Latest Updates
-
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್!
ಬೇಸಿಗೆಯಲ್ಲಿ ಟ್ರಕ್ಕಿಂಗ್ ಗೆ ಹೇಗೆ ತಯಾರಾಗಬೇಕು ?
ಕಡಿದಾದ ಬೆಟ್ಟಗಳನ್ನು ಅಥವಾ ಗುಡ್ಡಗಳನ್ನು ಏರುವಾಗ ಅಥವಾ ಎತ್ತರ ಪ್ರದೇಶದಲ್ಲಿ ಗಂಟೆಗಟ್ಟಲೆ ನಡೆಯಬೇಕಾದಾಗ ಅತ್ಯಂತ ಉಷ್ಣವಾತಾವರಣವಿರುತ್ತದೆ. ಈ ಪ್ರದೇಶಗಳಿಗೆ ನೀವು ಹೋಗುವ ಮುನ್ನವೇ ಇಂತಹ ವಾತಾವರಣಕ್ಕೆ ಹೊಂದಿಕೊಳ್ಳಲು ತಯಾರಾಗಿಯೇ ಹೋಗಬೇಕಾದದ್ದು ಅವಶ್ಯಕ. ಅತ್ಯಂತ ಉಷ್ಣ ವಾತಾವರಣದಲ್ಲಿ ನೀವು ಸರಿಯಾದ ಬಟ್ಟೆಗಳನ್ನು ತೊಡದೇ ಇದ್ದಲ್ಲಿ, ಅಪಾಯಕ್ಕೆ ಎದುರಾಗಬಹುದು.
ಸೂಚನೆಗಳು
1. ಸಣ್ಣ ಕೈಗಳಿರುವ ಅಂಗಿಯ ಮೇಲೆ ಇನ್ನೊಂದು ಉದ್ದ ತೋಳಿನ ಅಂಗಿಯನ್ನು ತೊಟ್ಟುಕೊಳ್ಳಿರಿ. ಎರಡೂ ಅಂಗಿಗಳು ಕಡಿಮೆ ತೂಕದ್ದಾಗಿದ್ದು, ಮೈಗೆ ಅಂಟುವಂತಿರಬಾರದು ಮತ್ತು ಸೂರ್ಯನ ಕಿರಣಗಳನ್ನು ಪ್ರತಿಬಿಂಬಿಸಲು ನೀಲ ಬಣ್ಣದ್ದಾಗಿರಬೇಕು. ವಾತಾವರಣವು ಉಷ್ಣವಾಗಿದ್ದಾಗ ಸಣ್ಣ ತೋಳಿನ ಅಂಗಿಯನ್ನು ಧರಿಸಿ ಹೆಚ್ಚು ನಡೆಯಬಹುದು. ಆದಾಗ್ಯೂ, ನಿಮಗೆ ಸೂರ್ಯನ ಕಿರಣಗಳಿಂದ, ಕೀಟಗಳಿಂದ ರಕ್ಷಣೆಗೆ ಉದ್ದ ತೋಳಿನ ಅಂಗಿಯೂ ಬೇಕಾಗುತ್ತದೆ. ರಾತ್ರಿಯಲ್ಲಿ ವಾತಾವರಣದ ಉಷ್ಣತೆ ಕಡಿಮೆಯಾದಾಗ ಉದ್ದ ತೋಳಿನ ಅಂಗಿಯು ಸಹಾಯಕ್ಕೆ ಬರುತ್ತದೆ. ಸಿಂತೆಟಿಕ್ ನಿಂದ ಮಾಡಿದ ಬಟ್ಟೆಯನ್ನು ಆಯ್ಕೆ ಮಾಡಿ. ಈ ಬಟ್ಟೆಗಳು ಕಾಟನ್ ಅಥವಾ ವೂಲ್ನ ಬಟ್ಟೆಗಳಿಗಿಂತ ವೇಗವಾಗಿ ಒಣಗುತ್ತವೆ.

