದ ಎಣ್ಣೆಯುಕ್ತ ತ್ವಚೆಗೆ ಉತ್ತಮ ಪರಿಹಾರ ಸಿಗುತ್ತದೆ. ಜೊತೆಗೆ ಮೊಡವೆ, ಡಾರ್ಕ್ ಸರ್ಕಲ್ ಎಲ್ಲಾ ಸಮಸ್ಯೆಗಳೂ ಕೂಡ ನಿವಾರಣೆಯಾಗುತ್ತವೆ.
ಗೋಧಿ ಹಿಟ್ಟು,ನಿಂಬೆ ರಸ:
ಗೋಧಿ ಹಿಟ್ಟು, ಅರಿಶಿನ ಹಾಗೂ ನಿಂಬೆರಸವನ್ನು ಮಿಕ್ಸ್ ಮಾಡಿ. ನಿಂಬೆರಸದ ಬದಲಿಗೆ ಮೊಸರನ್ನೂ ಸೇರಿಸಬಹುದು. ಇದನ್ನು ಫೇಸ್ ಫ್ಯಾಕ್ ರೀತಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿ ಹತ್ತು ನಿಮಿಷ ಒಣಗಲು ಬಿಟ್ಟು ನಂತರ ತುಸು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಈ ರೀತಿ ಮಾಡುತ್ತಾ ಬಂದರೆ ಮುಖವೂ ಕಾಂತಿಯುತವಾಗುತ್ತದೆ, ಎಣ್ಣೆಯುಕ್ತ ತ್ವಚೆಯಿಂದಲೂ ಮುಕ್ತಿ ಸಿಗುತ್ತದೆ. ಗೋಧಿ ಹಿಟ್ಟಿನ ಬದಲು ಕಡ್ಲೆ ಹಿಟ್ಟನ್ನೂ ಕೂಡ ಬಳಸಬಹುದು. ಎಣ್ಣೆಯುಕ್ತ ತ್ವಚೆಗೆ ಕಡಲೆ ಹಿಟ್ಟು ಕೂಡ ಅತ್ಯುತ್ತಮ ಚಿಕಿತ್ಸೆ ನೀಡುತ್ತದೆ.ಅದರೆ ಕೆಲವರಿಗೆ ಕಡಲೇಹಿಟ್ಟು ಬಳಸುವುದರಿಂದ ಶುಷ್ಕ ತ್ವಚೆ ಆರಂಭವಾಗಬಹುದು. ಹಾಗಾಗಿ ನಿಮ್ಮ ತ್ವಚೆಗೆ ಕಡಲೆಹಿಟ್ಟು ಸರಿಹೊಂದುತ್ತದೆಯೋ ಇಲ್ಲವೋ ಮೊದಲು ಪರೀಕ್ಷಿಸಿಕೊಳ್ಳಿ.
ಹಾಲು:
ಸಾಕಷ್ಟು ಜನ ಹಾಲನ್ನು ಎಣ್ಣೆಯುಕ್ತ ತ್ವಚೆಗೆ ಹಚ್ಚಿದರೆ ಅದರಿಂದ ಇನ್ನಷ್ಟು ಸಮಸ್ಯೆ ಉಂಟಾಗುತ್ತದೆ ಎಂದೇ ಭಾವಿಸುತ್ತಾರೆ. ಆದರೆ ಇದು ತಪ್ಪು, ಹಾಲಿನಲ್ಲಿ ಇರುವ ಕ್ಲೆನ್ಸರ್ ಗುಣ ಮುಖದ ತ್ವಚೆಯನ್ನು ಆಳವಾಗಿ ರಕ್ಷಣೆ ಮಾಡುತ್ತದೆ ಹಾಗೂ ತ್ವಚೆಯಲ್ಲಿ ಎಣ್ಣೆ ಅಂಶವನ್ನೂ ತೆಗೆಯುತ್ತದೆ. ಜೊತೆಗೆ ತ್ವಚೆ ಶುಷ್ಕವಾಗದಂತೆ ಕಾಪಾಡುತ್ತದೆ. ಹಾಲಿನಿಂದ ಮುಖವನ್ನು ತೊಳೆದರೆ ತ್ವಚೆಯಲ್ಲಿನ ರಂಧ್ರಗಳು ಮೇದೋಗ್ರಂಥಿಗಳ ಸ್ರಾವ ಅಥವಾ ಎಣ್ಣೆಯಿಂದ ಮುಚ್ಚಿಹೋಗುವುದನ್ನು ತಡೆಯಬಹುದು.
ಜೇನು
ಬಹುತೇಕ ಎಲ್ಲರ ಮನೆಯಲ್ಲಿ ಜೇನು ತುಪ್ಪ ಇದ್ದೇ ಇರುತ್ತದೆ. ಇದು ಎಣ್ಣೆಯುಕ್ತ ಹಾಗೂ ಶುಷ್ಕ ತ್ವಚೆಗೆ ರಕ್ಷಣೆಯನ್ನು ನೀಡುತ್ತದೆ. ತ್ವಚೆಯ ಅತ್ಯುತ್ತಮ ನೈಸರ್ಗಿಕ ಮಾಯಿಶ್ಚರೈಸರ್ ನಂತೆಯೇ ಕೆಲಸ ಮಾಡುತ್ತದೆ. ಜೇನುತುಪ್ಪವನ್ನು ಮುಖಕ್ಕೆ ತೆಳುವಾಗಿ ಹಚ್ಚಿ 15 ನಿಮಿಷಗಳ ನಂತರ ತೊಳೆಯುವುದರಿಂದ ಮುಖದ ಕಾಂತಿಯೂ ಹೆಚ್ಚುತ್ತದೆ ಮಾತ್ರವಲ್ಲದೇ ವಯಸ್ಸಾದ ಕಲೆಯನ್ನೂ ತೆಗೆಯುತ್ತದೆ.
ಮುಲ್ತಾನಿ ಮಿಟ್ಟಿ
ಎಣ್ಣೆಯುಕ್ತ ತ್ವಚೆಗೆ ಅತ್ಯುತ್ತಮ ಪರಿಹಾರ ಅಂದ್ರೆ ಅದು ಮುಲ್ತಾನಿ ಮಿಟ್ಟಿ. ಎಲ್ಲಾ ತರಹದ ತ್ವಚೆಗೂ ಚಿಕಿತ್ಸೆ ನೀಡಬಲ್ಲ ಮುಲ್ತಾನಿ ಮಿಟ್ಟಿ ಎಣ್ಣೆಯುಕ್ತ ತ್ವಚೆಯನ್ನು ಹೋಗಲಾಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮುಲ್ತಾನಿ ಮಿಟ್ಟಿಯನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಅಗತ್ಯವಿರುವಷ್ಟು ರೋಸ್ ವಾಟರ್ ನ್ನು ಹಾಕಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ನ್ನು ಮುಖಕ್ಕೆ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ ಅದು ಒಣಗುವವರೆಗೂ ಬಿಡಿ. ಬಳಿಕ ತೊಳೆದರೆ ಆಯ್ತು. ನಿಯಮಿತವಾಗಿ ಇದನ್ನು ಮಾಡುತ್ತಾ ಬಂದರೆ ಎಣ್ಣೆಯುಕ್ತ ತ್ವಚೆ ಮಾಯವಾಗಿ ಕಾಂತಿಯುತ ಆರೋಗ್ಯವಂತ ತ್ವಚೆ ನಿಮ್ಮದಾಗುತ್ತದೆ.
ಅಲೋವೆರಾ;
ನೈಸರ್ಗಿಕವಾದ ಅಲೋವೆರಾ ಜೆಲ್ ಮುಖಕ್ಕೆ ಹಚ್ಚಿದರೆ ಎಣ್ಣೆಯುಕ್ತ ತ್ವಚೆಯನ್ನು ನಿವಾರಣೆ ಮಾಡುವುದಲ್ಲದೇ ಮುಖದ ಕಾಂತಿಯನ್ನೂ ಹೆಚ್ಚಿಸುತ್ತದೆ. ಮುಖದಲ್ಲಿ ವಯಸ್ಸಾದ ಮಾರ್ಕ್ ಇರದಂತೆ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಅಲೋವೆರಾ ಜೆಲ್ ನ್ನು ಮುಖಕ್ಕೆ ಹಚ್ಚಿ ಮಲಗುವುದು ಬಹಳ ಒಳ್ಳೆಯದು.
