Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಹು ಆಡಳಿತದ ಶತಭಿಷಾ ನಕ್ಷತ್ರಕ್ಕೆ ಶುಕ್ರ ಸಂಚಾರ: ಬಹು ಸಮಯದಿಂದ ಕೈಗೂಡದ ಕೆಲಸ ಪೂರ್ಣ!
ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಲ್ಲಿ ಪ್ರತಿಯೊಂದೂ ಗ್ರಹವು ಕಾಲ ಕಾಲಕ್ಕೆ ತನ್ನ ರಾಶಿ, ನಕ್ಷತ್ರ ಬದಲಾಯಿಸುವುದು ನೋಡಬಹುದು. ಈ ರೀತಿಯ ಫಧ ಬದಲಾವಣೆಯು ಬಹುತೇಕ ಎಲ್ಲಾ ವ್ಯಕ್ತಿಗಳ ಜೀವನದಲ್ಲೂ ಅತೀ ದೊಡ್ಡ ಬದಲಾವಣೆಗಳಿಗೆ ಕಾರಣವಾಗಲಿದೆ. ನಕ್ಷತ್ರ ಬದಲಾವಣೆಯಿಂದ ಕೂಡ ಹಲವು ರಾಶಿ ಜನರಲ್ಲಿ ದೊಡ್ಡ ಮಟ್ಟದ ಬದಲಾವಣೆಗಳ ಎದುರುನೋಡಬಹುದು.
ರಾಕ್ಷಸರ ಗುರು ಎಂದು ಪರಿಗಣಿಸಲಾದ ಶುಕ್ರ ಫೆಬ್ರವರಿ ತಿಂಗಳಲ್ಲಿ ನಕ್ಷತ್ರವನ್ನು ಬದಲಾಯಿಸುತ್ತಾನೆ. ಶುಕ್ರನ ಈ ಸಂಚಾರವು ಫೆಬ್ರವರಿ 11 ರಂದು ಸಂಭವಿಸುತ್ತಿದೆ. ಇದು ಮೇಷ ರಾಶಿಯಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಬೀರುವುದು ನೋಡಬಹುದು. ಈ ದಿನದಂದು ಶುಕ್ರನು 24ನೇ ನಕ್ಷತ್ರವಾಗಿರುವ ಶತಭಿಷಾ ನಕ್ಷತ್ರಕ್ಕೆ ಚಲಿಸಲಿದೆ.

ಈ ಶತಭಿಷಾ ನಕ್ಷತ್ರದ ಅಧಿಪತಿ ರಾಹು. ರಾಹುವಿನ ಪರಿಣಾಮ ಈ ನಕ್ಷತ್ರದ ಮೇಲೆ ಇದ್ದೇ ಇರಲಿದೆ. ಹೀಗಾಗಿ ಶುಕ್ರನು ಈ ನಕ್ಷತ್ರಕ್ಕೆ ಚಲಿಸುವುದು ಹಲವು ರೀತಿಯಲ್ಲಿ ಪ್ರಭಾವಕಾರಿಯಾಗಲಿದ್ದಾನೆ. ಈ ರಾಹು ಇತರ ಗ್ರಹಗಳಂತೆ ನೇರ ದಿಕ್ಕಿನಲ್ಲಿ ಪ್ರಯಾಣಿಸುವುದಿಲ್ಲ, ಆದರೆ ಹಿಮ್ಮುಖ ದಿಕ್ಕಿನಲ್ಲಿ ಪ್ರಯಾಣಿಸುತ್ತಾನೆ. ಅಂತಹ ರಾಹು ನಕ್ಷತ್ರಕ್ಕೆ ಶುಕ್ರ ಚಲಿಸುವುದು ಕೆಲವು ರಾಶಿ ಜನರಿಗೆ ಬಹಳ ಸಮಸ್ಯೆಗಳ ತರಲಿದೆ. ಹಾಗೆ ಮತ್ತೆ ಕೆಲವು ರಾಶಿಗಳಿಗೆ ಈ ಚಲನೆಯು ಲಾಭದಾಯಕವಾಗಲಿದೆ. ಕೈಯಲ್ಲಿ ಸಂಪತ್ತು ಸಂಗ್ರಹ, ಪ್ರಗತಿ, ಸಂತಸಕ್ಕೆ ಈ ಶುಕ್ರ ಸಂಚಾರವು ಕಾರಣವಾಗಬಹುದು. ಹಾಗಾದ್ರೆ ಈ ಚಲನೆಯುವ ಯಾವೆಲ್ಲಾ ರಾಶಿಯವರಿಗೆ ಹೆಚ್ಚಿನ ಲಾಭವನ್ನು ತರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
