Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎರಡೂವರೆ ವರ್ಷ ಶನಿಯಿಂದ ಲಾಭ: ಯಾವೆಲ್ಲಾ ರಾಶಿಯವರಿಗೆ 2027ರ ವರೆಗೂ ಶುಭಗಾಲ? ಧನಲಾಭ?
ಜ್ಯೋತಿಷ್ಯದ ಪ್ರಕಾರ ಶನಿಯನ್ನು ಬಹಳ ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಶನಿಯ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಶನಿಯಿಂದ ಯಾರಿಗೆಲ್ಲಾ ಲಾಭದಾಯಕ ಅನ್ನೋದು ಅವರ ಜಾತಕದಲ್ಲಿನ ಮನೆಯ ಸ್ಥಾನದಿಂದ ನಿರ್ಧರಿತವಾಗಲಿದೆ. ಇನ್ನು ಶನಿ ನಿಧಾನವಾಗಿ ಚಲಿಸುವ ಗ್ರಹ ಒಂದೇ ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ಚಲಿಸುತ್ತಾನೆ.
ಶನಿದೇವನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗಿದೆ. ಯಾವುದೇ ಗ್ರಹದೊಂದಿಗೆ ಶನಿ ಸಂಯೋಗವಾದಾಗ ಅಲ್ಲಿ ಹಲವು ರೀತಿಯ ಯೋಗಗಳು ರೂಪುಗೊಳ್ಳುತ್ತವೆ. ಆದ್ರೆ ಶನಿ ತನ್ನ ರಾಶಿ ಬದಲಾಯಿಸಲು ವರ್ಷಗಳ ಕಾಯಬೇಕಿದೆ. ಹಾಗೆ ಶನಿಯ ಪ್ರಭಾವಕ್ಕೆ ಎಲ್ಲಾ ಗ್ರಹಗಳು ಬರುತ್ತವೆ, ಹಾಗೆ ಎಲ್ಲಾ ರಾಶಿಗಳು ಶನಿಯಿಂದ ಪ್ರಭಾವಕ್ಕೊಳಗಾಗುತ್ತವೆ.

ಇನ್ನು ಈ ನವೆಂಬರ್‌ನಲ್ಲಿ ಶನಿಯ ಚಲನೆ ನೋಡಬಹುದು. ಶನಿ ನೇರ ಚಲನೆಯಲ್ಲಿ ಮೀನ ರಾಶಿ ಪ್ರವೇಶಿಸಲಿದ್ದಾನೆ. ಶನಿಯ ಈ ಚಲನೆಯಿಂದ ಎಲ್ಲಾ ರಾಶಿಗಳ ಮೇಲೆಯೂ ಅದರ ಪರಿಣಾಮ ಬೀರುವುದು ಇದೆ. ನವೆಂಬರ್ 28ರಂದು ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಜೂನ್ 2027 ರವರೆಗೆ ಮೀನ ರಾಶಿಯಲ್ಲಿಯೇ ಚಲಿಸಲಿದ್ದಾನೆ.
ಶನಿ ಮಾರ್ಗಿಚ್ಛ ಎಂದರೆ ಶನಿಯು ತನ್ನ ಹಿಮ್ಮುಖ ಚಲನೆಯನ್ನು ಬಿಟ್ಟು ತನ್ನ ನೇರ ಚಲನೆಯನ್ನು ಪ್ರಾರಂಭಿಸಿದ್ದಾನೆ. ಶನಿಯ ನೇರ ಚಲನೆಯು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಹಲವರಿಗೆ ಶುಭಕರವಾಗಲಿದೆ ಹಾಗೆ ಅನೇಕರಲ್ಲಿ ಜೀವನ ಬದಲಾಯಿಸುವ ಅಂಶವಾಗಲಿದೆ ಎಂದು ಹೇಳಲಾಗುತ್ತದೆ. ಹಾಗಾದ್ರೆ ಶನಿಯ ನೇರ ಚಲನೆಯು ಯಾರ ಜೀವನದಲ್ಲಿ ಮುಂದಿನ 2 ವರ್ಷಗಳ ಕಾಲ ಶುಭವನ್ನು ಹೊತ್ತು ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಜ್ಯೋತಿಷ್ಯದ ಪ್ರಕಾರ ಶನಿಯ ನೇರ ಚಲನೆಯಿಂದಾಗಿ ಮೇಷ ರಾಶಿಯ ಜನರು ಹೊಸ ಶಕ್ತಿ ಮತ್ತು ಪ್ರಗತಿಯನ್ನು ಅನುಭವಿಸುತ್ತಾರೆ. ನಿಮ್ಮ ವರ್ಷಗಳ ಕಾಲ ನಡೆಸಿರುವ ಕಠಿಣ ಪರಿಶ್ರಮವು ಶನಿಯ ಆಶೀರ್ವಾದದ ಪರಿಣಾಮವಾಗಿ ಶುಭಕರ ಫಲಿತಾಂಶ ತರಲಿದೆ. ಹಿಂದೆ ಅನುಭವಿಸಿದ್ದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗಲಿದೆ. ನಿಮ್ಮ ವಿವಾಹ ಸಂಬಂಧವಾಗಿದ್ದ ಅಡ್ಡಿಗಳು ನಿವಾರಣೆಯಾಗಲಿದೆ. ವ್ಯವಹಾರಗಳಲ್ಲಿ ಲಾಭವಿದೆ. ಹಾಗೆ ಕೌಟುಂಬಿಕ ವಿಚಾರಗಳು ನಿಮ್ಮ ನಿರ್ದೇಶನದಂತೆ ನಡೆಯಲಿವೆ. ದೊಡ್ಡ ವ್ಯವಹಾರಗಳು ನಮಗೆ ಲಾಭ ತರಲಿವೆ.