ಈ ಎಲ್ಲಾ ಪರಿಹಾರಗಳ ಜೊತೆಗೆ ಹೆಚ್ಚು ಪೋಷಕಾಂಶಗಳಿರುವ ಆಹಾರ, ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಿ. ಇದರ ಜೊತೆಗೆ ನಿತ್ಯವೂ ವ್ಯಾಯಾಮ, ಯೋಗ ಮಾಡುವುದು ಕೂಡ ತ್ವಚೆಯ ಸಂಪೂರ್ಣ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯಾದ ತ್ವಚೆ ಹೊಂದಿರುತ್ತಾರೆ. ಕೆಲವರಿಗೆ ಶುಷ್ಕ ತ್ವಚೆ ಇದ್ದರೆ ಇನ್ನೂ ಕೆಲವರಿಗೆ ಎಣ್ಣೆಯುತ್ತ ತ್ವಚೆ ಇರುತ್ತದೆ ಮತ್ತು ಹಲವರ ತ್ವಚೆ ಅತ್ಯಂತ ಸೆನ್ಸಿಟಿವ್ ಆಗಿರುತ್ತದೆ.
ಅದರಲ್ಲೂ ಬೇಸಿಗೆ ಕಾಲದಲ್ಲಿ ಕೆಲವರಿಗೆ ಎಣ್ಣೆಯುಕ್ತ ತ್ವಚೆ ಸಾಕಷ್ಟು ಸಮಸ್ಯೆಯನ್ನು ಉಂಟುಮಾಡುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ನಿಮ್ಮ ಚರ್ಮ ಅಥವಾ ತ್ವಚೆ ಎಣ್ಣೆಯುಕ್ತವಾಗಿರುವುದು ಮಾತ್ರವಲ್ಲದೇ ಬೇಸಿಗೆಯಲ್ಲಿ ಹೆಚ್ಚಾಗಿ ಬೆವರುವುದರಿಂದ ಸಾಕಷ್ಟು ಸಮಸ್ಯೆ ಕಾಣಿಸಿಕೊಳ್ಳಬಹುದು. ಆದರೆ ಚಿಂತೆ ಬೇಡ. ನೀವು ಯಾವುದೇ ರಾಸಾಯನಿಕ ಬಳಸದೆ ಮನೆಯಲ್ಲಿಯೇ ಆಯುರ್ವೇದಿಕ್ ವಸ್ತುಗಳನ್ನು ಬಳಸಿ ತ್ವಚೆಯ ರಕ್ಷಣೆ ಮಾಡಿಕೊಳ್ಳಬಹುದು.
ಸ್ಯಾಂಡಲ್/ಶ್ರೀಗಂಧದ ಪುಡಿ:
ಅರ್ಧ ಚಮಚದಷ್ಟು ಶ್ರೀಗಂಧದ ಪುಡಿಗೆ ನೀರು ಬೆರೆಸಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ ಹತ್ತು ನಿಮಿಷಗಳ ನಂತರ ತೊಳೆಯಿರಿ. ಇದರಿಂದ ಎಣ್ಣೆಯುಕ್ತ ತ್ವಚೆಗೆ ಉತ್ತಮ ಪರಿಹಾರ ಸಿಗುತ್ತದೆ. ಜೊತೆಗೆ ಮೊಡವೆ, ಡಾರ್ಕ್ ಸರ್ಕಲ್ ಎಲ್ಲಾ ಸಮಸ್ಯೆಗಳೂ ಕೂಡ ನಿವಾರಣೆಯಾಗುತ್ತವೆ.