2. ತಿಳಿ ಬಣ್ಣದ ಉದ್ದ ಪ್ಯಾಂಟ್ಗಳನ್ನು ಅಥವಾ ಶರ್ಟ್ಗಳನ್ನು ಸೂರ್ಯನ ಕಿರಣಗಳ ಪ್ರತಿಫಲನಕ್ಕೆ ಹಾಕಿಕೊಳ್ಳಿ. ಟಿಕ್ ಸೀಸನ್ನಲ್ಲಿ ಕೀಟಗಳಿಂದ ನಿಮ್ಮ ಕಾಲನ್ನು ರಕ್ಷಿಸಲು ಪ್ಯಾಂಟ್ ಸಹಾಯ ಮಾಡುತ್ತದೆ. ಇಲ್ಲದಿದ್ದಲ್ಲಿ, ವಾತಾವರಣಕ್ಕೆ ಶಾರ್ಟ್ಗಳು ತುಂಬಾ ಸೂಕ್ತವಾಗಿದೆ. ಪ್ಯಾಂಟನ್ನು ಮೊಣಕಾಲಿನಿಂದ ಕೆಳಗೆ ಅನ್ಜಿಪ್ ಮಾಡಿ ಮೇಲೆತ್ತುಕೊಳ್ಳುವ ಸಾಧ್ಯತೆ ಇದ್ದಲ್ಲಿ ಅತ್ಯುತ್ತಮ. ಇವುಗಳನ್ನು ಎಲ್ಲಾ ಸೀಸನ್ಗೂ ಮಾಡಲ್ಪಟ್ಟಂತಿರಬೇಕು ಮತ್ತು ಕಡಿಮೆ ತೂಕದ್ದಾಗಿರಬೇಕು. ನೈಲಾನ್ ಪಾಪ್ಲಿನ್ ಫ್ಯಾಬ್ರಿಕ್ ಪ್ಯಾಂಟ್ಗಳು ಬೇಗನೆ ಒಣಗುತ್ತವೆ.
3. ನಡೆಯುವ ಬೂಟ್ಗಳು ಮತ್ತು ಸಾಕ್ಸ್ಗಳನ್ನು ಧರಿಸಿ. ಉಷ್ಣ ವಾತಾವರಣದಲ್ಲಿ ಧರಿಸುವುದಕ್ಕೆಂದೇ ಮಾಡಲ್ಪಟ್ಟ ನೈಲಾನ್ ಸಾಕ್ಸ್ಗಳನ್ನೇ ಧರಿಸಿ. ವಾಟರ್ಪ್ರೂಫ್ ಬೂಟ್ಗಳು ಚೆನ್ನಾಗಿರುವುದಿಲ್ಲ. ನೀವು ಹೋಗುವ ಪ್ರದೇಶದಲ್ಲಿ ನೀರಿರುವುದಿಲ್ಲ ಎಂದು ದೃಢೀಕರಿಸಿಕೊಡರೆ ಈ ಬೂಟ್ಗಳನ್ನು ಧರಿಸಬೇಡಿ.
4. ಅಗಲವಾದ ಟೊಪ್ಪಿಯನ್ನು ಹಾಕಿಕೊಳ್ಳಿ, ಈ ಟೊಪ್ಪಿಯು ತಿಳಿ ಬಣ್ಣದ್ದಾಗಿರಲಿ ಮತ್ತು ಸಿಂತೆಟಿಕ್ನಿಂದ ಇದನ್ನು ಮಾಡಿದ್ದಾದರೆ ಉತ್ತಮ. ನೀವು ನಡೆಯುವಾಗ ಸುಲಭವಾಗಿ ಸೂರ್ಯನ ಬಿಸಿಲಿಗೆ ತೆರೆದುಕೊಳ್ಳುವ ಸುಲಭವಾದ ದೇಹದ ಭಾಗವೆಂದರೆ ಇದೇ ಆಗಿರುತ್ತದೆ. ಹಾಗಾಗಿ ಇದನ್ನು ಸುರಕ್ಷಿತವಾಗಿರಿಸಿ.
ಸಲಹೆಗಳು ಮತ್ತು ಎಚ್ಚರಿಕೆಗಳು
ನಿಮ್ಮ ಬ್ಯಾಕ್ಪ್ಯಾಕ್ನಲ್ಲಿ ಕಡಿಮೆ ಭಾರವಿರುವ ಒಂದು ರೈನ್ ಜಾಕೆಟ್ನ್ನು ತುಂಬಿಕೊಳ್ಳಿ. ಒಂದೊಮ್ಮೆ ವಾತಾವರಣವು ತಂಪಾದರೆ, ಮಳೆ ಬಂದರೆ ಇದು ನಿಮ್ಮ ಸಹಾಯಕ್ಕೆ ಬರುತ್ತದೆ.
ಯಾವತ್ತೂ ಸುರಕ್ಷಿತವಾದ ನಿಯಮಾವಳಿಯನ್ನು ಪಾಲಿಸಿ. ಸಾಕಷ್ಟು ನೀರು ಮತ್ತು ನಿಮ್ಮ ದೇಹಕ್ಕೆ ಅಗತ್ಯ ಸಾಮಗ್ರಿಗಳನ್ನು ಕೊಂಡೊಯ್ಯಿರಿ. ನಿಮ್ಮ ಜೊತೆಗೆ ಯಾರ್ಯಾರು ಹೋಗುತ್ತಾರೆ ಮತ್ತು ಯಾವಾಗ ವಾಪಸಾಗುತ್ತೀರಿ ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ತಯಾರಿಯನ್ನು ಮಾಡಿಕೊಳ್ಳಿ.



Click it and Unblock the Notifications