ವೃಷಭ ರಾಶಿ
ಜ್ಯೋತಿಷ್ಯದ ಪ್ರಕಾರ ಶನಿಯ ಸಂಚಾರದಿಂದ ವೃಷಭ ರಾಶಿಯವರಿಗೆ ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿಯನ್ನು ತರುತ್ತದೆ. ಹಣಕ್ಕೆ ಸಂಬಂಧಿಸಿದ ಕಾಳಜಿಗಳು ಕ್ರಮೇಣ ಕಡಿಮೆಯಾಗುತ್ತವೆ. ಹೀಗಾಗಿ ಮುಂಬರುವ ದಿನಗಳಲ್ಲಿ ಹೂಡಿಕೆ ಉಳಿತಾಯಗಳು ಕಡಿಮೆಯಾಗುತ್ತವೆ. ನಿಮ್ಮ ಔದ್ಯೋಗಿಕ ಲಾಭ ಹೆಚ್ಚಾಗಲಿದೆ. ಮನೆಗಾಗಿ ನೀವು ಮಾಡಬೇಕಿದ್ದ ದೊಡ್ಡ ಕೆಲಸವನ್ನು ಪೂರ್ಣ ಮಾಡುವಿರಿ. ಸಾಲಗಳು ಕಡಿಮೆಯಾಗಲಿದೆ. ಬಾಕಿ ಉಳಿದ ದೊಡ್ಡ ಕೆಲಸಗಳನ್ನು ನೀವು ಸುಲಭವಾಗಿ ಮಾಡಿ ಮುಗಿಸುವಿರಿ. ಯಶಸ್ಸಿನ ಕಡೆಗೆ ನಿಮ್ಮ ಉದ್ಯಮವನ್ನು ಕೊಂಡೊಯ್ಯಬಹುದು.
ಮಿಥುನ ರಾಶಿ
ಜ್ಯೋತಿಷ್ಯದ ಪ್ರಕಾರ ಈ ಸಮಯ ಮಿಥುನ ರಾಶಿಯವರಿಗೆ ಆತ್ಮವಿಶ್ವಾಸ ಮತ್ತು ಸಾಧನೆಯಿಂದ ತುಂಬಿರುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಸುಖ ನೋಡುವ ಸಮಯ. ಸ್ವಂತ ಉದ್ಯೋಗ ಆರಂಭಿಸಬಹುದು, ಇದು ನಿಮಗೆ ಆರ್ಥಿಕ ಸ್ವಾವಲಂಬನೆ ತರಬಹುದು. ಬ್ಯಾಂಕ್ ಸಾಲಗಳು, ವಾಹನ ಸಂಬಂಧದ ವಿಚಾರಗಳಲ್ಲಿ ಶುಭ ದಿನಗಳನ್ನು ನೋಡಬಹುದು. ಮಕ್ಕಳಿಗೆ ಸೂಕ್ತ ಉದ್ಯೋಗ ಸಿಗುವ ಸಮಯವಿದು. ನಿಮ್ಮ ದೊಡ್ಡ ಹೂಡಿಕೆಯೊಂದು ನಿಮಗೆ ಲಾಭದಾಯಕವಾಗಿ ಪರಿಣಮಿಸಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications



