Latest Updates
-
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ!
ಶುಕ್ರನಿಂದ ಮಾಲವ್ಯ ರಾಜಯೋಗ: ನವೆಂಬರ್ 2ರಿಂದ ಯಶಸ್ಸಿನ ಉತ್ತುಂಗಕ್ಕೆ ಏರುತ್ತೀರಿ, ಹಣ ಒಲಿದು ಬರಲಿದೆ!
ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯನ್ನು ಪ್ರಮುಖ ವಿದ್ಯಮಾನವಾಗಿ ನೋಡಲಾಗಿದೆ. ಹಾಗೆ ಗ್ರಹಗಳ ಚಲನೆಯಿಂದ ಹಲವು ರಾಶಿಗಳಿಗೆ ಶುಭಕರ ಲಾಭಗಳ ನೋಡಬಹುದು. ಕಾಲ ಕಾಲಕ್ಕೆ ಗ್ರಹಗಳು ತಮ್ಮ ರಾಶಿ ಬದಲಾಯಿಸುವುದು ಹಲವು ರೀತಿಯಲ್ಲಿ ಪರಿಣಾಮ ಎದುರಿಸಲಿವೆ. ಎಲ್ಲಾ ಗ್ರಹಗಳು ಆಗಾಗ ತಮ್ಮ ರಾಶಿ ಹಾಗೂ ನಕ್ಷತ್ರ ಬದಲಾವಣೆಗಳನ್ನು ಮಾಡುವುದು ನೋಡಬಹುದು.
ಈಗ ಶುಕ್ರನು ನವೆಂಬರ್‌ನಲ್ಲಿ ತನ್ನ ರಾಶಿ ಬದಲಾಯಿಸುವುದು ನೋಡಬಹುದು. ಶುಕ್ರನನ್ನು ಸೌಂದರ್ಯ, ಐಷಾರಾಮಿ, ಪ್ರೀತಿ, ಸಂಪತ್ತು, ಸಮೃದ್ಧಿಯ ಸಂಕೇತವಾಗಿದೆ. ಶುಕ್ರನು ವೃಷಭ ಹಾಗೂ ತುಲಾ ರಾಶಿಯ ಅಧಿಪತಿಯಾಗಿದ್ದಾನೆ. ಶುಕ್ರನು ನವೆಂಬರ್ 2ರಂದು ತನ್ನದೇ ರಾಶಿಯಾಗಿರುವ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ.

ಶುಕ್ರನು ನವೆಂಬರ್ 02 ರಂದು ತನ್ನದೇ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ತುಲಾ ರಾಶಿಗೆ ಚಲಿಸುವುದರಿಂದ ಮಾಲವ್ಯ ರಾಜಯೋಗಕ್ಕೆ ಕಾರಣವಾಗಲಿದೆ. ಈ ರಾಜಯೋಗದ ಪ್ರಭಾವವು ಎಲ್ಲಾ ರಾಶಿ ಜನರ ಮೇಲೆಯೂ ಉಂಟಾಗಲಿದೆ. ಹಾಗಾದ್ರೆ ಶುಕ್ರನಿಂದ ಉಂಟಾಗುತ್ತಿರುವ ಈ ಮಾಲವ್ಯ ರಾಜಯೋಗದಿಂದ ಯಾರಿಗೆಲ್ಲಾ ಶುಭವಾಗಲಿದೆ. ಯಾರ ಜೀವನದಲ್ಲಿ ಅನಿರೀಕ್ಷಿತ ಲಾಭಗಳಿವೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
ಶುಕ್ರನು ವೃಷಭ ರಾಶಿಯ 6ನೇ ಮನೆಗೆ ಸ್ಥಳಾಂತರಗೊಳ್ಳುವುದು ಮಾಲವ್ಯ ಯೋಗಕ್ಕೆ ಕಾರಣವಾಗಲಿದೆ. ಇದರಿಂದ ನಿಮ್ಮ ವ್ಯಕ್ತಿತ್ವ ಸುಧಾರಿಸಲಿದೆ. ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ನೋಡುವಿರಿ. ವಿವಾಹಿತರು ತಮ್ಮ ಜೀವನ ಸಂಗಾತಿಯೊಂದಿಗೆ ಮಧುರ ದಿನಗಳ ಅನುಭವಿಸಲಿದ್ದಾರೆ. ಸ್ವಂತ ಉದ್ಯೋಗಗಳು ನಿಮ್ಮ ಕೈ ಹಿಡಿಯಲಿವೆ. ಆಪ್ತರಿಂದ ನಿಮಗೆ ಹಣಕಾಸಿನ ಕುರಿತಾದ ಸಹಾಯ ಇರಲಿದೆ. ಯಾರಿಂದಾದರು ಹಣದ ಸಹಾಯ ಬಯಸಿದ್ದರೂ ಕೂಡ ಯಶಸ್ಸು ಪಡೆಯಲಿದ್ದೀರಿ. ಉದ್ಯೋಗ ವಿಚಾರದಲ್ಲಿ ನಿಮಗೆ ಶುಭವಿದೆ. ಸಂತೋಷ ಅನುಭವಿಸಲು ನಿಮಗೆ ಹೊಸ ವಿಚಾರಗಳು ಹೊಳೆಯಲಿವೆ. ಮಕ್ಕಳ ಭವಿಷ್ಯದ ಕುರಿತಾಗಿ ನೀವು ಬಯಸಿದಂತಹ ಫಲಿತಾಂಶವೊಂದನ್ನು ಪಡೆಯಲಿದ್ದೀರಿ.
