Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವರ್ಷದ ಮಕ್ಕಳಿಗೆ ಹಣ್ಣಿನ ಪೇಸ್ಟ್ ಮಾಡುವುದು ಹೇಗೆ?
ವರ್ಷದ ಮಕ್ಕಳಿಗಾಗಿ ಹಣ್ಣುಗಳ ಪೇಸ್ಟ ಮಾಡುವ ಬಗೆ-
ಕೆಲವೊಮ್ಮೆ ಒಂದು ಒಂದುವರೆ ವರ್ಷದ ಮಕ್ಕಳಿಗೆ ಹಣ್ಣು-ಹಂಪಲುಗಳನ್ನು ತಿನ್ನಿಸುವುದು ತುಂಬಾ ಕಷ್ಟವೆನ್ನಿಸಿ ಬಿಡುತ್ತದೆ.ಆದ್ದರಿಂದಲೇ ಬ್ರೇಡ್ ಹಾಗು ಕುರುಕುಲು ತಿಂಡಿಗಳಮೇಲೆ ಸವರಿಕೊಡಬಲ್ಲ, ಹಾಲು,ಜೂಸ್ ಗಳಂತಹ ಪೇಯಗಳಲ್ಲೂ ಬೆರೆಸಲು ಬರುವಂತಹ ಹಣ್ಣಿನ ಪೇಸ್ಟನ ತಯಾರಿಕಾ ವಿಧಾನವನ್ನು ನಿಮಗಾಗಿ ತಂದಿದ್ದೇವೆ.
ಒಂದು ದೊಡ್ಡ ಬಟ್ಟಲಿನ ಅಳತೆಯಲ್ಲಿ ಈ ವಿಧಾನವನ್ನು ತಿಳಿಸುತ್ತಿದ್ದೇವೆ .ಆದರೆ ನಿಮ್ಮ ಅಗತ್ಯಕ್ಕನುಗುಣವಾಗಿ ನೀವು ಎಷ್ಟು ಬೇಕಾದರೂ ತಯಾರಿಸಿಕೊಳ್ಳಬಹುದು.

ಮಾಡುವ ವಿಧಾನ
3 ಬಾಳೆಹಣ್ಣು
2 ಸೇಬು
100 ಮಿ.ಲಿ. ಕಿತ್ತಳೆ ರಸ
3 ಬೊಗಸೆಯಷ್ಟು ಸ್ಟ್ರಾಬರಿ ಹಣ್ಣು
ಸುಮಾರು 5 ಚಮಚೆಯಷ್ಟು ಸಕ್ಕರೆ ( ವಿಶೇಷವಾಗಿ ತಿನ್ನಲು ರಗಳೆ ಮಾಡುವ ಮಕ್ಕಳಿಗಾಗಿ)
ಮಾಡುವ ಹಂತಗಳು
ಸೇಬನ್ನು ಸುಲಿದು ಒಳಗಿನ ತಿರುಳನ್ನು ತೆಗೆದುಕೊಳ್ಳಿ. ಬಾಳೆಯನ್ನೂ ಸುಲಿಯಿರಿ. ಎಲ್ಲವನ್ನೂ ನಿಮ್ಮ ಬ್ಲೆಂಡರ್ ನಲ್ಲಿ ಹಾಕಿರಿ. ಮೆತ್ತನೆಯ ಪೇಸ್ಟ್ ಆಗುವವರೆಗೂ ಚನ್ನಾಗಿ ರುಬ್ಬಿ(ಬ್ಲೆಂಡ್ ಮಾಡಿರಿ).
ಸ್ಟ್ರಾಬರಿಯ ಕೆಲವು ತುಂಡುಗಳನ್ನು ಸಕ್ಕರೆಯೊಂದಿಗೆ ಬೆರೆಸಿ ಮೃದುಗೊಳಿಸಿದ ಹಣ್ಣಿನ ಪೇಸ್ಟಿಗೆ ಹಾಕಿರಿ.
ನಂತರ 5 - 8 ಸೆಕೆಂಡಗಳಷ್ಟು ಮೆಲ್ಲನೆ ,ಎಲ್ಲಾ ಬೆರೆತುಕೊಳ್ಳುವುದರ ಮಟ್ಟಿಗೆ ಬ್ಲೆಂಡ್ ಮಾಡಿರಿ.
ಈ ಮಿಶ್ರಣಕ್ಕೆ ಅರ್ಧದಷ್ಟು ಕಿತ್ತಳೆ ರಸವನ್ನು ಬೆರೆಸಿ, ಎರಡು ಸೆಕೆಂಡ್ ಮತ್ತೆ ಬ್ಲೆಂಡ್ ಮಾಡಿರಿ.
ಈಗ ಬ್ಲೆಂಡರ್ ನಿಂದ ತೆಗೆದು ಒಂದು ಬಟ್ಟಲಿಗೆ ಹಾಕಿಕೊಳ್ಳಿ.
ಉಳಿದ ಕಿತ್ತಳೆ ರಸವನ್ನು ಆ ಮಿಶ್ರಣಕ್ಕೆ ಬೆರೆಸಿರಿ.
ಮಿಶ್ರಣವು ಚನ್ನಾಗಿ ಬೆರೆತು ಕೊಳ್ಳುವವರೆಗೆ ಹಾಗೂ ತೆಳು ಕೇಸರಿ ಭರಿತ ಗುಲಾಬಿ ಬಣ್ಣಕ್ಕೆ ತಿರುಗುವವರೆಗೆ ಕೈಯಾಡಿಸುತ್ತಿರಿ.
ಹೀಗೆ ತಯಾರಿಸಿದ ಫಲ-ಪೇಸ್ಟನ್ನು ಫ್ರಿಡ್ಜ್ ನಲ್ಲಿಟ್ಟು , ಎರಡು ವಾರಗಳವರೆಗೂ ಮಕ್ಕಳಿಗೆ ಕೊಡಬಹುದು.
ಸೂಚನೆ
ಸ್ವಲ್ಪ ದೊಡ್ಡ ಮಕ್ಕಳಿಗಾದರೆ ಸಕ್ಕರೆಯ ಬದಲಿಗೆ ಜೇನುತುಪ್ಪವನ್ನು ಬೆರೆಸುವದರೊಂದಿಗೆ ಮತ್ತಷ್ಟು ಆರೋಗ್ಯಕರವಾದ ಪೇಸ್ಟನ್ನು ಮಾಡಬಹುದು. ಆದರೆ ಒಂದು ವರ್ಷದೊಳಗಿನ ಮಕ್ಕಳಿಗೆ ಜೇನು ತುಪ್ಪ ನೀಡುವುದು ಒಳ್ಳೆಯದಲ್ಲ.
ಎಚ್ಚರಿಕೆ
ಒಂದು ವರ್ಷದೊಳಗಿನ ಮಕ್ಕಳಿಗೆ ಜೇನುತುಪ್ಪ ನೀಡುವುದು ಒಳ್ಳೆಯದಲ್ಲ.
ಹೊಸದಾಗಿ ಹುಟ್ಟುತ್ತಿರುವ ಹಲ್ಲುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಹೆಚ್ಚು ಸಕ್ಕರೆಯನ್ನು ಬೆರೆಸಬೇಡಿರಿ.



Click it and Unblock the Notifications
