Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶುಕ್ರ-ಚಂದ್ರನ ಅಪರೂಪದ ಸಂಗಮ: ಒಲಿಯಲಿದೆ ಹಿಂದೆಂದೂ ಕಂಡಿರದ ಸುಖ, ಸಂಪತ್ತು!
Venus Moon conjunction: ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳು ತಮ್ಮ ರಾಶಿ ಬದಲಾಯಿಸುವುದು ವ್ಯಕ್ತಿಯೊಬ್ಬರ ಜೀವನದಲ್ಲಿ ಅತ್ಯಂತ ದೊಡ್ಡ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಅದ್ರಲ್ಲೂ ಬಹುತೇಕರಿಗೆ ಈ ರಾಶಿ ಬದಲಾವಣೆಯು ಹಲವು ರೀತಿಯ ಶುಭ ಹಾಗೂ ಅಶುಭಕ್ಕೆ ಕಾರಣವಾಗುವುದು ಸಹ ನೋಡಬಹುದು. ಅಲ್ಲದೆ ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗವಾಗುವುದು ಸಹ ಅಪರೂಪದ ವಿದ್ಯಮಾನಗಳಿಗೆ ಕಾರಣವಾಗುತ್ತದೆ.
ಅದ್ರಲ್ಲೂ ಕೆಲವೊಂದು ಗ್ರಗಹಗಳು ಬಹಳ ಅಪರೂಪಕ್ಕೆ ಸಂಯೋಗವಾಗುವುದು ಹಲವು ರೀತಿಯಲ್ಲಿ ಶುಭದಾಯಕವಾಗುವುದು ನೋಡಬಹುದು. ಈ ರೀತಿಯ ಗ್ರಹಗಳ ಚಲನೆಯಲ್ಲಿ ನಾವು ಚಂದ್ರ ಹಾಗೂ ಶುಕ್ರನ ಸಂಯೋಗ ಸಹ ನೋಡಬಹುದು. ಮಾರ್ಚ್‌ನಲ್ಲಿ ಶುಕ್ರ ಮತ್ತು ಚಂದ್ರನ ಅಪರೂಪದ ಸಂಯೋಗ ಸಂಭವಿಸಲಿದೆ.

ಪಂಚಾಂಗದ ಪ್ರಕಾರ ಶುಕ್ರನು ಮಾರ್ಚ್ 2 2026 ರಂದು ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ಮೀನ ರಾಶಿಗೆ ಪ್ರವೇಶಿಸುತ್ತಾನೆ ಮತ್ತು ಮಾರ್ಚ್ 26 ರವರೆಗೆ ಅಲ್ಲೇ ಇರುತ್ತಾನೆ. ಮಾರ್ಚ್ 18 ರಂದು ರಾತ್ರಿ 11 ಗಂಟೆಯ ಸುಮಾರಿಗೆ ಚಂದ್ರನು ಮೀನ ರಾಶಿಗೆ ಪ್ರವೇಶಿಸುತ್ತಾನೆ ಮತ್ತು ಮಾರ್ಚ್ 21 ರಂದು ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಅಲ್ಲೇ ಇರುತ್ತಾನೆ.
ಇದು ಮೀನ ರಾಶಿಯಲ್ಲಿ ಶುಕ್ರ ಮತ್ತು ಚಂದ್ರನ ಸಂಯೋಗವನ್ನು ಸೃಷ್ಟಿಸುತ್ತದೆ. ಈ ಸಂಯೋಗವು ಕೆಲವು ರಾಶಿ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ರಾಶಿ ಜನರಲ್ಲಿ ಅತ್ಯುತ್ತಮ ಬದಲಾವಣೆಗಳ ನೋಡಬಹುದು. ಅದ್ರಲ್ಲೂ ಕೆಲವು ರಾಶಿಗಳಿಗೆ ಈ ಸಂಯೋಗವು ಹಿಂದೆಂದೂ ನೋಡಿರದ ಸಂಪತ್ತು ಸುಖವನ್ನು ಹೊತ್ತು ತರಲಿದೆ. ಹಾಗಾದ್ರೆ ಶುಕ್ರ ಹಾಗೂ ಚಂದ್ರನ ಈ ಸಂಯೋಗವು ಯಾವ ರಾಶಿಯವರಿಗೆ ಲಾಭದಾಯಕ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಧನು ರಾಶಿ
ಶುಕ್ರ ಮತ್ತು ಚಂದ್ರನ ಸಂಯೋಗವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಈ ಸಂಯೋಗವು ನಿಮ್ಮ ರಾಶಿಯ ನಾಲ್ಕನೇ ಮನೆಯಲ್ಲಿ ರೂಪುಗೊಳ್ಳುವುದರಿಂದ ಈ ಸಮಯದಲ್ಲಿ ನೀವು ಭೌತಿಕ ಸೌಕರ್ಯಗಳನ್ನು ಅನುಭವಿಸಬಹುದು. ನೀವು ವಾಹನ ಅಥವಾ ಆಸ್ತಿ ಖರೀದಿಸುವುದನ್ನು ಸಹ ಪರಿಗಣಿಸಬಹುದು. ಈ ಸಮಯದಲ್ಲಿ ನಿಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ನಿಮಗೆ ಅವಕಾಶಗಳು ಸಿಗಲಿದೆ. ನಿಮ್ಮ ಹಲವು ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಪೋಷಕರೊಂದಿಗಿನ ದೊಡ್ಡ ಮನಸ್ತಾಪವು ಈ ಸಮಯದಲ್ಲಿ ಬಗೆಹರಿಯಲಿದೆ.
ಕರ್ಕ ರಾಶಿ
ಶುಕ್ರ ಮತ್ತು ಚಂದ್ರನ ಸಂಯೋಗವು ಕರ್ಕ ರಾಶಿಯವರಿಗೆ ಅನುಕೂಲಕರವೆಂದು ಸಾಬೀತುಪಡಿಸಬಹುದು. ಈ ಸಂಯೋಗವು ನಿಮ್ಮ ರಾಶಿಯ ಅದೃಷ್ಟದ ಮನೆಯಲ್ಲಿ ರೂಪುಗೊಳ್ಳುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀವು ಅದೃಷ್ಟದ ದಿನಗಳ ಅನುಭವಿಸುವಿರಿ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ನಿರುದ್ಯೋಗಿಗಳು ಈ ಸಮಯದಲ್ಲಿ ಹಲವು ಅವಕಾಶಗಳನ್ನು ಪಡೆಯಬಹುದು. ಕೆಲಸ ಅಥವಾ ಉದ್ಯೋಗಕ್ಕೆ ಸಂಬಂಧಿಸಿದಂತೆ ನಿಮ್ಮ ಉದ್ದೇಶಗಳು ಈಡೇರಬಹುದು. ಧಾರ್ಮಿಕ ವಿಚಾರವಾಗಿ ನೀವು ಶುಭ ಕಾರ್ಯಗಳಲ್ಲಿ ಯಶಸ್ಸಿನ ದಿನಗಳ ನೋಡುವಿರಿ. ಅವಿವಾಹಿತರಲ್ಲಿ ವಿವಾಹ ಸಂಬಂಧಿತ ವಿಚಾರಗಳು ಧನಾತ್ಮಕವಾಗಿರಲಿದೆ.
ಮಕರ ರಾಶಿ
ಶುಕ್ರ ಮತ್ತು ಚಂದ್ರನ ಅಪರೂಪದ ಸಂಯೋಗವು ನಿಮಗೆ ಸಕಾರಾತ್ಮಕವೆಂದು ಸಾಬೀತುಪಡಿಸಬಹುದು. ಈ ಸಂಯೋಗವು ನಿಮ್ಮ ರಾಶಿಯ ಮೂರನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಅನೇಕ ವಿಚಾರಗಳು ಧನಾತ್ಮಕವಾಗಿ ಬದಲಾಗುತ್ತದೆ. ಹೊಸ ಆದಾಯ ಪಡೆಯಲು ನೀವು ಪ್ರಯತ್ನಿಸುತ್ತಿದ್ದರೆ ಈ ಸಮಯದಲ್ಲಿ ಅದರಿಂದ ಉತ್ತಮ ಗಳಿಕೆ ನೋಡಬಹುದು. ಆಪ್ತರಿಂದ ನಿಮ್ಮ ದೊಡ್ಡ ಕೆಲಸಗಳಲ್ಲಿ ಸಹಾಯ ಸಿಗಲಿದೆ. ದಾಂಪತ್ಯ ವಿಚಾರವಾಗಿ ನೀವು ಬಹಳಷ್ಟು ವಿಚಾರಗಳಿಂದ ಮುಕ್ತರಾಗಬಹುದು. ಅದ್ರಲ್ಲೂ ಕೌಟುಂಬಿಕ ವಿಚಾರದಲ್ಲಿ ಇದ್ದ ಹಣಕಾಸು ಚಿಂತೆಗಳು ದೂರಾಗಲಿದೆ. ಆಸ್ತಿ ಸಂಬಂಧಿತ ವಿಚಾರವಾಗಿ ಬಹಳ ಸಮಯದ ಸಮಸ್ಯೆಗಳು ಇತ್ಯರ್ಥವಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )



Click it and Unblock the Notifications