ಶುಕ್ರನ ಸಂಚಾರವು ವೃಷಭ ರಾಶಿಯವರ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಸಮಾಜದಲ್ಲಿ ಗೌರವ ಮತ್ತು ಘನತೆ ಹೆಚ್ಚಾಗುತ್ತದೆ. ಹೂಡಿಕೆಗಳಿಂದ ಉತ್ತಮ ಲಾಭ ಸಿಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ದೀರ್ಘಾವಧಿಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ದೀರ್ಘಾವಧಿಯ ಆಸೆಗಳು ಯಶಸ್ವಿಯಾಗಿ ಈಡೇರುತ್ತವೆ. ವಿವಾಹಿತರ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ವ್ಯವಹಾರದಲ್ಲಿ ಲಾಭವಿದೆ. ನಿಮ್ಮ ಹಣಕಾಸಿನ ವಿಚಾರವಾಗಿ ದೊಡ್ಡ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಿರಿ. ಬಹು ಸಮಯದಿಂದ ಕೈಗೂಡದ ಕೆಲಸಗಳನ್ನು ಮಾಡಿ ಮುಗಿಸುವಿರಿ.
ಮಿಥುನ ರಾಶಿ
ಶುಕ್ರನ ಸಂಚಾರವು ಮಿಥುನ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ನೀವು ಕಾಲಕಾಲಕ್ಕೆ ಅನಿರೀಕ್ಷಿತ ಆರ್ಥಿಕ ಲಾಭಗಳ ಪಡೆಯಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನೀವು ವೈಯಕ್ತಿಕ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಅದಾಯದ ಮೂಲಕ ಅನಿರೀಕ್ಷಿತ ಲಾಭವನ್ನು ಪಡೆಯುತ್ತೀರಿ. ಪ್ರೇಮ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ವೃತ್ತಿಪರ ಲಾಭದ ಮೂಲಕ ಹಣ ಸಂಗ್ರಹವಾಗುತ್ತದೆ. ಪೋಷಕರ ಬಹುದಿನದ ಬಯಕೆಯನ್ನು ನೀವು ಈಡೇರಿಸುತ್ತೀರಿ. ಆಪ್ತರಿಂದ ನಿಮಗೆ ಸೇರಬೇಕಿದ್ದ ವಸ್ತು, ಹಣ ಸೇರಲಿದೆ.
ತುಲಾ ರಾಶಿ
ಶುಕ್ರನ ಸಂಚಾರವು ತುಲಾ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉತ್ತಮ ಉದ್ಯೋಗ ಸಿಗುತ್ತದೆ. ಉದ್ಯಮಿಗಳಿಗೆ ಉತ್ತಮ ಲಾಭ ಸಿಗುತ್ತದೆ. ಉದ್ಯಮಿಗಳಿಗೆ ಉತ್ತಮ ಲಾಭ ತರುವ ಹೊಸ ಒಪ್ಪಂದಗಳು ಸಿಗುತ್ತವೆ. ಸೃಜನಶೀಲ ವೃತ್ತಿಗಳಲ್ಲಿರುವವರಿಗೆ ಅತ್ಯುತ್ತಮ ಪ್ರಯೋಜನಗಳು ಸಿಗುತ್ತವೆ. ಆದಾಯದಲ್ಲಿ ಉತ್ತಮ ಹೆಚ್ಚಳ ಇರುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಮನೆಗಾಗಿ ನೀವು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ಹೊಸ ಕೆಲಸಗಳನ್ನು ಮಾಡುವುದು ನಿಮ್ಮಲ್ಲಿ ಹೊಸ ರೀತಿ ಜವಾಬ್ದಾರಿಗಳ ತರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )



Click it and Unblock the Notifications