ಗೋಧಿ ಹಿಟ್ಟು,ನಿಂಬೆ ರಸ:
ಗೋಧಿ ಹಿಟ್ಟು, ಅರಿಶಿನ ಹಾಗೂ ನಿಂಬೆರಸವನ್ನು ಮಿಕ್ಸ್ ಮಾಡಿ. ನಿಂಬೆರಸದ ಬದಲಿಗೆ ಮೊಸರನ್ನೂ ಸೇರಿಸಬಹುದು. ಇದನ್ನು ಫೇಸ್ ಫ್ಯಾಕ್ ರೀತಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿ ಹತ್ತು ನಿಮಿಷ ಒಣಗಲು ಬಿಟ್ಟು ನಂತರ ತುಸು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಈ ರೀತಿ ಮಾಡುತ್ತಾ ಬಂದರೆ ಮುಖವೂ ಕಾಂತಿಯುತವಾಗುತ್ತದೆ, ಎಣ್ಣೆಯುಕ್ತ ತ್ವಚೆಯಿಂದಲೂ ಮುಕ್ತಿ ಸಿಗುತ್ತದೆ. ಗೋಧಿ ಹಿಟ್ಟಿನ ಬದಲು ಕಡ್ಲೆ ಹಿಟ್ಟನ್ನೂ ಕೂಡ ಬಳಸಬಹುದು.
ಹಾಲು:
ಸಾಕಷ್ಟು ಜನ ಹಾಲನ್ನು ಎಣ್ಣೆಯುಕ್ತ ತ್ವಚೆಗೆ ಹಚ್ಚಿದರೆ ಅದರಿಂದ ಇನ್ನಷ್ಟು ಸಮಸ್ಯೆ ಉಂಟಾಗುತ್ತದೆ ಎಂದೇ ಭಾವಿಸುತ್ತಾರೆ. ಆದರೆ ಇದು ತಪ್ಪು, ಹಾಲಿನಲ್ಲಿ ಇರುವ ಕ್ಲೆನ್ಸರ್ ಗುಣ ಮುಖದ ತ್ವಚೆಯನ್ನು ಆಳವಾಗಿ ರಕ್ಷಣೆ ಮಾಡುತ್ತದೆ ಹಾಗೂ ತ್ವಚೆಯಲ್ಲಿ ಎಣ್ಣೆ ಅಂಶವನ್ನೂ ತೆಗೆಯುತ್ತದೆ. ಜೊತೆಗೆ ತ್ವಚೆ ಶುಷ್ಕವಾಗದಂತೆ ಕಾಪಾಡುತ್ತದೆ. ಹಾಲಿನಿಂದ ಮುಖವನ್ನು ತೊಳೆದರೆ ತ್ವಚೆಯಲ್ಲಿನ ರಂಧ್ರಗಳು ಮೇದೋಗ್ರಂಥಿಗಳ ಸ್ರಾವ ಅಥವಾ ಎಣ್ಣೆಯಿಂದ ಮುಚ್ಚಿಹೋಗುವುದನ್ನು ತಡೆಯಬಹುದು.
ಜೇನು
ಬಹುತೇಕ ಎಲ್ಲರ ಮನೆಯಲ್ಲಿ ಜೇನು ತುಪ್ಪ ಇದ್ದೇ ಇರುತ್ತದೆ. ಇದು ಎಣ್ಣೆಯುಕ್ತ ಹಾಗೂ ಶುಷ್ಕ ತ್ವಚೆಗೆ ರಕ್ಷಣೆಯನ್ನು ನೀಡುತ್ತದೆ. ತ್ವಚೆಯ ಅತ್ಯುತ್ತಮ ನೈಸರ್ಗಿಕ ಮಾಯಿಶ್ಚರೈಸರ್ ನಂತೆಯೇ ಕೆಲಸ ಮಾಡುತ್ತದೆ. ಜೇನುತುಪ್ಪವನ್ನು ಮುಖಕ್ಕೆ ತೆಳುವಾಗಿ ಹಚ್ಚಿ 15 ನಿಮಿಷಗಳ ನಂತರ ತೊಳೆಯುವುದರಿಂದ ಮುಖದ ಕಾಂತಿಯೂ ಹೆಚ್ಚುತ್ತದೆ ಮಾತ್ರವಲ್ಲದೇ ವಯಸ್ಸಾದ ಕಲೆಯನ್ನೂ ತೆಗೆಯುತ್ತದೆ.
ಮುಲ್ತಾನಿ ಮಿಟ್ಟಿ
ಎಣ್ಣೆಯುಕ್ತ ತ್ವಚೆಗೆ ಅತ್ಯುತ್ತಮ ಪರಿಹಾರ ಅಂದ್ರೆ ಅದು ಮುಲ್ತಾನಿ ಮಿಟ್ಟಿ. ಎಲ್ಲಾ ತರಹದ ತ್ವಚೆಗೂ ಚಿಕಿತ್ಸೆ ನೀಡಬಲ್ಲ ಮುಲ್ತಾನಿ ಮಿಟ್ಟಿ ಎಣ್ಣೆಯುಕ್ತ ತ್ವಚೆಯನ್ನು ಹೋಗಲಾಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮುಲ್ತಾನಿ ಮಿಟ್ಟಿಯನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಅಗತ್ಯವಿರುವಷ್ಟು ರೋಸ್ ವಾಟರ್ ನ್ನು ಹಾಕಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ನ್ನು ಮುಖಕ್ಕೆ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ ಅದು ಒಣಗುವವರೆಗೂ ಬಿಡಿ. ಬಳಿಕ ತೊಳೆದರೆ ಆಯ್ತು. ನಿಯಮಿತವಾಗಿ ಇದನ್ನು ಮಾಡುತ್ತಾ ಬಂದರೆ ಎಣ್ಣೆಯುಕ್ತ ತ್ವಚೆ ಮಾಯವಾಗಿ ಕಾಂತಿಯುತ ಆರೋಗ್ಯವಂತ ತ್ವಚೆ ನಿಮ್ಮದಾಗುತ್ತದೆ.
ಅಲೋವೆರಾ;
ನೈಸರ್ಗಿಕವಾದ ಅಲೋವೆರಾ ಜೆಲ್ ಮುಖಕ್ಕೆ ಹಚ್ಚಿದರೆ ಎಣ್ಣೆಯುಕ್ತ ತ್ವಚೆಯನ್ನು ನಿವಾರಣೆ ಮಾಡುವುದಲ್ಲದೇ ಮುಖದ ಕಾಂತಿಯನ್ನೂ ಹೆಚ್ಚಿಸುತ್ತದೆ. ಮುಖದಲ್ಲಿ ವಯಸ್ಸಾದ ಮಾರ್ಕ್ ಇರದಂತೆ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಅಲೋವೆರಾ ಜೆಲ್ ನ್ನು ಮುಖಕ್ಕೆ ಹಚ್ಚಿ ಮಲಗುವುದು ಬಹಳ ಒಳ್ಳೆಯದು.
ಈ ಎಲ್ಲಾ ಪರಿಹಾರಗಳ ಜೊತೆಗೆ ಹೆಚ್ಚು ಪೋಷಕಾಂಶಗಳಿರುವ ಆಹಾರ, ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಿ. ಇದರ ಜೊತೆಗೆ ನಿತ್ಯವೂ ವ್ಯಾಯಾಮ, ಯೋಗ ಮಾಡುವುದು ಕೂಡ ತ್ವಚೆಯ ಸಂಪೂರ್ಣ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಎಣ್ಣೆಯುಕ್ತ ತ್ವಚೆಯಿಂದ ಮುಕ್ತಿ ನೀಡುತ್ತದೆ. ಆಯುರ್ವೇದಿಕ್ ಚಿಕಿತ್ಸೆ ಅಥವಾ ಮನೆಮದ್ದುಗಳಿಂದ ಯಾವುದೇ ಅಡ್ಡ ಪರಿಣಾಮಗಳೂ ಇಲ್ಲ. ಅದ್ದರಿಂದ ನೀವು ಈ ಮೇಲಿನ ಚಿಕಿತ್ಸೆಗಳನ್ನು ನಿಯಮಿತವಾಗಿ ಅನುಸರಿಸಬಹುದು.

Click it and Unblock the Notifications