ಧನು ರಾಶಿ
ಶುಕ್ರನು ಧನು ರಾಶಿಯ 11ನೇ ಮನೆಗೆ ಸ್ಥಳಾಂತರಗೊಳ್ಳುವುದರಿಂದ ಮಾಲವ್ಯ ರಾಜಯೋಗ ಸೃಷ್ಟಿಸಲಿದ್ದಾನೆ. ಇದರಿಂದ ನಿಮ್ಮ ಲಾಭದಲ್ಲಿ ಗಮನಾರ್ಹ ಬದಲಾಣೆಗಳ ನೋಡಬಹುದು. ಬಹುಕಾಲದಿಂದ ನಿಮಗೆ ಸಮಸ್ಯೆಯಾಗಿದ್ದ ವಿಚಾರವೊಂದರಿಂದ ಮುಕ್ತರಾಗುತ್ತೀರಿ. ಅದು ಹಣಕಾಸು ವಿವಾರ, ಕೌಟುಂಬಿಕ ವಿಚಾರ, ಔದ್ಯೋಗಿಕ ವಿಚಾರವೂ ಆಗಿರಬಹುದು. ಈ ಸಮಯದ ಹೂಡಿಕೆಗಳಿಂದಲೂ ನೀವು ಲಾಭ ನೋಡಬಹುದು. ಶೇರು ಮಾರುಕಟ್ಟೆಯ ಮೂಲಕ ನೀವು ಲಾಭ ಗಳಿಸಬಹುದು. ನಿಮ್ಮ ಹಲವು ಕೆಲಸ ಕಾರ್ಯಗಳಲ್ಲಿ ಶುಕ್ರನ ಆಶೀರ್ವಾದ ಪಡೆಯುವ ಮೂಲಕ ಯಶಸ್ವಿಯಾಗಬಹುದು. ಗೃಹಿಣಿಯರು ಈ ಸಮಯದಲ್ಲಿ ಧನಲಾಭ ನೋಡಬಹುದು.
ತುಲಾ ರಾಶಿ
ಶುಕ್ರನು ತುಲಾ ರಾಶಿಯ ಮೊದಲ ಮನೆಗೆ ಸ್ಥಳಾಂತರಗೊಂಡು ಮಾಲವ್ಯ ರಾಜಯೋಗವನ್ನು ಸೃಷ್ಟಿಸುತ್ತಾನೆ. ಇದರಿಂದಾಗಿ ನಿಮಗೆ ಶುಕ್ರನ ಸಂಪೂರ್ಣ ಬೆಂಬಲ ಸಿಗಲಿದೆ. ವಿವಾಹಿತರ ಜೀವನ ಖುಷಿಯಿಂದ ಕೂಡಿರಲಿದೆ. ಜೀವನ ಸಂಗಾತಿಯೊಂದಿಗೆ ನಿಮ್ಮ ದಿನಗಳು ಸುಖಮಯವಾಗಿರಲಿದೆ. ಹೊಸ ಉದ್ಯೋಗ ಹುಡುಕುತ್ತಿದ್ದರೆ ಅಥವಾ ಬದಲಾಯಿಸುವ ನಿಮ್ಮ ಬಯಕೆ ಈಡೇರಲಿದೆ. ಕುಟುಂಬ ಸದಸ್ಯರೊಂದಿಗಿನ ನಿಮ್ಮ ಸಂಬಂಧ ಉತ್ತಮವಾಗಲಿದೆ. ವಾಹನ ಖರೀದಿಯ ಲಾಭವಿದೆ. ನಿಮ್ಮ ಆದಾಯ ಹೆಚ್ಚಾಗುವಂತಹ ಕೆಲಸಗಳನ್ನು ನೀವು ಯಶಸ್ವಿಯಾಗಿ ಮಾಡುವಿರಿ. ಬ್ಯಾಂಕ್‌ನಿಂದ ಸಾಲ ಪಡೆಯುವ ನಿಮ್ಮ ಬಯಕೆ ಈಡೇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications